GOAT OTT Release Date: ಕೊನೆಗೂ ದಳಪತಿ 'ಗೋಟ್' ಓಟಿಟಿ ಸ್ಟ್ರೀಮಿಂಗ್ ಡೇಟ್ ಘೋಷಣೆ

ದೊಡ್ಡ ಸಿನಿಮಾಗಳ ಥ್ರಿಯೇಟ್ರಿಕಲ್ ರಿಲೀಸ್ ಮಾತ್ರವಲ್ಲ ಓಟಿಟಿ ಸ್ಟ್ರೀಮಿಂಗ್ ಕೂಡ ಬಹಳ ಕುತೂಹಲ ಮೂಡಿಸುತ್ತದೆ. ಕಾರಣ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದ ಬಹುತೇಕ ಮಂದಿ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ನೋಡಲು ಕಾದು ಕೂತಿರುತ್ತಾರೆ. ತಮಿಳಿನ 'ದಿ ಗ್ರೇಟೆಸ್ಟ್ ಆಫ್ ಆಲ್‌ಟೈಮ್'(GOAT) ಸಿನಿಮಾ ಓಟಿಟಿ ರಿಲೀಸ್ ಡೇಟ್ ಹತ್ತಿರವಾಗ್ತಿದೆ.

ದಳಪತಿ ವಿಜಯ್ ನಟನೆಯ 'ಗೋಟ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಅದನ್ನೆಲ್ಲಾ ಮೀರಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ವೆಂಕಟ್ ಪ್ರಭು ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಪ್ರಶಾಂತ್, ಪ್ರಭುದೇವ, ಸ್ನೇಹಾ, ಕೋಕಿಲ ಮೋಹನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 3ನೇ ವಾರ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಡಲ್ ಆಗಿದೆ.

GOAT OTT release date thalapathy Vijay starrer release with 18-minute extended version

ಈಗಾಗಲೇ 'ಗೋಟ್' ಸಿನಿಮಾ ವಿಶ್ವದಾದ್ಯಂತ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಕಾಲಿವುಡ್‌ನಲ್ಲಿ ವಿಜಯ್ ಸಿನಿಮಾಗಳಿಗೆ ಭಾರೀ ಕ್ರೇಜ್ ಇದೆ. ಬೆಂಗಳೂರಿನಲ್ಲಿ ಕೂಡ ಚಿತ್ರಕ್ಕೆ ದೊಡ್ಡ ಓಪನಿಂಗ್ ಸಿಕ್ಕಿತ್ತು. ಅದೇನೋ ಗೊತ್ತಿಲ್ಲ ಇತ್ತೀಚೆಗೆ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ದಳಪತಿ ಚಿತ್ರಗಳು ಮುಗ್ಗರಿಸುತ್ತಿವೆ.

'ಗೋಟ್' ಸಿನಿಮಾ ಕೂಡ ದಳಪತಿ ಅಭಿಮಾನಿಗಳಿಗೆ ಇಷ್ಟವಾದರೆ ಉಳಿದವರಿಗೆ ರುಚಿಸಲಿಲ್ಲ. ಇನ್ನು ತಂದೆ-ಮಗನಾಗಿ ಒಂದರ್ಥದಲ್ಲಿ ದ್ವಿಪಾತ್ರದಲ್ಲಿ ವಿಜಯ್ ತೆರೆಮೇಲೆ ಬಂದಿದ್ದರು. ಸಿದ್ದಾರ್ಥ್ ನುನಿ ಛಾಯಾಗ್ರಹಣ ಹಾಗೂ ಯುವನ್ ಶಂಕರ್‌ರಾಜಾ ಸಂಗೀತ ಚಿತ್ರಕ್ಕಿದೆ. ಎಜಿಎಸ್‌ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ.

ಚಿತ್ರದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟದ ಕಥೆಯನ್ನು ವೆಂಕಟ್ ಪ್ರಭು ಕಟ್ಟಿಕೊಟ್ಟಿದ್ದಾರೆ. ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿ ಗಾಂಧಿ ಜೀವನದ ಏಳುಬೀಳಿನ ಕಥೆ ಚಿತ್ರದಲ್ಲಿದೆ. ನಿವೃತ್ತಿ ಬಳಿಕ ಸಾಮಾನ್ಯ ಜೀವನ ನಡೆಸಲು ಆತ ನಿರ್ಧರಿಸಿರುತ್ತಾರೆ. ಆದರೆ ವಿಧಿ ಅದಕ್ಕೆ ಅವಕಾಶ ಕೊಡಲ್ಲ. ಈ ಹಿಂದೆ ಆತನ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಗಾಯಗೊಂಡ ದುಷ್ಟರು ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ. ಆ ನಂತರ ಏನಾಗುತ್ತದೆ ಎನ್ನುವುದು 'ಗೋಟ್' ಕಥೆ.

