ಕೇವಲ 28 ದಿನಕ್ಕೆ ಓಟಿಟಿಗೆ ಬಂತು ದೃಶ್ಯಂ 3 ; ಕನ್ನಡದಲ್ಲಿಯೂ ನೋಡಬಹುದು ಜಾರ್ಜ್‌ಕುಟ್ಟಿಯ ಕೊನೆ ಆಟ

ಕನ್ನಡ ಚಿತ್ರರಂಗವನ್ನು ಹೊರತು ಪಡಿಸಿದರೆ ಅಕ್ಕ-ಪಕ್ಕದ ರಾಜ್ಯಗಳಲ್ಲಿನ ಚಿತ್ರರಂಗದವರಿಗೆ ಸದ್ಯ ಸಿಕ್ವೆಲ್ ಜ್ವರ ಹಿಡಿದಿದೆ. ನಿಜಾ.. ನಮ್ಮಲ್ಲಿ ಕೂಡ ಈ ಟ್ರೆಂಡ್ ಇದೆ. ಆದರೆ.. ಅನ್ಯ ಭಾಷೆಯವರಿಗೆ ಹೋಲಿಸಿದರೆ ಪ್ರಯತ್ನಗಳು ನಡೆಯುತ್ತಿರುವುದು ಕಡಿಮೆ. ಬೇರೆ ಭಾಷೆಗಳಲ್ಲಿ ಹಳೆಯ ಗೆಲುವನ್ನೇ ಟ್ರಂಪ್ ಕಾರ್ಡ್‌ ಆಗಿ ಉಪಯೋಗಿಸಿಕೊಂಡು ಹಲವರು ಇಲ್ಲಿ ದುಡ್ಡು ಬಾಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾರನ್ನೇ ಕೇಳಿ ಎಲ್ಲರಲ್ಲಿಯೂ ತಮ್ಮದೇ ಆದ ಯೂನಿವರ್ಸ್‌ ರೆಡಿಯಾಗಿರುತ್ತೆ. ಆ ಪೈಕಿ ''ದೃಶ್ಯಂ'' ಕೂಡ ಒಂದು.

ಹೌದು, ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಚಿತ್ರ ''ದೃಶ್ಯಂ''. ಕ್ರೈಂ ಥ್ರಿಲ್ಲರ್ ಜಾನರಿನ ಈ ಚಿತ್ರ 13 ವರ್ಷದ ಹಿಂದೆ ಬಾಕ್ಸಾಫೀಸ್‌ನಲ್ಲಿ ಭಾರೀ ಹಣವನ್ನು ಗಳಿಸುವುದಲ್ಲದೇ ಮೋಹನ್ ಲಾಲ್ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸಿತ್ತು.

Georgekutty s Ultimate Secret Drops At Home Drishyam 3 Locks OTT Release Date

ಇನ್ನು ''ದೃಶ್ಯಂ 2'' ಬಂದಿದ್ದು 2021ರಲ್ಲಿ. ಆ ಸಮಯದಲ್ಲಿ ಕೊರೊನಾ ವಕ್ಕರಿಸಿಕೊಂಡಿತ್ತು. ಚಿತ್ರಮಂದಿರಕ್ಕೆ ಜನ ಬರಲು ಹೆದರುತ್ತಿದ್ದ ಕಾಲ ಅದು. ಹೀಗಾಗಿ ಚಿತ್ರವನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಎರಡನೇ ಭಾಗವೂ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ''ದೃಶ್ಯಂ 3'' ಸರದಿ.

ನಿಜ, ಮೊದಲ ಎರಡು ಭಾಗಗಳಿಗೆ ಹೋಲಿಸಿದರೆ ಮೂರನೇ ಭಾಗ ಹಲವರನ್ನು ನಿರಾಸೆಗೊಳಿಸಿದೆ. ಪ್ರೇಕ್ಷಕರಿಂದ ಮಾತ್ರವಲ್ಲದೇ ವಿಮರ್ಶಕರಿಂದ ಕೂಡ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಗ್ಯೂ ಕೇವಲ ಭಾರತದಲ್ಲಿಯೇ ನೂರು ಕೋಟಿ + ಹಣವನ್ನು ಚಿತ್ರ ದೋಚಿದೆ. ಹಲವು ಕಡೆ ಇನ್ನೂ ಯಶಸ್ವಿ ಪ್ರದರ್ಶನವೂ ಕಾಣುತ್ತಿದೆ.

ಆದರೆ, ಇದು ಓಟಿಟಿಯ ಕಾಲ. ಚಿತ್ರಮಂದಿರ ಎಷ್ಟೇ ತುಂಬಿ ತುಳುಕಿದರೂ ಕೂಡ ತಿಂಗಳಾಗುವ ಮುನ್ನವೇ ಓಟಿಟಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ''ದೃಶ್ಯಂ 3'' ಕೇವಲ 28 ದಿನಕ್ಕೆ ಓಟಿಟಿಗೆ ಬಂದಿದೆ

ಮೂರನೇ ಭಾಗದ ಟ್ವಿಸ್ಟ್ ಆದರೂ ಏನು..?

