twitter
    For Quick Alerts
    ALLOW NOTIFICATIONS  
    For Daily Alerts

    'ರಾಧೆ' ಮೇಲೆ ಭಾರಿ ಬಂಡವಾಳ ಹೂಡಿದ್ದ ಜೀ ಗಳಿಸಿದ್ದೆಷ್ಟು?

    |

    ಸಲ್ಮಾನ್ ಖಾನ್ ನಟಿಸಿರುವ 'ರಾಧೆ' ಸಿನಿಮಾವು ಮೇ 13 ರಂದು ಜೀ5 ಒಟಿಟಿಯಲ್ಲಿ 'ಪೇ ಪರ್ ವ್ಯೂವ್' ಮಾದರಿಯಲ್ಲಿ ಬಿಡುಗಡೆ ಆಯಿತು. ಜೊತೆಗೆ ಚಿತ್ರಮಂದಿರಗಳು ತೆರೆದಿರುವ ರಾಜ್ಯಗಳಲ್ಲಿ ಹಾಗೂ ಹೊರ ದೇಶಗಳಲ್ಲಿಯೂ ಬಿಡುಗಡೆ ಆಗಿತ್ತು.

    ಜೀ ಸಮೂಹವು 'ರಾಧೆ' ಸಿನಿಮಾದ ಮೇಲೆ ಭಾರಿ ದೊಡ್ಡ ಬಂಡವಾಳವನ್ನೇ ಹೂಡಿದೆ. 230 ಕೋಟಿ ರೂಪಾಯಿಗೆ 'ರಾಧೆ' ಸಿನಿಮಾದ ಹಕ್ಕುಗಳನ್ನು ಜೀ ಸಮೂಹ ಖರೀದಿಸಿದೆ. ಈವರೆಗೆ ಭಾರತದ ಸಿನಿಮಾವೊಂದಕ್ಕೆ ಒಟಿಟಿಯಿಂದ ನೀಡಲಾದ ಅತಿ ದೊಡ್ಡ ಮೊತ್ತ ಎಂಬ ದಾಖಲೆಗೂ 'ರಾಧೆ' ಹೆಸರಿಗೆ ಸೇರಿಕೊಂಡಿದೆ.

    ಆದರೆ 'ರಾಧೆ' ಸಿನಿಮಾದ ಬಗ್ಗೆ ಬಹಳ ಕೆಟ್ಟ ವಿಮರ್ಶೆಗಳು ಹೊರಬಿದ್ದಿವೆ. ಸಿನಿಮಾ ಬಹಳ ಕೆಟ್ಟದಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಹಾಗಿದ್ದರೆ ಜೀ ಹಾಕಿದ ಭಾರಿ ಬಂಡವಾಳ ವಾಪಸ್ಸಾಯಿತೆ. ಸಿನಿಮಾದಿಂದ ನಷ್ಟವಾಯಿತೆ ಅಥವಾ ಲಾಭ ಗಳಿಸಿತೆ?

    'ರಾಧೆ' ಸಿನಿಮಾವನ್ನು 'ಪೇ ಪರ್ ವ್ಯೂವ್' ಮಾದರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಅಂದರೆ ಜೀ 5, ಟಾಟಾ ಸ್ಕೈ ಹಾಗೂ ಇತರೆ ಮಾಧ್ಯಮಗಳ ಮೂಲಕ 250 ರು. ನೀಡಿ 'ರಾಧೆ' ಸಿನಿಮಾವನ್ನು ನೋಡುವ ಅವಕಾಶ ನೀಡಲಾಗಿತ್ತು. ಜೀ5 ನ ವಾರ್ಷಿಕ ಚಂದಾದಾರರಾದರೆ ಮಾತ್ರ ಸಿನಿಮಾಕ್ಕೆ ಹೆಚ್ಚಿನ ಹಣ ಕೊಡಬೇಕಿರಲಿಲ್ಲ. 250 ನೀಡಿದರೆ ಕುಟುಂಬವೆಲ್ಲ ಒಟ್ಟಿಗೆ ಕೂತು ಸಿನಿಮಾ ನೋಡಬಹುದಾಗಿತ್ತು.

    ಒಂದೇ ದಿನದಲ್ಲಿ 105 ಕೋಟಿ ಗಳಿಸಿದ್ದ ಸಿನಿಮಾ

    ಒಂದೇ ದಿನದಲ್ಲಿ 105 ಕೋಟಿ ಗಳಿಸಿದ್ದ ಸಿನಿಮಾ

    ಜೀ5 ನಲ್ಲಿ 'ರಾಧೆ' ಸಿನಿಮಾವು ಮೇ 13 ರಂದು ಬಿಡುಗಡೆ ಆಯಿತು. ಆ ಒಂದೇ ದಿನ ಜೀ ಒಟಿಟಿ ಒಂದರಲ್ಲೇ ಸುಮಾರು 42 ಲಕ್ಷ ಸಿನಿಮಾ ನೋಡಿದ್ದಾರೆ. ಅಲ್ಲಿಗೆ ರಾಧೆ ಸಿನಿಮಾವು ಒಂದು ದಿನದಲ್ಲಿ ಒಟಿಟಿ ಮೂಲಕ ಗಳಿಸಿರುವ ಮೊತ್ತ ಬರೋಬ್ಬರಿ 105 ಕೋಟಿ ರು. 'ರಾಧೆ' ಸಿನಿಮಾವನ್ನು ಉಚಿತವಾಗಿ ನೋಡುವ ನೆಪದಲ್ಲಿ ಜೀ5 ನ ವಾರ್ಷಿದ ಚಂದಾದಾರಾರಾದವರ ಸಂಖ್ಯೆ ಇದರಲ್ಲಿ ಸೇರಿಲ್ಲ.