ಅಭಿಮಾನಿಗಳು 'ಗೋಟ್' ಸಿನಿಮಾ ಮರೆತು ದಳಪತಿ69 ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎಂದು ಕಾದುಕೂತಿದ್ದಾರೆ. ವಿಜಯ್ ಕೊನೆಯ ಸಿನಿಮಾ ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದಲ್ಲಿ ಹೆಚ್. ವಿನೋದ್ ಚಿತ್ರಕ್ಕೆ ಆಕ್ಷನ್ ಕಟ್‌ ಹೇಳುತ್ತಿದ್ದಾರೆ. ಆದರೆ ಕೆಲವರು ಇನ್ನು 'ಗೋಟ್' ಓಟಿಟಿ ರಿಲೀಸ್‌ಗಾಗಿ ಕಾಯುತ್ತಿದ್ದಾರೆ.

ನೆಟ್‌ಫ್ಲಿಕ್ಸ್ ಸಂಸ್ಥೆ 'ಗೋಟ್' ಚಿತ್ರದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. ದೊಡ್ಡ ಮೊತ್ತಕ್ಕೆ ಡೀಲ್ ಕುದುರಿದೆ. ವಿಶೇಷ ಏನು ಅಂದ್ರೆ ಚಿತ್ರಮಂದಿರದಲ್ಲಿ ನೋಡಿದ ಚಿತ್ರಕ್ಕಿಂತ ದೊಡ್ಡ ಸಿನಿಮಾ ಓಟಿಟಿಗೆ ಬರ್ತಿದೆ. ಅಂದರೆ ತೆರೆಮೇಲೆ ತೋರಿಸದ ಒಂದಷ್ಟು ಸನ್ನಿವೇಶಗಳನ್ನು ಸೇರಿಸಿ ಚಿತ್ರವನ್ನು ನೆಟ್‌ಫ್ಲಿಕ್ಸ್‌ಗೆ ಅಪ್‌ಲೋಡ್ ಮಾಡಲಾಗುತ್ತಿದೆ.

'ಗೋಟ್' ಸಿನಿಮಾ ಕಾಲಾವಧಿ 3 ಗಂಟೆ ದಾಟಿತ್ತು. ಇನ್ನು 18 ನಿಮಿಷ ಹೆಚ್ಚು ಸನ್ನಿವೇಶವನ್ನು ಚಿತ್ರತಂಡ ಸೆರೆ ಹಿಡಿದಿತ್ತು. ಕಾಲಾವಧಿ ಜಾಸ್ತಿ ಆಯ್ತು ಎನ್ನುವ ಕಾರಣಕ್ಕೆ ಕಟ್ ಮಾಡಿ 3 ಗಂಟೆ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಇದೀಗ ಇನ್ನುಳಿದ 18 ನಿಮಿಷಗಳ ಚಿತ್ರವನ್ನು ಸೇರಿಸಿ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡುವ ಪ್ರಯತ್ನ ನಡೀತಿದೆ. ಹಾಗಾಗಿ ತೆರೆಮೇಲೆ ಸಿನಿಮಾ ನೋಡಿದ ಅಭಿಮಾನಿಗಳು ಮತ್ತೊಮ್ಮೆ ಸಿನಿಮಾ ವೀಕ್ಷಣೆಗೆ ಕಾಯವಂತಾಗಿದೆ.

ಅಕ್ಟೋಬರ್ 3ರಂದು 'ಗೋಟ್' ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗುವುದು ಖಚಿತವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ತೆರೆಮೇಲೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಓಟಿಟಿಯಲ್ಲಿ ರೆಸ್ಪಾನ್ಸ್ ಹೇಗಿರುತ್ತೆ ಕಾದು ನೋಡಬೇಕು.

More from Filmibeat

English summary
GOAT On OTT: Uncut Version Of Vijay's film straming in October;
Read more about: vijay kollywood ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X