ಮೊದಲ ಭಾಗದಲ್ಲಿ ಪೊಲೀಸ್ ಠಾಣೆಯ ಕೆಳಗೆ ಹೆಣವನ್ನು ಜಾರ್ಜ್‌ಕುಟ್ಟಿ ಹೂತು ಹಾಕಿದ್ದ. ಎರಡನೇ ಭಾಗದಲ್ಲಿ ವಿಧಿವಿಜ್ಞಾನದ ಬಲೆಯಿಂದ ತಪ್ಪಿಸಿಕೊಂಡಿದ್ದ. ಈ ಹಿನ್ನೆಲೆ ಚಿತ್ರವನ್ನು ಚಿತ್ರಮಂದಿರದಲ್ಲಿ ನೀವು ಇನ್ನೂ ನೋಡದೇ ಇದ್ದರೆ, ಜಾರ್ಜ್ ಕುಟ್ಟಿ ಈ ಅಧ್ಯಾಯದಲ್ಲಿ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಯಾವ ಹಂತಕ್ಕೆ ಹೋಗಬಹುದು ..? ಎನ್ನುವ ಕುತೂಹಲ ಇದ್ದೇ ಇರುತ್ತೆ. ಈ ಕುತೂಹಲದ ಮೇಲೆ ತಣ್ಣೀರೆರಚುವ ಪ್ರಯತ್ನವನ್ನು ನಾವು ಮಾಡುವುದಿಲ್ಲವಾದರೂ ''ದೃಶ್ಯಂ 3'' ಚಿತ್ರದಲ್ಲಿ ಒಂದು ಹಂತದಲ್ಲಿ ಎದುರಾಳಿಗಳು ತೋಡಿದ ಖೆಡ್ಡಾಗೆ ಜಾರ್ಜ್ ಕುಟ್ಟಿ ಬೀಳುತ್ತಾನೆ ಎನ್ನುವುದನ್ನು ಮಾತ್ರ ನಾವು ಹೇಳಬಹುದು.

georgekutty-s-ultimate-secret-drops-at-home-drishyam-3-locks-ott-release-date

ದೃಶ್ಯಂ 3 ತಂಡದ ಮಾಹಿತಿ ಇಲ್ಲಿದೆ.

ವಿಭಾಗ ವಿವರಗಳು
ತಾರಾಬಳಗ ಮೋಹನ್‌ಲಾಲ್, ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಕಲಾಭವನ್ ಶಾಜೋನ್, ಸಿದ್ದಿಕ್, ಮುರಳಿ ಗೋಪಿ, ಬಿಜು ಮೆನನ್, ಆಶಾ ಶರತ್, ವೀಣಾ ನಂದಕುಮಾರ್, ಶಾಂತಿ ಮಾಯಾದೇವಿ, ಸುಮೇಶ್‌ ಚಂದ್ರನ್, ಅಜಿತ್ ಕೂತಾಟ್ಟುಕುಲಂ, ದಿನೇಶ್ ಪ್ರಭಾಕರ್, ಇರ್ಷಾದ್, ಕೆ. ಬಿ. ಗಣೇಶ್ ಕುಮಾರ್, ಶಿವ ಹರಿಹರನ್, ಆಡಮ್ ಅಯೂಬ್, ರಿಯಾಸ್ ನರ್ಮಕಲಾ, ಮುಹಮ್ಮದ್ ಮುಸ್ತಫಾ, ಶ್ರೀಕಾಂತ್ ಮುರಳಿ, ಆಂಟೋನಿ ಪೆರುಂಬವೂರ್, ಕೃಷ್ಣ ಪ್ರಭಾ, ಶ್ರದ್ಧಾ ಗೋಕುಲ್, ಫೈಸಲ್ ಪಿ. ವಿ, ನಿಖಿಲ್ ನಾಯರ್, ಲಿಶೋಯ್, ಪ್ರಿಯಾ ಶ್ರೀಜಿತ್, ರಂಜಿನಿ ಜಾರ್ಜ್, ಸಜಿತಾ ಶ್ರೀಜಿತ್, ಅನೀಶ್ ಜಿ. ಮೆನನ್, ಶೋಭಾ ಮೋಹನ್, ಪ್ರಶಾಂತ್ ಮಾಧವ್, ಜಯಶಂಕರ್, ಸೌಮ್ಯ ಭಾಗ್ಯನ್ ಪಿಳ್ಳೈ ಮುಂತಾದವರು.
ನಿರ್ದೇಶನ ಜೀತು ಜೋಸೆಫ್
ಕಥೆ ಜೀತು ಜೋಸೆಫ್
ನಿರ್ಮಾಣ ಆಂಟೋನಿ ಪೆರುಂಬವೂರ್ (ಆಶೀರ್ವಾದ್ ಸಿನಿಮ್ಯಾಕ್ಸ್)
ಛಾಯಾಗ್ರಹಣ ಸತೀಶ್ ಕುರುಪ್
ಸಂಕಲನ ವಿ. ಎಸ್. ವಿನಾಯಕ್
ಸಂಗೀತ ಮತ್ತು ಹಿನ್ನೆಲೆ ಸಂಗೀತ ಅನಿಲ್ ಜಾನ್ಸನ್

