Hanuman OTT: ಹೊಸ ಟ್ವಿಸ್ಟ್: ಓಟಿಟಿಗೂ ಮುನ್ನ ಟಿವಿಯಲ್ಲಿ 'ಹನುಮಾನ್': ಯಾವ ಚಾನಲ್, ಯಾವಾಗ?

ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ತೆಲುಗಿನ 'ಹನುಮಾನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಅಂದಾಜು 40 ಕೋಟಿ ರೂ. ಬಜೆಟ್ ಸಿನಿಮಾ 200 ಕೋಟಿ ರೂ.ಗೂ ಅಧಿಲ ಗ್ರಾಸ್ ಕಲೆಕ್ಷನ್ ಮಾಡಿತ್ತು. ಅದರೆ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಭಾರೀ ಗೊಂದಲ ಇದೆ.

ಶಿವರಾತ್ರಿ ವಿಶೇಷವಾಗಿ ಜೀ5ನಲ್ಲಿ 'ಹನುಮಾನ್' ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ ಕಾದು ಕೂತವರಿಗೆ ನಿರಾಸೆಯಾಗಿದೆ. ಈ ಬಗ್ಗೆ ನೆಟ್ಟಿಗರೊಬ್ಬರ ಪ್ರಶ್ನೆಗೆ ಜೀ5 ಸೋಶಿಯಲ್ ಮೀಡಿಯಾ ಖಾತೆಯಿಂದ ಪ್ರತಿಕ್ರಿಯೆ ಬಂದಿದೆ. "ಹಾಯ್. ಈ ವಿಷಯದ ಬಗ್ಗೆ ನಮಗೆ ಯಾವುದೇ ಅಪ್‌ಡೇಟ್ ಇಲ್ಲ. ದಯವಿಟ್ಟು ನಮ್ಮ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಪೇಜ್‌ಗಳ ಮೇಲೆ ಕಣ್ಣಿಡಿ" ಎಂದು ಜೀ5 ಉತ್ತರಿಸಿದೆ.

Hindi dubbed version of HanuMan OTT television premiere date confirmed

ತೇಜ ಸಜ್ಜ ನಟನೆಯ ಸೂಪರ್ ಹೀರೊ ಸಿನಿಮಾ 'ಹನುಮಾನ್' ಪ್ರೇಕ್ಷಕರ ಮನಗೆದ್ದಿತ್ತು. ಸಣ್ಣ ಬಜೆಟ್‌ನಲ್ಲಿ ಬಹಳ ಅದ್ಭುತವಾಗಿ ಚಿತ್ರ ಕಟ್ಟಿಕೊಟ್ಟ ತಂಡದ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದಕ್ಷಿಣದಲ್ಲಿ ಮಾತ್ರವಲ್ಲದೇ ಉತ್ತರ ಭಾರತ ಪ್ರೇಕ್ಷಕರು ಸಿನಿಮಾ ಮೆಚ್ಚಿಕೊಂಡಿದ್ದಾರೆ. ದೇಶ ವಿದೇಶಗಳಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಕರ್ನಾಕಟದಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.

ಸುಗ್ಗಿ ಸಂಭ್ರಮದಲ್ಲಿ ತೆಲುಗು, ತಮಿಳಿನ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸಿದ್ದವು. ಇದರಲ್ಲಿ ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ', ಧನುಷ್- ಶಿವಣ್ಣನ 'ಕ್ಯಾಪ್ಟನ್ ಮಿಲ್ಲರ್' ಸೇರಿದಂತೆ ನಾಗಾರ್ಜುನ ನಟನೆಯ 'ನಾ ಸಾಮಿ ರಂಗ', ವೆಂಕಟೇಶ್ 'ಸೈಂಧವ್' ಸಿನಿಮಾಗಳು ಇದ್ದವು. ಆದರೆ ಎಲ್ಲವನ್ನು ಮೀರಿ ಹೊಸಬರ 'ಹನುಮಾನ್' ಗೆದ್ದಿತ್ತು.

