ಸ್ಪರ್ಧಿಗಳ ಇನ್ನೊಂದು ಮುಖ ತೋರಿಸುವಲ್ಲಿ ಬಿಗ್ ಬಾಸ್ ಯಶಸ್ಸು ಕಂಡಿದೆಯಾ?
ಬಿಗ್‌ಬಾಸ್ ಕನ್ನಡ ಒಟಿಟಿ ಮೊದಲ ಸೀಸನ್‌ಗೆ ಕ್ಷಣಗಣನೆ ಶುರುವಾಗಿದೆ. ಬಿಗ್‌ಬಾಸ್ ರಿಯಾಲಿಟಿ ಶೋ ಕಂಟೆಂಟ್ ಮೊದಲೇ ನಿರ್ಧಾರವಾಗಿರುತ್ತೆ ಅನ್ನೋ ಆರೋಪ ಇದೆ. ಇನ್ನು ದೊಡ್ಮನೆ ಒಳಗೆ ಹೋಗುವ ಬಹುತೇಕರು ಸೇಫ್ ಗೇಮ್ ಆಡೋಕೆ ಹೋಗುತ್ತಾರೆ. ಹೀಗಿರುವಾಗ ಈ ರಿಯಾಲಿಟಿ ಶೋ ಸ್ಪರ್ಧಿಗಳ ಇನ್ನೊಂದು ಮುಖ ತೋರಿಸುವಲ್ಲಿ ಯಶಸ್ಸು ಕಂಡಿದೆಯಾ ಅನ್ನುವ ಪ್ರಶ್ನೆಗೆ ಉತ್ತರ 50- 50 ಎನ್ನಬಹುದು.
ಒಂದು ಅರ್ಥದಲ್ಲಿ ಬಿಗ್‌ಬಾಸ್ ಶೋ ದೊಡ್ಡ ಸೋಶಿಯಲ್ ಎಕ್ಸ್‌ಪೆರಿಮೆಂಟ್ ಅನ್ನಬಹುದು. ಯಾಕಂದ್ರೆ ಸಾಕಷ್ಟು ರಿಯಾಲಿಟಿ ಶೋಗಳು ಬರುತ್ತಲೇ ಇರುತ್ತವೆ. ಆದರೆ ಈವರೆಗೆ ಬಂದಿರುವ ಶೋಗಳಲ್ಲಿ ನಿಜವಾದ ರಿಯಾಲಿಟಿ ಶೋ ಅಂದರೆ ಬಿಗ್ ಬಾಸ್ ಅನ್ನಬಹುದು. ಯಾಕಂದರೆ ಇದು ಅರ್ಥ ಗಂಟೆ, ಒಂದು ಗಂಟೆಯಲ್ಲಿ ಮುಗಿಯುವ ಶೋ ಅಲ್ಲ. ಕೊಂಚ ಪ್ರಾಕ್ಟೀಸ್ ಮಾಡಿ ಅಥವಾ ಆ ಕ್ಷಣಕ್ಕೆ ಸಾಧ್ಯವಾದಷ್ಟು ಆಡಿ ಮುಗಿಸುವಂಥದಲ್ಲ. 100 ದಿನಗಳ ಕಾಲ ದಿನದ 24 ಗಂಟೆಗಳು ಹತ್ತಾರು ಕ್ಯಾಮರಾಗಳು ಮನೆಯೊಳಗೆ ಇರುವವರ ಚಲನ ವಲನಗಳನ್ನು ಸೆರೆ ಹಿಡಿಯುತ್ತಿರುತ್ತದೆ. ವಿವಿಧ ಕ್ಷೇತ್ರಗಳ ವಿಭಿನ್ನ ವ್ಯಕ್ತಿತ್ವ, ಅಭಿರುಚಿಯ ಸ್ಪರ್ಧಿಗಳು ಮನೆ ಒಳಗೆ ಸೇರುತ್ತಾರೆ.
ವಿಶಾಲವಾದ ಮನೆ, ಕಲರ್‌ಫುಲ್ ಹಾಲ್, ಕಿಚನ್, ಪಕ್ಕದಲ್ಲೇ ದೊಡ್ಡ ಈಜುಕೊಳ. ಅಲ್ಲಿ ಅಳು, ನಗು, ಫ್ರೆಂಡ್‌ಶಿಪ್, ಆಟ, ಸೋಲು, ಗೆಲುವು, ಇವೆಲ್ಲದರ ಸಮಾಗಮವೇ ಬಿಗ್‌ಬಾಸ್. ದೊಡ್ಮನೆ ಒಳಗೆ ಬಹುತೇಕ ಸೆಲೆಬ್ರೆಟಿಗಳೇ ಹೋಗುವುದರಿಂದ ಅವರೆಲ್ಲರ ಬಗ್ಗೆ ಕೊಂಚ ಪರಿಚಯ ವೀಕ್ಷಕರಿಗೆ ಇರುತ್ತದೆ. ಹಿಂದೊಂದು ಸೀಸನ್‌ನಲ್ಲಿ ಕಾಮನ್ ಮ್ಯಾನ್ ಅನ್ನೂ ದೊಡ್ಮನೆಗೆ ಕಳುಹಿಸಿ ಪ್ರಯೋಗ ಮಾಡಲಾಗಿತ್ತು. ಆದರೆ ನಂತರ ಅದು ಮುಂದುವರೆಯಲೇ ಇಲ್ಲ. ಬಿಗ್‌ಬಾಸ್ ಮನೆಗೆ ಹೋಗುವ ಸೆಲೆಬ್ರೆಟಿಗಳು ಅಲ್ಪ-ಸ್ವಲ್ಪ ವಿಚಾರಗಳು ವೀಕ್ಷಕರಿಗೆ ತಿಳಿದಿರುತ್ತದೆ. ಹಾಗಾಗಿ ಒಳಗೆ ಹೋದಮೇಲೆ ನಾವು ಹೊರಗೆ ನೋಡಿದವರು ಇವರೇನಾ ಅನ್ನುವ ಅನುಮಾನ ಮೂಡುವಂತೆ ಆಡಿದವರು ಇದ್ದಾರೆ.

