For Quick Alerts
  ALLOW NOTIFICATIONS  
  For Daily Alerts

  ಮತ್ತೆ ತೆರೆಗೆ ಬರುತ್ತಿದೆ ದೇಶವನ್ನೇ ಅಲುಗಾಡಿಸಿದ್ದ ಹರ್ಷದ್ ಮೆಹ್ತಾ ಹಗರಣ

  |

  ದೇಶದಲ್ಲಿ ನಡೆದ ಅತಿ ದೊಡ್ಡ ಹಗರಣಗಳ ಪಟ್ಟಿ ತೆಗೆದರೆ ಮೊದಲಿಗೆ ಕಣ್ಣಿಗೆ ರಾಚುವುದು ಹರ್ಷದ್ ಮೆಹ್ತಾ ಹಗರಣ. 1992 ರಲ್ಲಿ ಹರ್ಷದ್ ಮೆಹ್ತಾ ಮಾಡಿದ್ದ ಹಗರಣದ ಅಂದಾಜು ಮೊತ್ತ 1795 ಕೋಟಿ. ಈಗಿನ ಮೌಲ್ಯದ ಪ್ರಕಾರ 15000 ಕೋಟಿಗೂ ಹೆಚ್ಚು.

  ಷೇರು ಮಾರುಕಟ್ಟೆಯನ್ನು ತನ್ನ ಇಚ್ಛೆಯಂತೆ ಆಡಿಸಿ ಸಾವಿರಾರು ಕೋಟಿ ಹಣವನ್ನು ಕೆಲವೇ ದಿನಗಳಲ್ಲಿ ಗಳಿಸಿದ್ದ ಹರ್ಷದ್ ಮೆಹ್ತಾ ಅಷ್ಟೇ ವೇಗವಾಗಿ ಕೆಳಗೆ ಬಿದ್ದರು. ಹರ್ಷದ್ ಮೆಹ್ತಾ ಹಗರಣದಿಂದಾಗಿ ಲಕ್ಷಾಂತರ ಮಂದಿ ಕೋಟ್ಯಂತರ ಹಣ ಕಳೆದುಕೊಂಡರು. ಬಡ ಮಧ್ಯಮವರ್ಗದ ಯುವಕ ಹರ್ಷದ್ ಮೆಹ್ತಾ ಷೇರುಪೇಟೆಯ 'ಬಿಗ್ ಬುಲ್' ಆಗಿ ಬೆಳೆದಿದ್ದು ಮತ್ತು ಅಷ್ಟೇ ಹಠಾತ್ತನೆ ಕೆಳಗೆ ಬಿದ್ದಿದ್ದು ಯಾವ ಸಿನಿಮಾ ಕತೆಗಿಂತಲೂ ಕಡಿಮೆ ಇಲ್ಲ.

  ಮತ್ತೆ ಬರುತ್ತಿದೆ 'ಸ್ಕ್ಯಾಮ್': ಈ ಬಾರಿ ತೆಲಗಿ ಕರ್ಮಕಾಂಡಮತ್ತೆ ಬರುತ್ತಿದೆ 'ಸ್ಕ್ಯಾಮ್': ಈ ಬಾರಿ ತೆಲಗಿ ಕರ್ಮಕಾಂಡ

  ಹಾಗಾಗಿಯೇ ಹರ್ಷದ್ ಮೆಹ್ತಾ ಜೀವನದ ಕತೆ ಆಗಾಗ್ಗೆ ತೆರೆಗೆ ಬರುತ್ತಲೇ ಇರುತ್ತದೆ. ಈಗಾಗಲೇ ಹರ್ಷದ್ ಮೆಹ್ತಾ ಬಗ್ಗೆ ಒಂದು ಸಿನಿಮಾ, ಒಂದು ವೆಬ್ ಸರಣಿ ಮಾಡಲಾಗಿದೆ. ಇದೀಗ ಮತ್ತೆ ಹರ್ಷದ್ ಮೆಹ್ತಾ ಕತೆ ಸಿನಿಮಾ ಆಗುತ್ತಿದೆ.

  ಅಭಿಷೇಕ್ ಬಚ್ಚನ್ ನಟಿಸಿರುವ, ಹರ್ಷದ್ ಮೆಹ್ತಾ ಕತೆ ಆಧರಿತ 'ದಿ ಬಿಗ್‌ ಬುಲ್' ಸಿನಿಮಾ ಕೆಲವೇ ದಿನಗಳಲ್ಲಿ ವೀಕ್ಷಕರಿಗೆ ನೋಡಲು ಲಭ್ಯವಾಗಲಿದೆ. ಇಂದು ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದ್ದು, ಸಿನಿಮಾವು ಏಪ್ರಿಲ್ 8 ರಂದು ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.

  'ದಿ ಬಿಗ್ ಬುಲ್' ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಹರ್ಷದ್ ಮೆಹ್ತಾ ಪಾತ್ರ ನಿರ್ವಹಿಸಿದ್ದಾರೆ. ನಾಯಕಿ ಪಾತ್ರದಲ್ಲಿ ನಿಖಿತಾ ದತ್ತಾ, ಪತ್ರಕರ್ತೆ ಸುಚೇತಾ ದಲಾಲ್ ಪಾತ್ರದಲ್ಲಿ ಇಲಿಯಾನಾ ಡಿ'ಕ್ರೂಜ್, ಶಾಂತಿಲಾಲ್ ಮೆಹ್ತಾ ಪಾತ್ರದಲ್ಲಿ ರಾಮ್ ಕಪೂರ್ ನಟಿಸಿದ್ದಾರೆ. ಸಿನಿಮಾವನ್ನು ಕೂಕಿ ಗುಲಾಟಿ ನಿರ್ದೇಶಿಸಿದ್ದಾರೆ. ಅಜಯ್ ದೇವಗನ್ ಸಹ ನಿರ್ಮಾಣ ಮಾಡಿದ್ದಾರೆ.

  ಈ ಹಿಂದೆ 2006 ರಲ್ಲಿ ಹರ್ಷದ್ ಮೆಹ್ತಾ ಕತೆ ಆಧರಿಸಿ 'ಗಫ್ಲಾ' ಎಂಬ ಸಿನಿಮಾ ಬಂದಿತ್ತು. 2020 ರಲ್ಲಿ 'ಹರ್ಷದ್ ಮೆಹ್ತಾ; 1992 ಸ್ಕ್ಯಾಮ್' ಹೆಸರಿನ ವೆಬ್ ಸರಣಿ ಪ್ರಸಾರವಾಗಿ ಭಾರಿ ಹಿಟ್ ಆಯಿತು.

  English summary
  Harshad Mehta real life story based Abhishek Bachchan starer 'The Big Bull' movie will release on April 08.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X