ಚೈತ್ರಾ ಆಚಾರ್ ಸಿನಿಮಾ 'ಹ್ಯಾಪಿ ಬರ್ತ್ ಡೇ ಟು ಮಿ' ನೇರ ಓಟಿಟಿಗೆ; ಇದಕ್ಕೂ ಥಿಯೇಟರ್ ಎಫೆಕ್ಟಾ?

By ಅನಿತಾ ಬನಾರಿ

ಹೌದು, ಕನ್ನಡ ಚಿತ್ರರಂಗಕ್ಕೆ ಹೊಸ ಸಿನಿಮಾ ಒಂದು ಬರಲಿದೆ. ಅದುವೇ 'ಹ್ಯಾಪಿ ಬರ್ತಡೇ ಟು ಮಿ'. ಸಿನಿಮಾದ ಹೆಸರೇನೋ ಇಂಟರೆಸ್ಟಿಂಗ್ ಆಗಿದೆ. ಜೊತೆಗೆ ಇದರಲ್ಲಿ ಇನ್ನೂ ಒಂದು ವಿಶೇಷತೆ ಇದೆ. ಈ ಚಿತ್ರ ಸಿನಿಮಾ ಥಿಯೇಟರ್‌ಗೆ ಕಾಲಿಡದೆ ನೇರವಾಗಿ ಓಟಿಟಿಯಲ್ಲಿ ಪ್ರಸಾರವಾಗಲಿದೆ.

ಸಾಮಾನ್ಯವಾಗಿ ಕನ್ನಡ ಚಿತ್ರರಂಗದ ಸಿನಿಮಾಗಳು ಮೊದಲು ಥಿಯೇಟರ್‌ಗೆ ಕಾಲಿಟ್ಟು ಅಲ್ಲಿ ಒಂದಷ್ಟು ಸದ್ದು ಮಾಡಿದ ನಂತರವೂ ಓಟಿಟಿಗೆ ಬರಲು ಕಷ್ಟಪಡುತ್ತವೆ. ಅಂತದ್ದರಲ್ಲಿ 'ಹ್ಯಾಪಿ ಬರ್ತಡೇ ಟು ಮಿ' ಎಂಬ ಹೊಸ ಚಿತ್ರವನ್ನು ನೇರವಾಗಿ ಓಟಿಪಿಯಲ್ಲಿ ಸ್ಟ್ರೀಮಿಂಗ್ ಮಾಡಲು ಚಿತ್ರತಂಡ ಮುಂದಾಗಿದೆ. ಥಿಯೇಟರ್‌ಗೆ ಜನರೇ ಬರುತ್ತಿಲ್ಲ ಅನ್ನುವ ಪರಿಸ್ಥಿತಿ ಇದ್ದಾಗ, ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ.

Happy Birthday To Me movie is directly releasing in OTT

ಅಂದಹಾಗೆ ಈ ಸಿನಿಮಾದಲ್ಲಿ ನಟಿ ಚೈತ್ರಾ ಆಚಾರ್ ಅವರು, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್ ಹಾಗೂ ಇತರೆ ವಿಚಾರಗಳನ್ನು ಸ್ವತಃ ನಟಿ ಚೈತ್ರಾ ಆಚಾರ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ನೆಟ್ಟಿಗರು ಹಾಗೂ ಅಭಿಮಾನಿಗಳಲ್ಲಿ ಕುತೂಹಲ ಕೆರಳಿದೆ.

ನಟಿ ಚೈತ್ರಾ ಆಚಾರ್ ಅವರು ತಮ್ಮ ಅಭಿನಯಕ್ಕೆ ಬಹಳ ದೊಡ್ಡ ಫ್ಯಾನ್ ಬೇಸ್ ಅನ್ನು ಹೊಂದಿದ್ದಾರೆ. 'ಟೋಬಿ', 'ಸಪ್ತಸಾಗರದ ಆಚೆ ಎಲ್ಲೋ ಸೈಡ್ ಬಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ ಈಕೆ ಬಹಳ ಕಮ್ಮಿ ಸಮಯದಲ್ಲೇ ಹೆಚ್ಚು ಹೆಸರುಗಳಿಸಿದ ನಟರಲ್ಲೊಬ್ಬರು. ಇದೀಗ "ಹ್ಯಾಪಿ ಬರ್ತಡೇ ಟು ಮಿ" ಎಂಬ ವಿಶೇಷ ಟೈಟಲ್ ಹೊಂದಿರುವ ಈ ಚಿತ್ರ ನಟಿ ಚೈತ್ರ ಆಚಾರ್ ಅವರೇ ಪ್ರಮುಖ ಪಾತ್ರಧಾರಿ ಆಗಿದ್ದು, ಇವರು ಸುತ್ತ ಇನ್ನೂ ಹಲವು ಪಾತ್ರಗಳು ಸುತ್ತುತ್ತವೆ.

