ಬ್ಲಾಕ್‌ಬಸ್ಟರ್ 'ಗುಡ್‌ ಬ್ಯಾಡ್ ಅಗ್ಲಿ' ಓಟಿಟಿಗೆ; ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್

ಐಪಿಎಲ್ ಆರ್ಭಟದ ನಡುವೆಯು ಅಜಿತ್ ನಟನೆಯ 'ಗುಡ್‌ ಬ್ಯಾಡ್ ಅಗ್ಲಿ' ಸಿನಿಮಾ ಹಿಟ್ ಲಿಸ್ಟ್ ಸೇರಿದೆ. ಮಿಶ್ರಪ್ರತಿಕ್ರಿಯೆ ಸಿಕ್ಕರೂ ವಿಂಟೇಜ್ ಅಜಿತ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಸಿನಿಮಾ 250 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು.

ಏಪ್ರಿಲ್ 10ರಂದು ತೆರೆಗೆ ಬಂದಿದ್ದ ಆಕ್ಷನ್ ಕಾಮಿಡಿ ಸಿನಿಮಾ 'ಗುಡ್‌ ಬ್ಯಾಡ್ ಅಗ್ಲಿ' ಇದೀಗ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ಸಿಕ್ಕಿದೆ. ಅದಿಕ್ ರವಿಚಂದ್ರನ್ ನಿರ್ದೇಶನದ ಚಿತ್ರದಲ್ಲಿ ಅಜಿತ್ ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದಾರೆ. ತ್ರಿಶಾ, ಅರ್ಜುನ್ ದಾಸ್, ಪ್ರಭು, ಪ್ರಸನ್ನ, ಸುನಿಲ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

Good Bad ugly OTT release date official announcement on Ajith s blockbuster film

ತೆಲುಗಿನ ಮೈತ್ರಿ ಮೂವಿಮೇಕರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿತ್ತು. ಜಿ. ವಿ ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾ ಎಂಬ ಹೆಗ್ಗಳಿಕೆಗೆ 'ಗುಡ್‌ ಬ್ಯಾಡ್ ಅಗ್ಲಿ' ಪಾತ್ರವಾಗಿದೆ. ಇನ್ನು ಅಜಿತ್ ಸಿನಿಕರಿಯರ್‌ನಲ್ಲಿ ಕೂಡ ಭಾರೀ ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ. ರೆಡ್ ಡ್ರ್ಯಾಗನ್ ಆಗಿ ಅಜಿತ್ ಆರ್ಭಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕರ್ನಾಟಕದಲ್ಲಿ ಕೂಡ 'ಗುಡ್‌ ಬ್ಯಾಡ್ ಅಗ್ಲಿ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. 13 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಮೇ 8ರಂದು ಅಂದರೆ ಮುಂದಿನ ಗುರುವಾರ ಸಿನಿಮಾ ರಿಲೀಸ್ ಆಗಲಿದೆ. ತಿಂಗಳಿಗೂ ಮುನ್ನ ಸಿನಿಮಾ ಓಟಿಟಿಗೆ ಬಂದಂತಾಗುತ್ತಿದೆ. ಮೂರು ತಿಂಗಳ ಹಿಂದೆ ಅಜಿತ್ ನಟನೆಯ 'ವಿಡಾಮುಯರ್ಚಿ' ಸಿನಿಮಾ ತೆರೆಕಂಡು ಸೋತಿತ್ತು. ಆ ಸಿನಿಮಾ ಕೂಡ ತಿಂಗಳಿಗೂ ಮುನ್ನ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಟ್ಟಿತ್ತು.

