ಬಾಕ್ಸಾಫೀಸ್‌ನಲ್ಲಿ ₹130 ಕೋಟಿ ದೋಚಿದ ಹಾರರ್ ಥ್ರಿಲ್ಲರ್ ಸಿನಿಮಾ ಓಟಿಟಿಗೆ ಬಂತು; ಈಗ್ಲೇ ನೋಡಿ
ಅದ್ಯಾಕೋ ಬರ್ತಾ ಬರ್ತಾ ಹಾರರ್ ಸಿನಿಮಾಗಳ ಟ್ರೆಂಡ್ ಕಮ್ಮಿ ಆಗಿದೆ. ಆಗೊಮ್ಮೆ ಈಗೊಮ್ಮೆ ಹಾರರ್ ಕಾಮಿಡಿ ಸಿನಿಮಾಗಳು ಬರುತ್ತವೆ. ಆದರೆ ಇಂತಹ ಸಿನಿಮಾಗಳಿಗೆ ದೊಡ್ಡದಾಗಿ ರೆಸ್ಪಾನ್ಸ್ ಸಿಗಲ್ಲ. ಜೂನ್ 7ಕ್ಕೆ ತೆರೆಗೆ ಬಂದಿದ್ದ 'ಮುಂಜ್ಯ' ಹಿಂದಿ ಸಿನಿಮಾ ಮಾತ್ರ ಸೂಪರ್ ಹಿಟ್ ಆಗಿತ್ತು.
ಆದಿತ್ಯ ಸರ್ಪೋತದಾರ್ ನಿರ್ದೇಶನದ 'ಮುಂಜ್ಯ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕೇವಲ 30 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 132 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ಶಾರ್ವರಿ, ಅಭಯ್ ವರ್ಮಾ, ಸತ್ಯರಾಜ್, ಮೋನಾ ಸಿಂಗ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.

ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ದಿನೇಜ್ ವಿಜನ್ ಹಾಗೂ ಅಮರ್ ಕೌಶಿಕ್ 'ಮುಂಜ್ಯ' ಚಿತ್ರಕ್ಕೆ ಹಣ ಹಾಕಿದ್ದರು. ಮ್ಯಾಡಾಕ್ ಸೂಪರ್‌ನ್ಯಾಚುರಲ್ ಯೂನಿವರ್ಸ್‌ನ 4ನೇ ಸಿನಿಮಾ ಇದು. 'ಸ್ತ್ರೀ', 'ಭೇದಿಯ', 'ರೂಹಿ' ಇದೇ ಯೂನಿವರ್ಸ್ ಸಿನಿಮಾಗಳು. ಸದ್ಯ ಇದೇ ಕಥೆ ಜೊತೆಗೆ ಲಿಂಕ್ ಇರುವ 'ಸ್ತ್ರೀ'-2 ಸಿನಿಮಾ ವಾರದ ಹಿಂದೆ ತೆರೆಗೆ ಬಂದು ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಚಿತ್ರದಲ್ಲಿ ಮುಂಜ್ಯ ಎನ್ನುವ ಭೂತದ ರೀತಿಯ CGI ಪಾತ್ರವನ್ನು ಕ್ರಿಯೇಟ್ ಮಾಡಲಾಗಿದೆ.
ಜಾನಪದ ಹಾಗೂ ಇವತ್ತಿನ ಕಾಲಘಟ್ಟವನ್ನು ಸೇರಿಸಿ 'ಮುಂಜ್ಯ' ಕಥೆ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ತಮಿಳು ನಟ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಸಹ ನಟಿಸಿದ್ದಾರೆ. ಈ ವರ್ಷ ಬಾಲಿವುಡ್‌ನಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಪಟ್ಟಿಯಲ್ಲಿ ಈ ಸಿನಿಮಾ 6ನೇ ಸ್ಥಾನದಲ್ಲಿದೆ. ಸಾಕಷ್ಟು ಜನ ಈ ಚಿತ್ರವನ್ನು ಓಟಿಟಿಯಲ್ಲಿ ನೋಡಲು ಕಾಯುತ್ತಿದ್ದರು.

'ಮುಂಜ್ಯ' ಚಿತ್ರ ಯಾವಾಗ ಓಟಿಟಿಗೆ ಬರುತ್ತೆ ಎಂದು ಕಾದವರಿಗೆ ಬಿಗ್ ಸರ್‌ಪ್ರೈಸ್ ಸಿಕ್ಕಿದೆ. ಯಾವುದೇ ಸುಳಿವು ಇಲ್ಲದೇ ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ಈಗಾಗಲೇ ಕೆಲವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ನೀವು ಹಾಟ್‌ಸ್ಟರ್‌ನಲ್ಲಿ ಈಗ ನೋಡಬಹುದು. ಸದ್ಯಕ್ಕೆ ಹಿಂದಿ ವರ್ಷನ್ ಮಾತ್ರ ಲಭ್ಯವಿದೆ. ಇನ್ನುಳಿದ ಭಾಷೆಗಳಿಗೆ ಡಬ್ ಮಾಡಿ ಶೀಘ್ರದಲ್ಲೇ ರಿಲೀಸ್ ಮಾಡುವ ಸಾಧ್ಯತೆ ದಟ್ಟವಾಗಿದೆ.
ಸಿಂಪಲ್ ಕಥೆಯನ್ನು ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. ತಮಾಷೆಯ ಜೊತೆ ಜೊತೆಗೆ 'ಮುಂಜ್ಯ' ನೋಡುಗರನ್ನು ಹೆದರಿಸುತ್ತಾನೆ. ಸೌರಬ್ ಗೌಸಾಮಿ ಛಾಯಾಗ್ರಹಣ, ಸಚಿನ್- ಜಿಗರ್ ಸಂಗೀತದಲ್ಲಿ ಹಾಡುಗಳು ಮೂಡಿಬಂದಿವೆ. ಜಸ್ಟೀನ್ ವರ್ಗೀಸ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ವರುಣ್ ಧವನ್ ಚಿತ್ರದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮೊದಲ ದಿನ ಬಾಕ್ಸಾಫೀಸ್‌ನಲ್ಲಿ 4 ಕೋಟಿ ಬಾಚಿದ್ದ 'ಮುಂಜ್ಯ' ಚಿತ್ರ ಮೊದಲ ವಾರ 35 ಕೋಟಿ ರೂ. ಗಳಿಸಿ ಹುಬ್ಬೇರಿಸಿತ್ತು. ಬಳಿಕ 2 ವಾರಕ್ಕೆ 70 ಕೋಟಿ ರೂ. ದೋಚಿತ್ತು. ಭಾರತದಲ್ಲಿ 127.95 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಓವರ್‌ಸೀಸ್ ಮಾರ್ಕೆಟ್‌ನಲ್ಲಿ 4.18 ಕೋಟಿ ರೂ. ಕಲೆಹಾಕಿ ಹಿಟ್ ಲಿಸ್ಟ್ ಸೇರಿತ್ತು.


Click it and Unblock the Notifications










