ಈ ವಾರ ಒಟಿಟಿಗೆ ಬರುತ್ತಿವೆ ಹಿಟ್ ಸಿನಿಮಾಗಳು: ಇಲ್ಲಿದೆ ಪಟ್ಟಿ

ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ.ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ.

ಸಿನಿಮಾಗಳು ಚಿತ್ರಮಂದಿರ ದಾಟಿಕೊಂಡು ಒಟಿಟಿಗೆ ಬಂದಾಗಲಷ್ಟೆ ಕಾದು ನೋಡುವ ವೀಕ್ಷಕರ ಒಂದು ವರ್ಗವೂ ಇದೀಗ ಹುಟ್ಟಿಕೊಂಡಿದೆ. ಒಟಿಟಿ ನೀಡುವ ಆಯ್ಕೆಯ ಸ್ವಾತಂತ್ರ್ಯದ ಪ್ರತಿಫಲ ಇದು.

ಅಂತೆಯೇ ಒಟಿಟಿಗಳು ಸಹ ನಾ ಮುಂದು ತಾ ಮುಂದು ಎಂದು ತನ್ನ ಸಬ್‌ಸ್ಕ್ರೈಬರ್‌ಗಳಿಗೆ ಹೊಸ-ಹೊಸ ಸಿನಿಮಾಗಲು, ವೆಬ್ ಸರಣಿಗಳನ್ನು ನೀಡುತ್ತಿವೆ. ಇತ್ತೀಚೆಗಂತೂ ಈ ಸ್ಪರ್ಧೆ ಹೆಚ್ಚಾಗಿದೆ. ಸ್ಪರ್ಧೆ ಹೆಚ್ಚಾದಷ್ಟು ವೀಕ್ಷಕ ಪ್ರಭುವಿಗೆ ಒಳ್ಳೆಯ ಸಿನಿಮಾಗಳು ಬೆರಳ ತುದಿಯಲ್ಲಿಯೇ ಸಿಗುವಂತಾಗಿದೆ. ಇದೀಗ ಮತ್ತೊಂದು ವಾರಾಂತ್ಯ ಬಂದಿದ್ದು, ಒಟಿಟಿಗಳಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆ ಆಗುತ್ತಿವೆ. ಇಲ್ಲಿದೆ ಪಟ್ಟಿ...

'ತೂತು ಮಡಿಕೆ' ಕನ್ನಡ ಸಿನಿಮಾ

'ತೂತು ಮಡಿಕೆ' ಕನ್ನಡ ಸಿನಿಮಾ

'ತೂತು ಮಡಿಕೆ ಕನ್ನಡ ಸಿನಿಮಾ ಇದೇ ವಾರ ವೂಟ್‌ನಲ್ಲಿ ಬಿಡುಗಡೆ ಆಗಿದೆ. ಇದೇ ವರ್ಷ ಜುಲೈ ತಿಂಗಳಲ್ಲಿ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ರಾಜಕಾರಣಿಯೊಬ್ಬ ವಸ್ತುವೊಂದನ್ನು ಹುಡುಕಲು ತಂಡವೊಂದನ್ನು ನೇಮಿಸುವ, ಹಾಗೂ ಆ ತಂಡ ವಸ್ತುವನ್ನು ಹುಡುಕಲು ಪಡುವ ಕಷ್ಟವನ್ನು ಸಿನಿಮಾ ಒಳಗೊಂಡಿದೆ.

'ಸೀತಾ ರಾಮಂ' ತೆಲುಗು ಸಿನಿಮಾ

'ಸೀತಾ ರಾಮಂ' ತೆಲುಗು ಸಿನಿಮಾ

ಇತ್ತೀಚೆಗೆ ಬಿಡುಗಡೆ ಆದ ತೆಲುಗಿನ ಸೂಪರ್ ಹಿಟ್ ಸಿನಿಮಾ 'ಸೀತಾ ರಾಮಂ' ಇದೀಗ ಒಟಿಟಿಗೆ ಬಿಡುಗಡೆ ಆಗಿದೆ. ಚಿತ್ರಮಂದಿರಗಳಲ್ಲಿ ಭಾರಿ ಹಿಟ್ ಆಗಿದ್ದ ಈ ಸಿನಿಮಾ ಸೆಪ್ಟೆಂಬರ್ 09ರಂದು ಅಮೆಜಾನ್ ಪ್ರೈಂನಲ್ಲಿ ತೆರೆಗೆ ಬಂದಿದೆ. ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್, ರಶ್ಮಿಕಾ ಮಂದಣ್ಣ ನಟಿಸಿರುವ ಈ ಸಿನಿಮಾ ಭಾರಿ ಹಿಟ್ ಆಗಿದೆ. ಸಿನಿಮಾವನ್ನು ಹನು ರಾಘವ್‌ಪುಡಿ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ವೆಂಕಯ್ಯನಾಯ್ಡು ಸೇರಿದಂತೆ ಹಲವು ದಿಗ್ಗಜರು ಮೆಚ್ಚಿಕೊಂಡಿದ್ದಾರೆ.

