'ಕೆಜಿಎಫ್ 2' ದಾಖಲೆ ಮುರಿಯುವ ತಾಕತ್ತಿರುವ ಸಿನಿಮಾಗಳಿವು!

ಈ ವರ್ಷ ಈ ವರೆಗೆ ಸಿನಿಮಾರಂಗದಲ್ಲಿ ಅಬ್ಬರಿಸಿದ ಸಿನಿಮಾಗಳು ಅಂದರೆ ಒಂದು 'ಕೆಜಿಎಫ್ 2' ಮತ್ತೊಂದು 'RRR'. ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್ ಬ್ಲಾಕ್ ಬಸ್ಟರ್ ಗಳಾಗಿವೆ. ಎರಡೂ ಸಿನಿಮಾಗಳು 1000 ಕೋಟಿಗೂ ಅಧಿಕ ಗಳಿಕೆ ಕಂಡಿವೆ. ಇನ್ನು ಇವುಗಳಲ್ಲಿ 'ಕೆಜಿಎಫ್ 2' ಸಿನಿಮಾದ ಮೇಲುಗೈ ಸಾಧಿಸಿದೆ. RRR ಸಿನಿಮಾವನ್ನು ಬೀಟ್ ಮಾಡಿದ ಕೆಜಿಎಫ್ 2ಗೆ ಅಗ್ರಸ್ಥಾನ ಸಿಕ್ಕಿದೆ.

'ಕೆಜಿಎಫ್ 2' ಅಪರೂಪದ ಸಾಧನೆಯನ್ನು ಮಾಡಿದ ಕನ್ನಡದ ಏಕೈಕ ಸಿನಿಮಾ. ಇನ್ನು ಕನ್ನಡದ ಈ ಸಿನಿಮಾ ವಿಶ್ವದಾದ್ಯಂತ 1200 ಕೋಟಿ ರೂಪಾಯಿಗಿಂತಲೂ ಅಧಿಕ ಗಳಿಸಿದೆ. ಅದರಲ್ಲಿ ಹಿಂದಿಗೆ ಡಬ್ ಆದ ಈ ಸಿನಿಮಾ ಕೇವಲ ಹಿಂದಿಯಲ್ಲಿ ಮಾತ್ರ 430 ಕೋಟಿ ರೂ. ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಎದುರು ಬಾಲಿವುಡ್‌ನ ದೈತ್ಯ ಸ್ಟಾರ್ ನಟರ ಸಿನಿಮಾಗಳೂ ಕೂಡ ಉಳಿದಿಲ್ಲ.

ಕನ್ನಡದ 'ಕೆಜಿಎಫ್ 2' ಸಿನಿಮಾದ ಬಾಕ್ಸಾಫೀಸ್ ದಾಖಲೆ ಬಹುದೊಡ್ಡದಾಗಿದೆ. ಬಾಹುಬಲಿ 2 ಸಿನಿಮಾ ಬಿಟ್ಟರೆ ಈ ಚಿತ್ರವೇ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾ ಆಗಿದೆ. ಇಲ್ಲಿ ತನಕ ಈ ಚಿತ್ರದ ದಾಖಲೆ ಎದುರು ನಿಲ್ಲುವಂತಹ ಸಿನಿಮಾ ಬಂದಿಲ್ಲ. ಆದರೆ ಯಾವ ಸಿನಿಮಾಗಳಿಗೆ ಕೆಜಿಎಫ್ 2 ದಾಖಲೆಯನ್ನು ಮುರಿಯುವ ತಾಕತ್ತು ಇದೆ ಎನ್ನುವುದರ ಅಂದಾಜು ಇಲ್ಲಿದೆ.

ಪುಷ್ಪ 2, ಕೆಜಿಎಫ್ 2 ದಾಖಲೆಯನ್ನು ಮುರಿಯಬಲ್ಲುದೆ?

ಪುಷ್ಪ 2, ಕೆಜಿಎಫ್ 2 ದಾಖಲೆಯನ್ನು ಮುರಿಯಬಲ್ಲುದೆ?

ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಸಿನಿಮಾಗಳ ನಂತರ ಉತ್ತರ ಭಾರತದಲ್ಲಿ ಹೆಚ್ಚಿನ ಕ್ರೇಜ್ ಹುಟ್ಟು ಹಾಕಿದ ಸೌತ್ ಸಿನಿಮಾ ಅಂದರೆ ಅದು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ'. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಸಿನಿಮಾದ ಒಟ್ಟಾರೆ ಕಲೆಕ್ಷನ್ 350 ಕೋಟಿಗೂ ಅಧಿಕ ಆಗಿದೆ ಎನ್ನಲಾಗಿದೆ. ಇನ್ನು 'ಪುಷ್ಪ' 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಹಿಂದಿ ಅವತರಣಿಕೆಯಿಂದಲೇ. ಹಾಗಾಗಿ 'ಪುಷ್ಪ 2' ಸಿನಿಮಾಗೆ, ಕೆಜಿಎಫ್ 2 ದಾಖಲೆಯನ್ನು ಮೀರಿಸುವ ಸಾಮರ್ಥ್ಯ ಇದೆ.

'ಕೆಜಿಎಫ್ 2' ರೆಕಾರ್ಡ್ ಬ್ರೇಕ್ ಮಾಡುತ್ತಾ 'ಸಲಾರ್'!