    ಮೂರು ದಿನದಲ್ಲಿ 200 ಕೋಟಿ ಗಳಿಸಿದ ಜೀ

    ಮೂರು ದಿನದಲ್ಲಿ 200 ಕೋಟಿ ಗಳಿಸಿದ ಜೀ

    ಎರಡನೇ ದಿನ ಒಟಿಟಿಯಲ್ಲಿ 20 ಲಕ್ಷ ಜನ ಹಾಗೂ ಮೂರನೇಯ ದಿನ ಮತ್ತೆ ಸುಮಾರು 20 ಲಕ್ಷ ಜನ 'ರಾಧೆ' ಸಿನಿಮಾವನ್ನು ಹಣ ನೀಡಿ ನೋಡಿದ್ದಾರೆ. ಅಲ್ಲಿಗೆ ಕೇವಲ ಮೂರು ದಿನಕ್ಕೆ ಸಲ್ಮಾನ್ ಸಿನಿಮಾ ಜೀಗೆ 210 ಕೋಟಿ ಹಣ ತಂದುಕೊಟ್ಟಿದೆ.

    ಭಾರಿ ಲಾಭವನ್ನೇ ಗಳಿಸಲಿದೆ ಜೀ ಸಮೂಹ

    ಭಾರಿ ಲಾಭವನ್ನೇ ಗಳಿಸಲಿದೆ ಜೀ ಸಮೂಹ

    'ರಾಧೆ' ಸಿನಿಮಾ ಮೇಲೆ ಜೀ ಸಮೂಹ ಹೂಡಿದ್ದ ಬಂಡವಾಳ ಕೇವಲ ಒಟಿಟಿ ಒಂದರಿಂದಲೇ ವಾಪಸ್‌ ಬಂದಿದೆ. 'ರಾಧೆ' ಸಿನಿಮಾದ ಸ್ಯಾಟಲೈಟ್ ಹಕ್ಕು ಸಹ ಜೀ ಬಳಿಯೇ ಇದ್ದು ಅದರಿಂದ ನೂರಾರು ಕೋಟಿ ರು ಲಾಭವನ್ನು ಪಡೆಯಲಿದೆ ಜೀ. ಅಲ್ಲಿಗೆ 'ರಾಧೆ' ದೊಡ್ಡ ಲಾಭವನ್ನೇ ಜೀಗೆ ತಂದು ಕೊಡುತ್ತಿದೆ.

    ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ 'ರಾಧೆ'

    ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ 'ರಾಧೆ'

    'ರಾಧೆ' ಸಿನಿಮಾವು ವಿದೇಶಗಳಲ್ಲಿ ಈವರೆಗೆ 14 ಕೋಟಿ ಸಂಗ್ರಹ ಮಾಡಿದೆ ಎನ್ನಲಾಗುತ್ತಿದೆ. 'ರಾಧೆ' ಸಿನಿಮಾದ ಚಿತ್ರಮಂದಿರಗಳಲ್ಲಿ ಬಿಡುಗಡೆ ಹಕ್ಕು ಸಲ್ಮಾನ್ ಖಾನ್ ರ ನಿರ್ಮಾಣ ಸಂಸ್ಥೆಯ ಬಳಿಯೇ ಇದೆ ಎನ್ನಲಾಗುತ್ತಿದೆ. ಲಾಕ್‌ಡೌನ್ ಅಂತ್ಯವಾಗಿ ಚಿತ್ರಮಂದಿರಗಳು ತೆರೆದಾಗ 'ರಾಧೆ' ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

    Recommended Video

    Kirik Party ಅನುಭವವನ್ನು‌ ಮತ್ತೆ ಫೀಲ್‌ ಮಾಡೋಕೆ ಇಷ್ಟ ಇಲ್ಲ | Filmibeat Kannada
    ಸಲ್ಮಾನ್ ನಟಿಸಿರುವ ಎರಡನೇ ಕಳಪೆ ಸಿನಿಮಾ 'ರಾಧೆ'

    ಸಲ್ಮಾನ್ ನಟಿಸಿರುವ ಎರಡನೇ ಕಳಪೆ ಸಿನಿಮಾ 'ರಾಧೆ'

    'ರಾಧೆ' ಸಿನಿಮಾವನ್ನು ಪ್ರಭುದೇವಾ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ದಿಶಾ ಪಟಾನಿ ನಟಿಸಿದ್ದಾರೆ. ವಿಲನ್ ಆಗಿ ರಣದೀಪ್ ಹೂಡಾ ನಟಿಸಿದ್ದಾರೆ. ಸಿನಿಮಾ ಚೆನ್ನಾಗಿಲ್ಲ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ. ಐಎಂಡಿಬಿ ಪ್ರಕಾರ 'ರಾಧೆ' ಸಲ್ಮಾನ್‌ರ ಈವರೆಗಿನ ಎರಡನೇ ಅತ್ಯಂತ ಕಳಪೆ ಸಿನಿಮಾ ಆಗಿದೆ.

    English summary
    Salman Khan's Radhe movie released as pay per view model through Zee which has the digital and satellite rights of the movie.
    Tuesday, May 18, 2021, 9:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X