For Quick Alerts
  ALLOW NOTIFICATIONS  
  For Daily Alerts

  ಗುರುಶಿಷ್ಯರು, ಮಾನ್ಸೂನ್ ರಾಗ, ತೋತಾಪುರಿ ಓಟಿಟಿ ಬಿಡುಗಡೆ ದಿನಾಂಕ ಬಹಿರಂಗ

  |

  ಈ ವರ್ಷ ಕನ್ನಡ ಚಿತ್ರರಂಗ ಚಿನ್ನದ ಬೆಳೆ ಬೆಳಿದಿದೆ ಎಂದೇ ಹೇಳಬಹುದು. ಏಕೆಂದರೆ ಇತರೆ ಚಿತ್ರರಂಗಗಳಿಗಿಂತ ಈ ವರ್ಷ ಕನ್ನಡ ಚಿತ್ರರಂಗ ಗಳಿಕೆ ವಿಚಾರದಲ್ಲಿ ಇತರೆ ಎಲ್ಲಾ ಚಿತ್ರರಂಗಗಳಿಗಿಂತಲೂ ಮುಂದಿದೆ. ಗಳಿಕೆ ಮಾತ್ರವಲ್ಲದೇ ಕಂಟೆಂಟ್ ವಿಚಾರದಲ್ಲಿಯೂ ಸಹ ಕನ್ನಡ ಚಲನಚಿತ್ರರಂಗ ಟಾಪ್ ಸ್ಥಾನದಲ್ಲಿದೆ.

  ಇನ್ನು ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡ ಕನ್ನಡ ಚಿತ್ರಗಳು ಯಾವಾಗ ಓಟಿಟಿಗೆ ಬರಲಿವೆ ಎಂದು ಸಿನಿ ಪ್ರಿಯರು ಕಾಯುತ್ತಿದ್ದಾರೆ. ಇನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಚಿತ್ರಮಂದಿರಕ್ಕೆ ಕಾಲಿಟ್ಟ ಕನ್ನಡ ಚಿತ್ರಗಳಾದ ಶರಣ್ ಅಭಿನಯದ ಗುರು ಶಿಷ್ಯರು, ಧನಂಜಯ್ ಹಾಗೂ ರಚಿತಾ ರಾಮ್ ಅಭಿನಯದ ಮಾನ್ಸೂನ್ ರಾಗ ಹಾಗೂ ಜಗ್ಗೇಶ್ ಮತ್ತು ಅಧಿತಿ ಪ್ರಭುದೇವ ಅಭಿನಯದ ತೋತಾಪುರಿ ಚಾಪ್ಟರ್ 1 ಚಿತ್ರಗಳು ಯಾವಾಗ ಓಟಿಟಿಗೆ ಲಗ್ಗೆ ಇಡಲಿವೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.

  ಈ ಮೂರೂ ಚಿತ್ರಗಳ ಓಟಿಟಿ ಪ್ರಸಾರದ ಹಕ್ಕನ್ನು ಜೀ ಸಂಸ್ಥೆ ಹೊಂದಿದೆ. ಮೊದಲಿಗೆ ಜೀ ಫೈವ್ ಅಪ್ಲಿಕೇಶನ್‌ನಲ್ಲಿ ಚಿತ್ರಗಳು ಸ್ಟ್ರೀಮ್ ಆಗಲಿದ್ದು ನಂತರ ಜೀ ಕನ್ನಡ ವಾಹಿನಿಯಲ್ಲಿ ಚಿತ್ರಗಳು ಪ್ರಸಾರಗೊಳ್ಳಲಿವೆ. ಈ ಮೂರು ಚಿತ್ರಗಳು ಯಾವಾಗ ಜೀ ಫೈವ್ ಅಪ್ಲಿಕೇಶನ್‌ನಲ್ಲಿ ಸ್ಟ್ರೀಮ್ ಆಗಲಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

