For Quick Alerts
  ALLOW NOTIFICATIONS  
  For Daily Alerts

  'ಹೌಸ್ ಆಫ್ ಡ್ರ್ಯಾಗನ್': ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಹೊರ ನಡೆದ ನಿರ್ದೇಶಕ

  |

  ವಿಶ್ವ ವಿಖ್ಯಾತ 'ಗೇಮ್ ಆಫ್ ಥ್ರೋನ್ಸ್' ಟಿವಿ ಸರಣಿಯ ಪ್ರೀಕ್ವೆಲ್ 'ಹೌಸ್ ಆಫ್ ಡ್ಯಾಗನ್ಸ್' ಇದೀಗ ಎರಡು ಎಪಿಸೋಡ್ ಪ್ರಸಾರವಾಗಿದ್ದು, ಎರಡೂ ಎಪಿಸೋಡ್‌ ಅನ್ನು ವಿಶ್ವದಾದ್ಯಂತ ಕೋಟ್ಯಂತರ ಜನ ವೀಕ್ಷಿಸಿದ್ದಾರೆ ಮತ್ತು ಮೆಚ್ಚಿಕೊಂಡಿದ್ದಾರೆ.

  ಆದರೆ 'ಹೌಸ್ ಆಫ್ ಡ್ರ್ಯಾಗನ್ಸ್'ನ ಮೊದಲ ಸೀಸನ್‌ನ ಎರಡು ಸೀಸನ್ ಪ್ರಸಾರವಾಗುತ್ತಿದ್ದಂತೆ, ಶೋನ ಸಹಾಯಕ ಶೋರನ್ನರ್ ಹಾಗೂ ನಿರ್ದೇಶಕ ಮಿಗೇಲ್ ಸಾಪೋಶ್ನಿಕ್ ಈ ಜಗತ್‌ ವಿಖ್ಯಾತ ಶೋನಿಂದ ಹೊರಗೆ ಬಂದಿದ್ದಾರೆ.

  'ಹೌಸ್ ಆಫ್ ಡ್ರ್ಯಾಗನ್ಸ್‌'ನ ಮುಖ್ಯ ಬರಹಗಾರ ಆರ್‌ಆರ್ ಮಾರ್ಟಿನ್ ಜೊತೆ ಸೇರಿ ಮಿಗೇಲ್ ಸಾಪೋಶ್ನಿಕ್ ಹಾಗೂ ರ್ಯಾನ್ ಕಾಂಡೆಲ್ ಅವರುಗಳು ಚಿತ್ರಕತೆ ಬರೆದಿದ್ದರು. ಮಿಗೇಲ್ ಸಾಪೋಶ್ನಿಕ್ ಹಾಗೂ ರ್ಯಾನ್ ಕಾಂಡೆಲ್ ಅವರುಗಳು ಒಟ್ಟಿಗೆ ಶೋರನ್ನರ್ ಕಾರ್ಯ ಹಾಗೂ ನಿರ್ದೇಶನ ಕಾರ್ಯ ಮಾಡುತ್ತಿದ್ದರು. ಆದರೆ ಇನ್ನು ಮುಂದೆ ರ್ಯಾನ್ ಕಾಂಡೆಲ್ ಮಾತ್ರವೇ ನಿರ್ದೇಶಕ ಹಾಗೂ ಶೋ ರನ್ನರ್ ಆಗಿರಲಿದ್ದಾರೆ. ಆದರೆ ಮಿಗೇಲ್ ಸಾಪೋಶ್ನಿಕ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಮುಂದುವರೆಯಲಿದ್ದಾರೆ.

