twitter
    For Quick Alerts
    ALLOW NOTIFICATIONS  
    For Daily Alerts

    ಬೆಟ್ಟಿಂಗ್ ಜಾಹೀರಾತು ಸಂಬಂಧಿಸಿದಂತೆ ಟಿವಿ, ಒಟಿಟಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

    |

    ಬೆಟ್ಟಿಂಗ್ ಸೈಟ್‌ಗಳ ಜಾಹೀರಾತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಬೆಟ್ಟಿಂಗ್ ಸೈಟ್‌ಗಳ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಸುದ್ದಿ ವೆಬ್‌ಸೈಟ್‌ಗಳು, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಖಾಸಗಿ ಟಿವಿ ಚಾನೆಲ್‌ಗಳಿಗೆ ಕೇಂದ್ರ ಸರ್ಕಾರವು ನಿನ್ನೆ (ಅಕ್ಟೋಬರ್ 03) ಸೂಚನೆ ನೀಡಿದೆ.

    ''ಖಾಸಗಿ ಸ್ಯಾಟಲೈಟ್ ಟಿವಿ ಚಾನೆಲ್‌ಗಳು, ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಅದರ ಬದಲಿ ವೆಬ್‌ಸೈಟ್‌ಗಳು ಅಥವಾ ಈ ಪ್ಲಾಟ್‌ಫಾರ್ಮ್‌ಗಳ ಉತ್ಪನ್ನ ಹಾಗೂ ಸೇವೆಗಳ ಜಾಹೀರಾತುಗಳನ್ನು ತಡೆಯುವಂತೆ ಸೂಚಿಸಲಾಗಿದೆ" ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಲಹಾ ಸಚಿವಾಲಯ ತಿಳಿಸಿದೆ.

    ಒಂದೊಮ್ಮೆ ಈ ಸೂಚನೆಯನ್ನು ಉಲ್ಲಂಘಿಸಿ ಜಾಹೀರಾತು ಪ್ರದರ್ಶನ ಮಾಡಿದರೆ ಆದೇಶ ಉಲ್ಲಂಘನೆ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಖಾಸಗಿ ಸ್ಯಾಟಲೈಟ್ ಚಾನೆಲ್‌ಗಳಿಗೆ ಎಚ್ಚರಿಕೆ ನೀಡಿದೆ ಕೇಂದ್ರ ಸರ್ಕಾರ.

    ಒಟಿಟಿ ಫ್ಲಾಟ್‌ಫಾರ್ಮ್ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನ ಪ್ರಕಟಿಸುವವರಿಗೆ ವಿಶೇಷ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ, ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಜಾಹೀರಾತು ಅಥವಾ ಪ್ರಚಾರವನ್ನು ನೀಡಬಾರದಾಗಿ ಸೂಚಿಸಿದೆ.

    Government asks News websites, OTT platforms and TV channels not to advertisement betting sites

    ಕೆಲವು ಆನ್‌ಲೈನ್‌ ಬೆಟ್ಟಿಂಗ್‌ ಅಪ್ಲಿಕೇಶನ್‌ಗಳು ಸುದ್ದಿ ಪ್ರಸಾರ ಸಂಸ್ಥೆಗಳ ಮೂಲಕ ತಮ್ಮ ಜಾಹೀರಾತು ಪ್ರಕಟಣೆ ಮಾಡುತ್ತಿದ್ದಾವೆ. ಬೆಟ್ಟಿಂಗ್ ಅಪ್ಲಿಕೇಶನ್‌ಗಳೇ ಸುದ್ದಿಗಳನ್ನು ಪ್ರಸಾರ ಮಾಡಿ ಅದರ ನಡುವೆ ಜಾಹೀರಾತು ಪ್ರಕಟಣೆ ಮಾಡಲಾಗುತ್ತಿದೆ. ಸುದ್ದಿ ಚಾನೆಲ್ ಲೋಗೋ ಬೆಟ್ಟಿಂಗ್ ಅಪ್ಲಿಕೇಶನ್ ಲೋಗೊ ಒಂದೇ ರೀತಿ ಇರುವಂತೆ ನೋಡಿಕೊಂಡು ಬುದ್ಧಿವಂತಿಕೆಯಿಂದ ಜಾಹೀರಾತು ನೀಡಲಾಗುತ್ತಿದೆ. ಇದಕ್ಕೂ ಸಹ ಕೇಂದ್ರ ಸರ್ಕಾರವು ನಿಷೇಧ ಹೇರಿದೆ.

    ಜಾಹೀರಾತಿಗಾಗಿಯೇ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಕೆಲವು ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರವು ಪಟ್ಟಿ ಮಾಡಿದ್ದು, ಅವಕ್ಕೆ ಎಚ್ಚರಿಕೆಯನ್ನು ನೀಡಲಾಗಿದೆ.

    ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಜಾಹೀರಾತಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ನಟ ಸುದೀಪ್ ಹಾಗೂ ಇತರ ನಟರು ಬೆಟ್ಟಿಂಗ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ಜಾಹೀರಾತಿನಲ್ಲಿ ನಟಿಸುತ್ತಿರುವುದನ್ನು ವಿರೋಧಿಸಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಸುದೀಪ್ ಅಭಿಮಾನಿಗಳು ಹಾಗೂ ಅಹೋರಾತ್ರ ನಡುವೆ ನಡೆದ ಸಾಮಾಜಿಕ ಜಾಲತಾಣ ಫೈಟ್ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿತ್ತು.

    English summary
    Central government asks news websites, OTT platforms and private satellite TV channels to refrain from carrying advertisements of betting sites.
    Tuesday, October 4, 2022, 17:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X