HanuMan OTT: ಎಲ್ಲಿ, ಯಾವಾಗ 'ಹನುಮಾನ್' ಡಿಜಿಟಲ್ ಸ್ಟ್ರೀಮಿಂಗ್? ನಿರ್ದೇಶಕರಿಂದಲೇ ಮಾಹಿತಿ

ಬಾಕ್ಸಾಫೀಸ್‌ನಲ್ಲಿ 'ಹನುಮಾನ್' ಸಿನಿಮಾ ಆರ್ಭಟ ಮುಂದುವರೆದಿದೆ. ಈಗಾಗಲೇ ಸಿನಿಮಾ ಗ್ರಾಸ್ ಕಲೆಕ್ಷನ್ 200 ಕೋಟಿ ರೂ. ದಾಟಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಈ ಸೂಪರ್ ಹೀರೊ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಿದೆ. ತೇಜ ಸಜ್ಜ ಚಿತ್ರದಲ್ಲಿ ಹೀರೊ ಆಗಿ ಮಿಂಚಿದ್ದಾರೆ. ಸದ್ಯ 'ಹನುಮಾನ್' ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಚರ್ಚೆ ನಡೀತಿದೆ.

ಸಿಂಪಲ್ ಕಥೆಯನ್ನು ಬಹಳ ಪರಿಣಾಮಕಾರಿಯಾಗಿ ಹೇಳಿ ಚಿತ್ರತಂಡ ಗೆದ್ದಿದೆ. ಉತ್ತರ ಭಾರತದಲ್ಲೂ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ಚಿತ್ರಕ್ಕೆ ಕರ್ನಾಟಕದಲ್ಲೂ ಉತ್ತಮ ಗಳಿಕೆ ಕಂಡಿತ್ತು. 'ಹನುಮಾನ್' ಕ್ರೇಜ್ ಹೇಗಿತ್ತು ಅಂದ್ರೆ ಮೊದಲ ವಾರದ ಬಳಿಕ ಮಹೇಶ್ ಬಾಬು 'ಗುಂಟೂರು ಖಾರಂ' ಸ್ಕ್ರೀನ್‌ಗಳನ್ನು ಕಿತ್ತುಕೊಂಡಿತ್ತು. ಈ ವರ್ಷದ ಟಾಲಿವುಡ್ ಸಂಕ್ರಾಂತಿ ವಿನ್ನರ್ ಎನಿಸಿಕೊಂಡಿತ್ತು.

Hanuman OTT Release: when, where to watch teja sajja on online

ಹೌದು ಈ ವರ್ಷ ಸಂಕ್ರಾಂತಿಗೆ ತಮಿಳು, ತೆಲುಗಿನ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗಿದ್ದವು. ಎಲ್ಲದನ್ನೂ ಮೀರಿ 'ಹನುಮಾನ್' ಗಮನ ಸೆಳೆದಿತ್ತು. ಮಹೇಶ್ ಬಾಬು 'ಗುಂಟೂರು ಖಾರಂ', ವಿಕ್ಟರಿ ವೆಂಕಟೇಶ್ 'ಸೈಂಧವ್', ನಾಗಾರ್ಜುನ 'ನಾ ಸಾಮಿ ರಂಗ' ಸಿನಿಮಾಗಳ ಜೊತೆಗೆ 'ಹನುಮಾನ್' ರಿಲೀಸ್ ಆಗಿತ್ತು. ಆದರೆ ಉಳಿದ ಸಿನಿಮಾಗಳಿಗಿಂತ ತೇಜ ಸಜ್ಜ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು.

3ನೇ ವಾರವೂ ಥಿಯೇಟರ್‌ಗಳಲ್ಲಿ 'ಹನುಮಾನ್' ಚಮತ್ಕಾರ ಮುಂದುವರೆದಿದೆ. ಸಾಮಾನ್ಯರಲ್ಲಿ ಸಾಮಾನ್ಯನಾದ ವ್ಯಕ್ತಿಗೆ ಸೂಪರ್ ಪವರ್ ಸಿಕ್ಕರೆ ಏನಾಗುತ್ತದೆ? ಆ ಪವರ್ ಬಳಸಿ ಆತ ನನ್ನವರನ್ನು, ತನ್ನ ಊರನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ? ಆ ಸೂಪರ್ ಪವರ್ ಪಡೆಯುವ ಹವಣಿಸುವವರು ಏನೆಲ್ಲಾ ಮಾಡ್ತಾರೆ? ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಅಂಜನಾದ್ರಿ ಎನ್ನುವ ಒಂದು ಕಾಲ್ಪನಿಕ ಊರಿನಲ್ಲಿ ಸಿನಿಮಾ ಕಥೆ ನಡೆಯುತ್ತದೆ.

