For Quick Alerts
  ALLOW NOTIFICATIONS  
  For Daily Alerts

  ಒಟಿಟಿಗಳಿಗೆ ಸರ್ಕಾರ ಮೂಗುದಾರ: ಸರ್ಕಾರದ ನಿಗಾವಣೆಯಲ್ಲಿ 'ಸ್ಟ್ರೀಮಿಂಗ್'

  |

  ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಆಲ್ಟ್ ಬಾಲಾಜಿ ಇನ್ನೂ ಹಲವಾರು ಒಟಿಟಿಗಳು ಭಾರತದಲ್ಲಿ ಸೇವೆ ನೀಡುತ್ತಿದ್ದು, ನೆಟ್‌ಫ್ಲಿಕ್ಸ್‌ಗಳು ಪ್ರಸಾರ ಮಾಡುವ ವೆಬ್ ಸರಣಿ, ಸಿನಿಮಾಗಳ ಮೇಲೆ ಯಾವುದೇ ನಿರ್ಭಂಧ ಇರಲಿಲ್ಲ. ಈಗ ಸರ್ಕಾರವು ಒಟಿಟಿಗಳು 'ಕಂಟೆಂಟ್‌' ಗಳ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ.

  ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಮಾರ್ಗಸೂಚಿ ಹೊರಡಿಸಿದ್ದು, ಇದರನ್ವಯ ಒಟಿಟಿಗಳು ಇನ್ನು ಮುಂದೆ ಮೂರು ವಿದಧ ನಿಯಂತ್ರಣ ಮತ್ತು ಪರಿಶೀಲನಾ ವ್ಯವಸ್ಥೆಯನ್ನು ಹಾದು ಬಂದು ಆ ನಂತರವೇ ಪ್ರೇಕ್ಷಕರಿಗೆ ತಮ್ಮ ವೆಬ್ ಸರಣಿ, ಸಿನಿಮಾ, ಡಾಕ್ಯುಮೆಂಟರಿ ಅಥವಾ ಇನ್ನಾವುದೇ ಕಂಟೆಂಟ್ ಅನ್ನು ಪ್ರದರ್ಶಿಸಬೇಕಿದೆ.

  ಇಷ್ಟು ದಿನ ಒಟಿಟಿಗಳ ಕಂಟೆಂಟ್‌ಗಳನ್ನು ಯಾವುದೇ 'ಯು', 'ಎ' ಪ್ರಮಾಣಪತ್ರವಿಲ್ಲದೆ ಪ್ರದರ್ಶನ ಮಾಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಎಲ್ಲ ಕಂಟೆಂಟ್‌ಗಳಿಗೂ ಅದರ ವಿಷಯ ಆಧರಿಸಿ 'ಯು', 'ಎ' ಪ್ರಮಾಣ ನೀಡಿಯೇ ಪ್ರದರ್ಶಿಸಬೇಕಿದೆ.

  ಸರ್ಕಾರದ ಆದೇಶಗಳನ್ನು ಪಾಲನೆ ಮಾಡಲೆಂದೇ ಇನ್ನು ಮುಂದೆ ಎಲ್ಲ ಒಟಿಟಿಗಳು ಒಬ್ಬ ಅಧಿಕಾರಿಯನ್ನು ನೇಮಿಸಿಕೊಳ್ಳತಕ್ಕದ್ದು ಎಂದು ಸರ್ಕಾರವು ಆದೇಶಿಸಿದೆ. ಒಟಿಟಿಗಳ ಪರವಾಗಿ ಸರ್ಕಾರದೊಂದಿಗೆ ಆತನೇ ಸಂವಹನ ಮಾಡಬೇಕಾಗುತ್ತದೆ.

  ಸರ್ಕಾರವು ಯಾವುದೇ ವೆಬ್ ಸೀರೀಸ್ ಅಥವಾ ಸಿನಿಮಾ ಬಗ್ಗೆ ಆಕ್ಷೇಪ ಎತ್ತಿದಲ್ಲಿ ಅದನ್ನು ಕೇವಲ 24 ಗಂಟೆಗಳ ಒಳಗಾಗಿ ತೆಗೆಯಬೇಕಾಗಿದೆ. ಆ ನಂತರ 15 ದಿನಗಳ ಒಳಗಾಗಿ ಸ್ಪಷ್ಟನೆ ನೀಡಬೇಕಾಗಿರುತ್ತದೆ.

  ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 87 ರ ಅಡಿಗೆ ಒಟಿಟಿಗಳು, ಸಾಮಾಜಿಕ ಜಾಲತಾಣ ಮಾಧ್ಯಮಗಳನ್ನು ತರಲಾಗಿದ್ದು, ಸರ್ಕಾರದ ಪ್ರಸ್ತುತ ಹೊರತಂದಿರುವ ಮಾರ್ಗಸೂಚಿ ಅನ್ವಯ ಸಾಮಾಜಿಕ ಮಾಧ್ಯಮ, ಡಿಜಿಟಲ್ ಮಾಧ್ಯಮ, ಒಟಿಟಿಗಳು ಕಾರ್ಯನಿರ್ವಹಿಸಬೇಕಿದೆ.

  Read more about: ott ಒಟಿಟಿ
  English summary
  Govt draft rules to regulate all social media, OTT platforms and news-related websites.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X