'ಕಾಫಿ ವಿತ್ ಕರಣ್'ನಲ್ಲಿ ದಕ್ಷಿಣ ಚಿತ್ರರಂಗದ ಅತಿಥಿಗಳ್ಯಾರು? ರಶ್ಮಿಕಾಗೆ ನಿರಾಸೆ?
ಬಾಲಿವುಡ್‌ನ ವಿವಾದಾತ್ಮಕ ಜೊತೆಗೆ ಜನಪ್ರಿಯ ಶೋಗಳಲ್ಲಿ ಒಂದಾಗಿರುವ 'ಕಾಫಿ ವಿತ್ ಕರಣ್' ಮತ್ತೆ ಶುರುವಾಗಿದೆ. ಈ ಶೋ ಇನ್ನು ಮುಂದೆ ಪ್ರಸಾರವಾಗುವುದಿಲ್ಲ ಎಂದೇ ಎಣಿಸಲಾಗಿತ್ತು.
ಇದೇ ತಿಂಗಳು ಏಳನೇ ತಾರೀಖಿನಿಂದ ಶೋ ಪ್ರಸಾರ ಆರಂಭವಾಗಲಿದ್ದು, ಏಳನೇ ಸೀಸನ್ ಇದಾಗಿದ್ದು, ಶೋ ಅನ್ನು ಈ ಹಿಂದಿನಂತೆ ಕರಣ್ ಜೋಹರ್ ಅವರೇ ನಿರೂಪಣೆ ಮಾಡಲಿದ್ದಾರೆ. ಶೋ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿರುವುದು ವಿಶೇಷ.
'ಕಾಫಿ ವಿತ್ ಕರಣ್' ನಲ್ಲಿ ಬಾಲಿವುಡ್‌ನ ಹಲವು ದೊಡ್ಡ-ದೊಡ್ಡ ಸ್ಟಾರ್‌ಗಳು ಭಾಗವಹಿಸುವುದು ಸಾಮಾನ್ಯ. ಅಂತೆಯೇ ಈ ಬಾರಿಯೂ ಹಲವು ದೊಡ್ಡ ಸ್ಟಾರ್‌ಗಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಶೋನ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಯಾವ ಜನಪ್ರಿಯ ಸ್ಟಾರ್‌ಗಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ ಎಂಬ ಸುಳಿವು ಟ್ರೈಲರ್‌ನಲ್ಲಿದೆ. ಅಲ್ಲದೆ, ಈ ಬಾರಿ ದಕ್ಷಿಣ ಚಿತ್ರರಂಗದಿಂದ ಯಾವ-ಯಾವ ಸ್ಟಾರ್‌ಗಳು ಭಾಗವಹಿಸಲಿದ್ದಾರೆ ಎಂಬ ಪ್ರಶ್ನೆಗೂ ಉತ್ತರ ದೊರಕಿದೆ.

ಮತ್ತೆ ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಕರಣ್ ಅಸಡ್ಡೆ?
ಈ ಹಿಂದಿನ ಕರಣ್ ಜೋಹರ್ ಶೋಗಳಲ್ಲಿ ದಕ್ಷಿಣ ಭಾರತ ಚಿತ್ರರಂಗವನ್ನು ಬಹುತೇಕ ಮೂಲೆಗುಂಪು ಮಾಡಲಾಗಿತ್ತು. ಆದರೆ ಇದೀಗ ದಕ್ಷಿಣ ಭಾರತ ಚಿತ್ರರಂಗ ಬಾಲಿವುಡ್ ಅನ್ನು ಮೀರಿಸಿ ಮುಂದೆ ಹೋಗುತ್ತಿರುವ ಪರಿಣಾಮ ನಾಮ್ ಕೆ ವಾಸ್ತೆ ಎಂಬಂತೆ ಇಬ್ಬರು ದಕ್ಷಿಣದ ಸ್ಟಾರ್‌ಗಳನ್ನಷ್ಟೆ ಕರಣ್ ಜೋಹರ್ ತಮ್ಮ ಶೋಗೆ ಆಹ್ವಾನಿಸಿದಂತೆ ಕಾಣುತ್ತಿದೆ.