ಎಕೆ ಅಲಿಯಾಸ್ ರೆಡ್ ಡ್ರ್ಯಾಗನ್(ಅಜಿತ್) ದೊಡ್ಡ ಗ್ಯಾಂಗ್‌ಸ್ಟರ್ ಆಗಿರುತ್ತಾನೆ. ಪತ್ನಿ ರಮ್ಯಾ(ತ್ರಿಶಾ) ಗೆ ಕೊಟ್ಟಿ ಮಾತಿಗೆ ಕಟ್ಟುಬಿದ್ದು ಎಲ್ಲಾ ಬಿಟ್ಟು ಜೈಲು ಸೇರುತ್ತಾನೆ. ಬರೋಬ್ಬರಿ 17 ವರ್ಷಗಳ ಬಳಿಕ ಮಗನನ್ನು ನೋಡುವ ಆಸೆಯಿಂದ ಎಕೆ ಜೈಲಿನಿಂದ ಹೊರ ಬರುತ್ತಾನೆ. ಮಗ ವಿಹಾನ್‌(ಕಾರ್ತಿಕ್ ದೇವ್)ನನ್ನು ನೋಡಲು ಎಕೆ ವಿದೇಶಕ್ಕೆ ಹೊರಟು ನಿಲ್ಲುತ್ತಾನೆ. ಅದೇ ಸಮಯದಲ್ಲಿ ಆತನ ಮೇಲೆ ಒಂದು ಗ್ಯಾಂಗ್ ದಾಳಿ ಮಾಡುತ್ತದೆ. ಅತ್ತ ಮಗನನ್ನು ಯಾರೋ ಕಿಡ್ನ್ಯಾಪ್ ಮಾಡುತ್ತಾರೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು 'ಗುಡ್‌ ಬ್ಯಾಡ್ ಅಗ್ಲಿ' ಚಿತ್ರದ ಇನ್ನುಳಿದ ಕಥೆ.

ಕಥೆಯಲ್ಲಿ ಹೊಸತನ ಏನೂ ಇಲ್ಲ. ಆದರೆ ಅಜಿತ್ ಅಭಿಮಾನಿಯಾಗಿರುವ ನಿರ್ದೇಶಕ ಅದಿಕ್ ರವಿಚಂದ್ರನ್ ಬಹಳ ವಿಭಿನ್ನವಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ತನ್ನ ನೆಚ್ಚಿನ ನಟನನ್ನು ಅಭಿಮಾನಿಗಳು ಹೇಗೆ ನೋಡಲು ಇಷ್ಟಪಡುತ್ತಾರೋ ಆ ರೀತಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಅದು ಅಭಿಮಾನಿಗಳಿಗೆ ಇಷ್ಟವಾಗಿದೆ. ಅಜಿತ್ ಗೆಟಪ್‌ಗಳು, ಪರ್ಫಾರ್ಮನ್ಸ್ ನೋಡುಗರಿಗರ ಸಖತ್ ಕಿಕ್ ಕೊಡ್ತಿದೆ. ದೊಡ್ಡಪರೆದಯಲ್ಲೇ ಸಿನಿಮಾ ನೋಡಿ ಎಂದು ಕೆಲವರು ಮನವಿ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ 25 ದಿನ ಪೂರೈಸಿದೆ.

ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ಅಜಿತ್‌ಗೆ 'ಗುಡ್‌ ಬ್ಯಾಡ್ ಅಗ್ಲಿ' ಒಳ್ಳೆ ಬ್ರೇಕ್ ಕೊಟ್ಟಿದೆ. ಮತ್ತಷ್ಟು ಸಿನಿಮಾಗಳನ್ನು ಮಾಡುವ ಹುರುಪು ತುಂಬಿದೆ. ಅಂದಹಾಗೆ ನೆಟ್‌ಫ್ಲಿಕ್ಸ್ 95 ಕೋಟಿ ರೂ. ಪಾವತಿಸಿ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಗುರುವಾರ ಮನೆಯಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಬಹುದು. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಬರ್ತಿದೆ.

More from Filmibeat

English summary
Good Bad ugly OTT; Here's when and where you can watch Ajith starrer action drama
Read more about: ajith kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X