twitter
    For Quick Alerts
    ALLOW NOTIFICATIONS  
    For Daily Alerts

    ಒಟಿಟಿ ಎಂಬ ಕಾರ್ಪೋರೇಟ್ ದೈತ್ಯರ ಷಡ್ಯಂತ್ರ: ಭಾಗ-3

    By ಅನಾಮಿಕ
    |

    ಸಿನಿಮಾ ಪೈರಸಿಯಾಗಿ ಜನರಿಗೆ ಪುಗ್ಸಟ್ಟೆ ಸಿಕ್ಕಾಗ ಈ ಪ್ರಕಾರದ ವ್ಯವಹಾರದಿಂದ ಬರುವ ಚಿಲ್ಲರೆ ಕಾಸೂ ಸಹ ನಿರ್ಮಾಪಕರಿಗೆ ಬರುವುದಿಲ್ಲ. ಓಟಿಟಿಯಲ್ಲಿ ಬಿಡುಗಡೆ ಆಗುವ ಸಿನೆಮಾದ ಪ್ರಚಾರದ ವೆಚ್ಚವನ್ನು ನಿರ್ಮಾಪಕರೇ ಭರಿಸಬೇಕು, ತಾವು ಪ್ರಚಾರಕ್ಕೆ ಖರ್ಚು ಮಾಡಿರುವ ದಾಖಲೆಗಳನ್ನು ತೋರಿಸಬೇಕು, ಹಾಗದಿದ್ದರೆ ಓಟಿಟಿಯವರಿಂದ ಬರುವ ಮೊತ್ತ ಇನ್ನೂ ಕಡಿಮೆ ಆಗುತ್ತದೆ. ಪೈರಸಿ ಮೂಲಗಳಿಂದ ಸಿನೆಮಾ ಅಳಿಸಿಹಾಕಲು ನಿರ್ಮಾಪಕರೇ ಖರ್ಚು ಮಾಡಬೇಕು. ಪೈರಸಿ ತಡೆಯು ಪ್ರಯತ್ನ ಓಟಿಟಿ ಅವರಿಂದ ಆಗುವುದಿಲ್ಲ, ಅವರು ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಜನರನ್ನು ಸಂಪೂರ್ಣವಾಗಿ ಮೊಬೈಲ್ ಫೋನಿಗೆ ಅಂಟಿಸುವ ತನಕ ಅವರು ಆ ಬಗ್ಗೆ ಯೋಚಿಸುವುದಿಲ್ಲ. ಅತಿ ಸಾಮಾನ್ಯ ಜನ ಕೂಡ ಮನರಂಜನೆಗೆ ಸಂಪೂರ್ಣವಾಗಿ ಮೊಬೈಲ್ ಮೇಲೆ ಅವಲಂಬಿತರಾದಾಗ, ಸಿನಿಮಾ ನೋಡಲು ಬೇರೆ ಆಯ್ಕೆಗಳಿಲ್ಲ ಎಂಬ ಸ್ಥಿತಿ ನಿರ್ಮಾಣವಾದಾಗ ಓಟಿಟಿಯವರು ಪೈರಸಿಯನ್ನು ತಡೆಗಟ್ಟುವತ್ತ ಯೋಚಿಸುತ್ತಾರೆ ಮತ್ತು ತಮ್ಮ ಚಂದಾದಾರರ ಮಾಸಿಕ ಮತ್ತು ವಾರ್ಷಿಕ ಶುಲ್ಕ ಹೆಚ್ಚು ಮಾಡುತ್ತಾರೆ. ಧೀರ್ಘಾವದಿಯಲ್ಲಿ ಏಕಸ್ವಾಮ್ಯ ಮತ್ತು ಪೂರ್ಣಾಧಿಕಾರದ ವ್ಯಾಪಾರಕ್ಕೆ ಇಂದಿನ ಬಂಡವಾಳ ಹೂಡಿಕೆ ಅದು.

    ಅರವತ್ತರ ದಶಕದಿಂದ ಎಂಬತ್ತರ ದಶಕದ ಅಂತ್ಯದವರಗೆ ನಿರ್ಮಾಪಕರು ತಮಗೆ ಸಿಕ್ಕಷ್ಟು ಅಲ್ಪಮೊತ್ತಕ್ಕೆ ಸಿನೆಮಾ ಹಾಡುಗಳನ್ನು ಆಡಿಯೋ ಕಂಪನಿಗಳಿಗೆ ಮತ್ತು ಸಿನೆಮಾ ಹಕ್ಕನ್ನು ಟಿವಿ ಚಾನೆಲ್ಲುಗಳಿಗೆ ಮಾರಾಟ ಮಾಡಿಕೊಂಡರು. ಅದರಿಂದೇನು ಲಾಭ ಎಂದು ಯಾರಿಗೂ ಸುಳಿವಿರಲಿಲ್ಲ. ಅದೊಂದು ರೀತಿಯಲ್ಲಿ ಹಾಲು ಕೊಡುವ ಹಸುವನ್ನು ಮಾರಿಕೊಂಡಂತೆ, ಅದನ್ನು ಕಟ್ಟಿಕೊಂಡು ಬೇರೆ ಯಾರೋ ನೂರಾರು ವರ್ಷಗಳ ಕಾಲ ಹಾಲು ಕರೆದುಕೊಳ್ತಿರ್ತಾರೆ. ಹಾಗಿದ್ದರೂ ಅದು ನಮ್ಮ ದೇಶದೊಳಗೆ ನಡೆಯುವ ಆರ್ಥಿಕ ಚಟುವಟಿಕೆ. ಮನರಂಜನಾ ಕ್ಷೇತ್ರ ದೇಶದ ಆರ್ಥಿಕತೆಗೆ ಒಂದು ಮಟ್ಟದಲ್ಲಿ ಕೊಡುಗೆ ನೀಡುತ್ತಿದೆ.

    How OTT Negetively Affecting Reginol Movie Industry-Part-3

    ಓಟಿಟಿಯವರ ಕೈಗೆ ಮನರಂಜನ ಕ್ಷೇತ್ರ ಸಂಪೂರ್ಣವಾಗಿ ದಕ್ಕಿಬಿಟ್ಟರೆ ