Hi Nanna OTT: ತಂದೆ ಮಗಳ ಭಾವನಾತ್ಮಕ ಸಿನಿಮಾ 'ಹಾಯ್ ನಾನ್ನ' ಒಟಿಟಿಗೆ: ಎಲ್ಲಿ, ಯಾವಾಗ ನೋಡಬಹುದು ತಿಳಿಯಿರಿ

ನ್ಯಾಚುರಲ್ ಸ್ಟಾರ್ ನಾನಿ 'ದಸರಾ' ಸಿನಿಮಾ ಬಳಿಕ ಭಾವನಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡ ಸಿನಿಮಾ 'ಹಾಯ್ ನಾನ್ನ'. ಇತ್ತೀಚಿಗೆ ಸಿನಿಮಾ ಬಿಡುಗಡೆಯಾಗಿದ್ದು, ಇದು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಎಂದು ಘೋಷಿಸಲ್ಪಟ್ಟಿದೆ. 'ಹಾಯ್ ನಾನ್ನ' ಬಿಡುಗಡೆಯಾಗಿ ಮೂರನೇ ವಾರದಲ್ಲಿಯೂ ಪ್ಯಾಮಿಲಿ ಆಡಿಯನ್ಸ್ ಆನ್ನು ಥಿಯೇಟರ್‌ಗಳತ್ತ ಸೆಳೆಯುತ್ತಿದೆ. ಈಗ ಈ ಸಿನಿಮಾ ಒಟಿಟಿಗೆ ಲಗ್ಗೆ ಇಡುತ್ತಿದೆ.

ಎಸ್.... ಥಿಯೇಟರ್‌ಗಳಲ್ಲಿ ಸಕ್ಸಸ್ ಕಂಡ ನಾನಿ ಮತ್ತು ಮೃಣಾಲ್ ಠಾಕೂರ್ ಕಾಂಬಿನೇಷನ್‌ನ 'ಹಾಯ್ ನಾನ್ನ' ಈ ಒಟಿಟಿಗೆ ಬರುತ್ತಿದೆ. ಈಗಾಗಲೇ ನೆಟ್‌ಫ್ಲಿಕ್ಸ್ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಹಾಯ್ ನನ್ನಾ 2024 ರ ಜನವರಿ 4 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಲಿದೆ ಎಂಬುದು ಇತ್ತೀಚಿಗೆ ವರದಿಯಾಗಿದೆ.

 Hi Nanna OTT: Heres when, where to watch Nani, Mrunal Thakur starrer Hi Nanna

ಭಾರಿ ಮೊತ್ತ ಕೊಟ್ಟು 'ಹಾಯ್ ನಾನ್ನ' ಹಕ್ಕು ಪಡೆದ ನೆಟ್‌ಫ್ಲಿಕ್ಸ್!

ಜನವರಿ 4 ರಂದು ಸಿನಿಮಾ ಒಟಿಟಿ ಮೂಲಕ ಮನೆ ಮನೆಗೆ ತಲುಪಲಿದೆ. ಈ ದಿನಾಂಕವನ್ನು ಒಟಿಟಿ ಪ್ಲಾಟ್‌ಫಾರಂ ನೆಟ್‌ಫ್ಲಿಕ್ಸ್ ಅಧಿಕೃತಗೊಳಿಸಿದೆ. ಶೌರ್ಯುವ್ ನಿರ್ದೇಶನದ ಚಿತ್ರದ ಹಕ್ಕುಗಳನ್ನು ಪಡೆಯಲು ನೆಟ್‌ಫ್ಲಿಕ್ಸ್ ಭಾರಿ ಮೊತ್ತವನ್ನು ಖರ್ಚು ಮಾಡಿದೆ ಎಂದು ವರದಿಯಾಗಿದೆ.

