ಈ ವಾರ ಒಟಿಟಿಗೆ ಬ್ಲಾಕ್‌ ಬಸ್ಟರ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ಚಿತ್ರಮಂದಿರಗಳಿಗೆ ಪ್ರಭಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ.

ಸಿನಿಮಾಗಳು ಚಿತ್ರಮಂದಿರ ದಾಟಿಕೊಂಡು ಒಟಿಟಿಗೆ ಬಂದಾಗಲಷ್ಟೆ ಕಾದು ನೋಡುವ ವೀಕ್ಷಕರ ಒಂದು ವರ್ಗವೂ ಇದೀಗ ಹುಟ್ಟಿಕೊಂಡಿದೆ. ಒಟಿಟಿ ನೀಡುವ ಆಯ್ಕೆಯ ಸ್ವಾತಂತ್ರ್ಯದ ಪ್ರತಿಫಲ ಇದು.

ಅಂತೆಯೇ ಒಟಿಟಿಗಳು ಸಹ ನಾ ಮುಂದು ತಾ ಮುಂದು ಎಂದು ತನ್ನ ಸಬ್‌ಸ್ಕ್ರೈಬರ್‌ಗಳಿಗೆ ಹೊಸ-ಹೊಸ ಸಿನಿಮಾಗಲು, ವೆಬ್ ಸರಣಿಗಳನ್ನು ನೀಡುತ್ತಿವೆ. ಇತ್ತೀಚೆಗಂತೂ ಈ ಸ್ಪರ್ಧೆ ಹೆಚ್ಚಾಗಿದೆ. ಸ್ಪರ್ಧೆ ಹೆಚ್ಚಾದಷ್ಟು ವೀಕ್ಷಕ ಪ್ರಭುವಿಗೆ ಒಳ್ಳೆಯ ಸಿನಿಮಾಗಳು ಬೆರಳ ತುದಿಯಲ್ಲಿಯೇ ಸಿಗುವಂತಾಗಿದೆ. ಇದೀಗ ಮತ್ತೊಂದು ವಾರಾಂತ್ಯ ಬಂದಿದ್ದು, ಒಟಿಟಿಗಳಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆ ಆಗುತ್ತಿವೆ. ಇಲ್ಲಿದೆ ಪಟ್ಟಿ...

ಭಜರಂಗಿ 2 ತೆಲುಗಿಗೆ!

ಭಜರಂಗಿ 2 ತೆಲುಗಿಗೆ!

ಶಿವರಾಜ್ ಕುಮಾರ್ ನಟಿಸಿರುವ 'ಭಜರಂಗಿ 2' ಸಿನಿಮಾ ತೆಲುಗಿಗೆ ಡಬ್ ಆಗಿ 'ಆಹಾ'ನಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಜೀ 5 ನಲ್ಲಿ ಕನ್ನಡದಲ್ಲಿ ಈಗಾಗಲೇ ಬಿಡುಗಡೆ ಆಗಿದೆ. ಈ ಸಿನಿಮಾವು ಕಳೆದ ವರ್ಷ ಅಕ್ಟೋಬರ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಆದರೆ ಅದೇ ದಿನ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ಕಾರಣ ಸಿನಿಮಾವು ಚಿತ್ರಮಂದಿರದಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಈಗ ತೆಲುಗು ಭಾಷೆಗೆ ಡಬ್ ಆಗಿ 'ಆಹಾ'ನಲ್ಲಿ ಬಿಡುಗಡೆ ಕಂಡಿದೆ.

ತಮಿಳಿನ 'ವಿಕ್ರಂ' ಬಿಡುಗಡೆ

ತಮಿಳಿನ 'ವಿಕ್ರಂ' ಬಿಡುಗಡೆ

ಕಮಲ್ ಹಾಸನ್ ನಟನೆಯ ಸೂಪರ್ ಡೂಪರ್ ಹಿಟ್ ಸಿನಿಮಾ 'ವಿಕ್ರಂ' ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಜುಲೈ 08 ರಂದು ಬಿಡುಗಡೆ ಆಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ನಟಿಸಿದ್ದಾರೆ. ತಮಿಳಿನ ಮತ್ತೊಂದು ಹಿಟ್ ಸಿನಿಮಾ 'ಪಟ್ಟಂಪೂಚಿ' ಸಹ ಇದೇ ದಿನ ಸೋನಿ ಲಿವ್‌ನಲ್ಲಿ ಬಿಡುಗಡೆ ಆಗಿದೆ. ಇದೊಂದು ಸೈಕೋ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ.

ಅಂಟೆ ಸುಂದರಾನಿಕಿ, ಮಾರ್ಡರ್ನ್ ಲವ್ ಹೈದರಾಬಾದ್

ಅಂಟೆ ಸುಂದರಾನಿಕಿ, ಮಾರ್ಡರ್ನ್ ಲವ್ ಹೈದರಾಬಾದ್

ನಟ ನಾನಿ ಹಾಗೂ ನಸ್ರಿಯಾ ನಾಜರ್ ನಟನೆಯ ಹಾಸ್ಯಮಯ ಕೌಟುಂಬಿಕ ತೆಲುಗು ಸಿನಿಮಾ 'ಅಂಟೆ ಸುಂದರಾನಿಕಿ' ನೆಟ್‌ಫ್ಲಿಕ್ಸ್‌ನಲ್ಲಿ ತೆರೆಗೆ ಬಂದಿದೆ. ಕಳೆದ ತಿಂಗಳು 10ನೇ ತಾರೀಖಿನಂದು ಈ ಸಿನಿಮಾ ಬಿಡುಗಡೆ ಆಗಿತ್ತು. ತಿಂಗಳು ತುಂಬುವ ಮೊದಲೇ ನೆಟ್‌ಫ್ಲಿಕ್ಸ್‌ಗೆ ಬಂದಿದೆ. ತೆಲುಗಿನ 'ಮಾರ್ಡನ್ ಲವ್ ಹೈದರಾಬಾದ್' ಹೆಸರಿನ ವೆಬ್ ಸರಣಿ ಸಹ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

ಮಲಯಾಳಂನ ನಾಲ್ಕು ಸಿನಿಮಾಗಳು

ಮಲಯಾಳಂನ ನಾಲ್ಕು ಸಿನಿಮಾಗಳು

ಮಲಯಾಳಂನ 'ಡಿಯರ್ ಫ್ರೆಂಡ್' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗುತ್ತಿದೆ. 'ಇನ್' ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ, 'ಕುಂಜೆಲ್ದಾವ್' ಜೀ 5 ನಲ್ಲಿ, 'ಪಾಕ' ಸೋನಿ ಲಿವ್‌ನಲ್ಲಿ ತೆರೆಗೆ ಬರಲಿದೆ. ಈ ಬಾರಿ ಮಲಯಾಳಂನ ಹೆಚ್ಚು ಸಿನಿಮಾಗಳು ಒಟಿಟಿಯಲ್ಲಿ ತೆರೆಗೆ ಬರುತ್ತಿರುವುದು ವಿಶೇಷ.

ಹಿಂದಿಯ ಎರಡು ಸಿನಿಮಾಗಳು

ಹಿಂದಿಯ ಎರಡು ಸಿನಿಮಾಗಳು

ಹಿಂದಿಯ 'ಹುಡ್‌ದಂಗ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಗೆ ಬಂದಿದೆ. ಕೆಲವು ತಿಂಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಶಿಕ್ಷಣದಲ್ಲಿ ಮೀಸಲಾತಿ ಕುರಿತಾದ ಕತೆಯನ್ನು ಹೊಂದಿದೆ. 'ಸಾಸ್ ಬಹು ಅಚಾರ್ ಪ್ರೈವೇಟ್ ಲಿಮಿಟೆಡ್' ಹೆಸರಿನ ಹಿಂದಿ ಸಿನಿಮಾ ನೇರವಾಗಿ ಜೀ5 ನಲ್ಲಿ ತೆರೆಗೆ ಬಂದಿದೆ. ಮಹಿಳೆಯೊಬ್ಬಳು ಕುಟುಂಬವನ್ನು ಎದುರು ಹಾಕಿಕೊಂಡು ಉಪ್ಪಿನಕಾಯಿ ವ್ಯವಹಾರ ಮಾಡುವ ಕತೆಯನ್ನು ಸಿನಿಮಾ ಒಳಗೊಂಡಿದೆ.

More from Filmibeat

English summary
Many new movies and web series releasing on OTT this week from July 08. Many new block busters also coming to OTT.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X