OTT releases this week: 'ಹನುಮಾನ್' ಸೇರಿ ಈ ವಾರ ಓಟಿಟಿಗೆ ಬರುತ್ತಿರುವ ಸಿನಿಮಾ, ಸೀರಿಸ್ ಪಟ್ಟಿ
ಪ್ರೇಕ್ಷಕರು ಇತ್ತೀಚೆಗೆ ಚಿತ್ರಮಂದಿರಗಳ ಕಡೆ ಮುಖ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಮಾತ್ರ ದೊಡ್ಡಪರದೆಯಲ್ಲಿ ನೋಡಲು ಇಷ್ಟಪಡುತ್ತಿದ್ದಾರೆ. ಅಥವಾ ಅದ್ಭುತ ಪ್ರತಿಕ್ರಿಯೆ ಸಿಗುವ ಸಿನಿಮಾಗಳಿಗೆ ಮಾತ್ರ ಚಿತ್ರಮಂದಿರಕ್ಕೆ ಹೋಗಲು ತೀರ್ಮಾನಿಸುತ್ತಿದ್ದಾರೆ. ಓಟಿಟಿ ಬಂದಮೇಲೆ ಈ ಮನಸ್ಥಿತಿ ಹೆಚ್ಚಾಗುತ್ತಿದೆ.
ತೆರೆಕಂಡ ತಿಂಗಳೊಳಗೆ ಸಿನಿಮಾಗಳು ಓಟಿಟಿಗೆ ಬರ್ತಿವೆ. ಜೊತೆಗೆ ವೆಬ್ ಸೀರಿಸ್‌ಗಳು ವೀಕ್ಷಣೆಗೆ ಸಿಗುತ್ತಿವೆ. ಅದೇ ಕಾರಣಕ್ಕೆ ಪ್ರತಿ ವೀಕೆಂಡ್ ಯಾವ ಸಿನಿಮಾ, ವೆಬ್ ಸೀರಿಸ್ ಡಿಜಿಟಲ್ ಫ್ಲಾಟ್‌ಪಾರ್ಮ್‌ಗೆ ಬರುತ್ತದೆ ಎಂದು ಕೆಲವರು ಕಾದು ಕೂರುತ್ತಾರೆ.

ಇದೀಗ ಮತ್ತೊಂದು ವಾರ ಕಳೆದು ಹೊಸ ವೀಕೆಂಡ್ ಕೂಡ ಹತ್ತಿರವಾಗುತ್ತಿದೆ. ಈ ವೀಕೆಂಡ್ ಯಾವ ಯಾವ ಸಿನಿಮಾ ಹಾಗೂ ವೆಬ್ ಸೀರಿಸ್ ಯಾವ ಯಾವ ಓಟಿಟಿ ಫ್ಲಾಟ್‌ಪಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. 'ಹನುಮಾನ್' ಸೇರಿದಂತೆ 20ಕ್ಕೂ ಅಧಿಕ ಸಿನಿಮಾ, ವೆಬ್ ಸೀರಿಸ್ ಈ ವೀಕೆಂಡ್ ವೀಕ್ಷಣೆಗೆ ಲಭ್ಯವಾಗುತ್ತಿವೆ.
ಜಿಯೋ ಸಿನಿಮಾ
1. ಹನುಮಾನ್
ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗಪ್ಪಳಿಸಿದ ತೆಲುಗಿನ 'ಹನುಮಾನ್' ಸೂಪರ ಹಿಟ್ ಆಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಪ್ರಶಾಂತ್ ವರ್ಮಾ ನಿರ್ದೇಶನದ ಈ ಸೂಪರ್ ಹೀರೊ ಚಿತ್ರದಲ್ಲಿ ತೇಜ ಸಜ್ಜ ಹೀರೊ ಆಗಿ ನಟಿಸಿದ್ದಾರೆ. ಅಂದಾಜು 30 ಕೋಟಿ ರೂ. ಬಜೆಟ್ ಸಿನಿಮಾ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಹಿಂದಿ ವರ್ಷನ್ ಸಹ ಹಿಟ್ ಆಗಿತ್ತು. 'ಹನುಮಾನ್' ಹಿಂದಿ ವರ್ಷನ್ ಶನಿವಾರ (ಮಾರ್ಚ್ 16) ರಾತ್ರಿ 8 ಗಂಟೆಗೆ ಕಲರ್ಸ್ ಸಿನೆಪ್ಲೆಕ್ಸ್ ಟಿವಿ ಚಾನೆಲ್ ಹಾಗೂ ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗಲಿದೆ. ಆದರೆ ತೆಲುಗು ಹಾಗೂ ಕನ್ನಡ ವರ್ಷನ್ ಓಟಿಟಿ ರಿಲೀಸ್ ಬಗ್ಗೆ ಮಾಹಿತಿ ಇಲ್ಲ.