ಶೋನಲ್ಲಿ ಸೈಲೆಂಟ್ ಆಗಿದ್ದ ರಾಘು
ಬಿಗ್‌ಬಾಸ್ ಸೀಸನ್ ಒಂದರ ವಿನ್ನರ್ ವಿಜಯ ರಾಘವೇಂದ್ರ. ರಾಘು ಸಿಕ್ಕಾಪಟ್ಟೆ ಟ್ಯಾಲೆಂಟೆಡ್. ಸದಾ ಪಾದರಸದಂತೆ ಇರುತ್ತಿದ್ದವರು ದೊಡ್ಮನೆಯಲ್ಲಿ ಸೈಲೆಂಟ್ ಆಗಿಬಿಟ್ಟಿದ್ದರು. 'ಚಿನ್ನಾರಿ ಮುತ್ತ' ಚಿತ್ರಕ್ಕೆ ಚಿಕ್ಕಂದಿನಲ್ಲೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದ ರಾಘು ಸಿಕ್ಕಾಪಟ್ಟೆ ಆಕ್ಕ್ಟಿವ್ ಆಗಿ ಇರುತ್ತಾರೆ. ಸಖತ್ ಎಂಟರ್‌ಟೈನ್ ಮಾಡ್ತಾರೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಅದರೆ ಆ ರೀತಿ ಆಗಲೇ ಇಲ್ಲ. ಚಿನ್ನಾರಿ ಮುತ್ತನ ಮತ್ತೊಂದು ಮುಖದ ಅನಾವರಣವಾಗಿತ್ತು.

ಅಚ್ಚರಿ ರೀತಿಯಲ್ಲಿ ಗೆದ್ದಿದ್ದ ಚಂದನ್
ಬಿಗ್‌ಬಾಸ್ 5ನೇ ಸೀಸನ್‌ನಲ್ಲಿ ಯಾರು ಆರಂಭದಲ್ಲಿ ಗಾಯಕ ಚಂದನ್ ಶೆಟ್ಟಿನ ಸೀರಿಯಸ್ ಆಗಿ ತಗೊಂಡಿರಲಿಲ್ಲ. ಆದರೆ ಎಲ್ಲರ ನಿರೀಕ್ಷೆ ಮೀರಿ ಚಂದನ್ ಟ್ರೋಫಿ ಎತ್ತಿ ಹಿಡಿದಿದ್ದರು. ಒಂದು ಡಬ್ಬ ಹಿಡಿದು ಬಡಿಯುತ್ತಾ ಅಲ್ಲೇ ಹಾಡುಗಳನ್ನು ಕಟ್ಟಿ ಚಂದನ್ ಎಲ್ಲರನ್ನು ರಂಜಿಸಿದರು. ಅವರೊಳಗೊಬ್ಬ ಅದ್ಭುತ ಪ್ರತಿಭೆ ಇದ್ದಾನೆ ಅನ್ನೋದನ್ನು ಶೋನಿಂದ ಸಾಬೀತಾಗಿತ್ತು..

