For Quick Alerts
  ALLOW NOTIFICATIONS  
  For Daily Alerts

  ಕೀರ್ತಿ ಸುರೇಶ್‌ಗೆ ಬ್ಯಾಡ್ ಲಕ್: ಈ ಸಲ ಆದರೂ ಕೈ ಹಿಡಿಯುತ್ತಾ ಅದೃಷ್ಟ?

  |

  ದಕ್ಷಿಣ ಭಾರತದ ಬೇಡಿಕೆಯ ಹಾಗೂ ಯಶಸ್ವಿ ನಟಿ ಎನಿಸಿಕೊಂಡಿರುವ ಕೀರ್ತಿ ಸುರೇಶ್ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಿದ್ದಾರೆ. ತಮಿಳು ಹಾಗೂ ತೆಲುಗಿನ ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಮಹೇಶ್ ಬಾಬು ಜೊತೆ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

  'ಮಹಾನಟಿ' ಚಿತ್ರದ ಬಳಿಕ ಕೀರ್ತಿ ಸುರೇಶ್ ಸ್ಟಾರ್ ಪಟ್ಟಕ್ಕೇರಿದ್ದರು. ಕೀರ್ತಿ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಕೀರ್ತಿ ಮನೆ ಬಳಿ ಜಮಾಯಿಸಿದರು. ಅದಕ್ಕೆ ತಕ್ಕಂತೆ ಯಶಸ್ಸು ಸಹ ಕೀರ್ತಿಗೆ ಒಲಿಯುತ್ತಿದೆ. ಆದ್ರೀಗ, ಕೊರೊನಾ ಲಾಕ್‌ಡೌನ್ ರಾಷ್ಟ್ರ ಪ್ರಶಸ್ತಿ ನಟಿಗೆ ಬ್ಯಾಡ್ ಲಕ್ ತಂದಿದೆ. ಬಹಳ ಆಸೆಯಿಂದ, ನಿರೀಕ್ಷೆಯಿಂದ ಮಾಡಿದ ಚಿತ್ರಗಳು ಕೈಕೊಡ್ತಿದೆ. ಈಗಾಗಲೇ ಎರಡು ಬಾರಿ ಕೈ ಸುಟ್ಟುಕೊಂಡಿರುವ ನಟಿಗೆ ಈಗ ಮೂರನೇ ಸಲ ಅದೃಷ್ಟ ಪರೀಕ್ಷೆ ಎದುರಾಗಿದೆ. ಮುಂದೆ ಓದಿ...

  ಸ್ಟಾರ್ ನಿರ್ದೇಶಕ-ಸ್ಟಾರ್ ನಟನ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿ?ಸ್ಟಾರ್ ನಿರ್ದೇಶಕ-ಸ್ಟಾರ್ ನಟನ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿ?

  ಮತ್ತೆ ಒಟಿಟಿಗೆ ಕೀರ್ತಿ ಸುರೇಶ್ ಸಿನಿಮಾ?

  ಮತ್ತೆ ಒಟಿಟಿಗೆ ಕೀರ್ತಿ ಸುರೇಶ್ ಸಿನಿಮಾ?

  ಲಾಕ್‌ಡೌನ್ ಸಮಯದಲ್ಲಿ ಕೀರ್ತಿ ಸುರೇಶ್ ಅಭಿನಯದ ಎರಡು ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಆ ಎರಡೂ ಪ್ರಾಜೆಕ್ಟ್ ಮಕಾಡೆ ಮಲಗಿದವು. ಆ ನಿರಾಸೆಯಿಂದ ಹೊರಬರುವುದಕ್ಕೂ ಮುಂಚೆ ಕೀರ್ತಿ ನಟಿಸಿರುವ ಮತ್ತೊಂದು ಚಿತ್ರ ಒಟಿಟಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ ಎಂಬ ಸುದ್ದಿ ಚರ್ಚೆಯಾಗ್ತಿದೆ. ಈ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದೆ.

  ಅಣ್ಣಾವ್ರ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡ ಸ್ಟಾರ್ ನಟಿಅಣ್ಣಾವ್ರ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡ ಸ್ಟಾರ್ ನಟಿ

  ಥಿಯೇಟರ್‌ನಲ್ಲೇ 'ಗುಡ್ ಲಕ್ ಸಖಿ'

  ಥಿಯೇಟರ್‌ನಲ್ಲೇ 'ಗುಡ್ ಲಕ್ ಸಖಿ'

  'ಗುಡ್ ಲಕ್ ಸಖಿ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ವದಂತಿ ಅಷ್ಟೇ. ನಾವು ರಿಲೀಸ್ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಚಿತ್ರದ ನಿರ್ಮಾಪಕ ಸುಧೀರ್ ಚಂದ್ರ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಜೀ ಸಂಸ್ಥೆ ಗುಡ್ ಲಕ್ ಸಖಿ ಚಿತ್ರವನ್ನು ಖರೀದಿ ಮಾಡಿದೆ ಎಂಬ ಸುದ್ದಿ ವರದಿಯಾಗಿದೆ.

  ಪೆಂಗ್ವಿನ್ ಮತ್ತು ಮಿಸ್ ಇಂಡಿಯಾ

  ಪೆಂಗ್ವಿನ್ ಮತ್ತು ಮಿಸ್ ಇಂಡಿಯಾ

  ಕಳೆದ ಲಾಕ್‌ಡೌನ್ ಸಮಯದಲ್ಲಿ ಕೀರ್ತಿ ಸುರೇಶ್ ನಟಿಸಿದ್ದ 'ಪೆಂಗ್ವಿನ್' ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಿತ್ತು. ಅದಾದ ಬಳಿಕ 'ಮಿಸ್ ಇಂಡಿಯಾ' ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿತ್ತು. ಒಟಿಟಿಯಲ್ಲಿ ತೆರೆಕಂಡ ಈ ಎರಡು ಚಿತ್ರಗಳಿಗೂ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿಲ್ಲ. ಇದು ಸಹಜವಾಗಿ ಬೇಸರ ಮೂಡಿಸಿತ್ತು.

  ಗುಡ್ ಲಕ್ ಸಖಿ ಚಿತ್ರದ ಬಗ್ಗೆ

  ಗುಡ್ ಲಕ್ ಸಖಿ ಚಿತ್ರದ ಬಗ್ಗೆ

  ಕೀರ್ತಿ ಸುರೇಶ್ ಈ ಚಿತ್ರದಲ್ಲಿ ಶೂಟರ್ ಆಗಿ ಕಾಣಿಸಿಕೊಂಡಿದ್ದಾರೆ. ಇಡೀ ಊರಿನಲ್ಲಿ ಬ್ಯಾಡ್ ಲಕ್ ಸಖಿ ಎಂದು ಕರೆಸಿಕೊಳ್ಳುವ ಹುಡುಗಿ ಹೇಗೆ ಸಾಧನೆ ಮಾಡ್ತಾಳೆ ಎನ್ನುವುದು ಕಥೆ. ಜಗಪತಿ ಬಾಬು ಕೋಚ್ ಪಾತ್ರದಲ್ಲಿ ನಟಿಸಿದ್ದಾರೆ. ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿತ್ತು.

  English summary
  The makers of Keerthy suresh's Good Luck Sakhi have denied the rumours about the film' s OTT release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X