2. ಟ್ರೋಲ್ ಬ್ಯಾಂಡ್ ಟು ಗೆದರ್(ಹಾಲಿವುಡ್ ಆನಿಮೇಷನ್ ಸಿನಿಮಾ)-ಮಾರ್ಚ್ 17
ಸೋನಿ ಲಿವ್
1. ಭ್ರಮಯುಗಂ
ತಿಂಗಳ ಹಿಂದೆ ಮಲಯಾಳಂನಲ್ಲಿ ಬಿಡುಗಡೆಯಾಗಿದ್ದ 'ಭ್ರಮಯುಗಂ' ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ರಾಹುಲ್ ಸದಾಶಿವನ್ ನಿರ್ದೇಶನದ ಈ ಹಾರರ್ ಚಿತ್ರದಲ್ಲಿ ಮೊಮ್ಮುಟಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಲಯಾಳಂ ಮಾತ್ರವಲ್ಲದೇ ಕನ್ನ, ತೆಲುಗು, ತಮಿಳಿಗೂ ಈ ಸಿನಿಮಾ ಡಬ್ ಆಗಿದೆ. ಸೋನಿ ಲಿವ್‌ನಲ್ಲಿ ಮಾರ್ಚ್ 15ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

ಡಿಸ್ನಿ ಹಾಟ್‌ಸ್ಟರ್
1. ಸೇವ್ ದ ಟೈಗರ್ಸ್
ತೆಲುಗಿನ ಕಾಮಿಡಿ ವೆಬ್ ಸೀರಿಸ್ 'ಸೇವ್ ದಿ ಟೈಗರ್ಸ್' ಸೀಸನ್-1 ವೀಕ್ಷಕರನ್ನು ರಂಜಿಸಿತ್ತು. ಇದೀಗ 2ನೇ ಸೀಸನ್ ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ಪ್ರಿಯದರ್ಶಿ ಹಾಗೂ ಅಭಿನವ್ ಗೊತಮ್ ಸರಣಿ ತಾರಾಗಣದಲ್ಲಿದ್ದಾರೆ. ಶುಕ್ರವಾರದಿಂದ (ಮಾರ್ಚ್ 15) 'ಸೇವ್ ದಿ ಟೈಗರ್ಸ್' ಸೀಸನ್-2 ರಿಲೀಸ್ ಆಗಲಿದೆ.
2. ಗ್ರೇಸ್ ಅನಾಟಮಿ; ಸೀಸನ್ 20(ಇಂಗ್ಲೀಷ್ ವೆಬ್ ಸೀರಿಸ್) ಮಾರ್ಚ್ 15
3. ಟೇಲರ್ ಸ್ವಿಫ್ಟ್: ದ ಎರಾಸ್ ಟೂರ್(ಇಂಗ್ಲೀಷ್ ಸಿನಿಮಾ) ಮಾರ್ಚ್ 15
ಜೀ5
1. ಮೇ ಅಟಲ್ ಹೂಂ
ಜನವರಿ 19ಕ್ಕೆ ತೆರೆಗೆ ಬಂದಿದ್ದ 'ಮೇ ಅಟಲ್ ಹೂಂ' ಸಿನಿಮಾ ಜೀ5ನಲ್ಲಿ ಮಾರ್ಚ್ 14ಕ್ಕೆ ರಿಲೀಸ್ ಆಗುತ್ತಿದೆ. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜೀವನವನ್ನಾಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. ರವಿ ಜಾಧವ್ ನಿರ್ದೇಶನದ ಈ ಬಯೋಪಿಕ್‌ನಲ್ಲಿ ವಾಜಪೇಯಿ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ನಟಿಸಿದ್ದಾರೆ.