ಹುಚ್ಚಾ ವೆಂಕಟ್ ಹೊರಕ್ಕೆ
ಬಿಗ್‌ಬಾಸ್ 3ನೇ ಸೀಸನ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ನಟ ಹುಚ್ಚಾ ವೆಂಕಟ್. ಆ ಸೀಸನ್‌ನಲ್ಲಿ ಗೆದ್ದಿದ್ದು ಯಾರೇ ಆದರೂ, ಸಿಕ್ಕಾಪಟ್ಟೆ ಸುದ್ದಿ ಆಗಿದ್ದು ಮಾತ್ರ ಹುಚ್ಚು ವೆಂಕಟ್. ಯಾಕೆಂದರೆ ಅಲ್ಲಿನ ಕಿರಿಕ್‌ಗಳಿಗೆಲ್ಲಾ ಅವರೇ ಕೇಂದ್ರಬಿಂದುವಾಗಿದ್ದರು. ವೆಂಕಟ್ ಗಲಾಟೆ ಮಾಡಿದ್ದು, ಅದನ್ನು ಟಿಆರ್‌ಪಿಗಾಗಿ ಆಯೋಜಕರು ಒಂದಷ್ಟು ದಿನ ಸಹಿಸಿಕೊಂಡಿದ್ದು, ಇನ್ನು ಆಗುವುದೇ ಇಲ್ಲ ಅಂದಾಗ ಶೋನಿಂದ ಹೊರಕ್ಕೆ ಕಳುಹಿಸಿದ್ದು ಗೊತ್ತಿದೆ. ಆದರೆ ವೆಂಕಟ್ ಇನ್ನೊಂದು ಮುಖ ಮಾತ್ರ ಪರಿಚಯ ಆಗಲೇ ಇಲ್ಲ. ಅವರು ಇವತ್ತಿಗೂ ಹುಚ್ಚಾ ವೆಂಕಟ್ ಆಗಿಯೇ ಉಳಿದುಕೊಂಡಿದ್ದಾರೆ.

ವೀಕ್ಷಕರನ್ನು ರಂಜಿಸಲಿಲ್ಲ ಪ್ರತಾಪ್
ಸಿನಿಮಾಗಳಲ್ಲಿ, ಕಿರುತೆರೆ ಕಾರ್ಯಕ್ರಮಗಳಲ್ಲಿ ತಮ್ಮ ಕಾಮಿಡಿ ಟೈಮಿಂಗ್‌ನಿಂದ ಮನೆ ಮಾತಾಗಿದ್ದವರು ಕುರಿ ಪ್ರತಾಪ್. ಸೀಸನ್ ಏಳರಲ್ಲಿ ಪ್ರತಾಪ್ ದೊಡ್ಮನೆ ಸೇರಿದ್ದರು. ಅವರಿಂದ ಸಾಕಷ್ಟು ಮನರಂಜನೆ ನಿರೀಕ್ಷಿಸಲಾಗಿತ್ತು. ಅದರೆ ಯಾಕೋ ಪ್ರತಾಪ್ ಅಷ್ಟಾಗಿ ವೀಕ್ಷಕರನ್ನು ರಂಜಿಸಲಿಲ್ಲ. ಅವರು ಕೂಡ ನಿಜ ಜೀವನದಲ್ಲಿ ಬಹಳ ಸೈಲೆಂಟ್ ಅನ್ನೋದು ಗೊತ್ತಾಗಿತ್ತು.
Recommended Video

ಒಟಿಟಿ ಬಿಗ್‌ಬಾಸ್‌ನಲ್ಲಿ ನಾಟಕ ಕಷ್ಟ
ಮೊದಲೇ ಹೇಳಿದಂತೆ ಬಿಗ್‌ಬಾಸ್ ಎಲ್ಲಾ ಸ್ಕ್ರಿಪ್ಟೆಡ್ ಅನ್ನುವ ಆರೋಪ ಇದೆ. ಆದರೆ ಆಯೋಜಕರಾಗಲಿ, ಸ್ಪರ್ಧಿಗಳಾಗಲಿ ಇದನ್ನು ಒಪ್ಪಲು ಸಿದ್ಧರಿಲ್ಲ. ಈ ಮೊದಲು 24 ಗಂಟೆಗಳು ಮನೆಯಲ್ಲಿ ಏನೆಲ್ಲಾ ನಡೆಯುತ್ತೆ ಅನ್ನುವುದರ ಹೈಲೆಟ್ಸ್ ಅನ್ನು ಪ್ರತಿ ದಿನ ಸಂಜೆ ಪ್ರಸಾರ ಮಾಡುತ್ತಿದ್ದರು. ಆದರೆ ಒಟಿಟಿ ಬಿಗ್‌ಬಾಸ್‌ನಲ್ಲಿ 24 ಗಂಟೆಗಳು ಏನೆಲ್ಲಾ ಆಗುತ್ತದೆ ಅನ್ನುವುದನ್ನು ನೋಡಬಹುದು. ಇಲ್ಲಿ ನಾಟಕಕ್ಕೆ ಅವಕಾಶ ಇರುವುದಿಲ್ಲ ಅನ್ನಿಸುತ್ತೆ.


Click it and Unblock the Notifications