'ಕಾಫಿ ವಿತ್ ಕರಣ್' ಸೀಸನ್ 7ರ ಟ್ರೈಲರ್
'ಕಾಫಿ ವಿತ್ ಕರಣ್' ಸೀಸನ್ 7ರ ಟ್ರೈಲರ್ ಬಿಡುಗಡೆ ಆಗಿದ್ದು, ಶೋನಲ್ಲಿ ದೀಪಿಕಾ ಪಡುಕೋಣೆ ಪತಿ ರಣ್ವೀರ್ ಸಿಂಗ್, ರಣ್ಬೀರ್ ಕಪೂರ್ ಪತ್ನಿ ಆಲಿಯಾ ಭಟ್ ಒಟ್ಟಿಗೆ ಕಾಣಿಸಿಕೊಂಡಿರುವುದು ವಿಶೇಷ. ಇದರ ಜೊತೆಗೆ ಸಾರಾ ಅಲಿ ಖಾನ್ ಹಾಗೂ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವರುಣ್ ಧವನ್ ಹಾಗೂ ಅನಿಲ್ ಕಪೂರ್ ಜೊತೆಯಾಗಿ ಭಾಗವಹಿಸಿದ್ದರು. ಶಾಹಿದ್ ಕಪೂರ್, ಟೈಗರ್ ಶ್ರಾಫ್ ಅವರುಗಳು ಸಹ ಭಾಗವಹಿಸಿದ್ದಾರೆ.

ದಕ್ಷಿಣದ ಇಬ್ಬರು ನಟರಷ್ಟೆ ಭಾಗಿ
ವಿಶೇಷವೆಂದರೆ ದಕ್ಷಿಣದ ಚಿತ್ರೋದ್ಯದಿಂದ ನಟಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಮಾತ್ರವೇ ಈ ಬಾರಿಯ ಕಾಫಿ ವಿತ್ ಕರಣ್ ಸೀಸನ್‌ನಲ್ಲಿ ಭಾಗವಹಿಸಿದಂತೆ ಕಾಣುತ್ತಿದೆ. ಸಮಂತಾ, ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್ ಜೊತೆಯಲ್ಲಿ ಭಾಗವಹಿಸಿದ್ದರೆ, ನಟ ವಿಜಯ್ ದೇವರಕೊಂಡ ನಟಿ ಅನನ್ಯಾ ಪಾಂಡೆ ಜೊತೆಗೆ ಶೋನಲ್ಲಿ ಭಾಗವಹಿಸಿದ್ದಾರೆ.

ಟ್ರೈಲರ್‌ನಲ್ಲಿ ರಶ್ಮಿಕಾ ಮಂದಣ್ಣ ಇಲ್ಲ
ಈ ಬಾರಿ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಈ ಬಾರಿ ದಕ್ಷಿಣದ ಹಲವು ಸ್ಟಾರ್ ನಟ-ನಟಿಯರು ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ವಿಶೇಷವಾಗಿ ದಕ್ಷಿಣದಿಂದ ಬಾಲಿವುಡ್‌ಗೆ ಲಗ್ಗೆ ಇಟ್ಟಿರುವ ರಶ್ಮಿಕಾ ಮಂದಣ್ಣ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈಗ ಬಿಡುಗಡೆ ಆಗಿರುವ ಟ್ರೈಲರ್‌ನಲ್ಲಿ ರಶ್ಮಿಕಾ ಮಂದಣ್ಣ ಕಾಣುತ್ತಿಲ್ಲ. ರಶ್ಮಿಕಾ ಮಂದಣ್ಣ ಮಾತ್ರವೇ ಅಲ್ಲದೆ, ಜೂ ಎನ್‌ಟಿಆರ್, ರಾಮ್ ಚರಣ್ ತೇಜ, ಅಲ್ಲು ಅರ್ಜುನ್, ಯಶ್ ಸಹ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು ಆದರೆ ಟ್ರೈಲರ್‌ನಲ್ಲಿ ಇವರ್ಯಾರೂ ಇಲ್ಲ.


Click it and Unblock the Notifications