ಬಹು ಬೇಡಿಕೆಯಲ್ಲಿರುವ ನಟ ಗೋಪಾಲ್ ದೇಶಪಾಂಡೆ ಸೇರಿದಂತೆ ಇನ್ನೂ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಂದಹಾಗೆ ಈ ಚಿತ್ರವನ್ನು ನಿರ್ದೇಶಕ ರಾಕೇಶ್ ಕದ್ರಿ ಅವರು ನಿರ್ದೇಶಿಸಿದ್ದಾರೆ. ವಿಷ್ಣು ಪ್ರಸಾದ್ ಅವರು ಕ್ಯಾಮರಾ ವರ್ಕ್ ಮಾಡಿದ್ದಾರೆ. ವಿನಯ್ ಶಂಕರ್ ಸಂಗೀತ ನಿರ್ದೇಶನ ನೀಡಿದ್ದಾರೆ. ಇಡೀ ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆಯನ್ನು ನಿರ್ದೇಶಕ ರಾಕೇಶ್ ಕದ್ರಿಯವರೇ ನಿರ್ವಹಿಸಿದ್ದಾರೆ.

ಚಿತ್ರವನ್ನು ಥಿಯೇಟರ್‌ಗೆ ತರುವ ಬದಲು ಸೀದಾ ಒಟಿಟಿಯಲ್ಲಿ ಬಿಡುತ್ತಿರುವುದರಿಂದ ಚಿತ್ರದ ಬಗೆಗಿನ ಆಕಾಂಕ್ಷೆಗಳು ಹೆಚ್ಚಾಗಿದೆ. ಈಗಾಗಲೇ ಪೋಸ್ಟರ್ ಬಿಡುಗಡೆಯಾಗಿದ್ದು ಒಳ್ಳೆಯ ಕಂಟೆಂಟ್ ಇರುವ ಫನ್ನಿ ಎಲಿಮೆಂಟ್‌ನ ಚಿತ್ರ ಇದು ಎಂಬ ಫೀಲ್ ಬರುತ್ತದೆ. ನಟಿ ಚೈತ್ರಾ ಆಚಾರ್ ಅವರು ಸ್ಕೂಲ್‌ಗೆ ಹೋಗುವ ಹುಡುಗಿಯಂತೆ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದು, ಯೂನಿಫಾರ್ಮ್ ಒಂದು ಇಲ್ಲ ಅಷ್ಟೇ. ತಮ್ಮ ವಯಸ್ಸಿಗಿಂತ ಸ್ವಲ್ಪ ಚಿಕ್ಕ ಹುಡುಗಿಯ ಪಾತ್ರವನ್ನು ಮಾಡಿದಂತೆ ಕಾಣುತ್ತದೆ.

ಓಟಿಟಿಯಲ್ಲಿ ಚಿತ್ರ ಹೊರಬೀಳುವ ದಿನಾಂಕವನ್ನು ಚಿತ್ರತಂಡ ಅನೌನ್ಸ್ ಮಾಡಿದ್ದು ಇದೇ ಜೂನ್ 28 ರಂದು ಸಿನಿಮಾ ಸ್ಟ್ರೀಮ್ ಆಗಲಿದೆ. ಅಭಿಮಾನಿಗಳು ಪ್ರೇಕ್ಷಕರು ಹಾಗೂ ನೆಟ್ಟಿಗರ ಕುತೂಹಲ ಹೆಚ್ಚಾಗಿದ್ದು ಎಲ್ಲರೂ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.

More from Filmibeat

English summary
Happy Birthday To Me movie is directly releasing in OTT
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X