Hanuman Ott: ಓಟಿಟಿಗೆ ಬಂದ 'ಹನುಮಾನ್'; ತೆಲುಗು ವರ್ಷನ್‌ಗೆ ಟ್ವಿಸ್ಟ್, ಕನ್ನಡ ಕಥೆಯೇನು?

ಈ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ಹಿಟ್ ಆಗಿದ್ದ ಸಣ್ಣ ಸಿನಿಮಾ 'ಹನುಮಾನ್' ಕೊನೆಗೂ ಓಟಿಟಿಗೆ ಬಂದಿದೆ. ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗಪ್ಪಳಿಸಿದ್ದ ಸಿನಿಮಾ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಸೂಪರ್ ಸ್ಟಾರ್‌ಗಳ ದೊಡ್ಡ ಸಿನಿಮಾಗಳನ್ನು ಬಾಕ್ಸಾಫೀಸ್‌ನಲ್ಲಿ ಹಿಂದಿಕ್ಕಿತ್ತು.

'ಹನುಮಾನ್' ಓಟಿಟಿ ಸ್ಟ್ರೀಮಿಂಗ್‌ಗಾಗಿ ಅಭಿಮಾನಿಗಳ ಬಹಳ ದಿನಗಳಿಂದ ಕಾಯುತ್ತಿದ್ದರು. ಅದ್ಯಾಕೋ ಪದೇ ಪದೆ ಬಿಡುಗಡೆ ದಿನಾಂಕ ಮುಂದೂಡಲಾಗಿತ್ತು. ಶಿವರಾತ್ರಿ ಸಂಭ್ರಮದಲ್ಲಿ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿತ್ತು. ಕಾರಣಾಂತರಗಳಿಂದ ರಿಲೀಸ್ ಮುಂದೂಡಲಾಗಿತ್ತು. ಇತ್ತೀಚೆಗೆ 'ಹನುಮಾನ್' ಹಿಂದಿ ವರ್ಷನ್ ಓಟಿಟಿ ಸ್ಟ್ರೀಮಿಂಗ್ ಮಾಹಿತಿ ಸಿಕ್ಕಿತ್ತು.

Hanuman OTT teja Sajja s film Hindi Version and Telugu Version Now Streaming

ಏಕಕಾಲಕ್ಕೆ ಕಲರ್ಸ್ ಸಿನೆಪ್ಲೆಕ್ಸ್ ಟಿವಿ ವಾಹಿನಿ ಜೊತೆಗೆ ಜಿಯೋ ಸಿನಿಮಾದಲ್ಲಿ 'ಹನುಮಾನ್' ಹಿಂದಿ ವರ್ಷನ್ ರಿಲೀಸ್ ಆಗುವುದಾಗಿ ಮಾಹಿತಿ ಲಭ್ಯವಾಗಿತ್ತು. ಹೇಳಿದಂತೆಯೇ ಹಿಂದಿ ವರ್ಷನ್ ವೀಕ್ಷಣೆಗೆ ಸಿಗುತ್ತಿದೆ. ಇನ್ನು ದಿಢೀರನೇ ತೆಲುಗು ವರ್ಷನ್ ಕೂಡ ಜೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ ಅದಕ್ಕೊಂದು ಟ್ವಿಸ್ಟ್ ಸಿಕ್ಕಿದೆ. ಇದೆಲ್ಲದರ ನಡುವೆ ಕನ್ನಡ, ತಮಿಳು, ಮಲಯಾಳಂ ವರ್ಷನ್‌ಗಳು ವೀಕ್ಷಣೆಗೆ ಸಿಗುತ್ತಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರಶಾಂತ್ ವರ್ಮಾ ನಿರ್ದೇಶನದ 'ಹನುಮಾನ್' ಚಿತ್ರದಲ್ಲಿ ತೇಜ ಸಜ್ಜಾ ಹೀರೊ ಆಗಿ ನಟಿಸಿದ್ದಾರೆ. ಈ ಸೂಪರ್ ಹೀರೊ ಚಿತ್ರವನ್ನು ಸಣ್ಣ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಸಿನಿಮಾ ಮೇಕಿಂಗ್ ಹಾಗೂ ಗ್ರಾಫಿಕ್ಸ್ ಗುಣಮಟ್ಟ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಸಿಲ್ವರ್ ಸ್ಕ್ರೀನ್‌ಗಳಲ್ಲಿ ಅದ್ಭುತ ಅನುಭವ ನೀಡಿತ್ತು. ಇನ್ನು ಹನುಮಂತನ ಬಲವೂ ಚಿತ್ರಕ್ಕಿತ್ತು.