  ಗುರು ಶಿಷ್ಯರು

  ಗುರು ಶಿಷ್ಯರು

  ಶರಣ್ ಹಾಗೂ ನಿಶ್ವಿಕಾ ನಾಯ್ಡು ನಾಯಕ ಮತ್ತು ನಾಯಕಿಯಾಗಿ ಅಭಿನಯಿಸಿದ್ದ ಗುರು ಶಿಷ್ಯರು ಚಿತ್ರ ಇದೇ ತಿಂಗಳ 11ರಿಂದ ಜೀ ಫೇವ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಲು ಲಭ್ಯವಿರಲಿದೆ. ಈ ಕುರಿತಾಗಿ ಜೀ ಫೈವ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದು ಮಾಹಿತಿಯನ್ನು ಹಂಚಿಕೊಂಡಿದೆ. ದೇಶಿ ಕ್ರೀಡೆ ಖೋ ಖೋ ಕುರಿತಾದ ಕತೆಯನ್ನು ಹೊಂದಿರುವ ಗುರು ಶಿಷ್ಯರು ಚಿತ್ರ ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸಬಹುದಾದಂತ ಚಿತ್ರವಾಗಿದೆ. ಇಷ್ಟು ದಿನ ನಟನಾಗಿ ಮಾತ್ರ ಕೆಲಸ ನಿರ್ವಹಿಸಿದ್ದ ಶರಣ್ ಈ ಚಿತ್ರಕ್ಕೆ ತರುಣ್ ಸುಧೀರ್ ಜತೆ ಕೈ ಜೋಡಿಸಿ ಬಂಡವಾಳ ಹೂಡಿ ನಿರ್ಮಾಪಕ ಕೂಡ ಆಗಿದ್ದರು ಮತ್ತು ಜೆಂಟಲ್‌ಮನ್ ರೀತಿಯ ಒಳ್ಳೆ ಕಂಟೆಂಟ್ ಚಿತ್ರವನ್ನು ನಿರ್ದೇಶಿಸಿದ್ದ ಜಡೇಶ್ ಕುಮಾರ್ ಹಂಪಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

  ಮಾನ್ಸೂನ್ ರಾಗ

  ಮಾನ್ಸೂನ್ ರಾಗ

  ಧನಂಜಯ್, ರಚಿತಾ ರಾಮ್, ಯಶಾ ಶಿವಕುಮಾರ್, ಅಚ್ಯುತ್ ಕುಮಾರ್ ಹಾಗೂ ಸುಹಾಸಿನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಮಾನ್ಸೂನ್ ರಾಗ ತೆಲುಗಿನ ಕೇರ್ ಆಫ್ ಕಂಚೆರಪಾಲೆಂ ಎಂಬ ಚಿತ್ರದ ರಿಮೇಕ್ ಆಗಿತ್ತು. ಚಿತ್ರ ನಿರೀಕ್ಷಿಸಿದ ಯಶಸ್ಸು ಕಾಣುವಲ್ಲಿ ವಿಫಲವಾದರೂ ಬಿಡುಗಡೆಗೂ ಮುನ್ನ ಒಂದಷ್ಟು ಸದ್ದು ಮಾಡಿತ್ತು. ರಿಮೇಕ್ ಎಂಬ ಕಾರಣಕ್ಕೆ ಈ ಚಿತ್ರವನ್ನು ನೋಡುವತ್ತ ಬಹುತೇಕರು ಆಸಕ್ತಿ ತೋರಲಿಲ್ಲ ಎಂದರೆ ತಪ್ಪಾಗಲಾರದು. ಹೀಗೆ ಬಾಕ್ಸ್ ಆಫೀಸ್‌ನಲ್ಲಿ ಸಾಮಾನ್ಯವೆನಿಸಿಕೊಂಡ ಮಾನ್ಸೂನ್ ರಾಗ ಚಿತ್ರ ಇದೇ ನವೆಂಬರ್ 25ರಿಂದ ಜೀ ಫೈವ್ ಅಪ್ಲಿಕೇಶನ್‌ನಲ್ಲಿ ಪ್ರಸಾರವಾಗಲಿದೆ.

  ತೋತಾಪುರಿ

  ತೋತಾಪುರಿ

  ಕಾಂತಾರ ಜತೆ ಚಿತ್ರಮಂದಿರಕ್ಕೆ ಬಂದ ಜಗ್ಗೇಶ್ ಹಾಗೂ ಅಧಿತಿ ಪ್ರಭುದೇವ ಅಭಿನಯದ ಮತ್ತು ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುವಲ್ಲಿ ವಿಫಲವಾದ ತೋತಾಪುರಿ ಚಾಪ್ಟರ್ 1 ಚಿತ್ರ ಜೀ ಫೈವ್ ಅಪ್ಲಿಕೇಶನ್‌ನಲ್ಲಿ ಡಿಸೆಂಬರ್ ತಿಂಗಳು ಸ್ಟ್ರೀಮ್ ಆಗಲಿದೆ.

  English summary
  Guru Shishyaru, Monsoon Raaga and Thothapuri Chapter 1 OTT streaming date details. Read on
  Saturday, November 5, 2022, 15:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X