OTT Releases This Week; ಈ ವಾರ 20ಕ್ಕೂ ಅಧಿಕ ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್
ಬಾಕ್ಸಾಫೀಸ್‌ನಲ್ಲಿ 'ಪುಷ್ಪ'-2 ಆರ್ಭಟ ಮುಂದುವರೆದಿದೆ. ಎರಡನೇ ವಾರವೂ ಸಿನಿಮಾ ಗಳಿಕೆ ಚೆನ್ನಾಗಿದೆ. ಮತ್ತೊಂದು ಕಡೆ ಈ ವಾರ ಕನ್ನಡದ 'ಯುಐ' ಸಿನಿಮಾ ತೆರೆಗಪ್ಪಳಿಸಲು ಸಜ್ಜಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.
ಓಟಿಟಿಯಲ್ಲಿ ಈ ವಾರ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗೆ ಬಿಡುಗಡೆಗೆ ತಯಾರಾಗಿದೆ. ಹಾಗಾಗಿ ಅತ್ತ ಥಿಯೇಟರ್ ಇತ್ತ ಓಟಿಟಿ ಎಲ್ಲೆಲ್ಲೂ ಭರ್ಜರಿ ಮನರಂಜನೆ ಕಾದಿದೆ. ನೆಟ್‌ಫ್ಲಿಕ್ಸ್, ಪ್ರೈಂ ವೀಡಿಯೋ, ಹಾಟ್‌ಸ್ಟರ್, ಜೀ-5 ಹಾಗೂ ಅಹಾ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವಾರ ಯಾವೆಲ್ಲಾ ಸಿನಿಮಾ, ಸೀರಿಸ್ ಸ್ಟ್ರೀಮಿಂಗ್ ಆಗುತ್ತದೆ ಮುಂದೆ ಓದಿ.

ಅಮೇಜಾನ್ ಪ್ರೈಂ
1. ಗರ್ಲ್ಸ್ ವಿಲ್ ಬಿ ಗರ್ಲ್ಸ್
ಇಂಡೋ-ಫ್ರೆಂಚ್ ಸಿನಿಮಾ 'ಗರ್ಲ್ಸ್ ವಿಲ್ ಬಿ ಗರ್ಲ್ಸ್' ಸಿನಿಮಾ ಈ ವಾರ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಶುಚಿ ತಲಾತಿ ನಿರ್ದೇಶನದ ಸಿನಿಮಾ ಈಗಾಗಲೇ ಕೆಲ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಸದ್ದು ಮಾಡಿದೆ. ಪ್ರೀತಿ ಪಾಣಿಗ್ರಾಹಿ, ಕೇಶವ್ ಬಿನೋಯ್ ಕಿರಣ್ ಹಾಗೂ ಕಣಿ ಕುಸೃತಿ ಚಿತ್ರದ ಮುಖ್ಯಭೂಮಿಕೆಯಲ್ಲಿದೆ. ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
2. ಬೀಸ್ಟ್ ಗೇಮ್ಸ್(ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 19
ಅಹಾ ಓಟಿಟಿ
1. ಜೀಬ್ರಾ
ಸತ್ಯದೇವ್ ಹಾಗೂ ಡಾಲಿ ಧನಂಜಯ್ ನಟನೆಯ 'ಜೀಬ್ರಾ' ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಕನ್ನಡಕ್ಕೂ ಡಬ್ ಆಗಿದ್ದ ಚಿತ್ರದಲ್ಲಿ ಡಾಲಿ ಒಂದು ಖಡಕ್ ಪಾತ್ರದಲ್ಲಿ ನಟಿಸಿದ್ದರು. ಅಮೃತಾ ಅಯ್ಯಂಗಾರ್ ಕೂಡ ಸಾಥ್ ಕೊಟ್ಟಿದ್ದರು. ಡಿಸೆಂಬರ್ 20ಕ್ಕೆ ಸಿನಿಮಾ ಅಹಾ ಓಟಿಟಿಗೆ ಬರ್ತಿದೆ. ಈಶ್ವರ್ ಕಾರ್ತಿಕ್ ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆ ಒಂದು ಫ್ರಾಡ್ ಹಾಗೂ ಮಾಫಿಯಾ ಗ್ಯಾಂಗ್ ಸುತ್ತಾ ಚಿತ್ರದ ಕತೆ ಸಾಗುತ್ತದೆ. ಡಾಲಿ ಫ್ಯಾನ್ಸ್ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

