ಕೇವಲ ಒಂದೇ ತಿಂಗಳಿಗೆ ಓಟಿಟಿಗೆ ಬಂತು ರಶ್ಮಿಕಾ ಮಂದಣ್ಣ ಬದುಕಿನ ಕತೆ 'ದಿ ಗರ್ಲ್‌ಫ್ರೆಂಡ್' ; ಕನ್ನಡದಲ್ಲಿಯೂ ನೋಡಬಹುದು

ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಂಸ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ ಎನ್ನುವ ಮನೋಭಾವ ಹಲವರಲ್ಲಿದೆ. ಇದು ಮಾತ್ರವಲ್ಲದೇ ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಮನಃಸ್ಥಿತಿ ಕೂಡ ಚಿತ್ರರಂಗದಲ್ಲಿ ಹಲವರಲ್ಲಿದೆ.

ಆದರೆ .. ಈ ಧೋರಣೆಯನ್ನು ಬದಲಿಸುವ ಪ್ರಯತ್ನವನ್ನು ಆಗಾಗ ಹಲವರು ನಾಯಕಿಯರು ಮಾಡುತ್ತಾರೆ. ಪುರುಷ ಪಾರುಪಥ್ಯದ ಕುರಿತು ಕಿಡಿ ಕಾರುತ್ತಾರೆ. ಮತ್ತೂ ಕೆಲ ಒಮ್ಮೆ ಅವಕಾಶ ಸಿಕ್ಕಾಗ ಒಳ್ಳೆಯ ಕಥೆ ಮತ್ತು ತಂಡ ಇದ್ದರೆ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮಿಂಚುತ್ತಾರೆ. ಉದಾಹರಣೆಗೆ ರಶ್ಮಿಕಾ ಮಂದಣ್ಣ.

Goodbye Theatres Hello OTT The Girlfriend Starring Rashmika Mandanna Hits Netflix Dec 5

ಹೌದು, ಬಹುತೇಕರಿಗೆ ಗೊತ್ತಿರುವಂತೆ ರಶ್ಮಿಕಾ ಮಂದಣ್ಣ ಅಭಿನಯದ '' ದಿ ಗರ್ಲ್‌ಫ್ರೆಂಡ್‌'' ಚಿತ್ರ ತೆರೆಗೆ ಬಂದಿತ್ತು. ಬಿಡುಗಡೆಗೆ ಮುನ್ನ ಅಪಾರವಾದ ನಿರೀಕ್ಷೆಯನ್ನು ಕೂಡ ಚಿತ್ರ ಮೂಡಿಸಿತ್ತು. ಇದಕ್ಕೆ ಪೂರಕವಾಗಿ ಚಿತ್ರತಂಡ ಕೂಡ ಅಷ್ಟೇ ಅದ್ದೂರಿಯಾಗಿ ಪ್ರಚಾರವನ್ನು ಮಾಡಿತ್ತು.

ರಶ್ಮಿಕಾ ಮಂದಣ್ಣ ಅವರಂತೂ ಕಾಲಿಗೆ ಚಕ್ರ ಕಟ್ಟಿಕೊಂಡು ಈ ಚಿತ್ರದ ಪ್ರಚಾರವನ್ನು ಮಾಡಿದ್ದರು. ಬಿಡುಗಡೆಯ ಮೊದಲು ತಮ್ಮದೇ ಜೀವನಾಧಾರಿತ ಚಿತ್ರ ಎಂಬಂತೆ ರಶ್ಮಿಕಾ ಮಂದಣ್ಣ ಈ ಚಿತ್ರದ ಕುರಿತು ಮಾತನಾಡಿದ್ದರು. ತಮ್ಮ ಮಾಜಿ ಪ್ರಿಯಕರ ರಕ್ಷಿತ್ ಶೆಟ್ಟಿ ವಿರುದ್ಧ ಪರೋಕ್ಷವಾಗಿ ಹಲವು ಆರೋಪಗಳನ್ನು ಮಾಡಿದ್ದರು. ನನ್ನ ಬದುಕಿನಲ್ಲಿ ವಿಜಯ್ ದೇವರಕೊಂಡ ಬಂದಿದ್ದು ನನ್ನ ಸೌಭಾಗ್ಯ ಎಂದು ಹೇಳಿದ್ದರು. ಎಲ್ಲ ಹುಡುಗಿಯರ ಬದುಕಿನಲ್ಲಿಯೂ ವಿಜಯ್ ದೇವರಕೊಂಡ ಅಂತಹ ಒಬ್ಬ ಹುಡುಗ ಇರಬೇಕು ಎಂದೆಲ್ಲಾ ಮಾತನಾಡಿದ್ದರು.