ನೆಟ್‌ಫ್ಲಿಕ್ಸ್
1. ಜೀಸಸ್ ರೆವಲೂಷನ್ಸ್(ಇಂಗ್ಲೀಷ್ ಸಿನಿಮಾ) ಮಾರ್ಚ್-12
2. ಟರ್ನಿಂಗ್ ಪಾಯಿಂಟ್(ಇಂಗ್ಲೀಷ್ ಸೀರಿಸ್) ಮಾರ್ಚ್-12
3. 24 ಅವರ್ಸ್ ವಿತ್ ಗಾಸ್ಪರ್(ಇಂಗ್ಲೀಷ್ ಸಿನಿಮಾ) ಮಾರ್ಚ್-14
4. ಐರಿಷ್ ವಿಶ್ (ಇಂಗ್ಲೀಷ್ ಸಿನಿಮಾ) ಮಾರ್ಚ್-15
5. ಐರನ್ ರಿಯನ್(ಸ್ಪ್ಯಾನಿಷ್ ಸೀರಿಸ್) ಮಾರ್ಚ್ 15
6. ಚಿಕನ್ ನಗ್ಗೆಟ್(ಕೊರಿಯನ್ ಸೀರಿಸ್)ಮಾರ್ಚ್ 15
7. ಗರ್ಲ್ಸ್ 5 ಎವಾ: ಸೀಸನ್ 3 (ಇಂಗ್ಲೀಷ್ ಸೀರಿಸ್) ಮಾರ್ಚ್-14
8. ಯಂಗ್ ರಾಯಲ್ಸ್- ಸೀಸನ್ 3(ಸ್ವೀಡಿಶ್ ಸೀರಿಸ್)
9. ಮರ್ಡರ್ ಮುಬಾರಕ್
ಬಾಲಿವುಡ್ ಮಿಸ್ಟರಿ ಥ್ರಿಲ್ಲರ್ ಸಿನಿಮಾ 'ಮರ್ಡರ್ ಮುಬಾರಕ್' ನೇರವಾಗಿ ನೆಟ್‌ಫ್ಲಿಕ್ಸ್‌ಗೆ ಬರ್ತಿದೆ. ಹೋಮಿ ಅಡಜನಿಯಾ ನಿರ್ದೇಶನದ ಈ ಚಿತ್ರದಲ್ಲಿ ಸಾರಾ ಅಲಿಖಾನ್, ವಿಜಯ್ ವರ್ಮಾ, ಡಿಂಪಲ್ ಕಪಾಡಿಯಾ ಸೇರಿದಂತೆ ದೊಡ್ಡ ತಾರಾಗಣವಿದೆ. ಮಾರ್ಚ್ 15ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
ಅಮೇಜಾನ್ ಪ್ರೈಂ
1. ಬಿಗ್ ಗರ್ಲ್ಸ್ ಡೋಂಟ್ ಕ್ರೈ(ಹಿಂದಿ ಸೀರಿಸ್) ಮಾರ್ಚ್ 14
2. ಅವ್ ಅದುರಾ(ಹಿಂದಿ ಸೀರಿಸ್) ಮಾರ್ಚ್ 13
3. ಇನ್ವಿಸಿಬಲ್ ಸೀಸನ್-2, ಪಾರ್ಟ್-2(ಇಂಗ್ಲೀಷ್ ಸೀರಿಸ್) ಮಾರ್ಚ್ 14
4. ಫ್ರೀಡಾ(ಇಂಗ್ಲೀಷ್ ಸಿನಿಮಾ) ಮಾರ್ಚ್ 15


Click it and Unblock the Notifications