ಹಾಟ್‌ಸ್ಟರ್
1. ವಾಟ್ ಇಫ್..? ಸೀಸನ್ 3 (ಇಂಗ್ಲೀಷ್ ಸೀರಿಸ್) ಡಿಸೆಂಬರ್ 22
2. ಓ ಕಮಾನ್ ಆಲ್ ಯೇ ಫೇತ್‌ಫುಲ್ (ಇಂಗ್ಲೀಷ್ ಸಿನಿಮಾ ) ಡಿಸೆಂಬರ್ 17
ನೆಟ್‌ಫ್ಲಿಕ್ಸ್
1. ಯೋ ಯೋ ಹನಿಸಿಂಗ್: ಫೇಮಸ್
ಖ್ಯಾತ ರ್ಯಾಪರ್ ಯೋ ಯೋ ಹನಿಸಿಂಗ್ ಜೀವನದ ಕಥೆ ಹೇಳುವ ಡಾಕ್ಯುಮೆಂಟರಿ ಈ ವಾರ ಓಟಿಟಿಗೆ ಬರ್ತಿದೆ. ಇದರಲ್ಲಿ ಹನಿಸಿಂಗ್ ಸಕ್ಸಸ್, ಫೇಲ್ಯೂರ್ ಹಾಗೂ ಕಂಬ್ಯಾಕ್ ವಿಚಾರಗಳನ್ನು ಕಟ್ಟಿಕೊಡಲಾಗಿದೆ. ಆತನ ಹಳೆಯ ದೃಶ್ಯ ತುಣುಕುಗಳನ್ನು ಬಳಸಿಕೊಂಡು ಡಾಕ್ಯುಮೆಂಟರಿ ಚಿತ್ರಿಸಲಾಗಿದೆ. ಡಿಸೆಂಬರ್ 20ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ 'ಯೋ ಯೋ ಹನಿಸಿಂಗ್: ಫೇಮಸ್' ಸ್ಟ್ರೀಮಿಂಗ್ ಆಗಲಿದೆ.
2. ರೋನಿ ಚಿಯೆಂಗ್(ಇಂಗ್ಲೀಷ್ ಸ್ಟ್ಯಾಂಡಪ್ ಕಾಮೆಡಿ) ಡಿಸೆಂಬರ್ 17
3. ಜ್ಯೂಲಿಯಾಸ್ ಸ್ಟೆಪ್ಪಿಂಗ್ ಸ್ಟೋನ್ಸ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 18
4. ದಿ ಡ್ರಾಗನ್ ಪ್ರಿನ್ಸ್(ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 19
5. ವರ್ಜಿನ್ ರಿವರ್ ಸೀಸನ್ 6(ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 19
6. ಆರೋನ್ ರೊಡ್ಜರ್ಸ್; ಎನಿಗ್ಮಾ (ಇಂಗ್ಲೀಷ್ ಸೀರಿಸ್) ಡಿಸೆಂಬರ್ 17
7. ದಿ ಫೋರ್ಜ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 22
8. ಸ್ಪೈ X ಫ್ಯಾಮಿಲಿ ಕೋಡ್: ವೈಟ್(ಆನಿಮೇಷನ್ ಸಿನಿಮಾ) ಡಿಸೆಂಬರ್ 21
ಜಿಯೋ ಸಿನಿಮಾ
1. ಮೂನ್ ವಾಕ್(ಹಿಂದಿ ಸೀರಿಸ್) ಡಿಸೆಂಬರ್ 20
2. ಟ್ವಿಸ್ಟರ್ಸ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 18
3. ಥೆಲ್ಮಾ(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 21


Click it and Unblock the Notifications











