ಹೊಸ ದಾಖಲೆ ಬರೆದ ಹೊಂದಿಸಿ ಬರೆಯಿರಿ.. ಥಿಯೇಟರ್‌ನಲ್ಲಿ ಅಲ್ಲದಿದ್ರೂ ಒಟಿಟಿಯಲ್ಲಿ ಬಿಗ್ ಹಿಟ್

By ಫಿಲ್ಮಿಬೀಟ್ ಡೆಸ್ಕ್

'ಹೊಂದಿಸಿ ಬರೆಯಿರಿ' ಕನ್ನಡ ಸಿನಿಮಾ ಬಿಡುಗಡೆಯಾದಲ್ಲಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈ ಸಿನಿಮಾ ಕತೆ, ಪಾತ್ರಗಳ ಅಭಿನಯ ಎಲ್ಲವೂ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಸಿನಿಮಾ ನೋಡಿದವರೆಲ್ಲರೂ ಸಿನಿಮಾ ಬಗ್ಗೆ ಮೆಚ್ಚುಗೆ ಮಾತನ್ನೇ ಆಗಿದ್ದರು.

ಪ್ರತಿಕ್ರಿಯೆ ಉತ್ತಮವಾಗಿದ್ದರೂ, 'ಹೊಂದಿಸಿ ಬರೆಯಿರಿ' ಸಿನಿಮಾಗೆ ಅಂದ್ಕೊಂಡಷ್ಟು ಮಟ್ಟಿಗೆ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿಲ್ಲ. ಆದರೂ, ಕೆಲವು ಥಿಯೇಟರ್‌ಗಳಲ್ಲಿ 50 ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಇದೇ ಸಂಭ್ರಮದಲ್ಲಿ ಈ ಸಿನಿಮಾ ಓಟಿಟಿಗೂ ಲಗ್ಗೆ ಇಟ್ಟಿತ್ತು.

ಯುವಕರ ಆಸೆಗಳು, ಅವರ ಸಂಬಂಧಗಳನ್ನೇ ಇಟ್ಟುಕೊಂಡು 'ಹೊಂದಿಸಿ ಬರೆಯಿರಿ' ಕಥೆಯನ್ನು ಹೆಣೆಯಲಾಗಿತ್ತು. ಯುವಕರ ನಡುವೆ ನಡೆಯೋ ಹಲವು ಘಟನೆಗಳನ್ನು ಸಿನಿಮಾದಲ್ಲಿ ನೋಡಿ, ಸಿನಿಪ್ರೇಮಿಗಳು ಮೆಚ್ಚುಗೆ ಸೂಚಿಸಿದ್ದರು. ಆದರೆ, ಅಚ್ಚರಿ ಅಂದರೆ, ಈ ಸಿನಿಮಾ ಥಿಯೇಟರ್‌ಗಿಂತ ಓಟಿಟಿಯಲ್ಲೇ ಬ್ಲಾಕ್ ಬಸ್ಟರ್ ಆಗಿದೆ.

Hondisi Bareyiri Crossed 50 million minutes Streaming On Amazon prime video

ಕನ್ನಡದ ಯುವ ನಟರ ಸಿನಿಮಾವೊಂದು ಅಮೆಜಾನ್ ಪ್ರೈಂನಲ್ಲಿ ಬರೋಬ್ಬರಿ 50 ಮಿಲಿಯನ್ ನಿಮಿಷಗಳು ಸ್ಟ್ರೀಮಿಂಗ್ ಆಗಿ ದಾಖಲೆ ಬರೆದಿದೆ. 'ಹೊಂದಿಸಿ ಬರೆಯಿರಿ' ಈ ವರ್ಷ ಅತಿ ಹೆಚ್ಚು ಸ್ಟ್ರೀಮಿಂಗ್ ಆಗಿರುವ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿದೆ.

ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಜೊತೆಗೆ ತಮ್ಮ ಸ್ನೇಹಿತರ ಜೊತೆಗೂಡಿ ಸಂಡೇ ಸಿನಿಮಸ್ ಬ್ಯಾನರ್‌ನಿಂದ 'ಹೊಂದಿಸಿ ಬರೆಯಿರಿ' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇದು, ಥಿಯೇಟರ್‌ನಲ್ಲಿ ಸಾಧಾರಣ ಯಶಸ್ಸು ಕಂಡರೂ, ಓಟಿಟಿಯಲ್ಲಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ.

ಹೀಗಾಗಿಯೇ ಅಮೆಜಾನ್ ಪ್ರೈಂ ವಿಡಿಯೋ 'ಹೊಂದಿಸಿ ಬರೆಯಿರಿ' ಸಿನಿಮಾವನ್ನು ಯುಕೆ ಹಾಗೂ ಯುಎಸ್‌ಎನಲ್ಲಿ ಸ್ಟ್ರೀಮಿಂಗ್ ಮಾಡುತ್ತಿದೆ. ಅಲ್ಲಿರುವ ಕನ್ನಡದ ಸಿನಿಮಾ ಪ್ರಿಯರು ಈ ಸಿನಿಮಾ ನೋಡಬಹುದಾಗಿದೆ.

ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹದೇವ್, ಅನಿರುದ್ದ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಅರ್ಚನಾ ಜೋಯಿಸ್ ಸೇರಿದಂತೆ ಹಲವರು ಕಲಾವಿರು ನಟಿಸಿದ್ದಾರೆ. ಭಾವನೆಗಳ ಏರಿಳಿತ, ಕಾಲೇಜು ವಿದ್ಯಾರ್ಥಿಗಳ ಮಜವಾದ ಪಯಣ, ಪ್ರೀತಿ ಪ್ರೇಮ, ತುಂಟಾಟವನ್ನೇ ಇಟ್ಟುಕೊಂಡು ಹೆಣೆದ ಕಥೆಯೇ 'ಹೊಂದಿಸಿ ಬರೆಯಿರಿ'.

More from Filmibeat

English summary
Hondisi Bareyiri Crossed 50 million minutes Streaming On Amazon prime video, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X