ರಶ್ಮಿಕಾ ಆಡಿದ ಈ ಮಾತುಗಳನ್ನೆಲ್ಲಾ ಕೇಳಿ ಅನೇಕರು ''ದಿ ಗರ್ಲ್‌ಫ್ರೆಂಡ್‌'' ನಿಜಕ್ಕೂ ರಶ್ಮಿಕಾ ಮಂದಣ್ಣ ಅವರ ವ್ಯೆಯಕ್ತಿಕ ಬದುಕನ ಕಥೆ-ವ್ಯಥೆ ಎಂದು ಅಂದುಕೊಂಡಿದ್ದರು. ರಶ್ಮಿಕಾ ಅವರ ಈ ಚಿತ್ರ ನೋಡಲು ಪ್ರೇಕ್ಷಕರ ಮಹಾಪೂರ ಹರಿದು ಬರುತ್ತೆ ಎಂದುಕೊಂಡಿದ್ದರು.

ಆದರೆ ಅಂದುಕೊಂಡಿದ್ದು ಒಂದು ಆಗಿದ್ದು ಮತ್ತೊಂದು. ಅಂದಾಜು 40 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಕೇವಲ 18-22 ಕೋಟಿಯನ್ನಷ್ಟೇ ಗಳಿಸುವಲ್ಲಿ ಯಶಸ್ವಿಯಾಯ್ತು. ರಶ್ಮಿಕಾ ಮಂದಣ್ಣ ಅವರಿಗೆ ಈ ಮೂಲಕ ಹಿನ್ನೆಡೆಯೂ ಆಯ್ತು.

Goodbye Theatres Hello OTT The Girlfriend Starring Rashmika Mandanna Hits Netflix Dec 5

ಇಂಥಾ ''ದಿ ಗರ್ಲ್‌ಫ್ರೆಂಡ್'' ಚಿತ್ರ ಇದೀಗ ಬಿಡುಗಡೆಯಾಗಿ ಒಂದು ತಿಂಗಳಿಗೆ ಓಟಿಟಿಗೆ ಬರುತ್ತಿದೆ. ಇದೇ ಡಿಸೆಂಬರ್ 5ರಿಂದ ''ನೆಟ್‌ಫ್ಲಿಕ್ಸ್‌''ನಲ್ಲಿ ಈ ಚಿತ್ರ ಪ್ರಸಾರವಾಗಲಿದೆ. ಈ ಕುರಿತು ''ನೆಟ್‌ಫ್ಲಿಕ್ಸ್‌'' ಅಧಿಕೃತ ಘೋಷಣೆಯನ್ನು ಕೂಡ ಮಾಡಿದೆ.

ಇನ್ನೂ ರಶ್ಮಿಕಾ ಮಂದಣ್ಣ ಈಗ ಕೇವಲ ಒಂದು ಭಾಷೆಗೆ ಸೀಮಿತವಾದವರಲ್ಲ. ಎಲ್ಲಾ ಭಾಷೆಯಲ್ಲಿಯೂ ಇವರಿಗೆ ಅಭಿಮಾನಿಗಳಿದ್ದಾರೆ. ಅದರಲ್ಲಿಯೂ ಹಿಂದಿಯಲ್ಲಿ ಸದ್ಯ ತುಸು ಹೆಚ್ಚೇ ಬೇಡಿಕೆ ಇದೆ. ಹೀಗಾಗಿ '' ದಿ ಗರ್ಲ್‌ಫ್ರೆಂಡ್‌'' ಚಿತ್ರವನ್ನು ತೆಲುಗಿನ ಜೊತೆಯಲ್ಲಿ ಹಿಂದಿಯಲ್ಲಿ ಕೂಡ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗಿತ್ತು.

ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಚಿತ್ರತಂಡ ಸದ್ಯ ಈ ಚಿತ್ರವನ್ನು ಬೇರೆ ಭಾಷೆಗಳಿಗೆ ಕೂಡ ಡಬ್ ಮಾಡಿದೆ. ಕನ್ನಡದಲ್ಲಿ ಕೂಡ ನೋಡುವ ಅವಕಾಶವನ್ನು ಕಲ್ಪಿಸಿದೆ. ಆಸಕ್ತ ಕನ್ನಡ ಚಿತ್ರರಸಿಕರು ಮತ್ತು ರಶ್ಮಿಕಾ ಮಂದಣ್ಣ ಅವರ ಕನ್ನಡ ಅಭಿಮಾನಿಗಳು ಈ ಡಿಸೆಂಬರ್ 5ರಿಂದ ಈ ಚಿತ್ರವನ್ನು ಕನ್ನಡದಲ್ಲಿಯೇ ಮನೆಯಲ್ಲಿ ನಿಮ್ಮ ಮನೆಮಂದಿ ಜೊತೆ ಕುಳಿತು ನೋಡಬಹುದು.

More from Filmibeat

English summary
National Crush Rashmika Mandanna is set to dominate your binge-list. Netflix confirms 'The Girlfriend' OTT release date! Stream the emotional new film on December 5.
Read more about: rashmika mandanna tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X