ವೈರಾ ಎಂಟರ್‌ಟೈನ್‌ಮೆಂಟ್ಸ್ ನಿರ್ಮಾಣದ 'ಹಾಯ್ ನಾನ್ನ' ಚಿತ್ರಕ್ಕೆ ಹೆಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿದ್ದಾರೆ. 'ಹಾಯ್ ನಾನ್ನ' ಮೊದಲ ದಿನ ಅಂತಹ ಗಳಿಕೆ ಕಂಡಿರಲಿಲ್ಲ. ಆದರೆ, ಸಿನಿಮಾ ನೋಡಿದ ಜನ ಯಾವಾಗಿಯೇ ಚಿತ್ರಕ್ಕೆ ಪ್ರಚಾರ ನೀಡಿದ್ದರು. ಹೀಗಾಗಿ ಬಾಯಿಮಾತಿನಿಂದ ಚಿತ್ರಕ್ಕೆ ಪ್ರಮೋಷನ್ ಸಿಕ್ಕು ಎರಡನೆ ದಿನದಿಂದ ಥಿಯೇಟರ್ ಆಕ್ಯುಪೆನ್ಸಿ ಹೆಚ್ಚಾಯಿತು, ಅಂದಿನಿಂದ ಚಿತ್ರ ಹಿಂತಿರುಗಿ ನೋಡಲೇ ಇಲ್ಲ.

ತಂದೆ ಮಗಳ ಭಾವನಾತ್ಮಕ ಜರ್ನಿಯ 'ಹಾಯ್ ನಾನ್ನ' ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅವರ ಅಭಿನಯವೇ ಪ್ಲಸ್ ಪಾಯಿಂಟ್. ಕೆಲವೊಮ್ಮೆ ಇದು ತಂದೆ ಮಗಳ ಸಿನಿಮಾ ಎನ್ನುವುದಕ್ಕಿಂತ ಮೃಣಾಲ್ ಸಿನಿಮಾ ಎನ್ನುವುದೇ ಸರಿ ಎನ್ನಿಸುಬಿಡುತ್ತದೆ. ಅಂತಹ ನಟನೆ ಸಿನಿಮಾದಲ್ಲಿದೆ. ಹಾಯ್ ನನ್ನಾ ಒಂಟಿ ತಂದೆಯ ಕಥೆಯಾದರೂ, ಲವ್‌ ಸ್ಟೋರಿಗೆ ಬರವಿಲ್ಲ. ಚಿತ್ರದಲ್ಲಿ ವಿಶೇಷ ಹಾಡೊಂದರಲ್ಲಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ.

 Hi Nanna OTT: Heres when, where to watch Nani, Mrunal Thakur starrer Hi Nanna

ನಾನಿ

ವಿವೇಕ್ ಆತ್ರೇಯ ನಿರ್ದೇಶಿಸುತ್ತಿರುವ ಸರಿಪೋಧಾ ಸನಿವಾರಂ ಎಂಬ ಫ್ಯಾಂಟಸಿ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವಾಗಿ ನಿರ್ಮಿಸಲಾದ ಸೆಟ್‌ನಲ್ಲಿ ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದೆ. ಈ ಚಿತ್ರದಲ್ಲಿ ನಾನಿ ವಿಶೇಷ ಶಕ್ತಿಯುಳ್ಳ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಕೂಡ ಒಂದು ಎಮೋಷನಲ್ ಪ್ಲಸ್ ಆಕ್ಷನ್ ಸಿನಿಮಾವಾಗಿದೆ ಎಂದು ಹೇಳಲಾಗಿದೆ. ಈ ಚಿತ್ರದ ನಂತರ, ನಾನಿ ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ಜೊತೆ ಮತ್ತೊಂದು ಸಿನಿಮಾ ಮಾತುಕತೆ ನಡೆಸುತ್ತಿದ್ದಾರೆ.

More from Filmibeat

English summary
Here's when, where to watch Nani, Mrunal Thakur starrer Hi Nanna in OTT
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X