'ಏಕ್ ವಿಲನ್ ರಿಟರ್ನ್ಸ್'

'ಏಕ್ ವಿಲನ್ ರಿಟರ್ನ್ಸ್'

ಹಿಂದಿಯ ಜನಪ್ರಿಯ ಸಿನಿಮಾ 'ಏಕ್ ವಿಲನ್' ಸಿನಿಮಾದ ಮುಂದಿನ ಭಾಗ 'ಏಕ್ ವಿಲನ್ ರಿಟರ್ನ್ಸ್' ಸಿನಿಮಾ ಕೆಲವು ದಿನಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಇದೀಗ ಆ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಗೆ ಬಂದಿದೆ. ದಿಶಾ ಪಟಾನಿ, ತಾರಾ ಸುತಾರಿಯಾ, ಅರ್ಜುನ್ ಕಪೂರ್ ಹಾಗೂ ಜಾನ್ ಅಬ್ರಹಾಂ, ಜೆಡಿ ಚಕ್ರವರ್ತಿ ಅವರುಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರೊಮ್ಯಾಂಟಿಕ್ ಕತೆಯ ಜೊತೆಗೆ ಥ್ರಿಲ್ಲರ್ ಕತೆಯನ್ನು ಸಹ ಈ ಸಿನಿಮಾ ಒಳಗೊಂಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ 'ಇಂಡಿಯನ್ ಪ್ರಿಡೆಟರ್: ದಿ ಡೈರಿ ಆಫ್ ಸೀರಿಯಲ್ ಕಿಲ್ಲರ್' ಸಹ ಬಿಡುಗಡೆ ಆಗಿದೆ.

'ಪಾಪ್ಪನ್' ಮಲಯಾಳಂ ಸಿನಿಮಾ

'ಪಾಪ್ಪನ್' ಮಲಯಾಳಂ ಸಿನಿಮಾ

ಪಾಪ್ಪನ್ ಮಲಯಾಳಂ ಸಿನಿಮಾ ಜೀ5 ನಲ್ಲಿ ತೆರೆಗೆ ಬಂದಿದೆ. ಕ್ರೈಮ್ ಥ್ರಿಲ್ಲರ್ ಕತೆಯನ್ನು ಸಿನಿಮಾ ಒಳಗೊಂಡಿದೆ. ಸೂಪರ್ ಸ್ಟಾರ್ ರವಿ ವರ್ಮ ಕೊಲೆ ಆಗಿರುತ್ತದೆ. ಆ ಕೊಲೆಯನ್ನು ಯಾರು ಮಾಡಿದ್ದಾರೆ ಎಂದು ಹುಡುಕುವ ಪ್ರಯತ್ನವೇ ಈ ಸಿನಿಮಾ. ಸಿನಿಮಾದಲ್ಲಿ ಸುರೇಶ್ ಗೋಪಿ ತನಿಖಾಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಜೋಶಿ ನಿರ್ದೇಶನ ಮಾಡಿದ್ದಾರೆ.

ಥಾರ್ 'ಲವ್ ಆಂಡ್ ಥಂಡರ್'

ಥಾರ್ 'ಲವ್ ಆಂಡ್ ಥಂಡರ್'

ಹಾಲಿವುಡ್‌ನ ದೊಡ್ಡ ಸಿನಿಮಾ 'ಥಾರ್: ಲವ್ ಆಂಡ್ ಥಂಡರ್' ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ತೆರೆಗೆ ಬಂದಿದೆ. ಭಾರಿ ಬಜೆಟ್‌ನ ಈ ಸಿನಿಮಾ ಇದೇ ವರ್ಷ ಜುಲೈ ತಿಂಗಳ 7 ನೇ ತಾರೀಖು ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವಾದರೂ ಭಾರತ ಸೇರಿದಂತೆ ವಿಶ್ವದಾದ್ಯಂತ ನೂರಾರು ಕೋಟಿ ಹಣವನ್ನು ಸಿನಿಮಾ ಕಲೆಕ್ಟ್ ಮಾಡಿತ್ತು.

More from Filmibeat

English summary
Here is the list of movies which are releasing this week on OTT from September 08. Kannada movie Tutu Madike also releasing this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X