HanuMan OTT: 'ಹನುಮಾನ್' ಒಟಿಟಿ ರಿಲೀಸ್ ಡೇಟ್, ಟೈಮ್ ಮತ್ತು ಪ್ಲಾಟ್‌ಫಾರ್ಮ್ ವಿವರಗಳು ಇಲ್ಲಿವೆ
ಈ ಸಂಕ್ರಾಂತಿಗಾಗಿ ತೆಲುಗು ಸಿನಿಮಾರಂಗದಿಂದ ಸಾಲು ಸಾಲು ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಟ್ಟಿವೆ. ಸ್ಟಾರ್ ನಟರ ಸಿನಿಮಾಗಳ ಜೊತೆ ಜೊತೆಗೆ ಹೊಸಬರ ಚಿತ್ರಗಳು ವಿಭಿನ್ನ ಕಾರಣಕ್ಕೆ ಸದ್ದು ಮಾಡುತ್ತಿವೆ. ಅದರಲ್ಲಿ ಜನವರಿ 12 ರಂದು ಬಿಡುಗಡೆಯಾದ ಯುವ ನಟ ತೇಜಾ ಸಜ್ಜಾ ನಟನೆಯ ಹನುಮಾನ್ ಕೂಡ ಒಂದು.
ಹನುಮಾನ್ ಸಿನಿಮಾ ಟಾಲಿವುಡ್ ವೀಕ್ಷಕರನ್ನು ಮಾತ್ರವಲ್ಲದೇ ಪ್ರಪಂಚದಾದ್ಯಂತದ ಚಲನಚಿತ್ರ ಪ್ರೇಮಿಗಳನ್ನು ತನ್ನ ಕಂಟೆಂಟ್ ಮತ್ತು ಉತ್ತಮ ವಿಎಫ್‌ಎಕ್ಸ್‌ನಿಂದ ಆಕರ್ಷಿಸುತ್ತಿದೆ. ಒಳ್ಳೆ ಬಜೆಟ್‌ನಲ್ಲಿ ನಿರ್ಮಿಸಲಾಗಿರುವ ಸಿನಿಮಾಕ್ಕೆ ಪ್ರಶಾಂತ್ ವರ್ಮಾ ಅವರ ನಿರ್ದೇಶನವಿದೆ. ಹೀಗಾಗಿಯೇ ಎಲ್ಲಾ ಕಡೆಯಿಂದ ಹನುಮಾನ್ ಚಿತ್ರಕ್ಕೆ ಉತ್ತಮ ವಿಮರ್ಶೆ ಬರುತ್ತಿದೆ.

ಭಾರತೀಯ ಸೂಪರ್ ಹೀರೋ ಸಿನಿಮಾ ಹನುಮಾನ್
ಜನವರಿ 12 ರಂದು ತೆರೆಕಂಡಿರುವ ಹನುಮಾನ್ ಸಿನಿಮಾವನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಇದನ್ನು ಮೊದಲ ಭಾರತೀಯ ಸೂಪರ್ ಹೀರೋ ಚಿತ್ರ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ನಾಯಕ ಹನುಮಂತು ಭಗವಾನ್ ಹನುಮನ ರುಧಿರಮಣಿ ಮೂಲಕ ಮಹಾಶಕ್ತಿಗಳನ್ನು ಪಡೆಯುತ್ತಾನೆ.
ಅಧಿಕಾರದ ದಾಹದಿಂದ ಖಳನಾಯಕ ಮೈಕೆಲ್ ರುಧಿರಮಣಿಯನ್ನು ತನ್ನ ವಶ ಮಾಡಿಕೊಳ್ಳಲು ಮತ್ತು ಮಹಾನ್ ಶಕ್ತಿವಂತನಾಗಲು ಪ್ರಯತ್ನಿಸುತ್ತಾರೆ. ಅದರೆ, ಅವನ ಪ್ರಯತ್ನಗಳು ವಿಫಲಗೊಳ್ಳುತ್ತವೆ. ನಂತರ ಅಂಜನಾದ್ರಿ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುವ ದೌರ್ಜನ್ಯದ ವಿರುದ್ಧದ ಯುದ್ಧ ಪ್ರಮುಖ ಅಂಶವಾಗಿದೆ.
ಹನುಮಾನ್ ಒಟಿಟಿ ಬಿಡುಗಡೆ ದಿನಾಂಕ ಮತ್ತು ಪ್ಲಾಟ್‌ಫಾರ್ಮ್
ಹನುಮಾನ್ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು Zee 5 ಪಡೆದುಕೊಂಡಿದೆ. ಅಂದರೆ ತೇಜಾ ಸಜ್ಜಾ, ಅಮೃತಾ ಅಯ್ಯರ್, ವಿನಯ್ ರೈ ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಸೇರಿದಂತೆ ಇತರರು ನಟಿಸಿರುವ 'ಹನುಮಾನ್' ಥಿಯೇಟ್ರಿಕಲ್ ರನ್ ಮುಗಿದ ನಂತರ Zee 5 ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸುತ್ತದೆ.

ಇನ್ನು, ಲೆಕ್ಕಾಚಾರಗಳನ್ನು ಗಮನಿಸಿದರೆಶ, ಹನುಮಾನ್ ಮಾರ್ಚ್ 2024 ರ ಮಧ್ಯ ವಾರದಲ್ಲಿ ಒಟಿಟಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ. ಹನುಮಾನ್‌ನ OTT ಬಿಡುಗಡೆಯ ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಹನುಮಾನ್ ಪಾತ್ರವರ್ಗ
ಅಂಜನಾದ್ರಿ ಹಳ್ಳಿಯ ಯುವಕ ಹನುಮಂತು ಪಾತ್ರದಲ್ಲಿ ತೇಜಾ ಸಜ್ಜಾ ಕಾಣಿಸಿಕೊಳ್ಳಲಿದ್ದಾರೆ. ಅಮೃತಾ ಅಯ್ಯರ್ ಅವರು ನಾಯಕಿ ಮೀನಾಕ್ಷಿ, ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಹನುಮಂತು ಅವರ ಸಹೋದರಿ ಅಂಜಮ್ಮ ಆಗಿ ನಟಿಸಿದ್ದಾರೆ. ಈ ಮೊದಲ ತೆಲುಗು ಸೂಪರ್ ಹೀರೋ ಚಿತ್ರದಲ್ಲಿ ವೆನ್ನೆಲ ಕಿಶೋರ್, ಸತ್ಯ, ಸಮುದ್ರಕನಿ, ವಿನಯ್ ರೈ, ಗೆಟಪ್ ಶ್ರೀನು, ರಾಜ್ ದೀಪಕ್ ಶೆಟ್ಟಿ, ಕೌಶಿಕ್ ಮಹಾತಾ ಮತ್ತು ಭಾನು ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಪ್ರಶಾಂತ್ ವರ್ಮಾ ಬರೆದು ನಿರ್ದೇಶಿಸಿರುವ 'ಹನುಮಾನ್' ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ ನಿರಂಜನ್ ರೆಡ್ಡಿ ಅವರ ನಿರ್ಮಾಣದ ಮಾಡಿದ್ದಾರೆ. ಹರಿ ಗೌರ ಮತ್ತು ಕೃಷ್ಣ ಸೌರಭ್ ಚಿತ್ರದ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಾಯಿಬಾಬು ತಳಾರಿ ಸಂಕಲನಕಾರರಾಗಿ, ದಾಶರಧಿ ಶಿವೇಂದ್ರ ಛಾಯಾಗ್ರಹಣ ಮಾಡಿದ್ದಾರೆ.


Click it and Unblock the Notifications