Hindi dubbed version of HanuMan OTT television premiere date confirmed

ಆಂಧ್ರ, ತೆಲಂಗಾಣ ಮಾತ್ರವಲ್ಲದೇ ವಿದೇಶದ ಕೆಲವು ಭಾಗಗಳಲ್ಲಿ 'ಹನುಮಾನ್' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಮುಖ್ಯವಾಗಿ ಸಿನಿಮಾ ಗ್ರಾಫಿಕ್ಸ್ ಹಾಗೂ ಮ್ಯೂಸಿಕ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲವರು ಹನುಮಾನ್ ಗ್ರಾಫಿಕ್ಸ್‌ನ ಪ್ರಭಾಸ್ 'ಆದಿಪುರುಷ್' ಚಿತ್ರಕ್ಕೆ ಹೋಲಿಸಿ ವ್ಯಂಗ್ಯವಾಡಿದ್ದರು. ಇಷ್ಟು ಕಡಿಮೆ ಬಜೆಟ್‌ ಚಿತ್ರದಲ್ಲಿ ಎಂತಹ ಒಳ್ಳೆ ಸಿನಿಮಾ ಮಾಡಿದ್ದಾರೆ ನೋಡಿ ಕಲಿಯಿರಿ ಎಂದಿದ್ದರು.

ಸಾಮಾನ್ಯರಲ್ಲಿ ಸಾಮಾನ್ಯನಾದ ಯುಕಕನಿಗೆ ಹನುಮಂತನ ಕೃಪಾ ಕಟಾಕ್ಷದಿಂದ ಸೂಪರ್ ಪವರ್ ಸಿಕ್ಕರೆ ಏನಾಗುತ್ತದೆ? ಆ ಪವರ್ ಬಳಸಿ ಆತ ಏನೆಲ್ಲಾ ಮಾಡ್ತಾನೆ? ಆ ಪವರ್ ಅನ್ನು ಕಬಳಿಸಲು ಯಾರೆಲ್ಲಾ ಪ್ರಯತ್ನಿಸುತ್ತಾರೆ? ಮುಂದೇನಾಗುತ್ತದೆ ಎನ್ನುವ ಸಣ್ಣ ಕಥೆ ಎಳೆ ಆಧರಿಸಿ 'ಹನುಮಾನ್' ಸಿನಿಮಾ ನಿರ್ಮಾಣವಾಗಿದೆ. ಬಜೆಟ್ ಕಾರಣಕ್ಕೆ ಮೊದಲ ಈ ಚಿತ್ರದಲ್ಲಿ ದೊಡ್ಡ ಕಲಾವಿದರು ಇರಲಿಲ್ಲ. ಸೀಕ್ವೆಲ್‌ನ ದೊಡ್ಡಮಟ್ಟದಲ್ಲೇ ತಂಡ ಪ್ಲ್ಯಾನ್ ಮಾಡುತ್ತಿರುವುದಾಗಿ ಚಿತ್ರತಂಡ ಹೇಳಿದೆ.

ನಿರ್ದೇಶಕ ಪ್ರಶಾಂತ್ ವರ್ಮಾ 'ಹನುಮಾನ್' ಸಕ್ಸಸ್ ಬೆನ್ನಲ್ಲೇ ಸೀಕ್ವೆಲ್ 'ಜೈ ಹನುಮಾನ್' ಘೋಷಿಸಿದ್ದಾರೆ. ಇತ್ತೀಚೆಗೆ ಸಿನಿಮಾ 50 ದಿನ ಪೂರೈಸಿತ್ತು. ಆದರೂ ಇನ್ನು ಓಟಿಟಿಗೆ ಬರದೇ ಇರುವುದು ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ. ಆದರೆ ಈಗ ದಿಢೀರನೆ ಸಿನಿಮಾ ಟಿವಿ ಪ್ರೀಮಿಯರ್ ಆಗುವ ಸುದ್ದಿ ಬಂದಿದೆ.

'ಹನುಮಾನ್' ಚಿತ್ರದ ಹಿಂದಿ ವರ್ಷನ್ ಮಾರ್ಚ್ 16 ರಂದು ರಾತ್ರಿ 8 ಗಂಟೆಗೆ ಕಲರ್ಸ್ ಸಿನೆಪ್ಲೆಕ್ಸ್ ಚಾನೆಲ್‌ನಲ್ಲಿ ಪ್ರೀಮಿಯರ್ ಆಗುತ್ತದೆ. ಜೊತೆಗೆ ಜಿಯೋ ಸಿನಿಮಾ ಓಟಿಟಿ ಫ್ಲಾಟ್‌ಪಾರ್ಮ್‌ನಲ್ಲಿ ವೀಕ್ಷಣೆಗೆ ಸಿಗಲಿದೆ. ಕಲರ್ಸ್ ಸಿನೆಪ್ಲೆಕ್ಸ್ ಸಂಸ್ಥೆ ಈ ವಿಚಾರವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ.

More from Filmibeat

English summary
Teja sajja's HanuMan hindi OTT, TV premiere date fixed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X