ನಟಿ ಹನ್ಸಿಕಾ ಮೊಟ್ವಾನಿ ಮದುವೆ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ!
ಕೆಲವು ಸೆಲೆಬ್ರಿಟಿಗಳಂತೂ ಯಾವುದನ್ನು ಬೇಕಾದರೂ ಪ್ರಚಾರದ ಇವೆಂಟ್ ಆಗಿ ಪರಿವರ್ತಿಸಿಕೊಳ್ಳುತ್ತಾರೆ. ಅದರಿಂದ ಲಾಭ ಪಡೆದುಕೊಳ್ಳುತ್ತಾರೆ. ತಮ್ಮದೇ ಮದುವೆಯನ್ನೂ ಬಿಡುವುದಿಲ್ಲ.
ಮದುವೆ ಎಂಬುದು ಗಂಡು-ಹೆಣ್ಣಿನ ನಡುವೆ ಏರ್ಪಡುವ ಪವಿತ್ರ ಬಂಧ. ಸ್ನೇಹಿತರು, ಕುಟುಂಬದವರ ನಡುವಿನ ಪ್ರೀತಿ ಇನ್ನಷ್ಟು ಗಟ್ಟಿಗೊಳ್ಳುವ ಸಮಾರಂಭ ಎಂದೆಲ್ಲ ಬಣ್ಣಿತವಾಗುತ್ತದೆ. ಆದರೆ ಸೆಲೆಬ್ರಿಟಿಗಳು ಇತ್ತೀಚೆಗೆ ತಮ್ಮ ಮದುವೆಯನ್ನೂ ಕೋಟಿ-ಕೋಟಿ ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ!
ಇತ್ತೀಚೆಗೆ ಕೆಲ ಸೆಲೆಬ್ರಿಟಿಗಳು ತಮ್ಮ ಮದುವೆಯನ್ನು ಇವೆಂಟ್ ಅನ್ನಾಗಿ ಪರಿವರ್ತಿಸಿ ಅದರ ವಿಡಿಯೋವನ್ನು ಒಟಿಟಿಗಳಿಗೆ ಕೋಟಿ-ಕೋಟಿ ಹಣಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಸೂಪರ್ ಸ್ಟಾರ್ ನಟಿ ನಯನತಾರಾ-ವಿಘ್ನೇಶ್ ಮದುವೆ ನೆಟ್‌ಫ್ಲಿಕ್ಸ್‌ಗೆ ಮಾರಾಟವಾಗಿತ್ತು. ಆದರೆ ಇನ್ನೂ ಅದು ಪ್ರಸಾರವಾಗಿಲ್ಲ. ಈಗ ಇನ್ನೊಬ್ಬ ನಟಿಯ ಮದುವೆ ಡಿಸ್ನಿ ಹಾಟ್‌ಸ್ಟಾರ್‌ಗೆ ಮಾರಾಟವಾಗಿದೆ.

ಕನ್ನಡ ಸೆರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ಶ್ವೇತಸುಂದರಿ ಹನ್ಸಿಕಾ ಮೋಟ್ವಾನಿ ಮದುವೆಯಾಗಲಿದ್ದು, ತಮ್ಮ ಮದುವೆಯನ್ನು ಡಿಸ್ನಿ ಹಾಟ್‌ಸ್ಟಾರ್ ಒಟಿಟಿಗೆ ಮಾರಾಟ ಮಾಡಿದ್ದಾರೆ.
ಹನ್ಸಿಕಾ ತಮ್ಮ ಬಹುಸಮಯದ ಗೆಳೆಯ, ಬ್ಯುಸಿನೆಸ್ ಪಾರ್ಟನರ್ ಸಹ ಆಗಿರುವ ಸೋಹೆಲ್ ಕತುರಿಯಾ ಅನ್ನು ವಿವಾಹವಾಗಲಿದ್ದು, ಇವರಿಬ್ಬರ ವಿವಾಹ ಡಿಸೆಂಬರ್ 3 ಹಾಗೂ 4 ರಂದು ರಾಜಸ್ಥಾನದ ಜೈಪುರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ತಮ್ಮ ಮದುವೆಯ ವಿಡಿಯೋವನ್ನು ಚಿತ್ರೀಕರಿಸುವ ಹಾಗೂ ಎಡಿಟ್ ಮಾಡಿ ಪ್ರಸಾರ ಮಾಡುವ ಹಕ್ಕನ್ನು ಡಿಸ್ನಿ ಹಾಟ್‌ಸ್ಟಾರ್‌ಗೆ ನೀಡಿದ್ದಾರಂತೆ!
ಈ ಒಪ್ಪಂದಕ್ಕೆ ಕೋಟ್ಯಂತರ ರುಪಾಯಿ ಹಣವನ್ನು ಡಿಸ್ನಿ ಹಾಟ್‌ಸ್ಟಾರ್‌ನಿಂದ ಹನ್ಸಿಕಾ ಮೊಟ್ವಾನಿ ಹಾಗೂ ಸೋಹೆಲ್ ಕತುರಿಯಾ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಮದುವೆಯನ್ನು ಮಾರಿಕೊಳ್ಳುವ ಈ ಸಂಪ್ರದಾಯ ಪ್ರಾರಂಭವಾಗಿದ್ದು, ನಟಿ ಪ್ರಿಯಾಂಕಾ ಚೋಪ್ರಾ ಇಂದ. ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ವಿವಾಹವನ್ನು ಖಾಸಗಿ ಮಾಧ್ಯಮವೊಂದನ್ನು ಮಾರಾಟ ಮಾಡಲಾಗಿತ್ತು. ಪ್ರಿಯಾಂಕಾ-ನಿಕ್‌ರ ಮದುವೆಯ ವಿಡಿಯೋ ಹಾಗೂ ಚಿತ್ರಗಳ ಹಕ್ಕು ಆ ಮಾಧ್ಯಮದ ಬಳಿಯೇ ಇವೆ.
ಕೆಲ ತಿಂಗಳ ಹಿಂದಷ್ಟೆ ವಿವಾಹವಾದ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸಹ ತಮ್ಮ ವಿವಾಹದ ವಿಡಿಯೋ, ಚಿತ್ರಗಳ ಹಕ್ಕನ್ನು ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಿದ್ದಾರೆ. ನೆಟ್‌ಫ್ಲಿಕ್ಸ್ ನಲ್ಲಿ ಇವರ ಮದುವೆಯ ವಿಡಿಯೋ ಇನ್ನೂ ಪ್ರಸಾರವಾಗಿಲ್ಲ.


Click it and Unblock the Notifications











