50 ದಿನಗಳ ಸಂಭ್ರಮದಲ್ಲೇ ಓಟಿಟಿಯಲ್ಲಿ ಹೊಂದಿಸಿ ಬರೆಯಿರಿ: ಎಲ್ಲಿ ಯಾವಾಗ ರಿಲೀಸ್?

By ಫಿಲ್ಮಿಬೀಟ್ ಡೆಸ್ಕ್

ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ ಕನ್ನಡ ಸಿನಿಮಾ 'ಹೊಂದಿಸಿ ಬರೆಯಿರಿ'. ಪ್ರವೀಣ್ ತೇಜ್, ಭಾವನಾ ರಾವ್, ಐಶಾನಿ ಶೆಟ್ಟಿ, ನವೀನ್ ಶಂಕರ್ ಕನ್ನಡದ ಯುವ ಪ್ರತಿಭೆಗಳ ಸಿನಿಮಾವಿದು. ಈ ಸಿನಿಮಾವೀಗ 50 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.

'ಹೊಂದಿಸಿ ಬರೆಯಿರಿ' ಟ್ರೈಲರ್ ಹಾಗೂ ಹಾಡುಗಳು ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿತ್ತು. ರಾಮೇನಹಳ್ಳಿ ಜಗನ್ನಾಥ್ ನಿರ್ದೇಶಿಸಿದ ಈ ಬಹು ತಾರಾಗಣದ ಸಿನಿಮಾ 50 ದಿನಗಳನ್ನು ಪೂರೈಸಿದೆ. ಇದೇ ಖುಷಿಯಲ್ಲಿ ಓಟಿಟಿಯಲ್ಲೂ (ಏಪ್ರಿಲ್ 3) ಅಬ್ಬರಿಸಲು ಹೊರಟಿದೆ.

"ಹೊಂದಿಸಿ ಬರೆಯಿರಿ ಸಿನಿಮಾ ಸುಮಾರು 70 ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. ಯುವಕರ ತುಡಿತಗಳು, ಸಂಬಂಧಗಳನ್ನೇ ಇಟ್ಟುಕೊಂಡು ಕಥೆ ಹೆಣೆಯಲಾಗಿತ್ತು. ಈ ಸಿನಿಮಾಗೆ ಸಿನಿಪ್ರೇಮಿಗಳು ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆಂದು ಚಿತ್ರತಂಡ ಹೇಳಿಕೊಂಡಿದೆ.

ಒಂದೆರಡು ವಾರಕ್ಕಾಗಿ ರಿಲೀಸ್ ಆಗೋ ಬಿಗ್ ಬಜೆಟ್ ಸಿನಿಮಾಗಳು, ಪರಭಾಷೆ ಚಿತ್ರಗಳ ಅಬ್ಬರದ ನಡುವೆ ಈ ಸಿನಿಮಾ ಮುನ್ನುಗ್ಗಿ ಬಂದಿದೆ. ಒಂದಿಷ್ಟು ಕಷ್ಟಗಳ ನಡುವೆ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಇದೇ ಸಂದರ್ಭದಲ್ಲಿ ಸಿನಿಮಾ ಓಟಿಟಿಗೆ ಲಗ್ಗೆ ಇಡುತ್ತಿದೆ.

ಭಾವನೆಗಳ ಏರಿಳಿತ, ಕಾಲೇಜು ವಿದ್ಯಾರ್ಥಿಗಳ ಮಜವಾದ ಪಯಣ, ಪ್ರೀತಿ ಪ್ರೇಮ, ತುಂಟಾಟವನ್ನೇ ಇಟ್ಟುಕೊಂಡು ಹೆಣೆದ ಸಿನಿಮಾ 'ಹೊಂದಿಸಿ ಬರೆಯಿರಿ'. ಈ ಸಿನಿಮಾ ಥಿಯೇಟರ್‌ ಬಳಿಕ ಈಗ ಓಟಿಟಿಯಲ್ಲಿ ದರ್ಬಾರ್ ಮಾಡುವುದಕ್ಕೆ ಸಜ್ಜಾಗಿದೆ.

Hondisi Bareyiri Movie Completes 50 days Streaming On Amazon prime video

ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಏಪ್ರಿಲ್ 3ರಿಂದ 'ಹೊಂದಿಸಿ ಬರೆಯಿರಿ' ಸ್ಟ್ರೀಮಿಂಗ್ ಆಗಲಿದೆ. ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹದೇವ್, ಅನಿರುದ್ದ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ, ಸಂಯುಕ್ತ ಹೊರ್ನಾಡ್, ಅರ್ಚನಾ ಜೋಯಿಸ್ ಅಂತಹ ಅದ್ಭುತ ಕಲಾವಿದರ ತಂಡವೇ ಈ ಸಿನಿಮಾದಲ್ಲಿದೆ.

ರಾಮೇನಹಳ್ಳಿ ಜಗನ್ನಾಥ್ ತಮ್ಮ ಸ್ನೇಹಿತರ ಜೊತೆಗೂಡಿ ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. ಸದ್ಯ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಓಟಿಟಿಯಲ್ಲಿ ಈ ಸಿನಿಮಾ ನೋಡಿ ವೀಕ್ಷಕರು ಏನಂತಾರೆ ಅನ್ನೋ ಕುತೂಹಲವಿದೆ.

More from Filmibeat

English summary
Hondisi Bareyiri Movie Completes 50 days Streaming On Amazon prime video, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X