  ಶೋನಿಂದ ಹೊರಗೆ ಬಂದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಮಿಗೇಲ್ ಸಾಪೋಶ್ನಿಕ್, ''ಕಳೆದ ಕೆಲವು ವರ್ಷಗಳಿಂದ 'ಗೇಮ್ ಆಫ್ ಥ್ರೋನ್ಸ್' ಯೂನಿವರ್ಸ್‌ನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ಬಹಳ ಗೌರವಾನ್ವಿತ ವಿಷಯ. ಅದರಲ್ಲೂ ವಿಶೇಷವಾಗಿ ಕಳೆದ ಎರಡು ವರ್ಷ 'ಹೌಸ್ ಆಫ್‌ ದಿ ಡ್ರ್ಯಾಗನ್ಸ್' ತಂಡದೊಂದಿಗೆ ನಾನು ಕಳೆದ ಸಮಯ ನನ್ನ ಜೀವನದ ಉತ್ತಮ ಸಮಯವಾಗಿತ್ತು. ಈ ಸೀಸನ್‌ನಲ್ಲಿ ನಾವು ಮಾಡಿರುವ ಸಾಧನೆ ಮತ್ತು ಜನರು ಅದನ್ನು ಮೆಚ್ಚುತ್ತಿರುವ ರೀತಿ ಕಂಡು ಬಹಳ ಖುಷಿಯಾಗಿದೆ'' ಎಂದಿದ್ದಾರೆ.

  ''ಆದರೆ, ಈ ತಂಡದಿಂದ ಹೊರಗೆ ಬರುವುದು ನನ್ನ ಪಾಲಿನ ಅತ್ಯಂತ ಕಠಿಣ ನಿರ್ಧಾರ ಆಗಿತ್ತು. ವೈಯಕ್ತಿಕವಾಗಿ ಹಾಗೂ ವೃತ್ತಿ ಬದುಕಿನ ಅತ್ಯಂತ ಕ್ಲಿಷ್ಟಕರ ನಿರ್ಧಾರ ಇದು. ಆದರೆ ಇದು ನನ್ನ ಪಾಲಿಗೆ ಸರಿಯಾದ ನಿರ್ಧಾರವೇ ಆಗಿದೆ. ಈಗ ನನ್ನ ಬದಲಿಗೆ ಅಲೆನ್ ಈ ಶೋ ಅನ್ನು ಸೇರಿಕೊಳ್ಳುತ್ತಿದ್ದಾರೆ ಎನ್ನುವುದು ನನಗೆ ಸಂತಸ ತಂದಿದೆ. ಅಲೆನ್, ನಾನು ಬಹಳ ಸಮಯದಿಂದ ಗೌರವಿಸುವ ಬರಹಗಾರ ಮತ್ತು ಸೃಜನಾತ್ಮಕ ಚಿಂತನೆಗಾರ. 'ಹೌಸ್ ಆಫ್ ದಿ ಡ್ರ್ಯಾಗನ್' ಶೋ ಸುರಕ್ಷಿತ ಕೈಗಳಲ್ಲಿದೆ ಎಂದು ನಾನು ನಂಬುವಂತಾಗಿದೆ. ರ್ಯಾನ್ ಮತ್ತು ಇತರ ಎಲ್ಲರಿಗೂ ನಾನು ಶುಭ ಕೋರುತ್ತೇನೆ. ಸೀಸನ್ 2 ಮತ್ತು ಅದಕ್ಕೆ ಮುಂದಿನ ಎಲ್ಲ ಸೀಸನ್‌ಗೂ ಶುಭವಾಗಲಿ'' ಎಂದಿದ್ದಾರೆ.

  ಮಿಗೆಲ್ ಸಾಪೋಶ್ನಿಕ್ ನಿರ್ದೇಶನದ 'ಹೌಸ್ ಆಫ್ ಡ್ರ್ಯಾಗನ್'ನ ಎರಡು ಎಪಿಸೋಡ್‌ಗಳು ಈ ವರೆಗೆ ಪ್ರಸಾರವಾಗಿದ್ದು, ವೀಕ್ಷಣೆ ಲೆಕ್ಕಾಚಾರದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಶೋ ಹೀಗಿರುವಾಗ ನಿರ್ದೇಶಕ ಮಿಗೆಲ್ ಶೋ ನಿಂದ ಹೊರಗೆ ಬಂದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

  English summary
  House of the Dragon web series director Miguel Sapochnik steps down from the show. This shows viewership hit new record in viewership.
  Friday, September 2, 2022, 9:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X