ಆಗಸ್ಟ್ 21 ರಂದು ಬಿಡುಗಡೆ ಆಗುತ್ತಿದೆ ವಿಶ್ವಪ್ರಸಿದ್ಧ ವೆಬ್ ಸರಣಿಯ ಪ್ರೀಕ್ವೆಲ್
ವೆಬ್ ಸರಣಿ ದುನಿಯಾದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವುದು 'ಗೇಮ್ ಆಫ್ ಥ್ರೋನ್ಸ್'. 'ಮನಿ ಹೈಸ್ಟ್', 'ಬ್ರೇಕಿಂಗ್ ಬ್ಯಾಡ್' ಇನ್ನೂ ಕೆಲವು ಜಗತ್‌ವಿಖ್ಯಾತ ವೆಬ್ ಸರಣಿಗಳಿದ್ದಾವೆಯಾದರೂ 'ಗೇಮ್ ಆಫ್ ಥ್ರೋನ್ಸ್' ಎಲ್ಲವನ್ನೂ ಮೀರಿಸಿದ ವೆಬ್ ಸರಣಿ.
ಎಂಟು ಸೀಸನ್‌ಗಳಲ್ಲಿ ಪ್ರಸಾರವಾದ ಈ ವೆಬ್ ಸರಣಿಯನ್ನು ನೋಡದ ಸಿನಿಪ್ರೇಮಿಗಳ ಸಂಖ್ಯೆ ಕಡಿಮೆ. ಈ ವೆಬ್ ಸರಣಿಗಳ ಬಗ್ಗೆ ಸಿನಿಮಾ ತರಗತಿಗಳಲ್ಲಿ ಈಗಲೂ ಗಂಟೆ ಗಟ್ಟಲೆ ಚರ್ಚೆಗಳಾಗುತ್ತವೆ. ಎಂಟು ಸೀಸನ್ ಬಳಿಕ ಈ ವೆಬ್ ಸರಣಿ ನಿಂತು ಹೋದಾಗ ಅಭಿಮಾನಿಗಳು ತೀರ ನಿರಾಶೆ ಅನುಭವಿಸಿದ್ದರು.
ಆದರೆ ಬಳಿಕ ನಿರ್ಮಾಪಕರು, ಈ ಸರಣಿಯ ಪ್ರೀಕ್ವೆಲ್ ಅನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದರು. ಸತತ ಕಾಯುವಿಕೆ ಬಳಿಕ ಕೊನೆಗೂ 'ಗೇಮ್ ಆಫ್ ಥ್ರೋನ್ಸ್' ಪ್ರೀಕ್ವೆಲ್‌ನ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

'ಗೇಮ್ ಆಫ್ ಥ್ರೋನ್ಸ್' ಪ್ರೀಕ್ವೆಲ್‌ಗೆ 'ಹೌಸ್ ಆಫ್ ದಿ ಡ್ರ್ಯಾಗನ್' ಎಂದು ಹೆಸರಿಡಲಾಗಿದ್ದು, ಈ ವೆಬ್ ಸರಣಿಯು ಆಗಸ್ಟ್ 21 ರಂದು ಪ್ರಸಾರ ಪ್ರಾರಂಭವಾಗಲಿದೆ. 'ಗೇಮ್ ಆಫ್ ಥ್ರೋನ್ಸ್' ಪ್ರಸಾರವಾಗುತ್ತಿದ್ದ ಎಚ್‌ಬಿಓನ ಎಚ್‌ಬಿಒ ಮ್ಯಾಕ್ಸ್‌ನಲ್ಲಿ ಈ ವೆಬ್ ಸರಣಿ ಪ್ರಸಾರವಾಗಲಿದೆ.
'ಗೇಮ್ ಆಫ್ ಥ್ರೋನ್ಸ್' ಕತೆ ಪ್ರಾರಂಭವಾಗುವ 200 ವರ್ಷಗಳ ಮುಂಚಿನ ಕತೆಯನ್ನು 'ಹೌಸ್ ಆಫ್ ದಿ ಡ್ರ್ಯಾಗನ್' ವೆಬ್ ಸರಣಿ ಒಳಗೊಂಡಿರಲಿದೆ. 'ಗೇಮ್ ಆಫ್ ಥ್ರೋನ್ಸ್'ಗಿಂತಲೂ ಮುಂಚಿನ ಕತೆಯನ್ನು ಒಳಗೊಂಡಿರುವ ಕಾರಣ, ಇದು ಪ್ರೀಕ್ವೆಲ್. ಈ ವೆಬ್ ಸರಣಿಯು ಹೌಸ್ ಆಫ್ ಟಾರ್ಗೇರಿಯನ್ಸ್‌ಗಳ ಕತೆಯನ್ನು ಒಳಗೊಂಡಿರಲಿದೆ.
ಆರ್‌ಆರ್ ಮಾರ್ಟಿನ್ ವಿರಚಿತ 'ಎ ಸಾಂಗ್ ಆಫ್ ಫೈರ್ ಆಂಡ್ ಪ್ಲಡ್' ಆಧರಿಸಿ 'ಗೇಮ್ ಆಫ್ ಥ್ರೋನ್ಸ್' ಚಿತ್ರಕತೆ ರಚಿಸಿ, ಚಿತ್ರೀಕರಿಸಲಾಗಿತ್ತು. ಈಗ 'ಹೌಸ್ ಆಫ್ ದಿ ಡ್ರ್ಯಾಗನ್' ಅನ್ನು ಅದೇ ಆರ್‌ಆರ್ ಮಾರ್ಟಿನ್ ಅವರ 'ಫೈರ್ ಆಂಡ್ ವಾಟರ್' ಕಾದಂಬರಿ ಆಧಾರದಲ್ಲಿ ನಿರ್ಮಿಸಲಾಗಿದೆ.
ವೆಬ್ ಸರಣಿಯ ಮೊದಲ ಸೀಸನ್ ಅಷ್ಟೆ ಈಗ ನಿರ್ಮಾಣವಾಗಿದ್ದು, ಮೊದಲ ಸೀಸನ್‌ನಲ್ಲಿ ಹತ್ತು ಎಪಿಸೋಡ್‌ಗಳು ಇರಲಿವೆ. ವೆಬ್ ಸರಣಿಯಲ್ಲಿ ಪ್ಯಾಡಿ ಕನ್‌ಸಾಡೈನ್, ಮ್ಯಾಟ್ ಸ್ಮಿತ್, ಎಮ್ಮಾ ಡಿ'ಆರ್ಕಿ, ಮಿಲ್ಲಿ ಅಲೋಕ್, ಒಲಿವಿಯಾ ಕೋಕ್, ಎಮ್ಮಿ ಕಾರೆ ಇನ್ನೂ ಹಲವರು ನಟಿಸಿದ್ದಾರೆ. 'ಗೇಮ್ ಆಫ್ ಥ್ರೋನ್ಸ್' ನೋಡಿದ್ದ ಅಭಿಮಾನಿಗಳು ಈಗ ಅದರದ್ದೇ ಮುಂಚಿನ ಭಾಗವಾಗಿರುವ 'ಹೌಸ್ ಆಫ್ ದಿ ಡ್ರ್ಯಾಗನ್' ಬಿಡುಗಡೆಗೆ ಕಾತರರಾಗಿ ಕಾಯುತ್ತಿದ್ದಾರೆ.


Click it and Unblock the Notifications