Hanuman OTT Release: when, where to watch teja sajja on online

'ಹನುಮಾನ್' ಗ್ರಾಫಿಕ್ಸ್ ಮಾಯಾಲೋಕ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಬಹಳ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಕ್ವಾಲಿಟಿ ನೋಡಿದವರು ದಂಗಾಗಿದ್ದರು. ಅದರಲ್ಲೂ ಗ್ರಾಫಿಕ್ಸ್ ಹುಬ್ಬೇರಿಸುವಂತಿದೆ. ಇನ್ನು ಹನುಮಂತನ ರುಧಿರ ಮಣಿ ಪ್ರಸ್ತಾಪ, ಹನುಮಂತನ ಲೀಲೆಗಳು ಪ್ರೇಕ್ಷಕರನ್ನು ಆಕರ್ಷಿಸಿದ್ದು ಸುಳ್ಳಲ್ಲ. ವಿದೇಶಗಳಲ್ಲಿ ಕೂಡ 'ಹನುಮಾನ್' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು.

ಜೀ5 'ಹನುಮಾನ್' ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿದೆ ಎನ್ನಲಾಗ್ತಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರವನ್ನು ನೋಡಬಹುದು. ಬಿಡುಗಡೆಯಾದ 60 ದಿನಗಳ ನಂತರ ಸ್ಟ್ರೀಮಿಂಗ್ ನಡೆಯಲಿದೆ ಎಂದು ಚಿತ್ರದ ನಿರ್ದೇಶ ಪ್ರಶಾಂತ್ ವರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ ನಿರ್ಮಾಪಕರಾದ ನಿರಂಜನ್ ರೆಡ್ಡಿ 90 ದಿನಗಳ ಬಳಿಕ ಓಟಿಟಿಗೆ ಬರುತ್ತದೆ ಎಂದಿದ್ದರು.

ನಿರ್ದೇಶಕರು ಹೇಳಿದಂತೆ 'ಹನುಮಾನ್' ಬಿಡುಗಡೆ ದಿನಾಂಕದ ಪ್ರಕಾರ, ಮಾರ್ಚ್ ಎರಡನೇ ಅಥವಾ ಮೂರನೇ ವಾರದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ. ಮಾರ್ಚ್‌ 8ರಂದು ಸಿನಿಮಾ ಸಿನಿಮಾ ಓಟಿಟಿಗೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಥಿಯೇಟರ್‌ ಅನುಭವಕ್ಕಾಗಿ ಮಾಡಿರುವುದು. ಅದನ್ನು ಥಿಯೇಟರ್‌ನಲ್ಲಿ ನೋಡಿದರೆ ಚೆಂದ. ಮೊಬೈಲ್, ಟಿವಿಯಲ್ಲಿ ಅಷ್ಟು ಮಜಾ ಇರಲ್ಲ ಎಂದು ಚಿತ್ರತಂಡ ಹೇಳುತ್ತಾ ಬರುತ್ತಿದೆ.

ಪ್ರಶಾಂತ್ ವರ್ಮಾ ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ 'ಹನುಮಾನ್' ಕಥೆಯನ್ನು ಹೇಳಿದ್ದಾರೆ. ಇದು ಸರಣಿಯ ಮೊದಲ ಸಿನಿಮಾ ಅಷ್ಟೇ. ಇಂತಹ ಹಲವು ಸಿನಿಮಾಗಳನ್ನು ತೆರೆಗೆ ತರಲು ಮುಂದಾಗಿದ್ದಾರೆ. 'ಹನುಮಾನ್' ಸೀಕ್ವೆಲ್ ಜೈ 'ಹನುಮಾನ್' ಸಹ ಘೋಷಣೆ ಆಗಿದೆ. ಚಿತ್ರದಲ್ಲಿ ಯಾರು ಹೀರೊ ಆಗಿ ನಟಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಅಂದಹಾಗೆ 'ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡ ನಟಿಸಬೇಕಿತ್ತು. ಚಿತ್ರದಲ್ಲಿ ವಿಭೀಷಣ ಪಾತ್ರ ಬರುತ್ತದೆ. ಈ ಪಾತ್ರಕ್ಕೆ ಮೊದಲು ರಿಷಬ್ ಶೆಟ್ಟಿ ಇದ್ದರೆ ಚೆನ್ನಾಗಿರುತ್ತದೆ ಎಂದು ನಿರ್ದೇಶಕರು ಭಾವಿಸಿದ್ದರಂತೆ. ಆದರೆ ರಿಷಬ್ 'ಕಾಂತಾರ' ಪ್ರೀಕ್ವೆಲ್‌ನಲ್ಲಿ ಬ್ಯುಸಿ ಆಗಿದ್ದರಿಂದ ಸಾಧ್ಯವಾಗಲಿಲ್ಲ. ಮುಂದಿನ ತಮ್ಮ ಸಿನಿಮಾಗಳಲ್ಲಿ ಕಂಡಿತ ರಿಷಬ್‌ ಶೆಟ್ಟಿ ನಟಿಸುತ್ತಾರೆ ಎಂದು ಪ್ರಶಾಂತ್ ವರ್ಮಾ ಹೇಳಿದ್ದಾರೆ.

More from Filmibeat

English summary
director Prasanth Varma talk about Hanuman OTT Release date.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X