'ಕೆಜಿಎಫ್ 2' ರೆಕಾರ್ಡ್ ಬ್ರೇಕ್ ಮಾಡುತ್ತಾ 'ಸಲಾರ್'!

ಇನ್ನು ಬಹು ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ 'ಸಲಾರ್' ಸಹ ಇದೆ. 'ಸಲಾರ್' ಸಿನಿಮಾ ಹೇಳಿ, ಕೇಳಿ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾ. ಕೆಜಿಎಫ್ ಸರಣಿ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡ ನಟ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾವನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿದ್ದಾರೆ. ಕೆಜಿಎಫ್ 2 ಯಶಸ್ಸು ಸಾಲದು ಮಾಡುವದು ಸಾಕಷ್ಟಿದೆ ಎಂದು ಸಂದರ್ಶನದಲ್ಲಿ ಪ್ರಶಾಂತ್ ನೀಲ್ ಹೇಳಿಕೊಂಡಿದ್ದರು. ಹಾಗಾಗಿ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾದ ಮೂಲಕ ಮತ್ತೊಂದು ದಾಖಲೆ ಮಾಡಲಿದ್ದಾರೆ ಎನ್ನುವು ಮಾತ್ರ ಪಕ್ಕಾ.

'ಪೊನ್ನಿಯಿನ್ ಸೆಲ್ವನ್' ಹೊಸ ಇತಿಹಾಸಕ್ಕೆ ಸಾಕ್ಷಿ!

'ಪೊನ್ನಿಯಿನ್ ಸೆಲ್ವನ್' ಹೊಸ ಇತಿಹಾಸಕ್ಕೆ ಸಾಕ್ಷಿ!

ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ಚಿತ್ರ ಬಹುದೊಡ್ಡ ತಾರಗಣದೊಂದಿಗೆ, ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರವೂ ಪ್ಯಾನ್ ಇಂಡಿಯ ಸಿನಿಮಾ. ಈ ಚಿತ್ರದ ಕಥೆ ಕಾದಂಬರಿ ಆಧಾರಿತ ಸಿನಿಮಾ. ಜೊತೆಗೆ ಈಗಾಗಲೇ ಕೆಲವು ಪಾತ್ರಗಳ ಪರಿಚಯವಾಗಿದ್ದು, ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ಕೂಡ ಸಾವಿರ ಕೋಟಿ ಗಳಿಕೆ ಮಾಡುವ ಎಲ್ಲಾ ಸಾಧ್ಯತೆ ಇದೆ.

'ಆದಿಪುರುಷ್' ಆಗಿ ಅಬ್ಬರಿಸಲಿರುವ ಪ್ರಭಾಸ್!

'ಆದಿಪುರುಷ್' ಆಗಿ ಅಬ್ಬರಿಸಲಿರುವ ಪ್ರಭಾಸ್!

'ಆದಿಪುರುಷ' ನಟ ಪ್ರಭಾಸ್ ಅಭಿನಯದ ಮುಂದಿನ ಸಿನಿಮಾ. ಈ ಸಿನಿಮಾ ರಾಮಾಯಣ ಕಥೆಯನ್ನು ಆಧರಿಸಿದ ಪೌರಾಣಿಕ ಸಿನಿಮಾ. ಈ ಚಿತ್ರವನ್ನು ಓಂ ರಾವುತ್ ನಿರ್ದೇಶಿಸುತ್ತಿದ್ದಾರೆ. ಇದನ್ನು ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಪ್ರಭಾಸ್, ಸೈಫ್ ಅಲಿ ಖಾನ್ ಮತ್ತು ಕೃತಿ ಸನೋನ್ ಈ ಚಿತ್ರದಲ್ಲಿನಟಿಸಿದ್ದಾರೆ. ಈ ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇದೆ.

'ವಿಕ್ರಾಂತ್ ರೋಣ' ಸಿನಿಮಾ ಬಗ್ಗೆ ನಿರೀಕ್ಷೆ ಇದೆ!

'ವಿಕ್ರಾಂತ್ ರೋಣ' ಸಿನಿಮಾ ಬಗ್ಗೆ ನಿರೀಕ್ಷೆ ಇದೆ!

ಕೆಜಿಎಫ್ 2 ಬಳಿಕ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ಅಂದರೆ ಅದು, ವಿಕ್ರಾಂತ್ ರೋಣ. ಸುದೀಪ್ ಅಭಿನಯದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ, ಪ್ಯಾನ್ ಇಂಡಿಯ ತೆರೆಕಾಣುತ್ತಿದೆ. ವಿಕ್ರಾಂತ್ ರೋಣ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವ ಸೂಚನೆ ಕೊಟ್ಟಿದೆ. ಹಾಗಾಗಿ ಈ ಚಿತ್ರಕ್ಕೂ ಕೆಜಿಎಫ್ 2 ದಾಖಲೆಯನ್ನು ಮುರಿಯುವ ಎಲ್ಲಾ ಸಾಮರ್ಥ್ಯ ಇದೆ. ಜುಲೈ 28ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

More from Filmibeat

English summary
Here Is The List Of Upcomming Movies which Can Beat KGF 2 Box Office Record, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X