Parking: ಒಟಿಟಿಯಲ್ಲಿ ಹೆಚ್ಚಾಗುತ್ತಿದೆ 'ಪಾರ್ಕಿಂಗ್' ಫೀವರ್: ಸಣ್ಣ ಬಜೆಟ್‌ನ ಈ ಸಿನಿಮಾದಲ್ಲಿ ಅಂತದ್ದೇನಿದೆ?

ಕಳೆದ ವರ್ಷದ ಡಿಸೆಂಬರ್ ಒಂದನೇ ತಾರೀಕು ಬಿಡುಗಡೆಯಾಗಿದ್ದ ತಮಿಳು ಸಿನಿಮಾ ಸದ್ಯಕ್ಕೆ ಓಟಿಟಿಯಲ್ಲಿ ಸಕತ್ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾದ್ದೇ ಮಾತು, ಚರ್ಚೆ. ಅದರಲ್ಲೂ ಮಹಾನಗರಗಳ ದೊಡ್ಡ ಸಮಸ್ಯೆ ಜೊತೆಗೆ ಸಿನಿಮಾ ತಳುಕು ಹಾಕಿಕೊಂಡಿರುವುದು ಕೂಡ ಇದಕ್ಕೆ ಬಹುಮುಖ್ಯ ಕಾರಣ. ಹೌದು... ನಾವು ಹೇಳಲು ಹೊರಟಿರುವುದು 'ಪಾರ್ಕಿಂಗ್' ಸಿನಿಮಾ ಬಗ್ಗೆ.

ಸಿನಿಮಾ ಹೆಸರೆ ಹೇಳುವಂತೆ ಇದು ಪಾರ್ಕಿಂಗ್ ಸಮಸ್ಯೆಯದ್ದೆ ಸಿನಿಮಾ. ಅದನ್ನು ಏನು ಒಂದು ಮಾತಿನಲ್ಲಿ ಹೇಳಿ ಮುಗಿಸಬಹುದಲ್ಲ ಎನಿಸಬಹುದು. ಆದರೆ, ಈ ಪಾರ್ಕಿಂಗ್ ಸಮಸ್ಯೆ ಜೊತೆಗೆ ಗಂಡಸಿನ ಅಹಂ ಸೇರಿಕೊಂಡರೆ ಆ ಘಟನೆಗಳು, ಜೀವನ ಹೇಗಾಗಿಬಿಡುತ್ತದೆ ಎಂಬುದೇ ಸಿನಿಮಾ ಮಾತನಾಡುತ್ತದೆ. ಇಂದಿನ ಅಗತ್ಯ ಕೂಡ ಅದೆ.

Harish Kalyan, Ms Bhaskar starrer Parking Tamil Movie Creating Sensation In Ott

ಪಾರ್ಕಿಂಗ್ ಸಿನಿಮಾ ಕಥೆಯೇನು?

ಎರಡು ಸುಂದರ ಕುಟುಂಬಗಳು. ಇಬ್ಬರು ಕೂಡ ಒಳ್ಳೆಯವರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈಶ್ವರ್ (ಹರೀಶ್ ಕಲ್ಯಾಣ್) ಮತ್ತು ಅತೀಕಾ (ಇಂಧುಜಾ ರವಿಚಂದ್ರನ್) ಹೊಸ ಮನೆಗೆ ತೆರಳುತ್ತಾರೆ. ಬಾಡಿಗೆ ಮನೆಯ ಕೆಳಗೆ ಇನ್ನೊಂದು ಸಂಸಾರ ಸರ್ಕಾರಿ ಅಧಿಕಾರಿ ಇಳಂಪರುತಿ (ಎಂಎಸ್ ಭಾಸ್ಕರ್), ಅವರ ಪತ್ನಿ ರಾಸೆಲ್ವಿ (ರಾಮ ರಾಜೇಂದ್ರ) ಮತ್ತು ಅಬರ್ನಾ (ಪ್ರಾರ್ಥನಾ ನಾಥನ್) ಇರುತ್ತಾರೆ. ಮೊದಲಿಗೆ ತುಂಬಾ ಸಂತೋಷದಿಂದಿರುವ ಕುಟುಂಬಗಳಲ್ಲಿ ಸಮಸ್ಯೆ ಆರಂಭವಾಗುವುದು ಕಾರಿನಿಂದ.