'ಹನುಮಾನ್' ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಕಂಡು ಚಿತ್ರತಂಡ ಈಗಾಗಲೇ ಸೀಕ್ವೆಲ್ ಘೋಷಿಸಿದೆ. ಇನ್ನು ಹಲವು ಸಿನಿಮಾಗಳನ್ನು ಈ ಸರಣಿಯಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಉತ್ತರ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿ ಕೂಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದೇ ಕಾರಣಕ್ಕೆ ಓಟಿಟಿ ಸ್ಟ್ರೀಮಿಂಗ್‌ಗಾಗಿ ಬಹಳ ಜನ ಕಾಯುತ್ತಿದ್ದರು.

Hanuman OTT teja Sajja s film Hindi Version and Telugu Version Now Streaming

'ಹನುಮಾನ್' ತೆಲುಗು ವರ್ಷನ್ ಕೂಡ ಇದೀಗ ಜೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ ಚಂದಾದಾರರೆಲ್ಲರಿಗೂ ಎಲ್ಲರಿಗೂ ವೀಕ್ಷಣೆಗೆ ಅವಕಾಶವಿಲ್ಲ. ಬಾಡಿಗೆ ಆಧಾರದಲ್ಲಿ ಹಣ ಪಾವತಿಸಿ ಸಿನಿಮಾ ನೋಡಬೇಕಾಗಿದೆ. ಇದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಅಂದಹಾಗೆ 'ಹನುಮಾನ್' ಸಿನಿಮಾ ಕನ್ನಡ, ತಮಿಳಿಗೂ ಡಬ್ ಆಗಿ ತೆರೆಗೆ ಬಂದಿತ್ತು. ಆದರೆ ಓಟಿಟಿಯಲ್ಲಿ ಸದ್ಯಕ್ಕೆ ಲಭ್ಯವಿಲ್ಲ.

ಕನ್ನಡ, ತಮಿಳಿನಲ್ಲಿ ಬೇಗ ಸ್ಟ್ರೀಮಿಂಗ್ ಮಾಡಿ ಎಂದು ನೆಟ್ಟಿಗರು ಮನವಿ ಮಾಡುತ್ತಿದ್ದಾರೆ. ಸಾಮಾನ್ಯ ಯುವಕನೊಬ್ಬ ಆಂಜನೇಯ ದೈವ ಬಲದಿಂದ ಸೂಪರ್ ಹೀರೋ ಆಗಿ ಹೇಗೆ ತನ್ನ ಊರು ಮತ್ತು ಜಗತ್ತನ್ನು ಉಳಿಸಿಕೊಂಡ ಎಂಬುದೇ 'ಹನುಮಾನ್' ಸಿನಿಮಾದ ಕಥೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು.

ಮಹೇಶ್ ಬಾಬು ನಟನೆಯ ಗುಂಟೂರು ಖಾರಂ, ಧನುಷ್ 'ಕ್ಯಾಪ್ಟನ್ ಮಿಲ್ಲರ್', ನಾಗಾರ್ಜುನ್ 'ನಾ ಸಾಮಿ ರಂಗ' ಹಾಗೂ ವಿಕ್ಟರಿ ವೆಂಕಟೇಶ್ 'ಸೈಂಧವ್' ಸಿನಿಮಾಗಳ ಎದುರು 'ಹನುಮಾನ್' ಗೆದ್ದಿತ್ತು. ಚಿತ್ರದಲ್ಲಿ ತೇಜ ಸಜ್ಜಾ ಜೋಡಿಯಾಗಿ ಬೆಂಗಳೂರು ಬೆಡಗಿ ಅಮೃತ ಅಯ್ಯರ್ ನಟಿಸಿದ್ದರು. ಇನ್ನುಳಿದಂತೆ ವರಲಕ್ಷ್ಮಿ ಶರತ್ ಕುಮಾರ್, ಸಮುದ್ರ ಖನಿ, ವಿಜಯ್ ರೈ, ವೆನ್ನಲ ಕಿಶೋರ್, ಗೆಟಪ್ ಶ್ರೀನು ತಾರಾಗಣದಲ್ಲಿದ್ದಾರೆ.

More from Filmibeat

English summary
teja sajja starrer HanuMan is now streaming on ZEE5;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X