ಎಲ್ಲಿ ನೋಡಬಹುದು ..?

''ದೃಶ್ಯಂ'' ಡಿಸ್ನಿ ಹಾಟ್‌ಸ್ಟಾರ್ ನಲ್ಲಿ ಬಿಡುಗಡೆಯಾಗಿತ್ತು. ''ದೃಶ್ಯಂ 2'' ಅಮೆಜಾನ್ ಪ್ರೈಮ್ ಅಂಗಳಕ್ಕೆ ಬಂದಿತ್ತು. ''ದೃಶ್ಯಂ 3'' ಚಿತ್ರವನ್ನು ಕೂಡ ನೀವು ಅಮೆಜಾನ್ ಪ್ರೈಮ್‌ನಲ್ಲಿಯೇ ನೋಡಬಹುದು. ಇದೇ ಜೂನ್ 18ರಿಂದ ''ದೃಶ್ಯಂ 3'' ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗಲಿದ್ದು, ಅಮೆಜಾನ್ ಅಧಿಕೃತವಾಗಿ ಈ ಕುರಿತು ಘೋ‍ಷಣೆಯನ್ನು ಮಾಡಿದೆ. ಜಾರ್ಜ್‌ಕುಟ್ಟಿ ಮತ್ತು ಕುಟುಂಬ ನಿಮಗಾಗಿ ಕಾಯುತ್ತಿದೆ #Drishyam3OnPrime, ಜೂನ್ 18 ಎಂದು
ಪೋಸ್ಟ್ ಹಂಚಿಕೊಂಡಿದೆ. ಇನ್ನು ಜಾರ್ಜ್‌ಕುಟ್ಟಿಯ ಈ ಮೈಂಡ್ ಗೇಮ್‌ನ ನೀವು ಕನ್ನಡದಲ್ಲಿಯೂ ಕೂಡ ನೋಡಬಹುದು. ತಮಿಳು, ತೆಲುಗು ಮತ್ತು ಕನ್ನಡಕ್ಕೆ ಈ ಚಿತ್ರವನ್ನು ಡಬ್ ಮಾಡಲಾಗಿದೆ.

ಅಂದ್ಹಾಗೇ ''ದೃಶ್ಯಂ 3'' ಜಾರ್ಜ್‌ ಕುಟ್ಟಿಯ ಕೊನೆ ಆಟ ಎಂದು ಹೇಳಲಾಗಿದೆಯಾದರೂ, ಮುಂದಿನ ದಿನಗಳಲ್ಲಿ ''ದೃಶ್ಯಂ 4'' ಬಂದರೂ ಬರಬಹುದು. ಆ ಸಾಧ್ಯತೆ ಇದೆ. ಖುದ್ದು ನಿರ್ದೇಶಕ ಜೀತು ಜೋಸೆಫ್ ಈ ಸುಳಿವು ನೀಡಿದ್ಧಾರೆ. ಆದರೆ, ಇದೇ ವೇಳೆ ಸದ್ಯಕ್ಕಂತೂ ಇದೇ ಕೊನೆಯದ್ದು ಎಂದು ಕೂಡ ಹೇಳಿದ್ಧಾರೆ. ಹೀಗಾಗಿ ''ದೃಶ್ಯಂ 4'' ಬಂದರೂ ಬರಬಹುದು. ಬರದೆಯೂ ಇರಬಹುದು. ಹೀಗಾಗಿ ''ದೃಶ್ಯಂ 4'' ಬಗ್ಗೆ ಹೆಚ್ಚು ಆಲೋಚನೆ ಮಾಡದೇ ಸದ್ಯಕ್ಕೆ ''ದೃಶ್ಯಂ 3'' ಚಿತ್ರವನ್ನು ಮನೆ ಮಂದಿ ಜೊತೆ ಮನೆಯಲ್ಲಿಯೇ ಕುಳಿತು ಎಂಜಾಯ್ ಮಾಡಿ.

English summary
Coming to screens in less than a month! 😱 Get the official streaming platform details and digital premiere date for Mohanlal's box-office hit Drishyam 3
Read more about: mohan lal mollywood mohanlal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X