ಹೌದು. ಗರ್ಭಿಣಿ ಹೆಂಡತಿಯನ್ನು ಓಡಾಡಿಸಲು ಈಶ್ವರ್ ಕಾರು ಖರೀದಿಸುತ್ತಾರೆ. ಆದರೆ, ಆ ಮನೆಯಲ್ಲಿ ಒಂದು ಕಾರು ಮತ್ತು ಒಂದು ಬೈಕ್ ನಿಲ್ಲಿಸಲು ಮಾತ್ರ ಜಾಗವಿರುತ್ತದೆ. ಹೀಗಿರುವಾಗ ಈಶ್ವರ್ ಅವರ ಕೆಲ ಮಾತುಗಳಿಂದ ಕೋಪಗೊಂಡ ಇಳಂಪರುತಿ ತಾನು ಕಾರು ಖರೀದಿಸುತ್ತಾರೆ. ಬಳಿಕ ನಡೆಯುವುದೆ ಪಾರ್ಕಿಂಗ್ ಮತ್ತು ಅಹಂನ ಗುದ್ದಾಟ.. ಅದು ಕೊಲೆಯ ಹಂತಕ್ಕೂ ತೆಗೆದುಕೊಂಡು ಹೋಗುತ್ತದೆ.... ಎರಡು ಕುಟುಂಬಗಳ ನಡುವಿನ ಈ ಪಾರ್ಕಿಂಗ್ ಮತ್ತು ಅಹಂ ಕಥೆಯನ್ನು ಎಲ್ಲೂ ಬೋರ್ ಹೊಡೆಸದಂತೆ ಸಕತ್ ಆಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಮ್‌ಕುಮಾರ್ ಬಾಲಕೃಷ್ಣನ್.

Harish Kalyan, Ms Bhaskar starrer Parking Tamil Movie Creating Sensation In Ott

ಒಟಿಟಿಯಲ್ಲಿ ಕಮಾಲ್ ಮಾಡುತ್ತಿದೆ ಪಾರ್ಕಿಂಗ್!

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಯಲ್ಲಿರುವ ಪಾರ್ಕಿಂಗ್ ಸಿನಿಮಾ ಬಗ್ಗೆ ಜನ ಈಗ ಹೆಚ್ಚು ಮಾತನಾಡುತ್ತಿದ್ದಾರೆ. ಥಿಯೇಟರ್‌ಗಿಂತ ಹೆಚ್ಚಾಗಿ ಓಟಿಟಿಯಲ್ಲಿ ಸಿನಿಮಾ ಕಮಾಲ್ ಮಾಡುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ಕಾರ್ ಪಾರ್ಕಿಂಗ್ ಸಮಸ್ಯೆ ವಿಪರಿತವಾಗಿ ಕಾಡುತ್ತಿದೆ. ಕಾರ್ ಪಾರ್ಕಿಂಗ್ ಬೇಕು ಎಂದರೆ ಮನೆ ಕೂಡ ಸಿಗುವುದಿಲ್ಲ. ಎಲ್ಲಿ ಪಾರ್ಕಿಂಗ್ ಸಿಗುತ್ತದೆ ಎಂದು ಬಾಡಿಗೆದಾರರು ಕಷ್ಟ ಪಟ್ಟು ಹುಡುಕುವಂತಾಗಿದೆ.

ಒಂದು ಕಟ್ಟಡದಲ್ಲಿ ಮೂರು, ನಾಲ್ಕು ಮನೆಗಳಿದ್ದರೆ ಅಲ್ಲಿ ಒಂದು ಕಾರು ಮಾತ್ರ ಪಾರ್ಕ್ ಮಾಡಲು ಅವಕಾಶವಿರುತ್ತದೆ. ಅಕಸ್ಮಾತ್ ಒನರ್ ಅದೇ ಕಟ್ಟಡದಲ್ಲಿದ್ದರೇ ಅವರಿಗೆ ಮೊದಲ ಪ್ರಾಶಸ್ತ್ಯ. ಹಲವು ಬಾಡಿಗೆದಾರರು ಇದೇ ವಿಷಯಕ್ಕೆ ಜಗಳ, ಗಲಾಟೆ ಹೊಡೆದಾಟ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೇ ಕಾರಣಕ್ಕೆ ಈ ಸಿನಿಮಾ ಒಟಿಟಿಯಲ್ಲಿ ಸಕತ್ ಟ್ರೆಂಡಿಂಗ್‌ನಲ್ಲಿದೆ.

ಪಾರ್ಕಿಂಗ್ ಎಂಬ ಸಣ್ಣ ಬಜೆಟ್‌ನ ಒಂದು ಸಿನಿಮಾದಲ್ಲಿ ಇಬ್ಬರು ಗಂಡಸರ ಅಹಂಗೆ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಒಳ್ಳೆಯದನ್ನೇ ಬಯಸುವ, ಒಳ್ಳೆಯ ಕೆಲಸಗಳನ್ನೇ ಮಾಡುವ ಇಬ್ಬರು ತಮ್ಮ ಅಹಂನಿಂದ ಕೊಲೆ ಮಾಡುವ ಮಟ್ಟಕ್ಕೆ ಇಳಿಯುವ ಸಣ್ಣತನವನ್ನು ಸಿನಿಮಾ ಕಟ್ಟಿಕೊಟ್ಟಿದೆ. ಇದು ನಿರ್ದೇಶಕರ ಪ್ರತಿಭೆಗೆ ಹಿಡಿದ ಕನ್ನಡಿ. ಇನ್ನು, ಪಾತ್ರವರ್ಗ ಕೂಡ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸೀಮಿತ ಪಾತ್ರಗಳಿದ್ದರೂ ಎಲ್ಲೂ ನಿಧಾನ, ಬೋರ್ ಎನಿಸುವುದಿಲ್ಲ.

More from Filmibeat

English summary
Parking Tamil movie creating sensation in Ott .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X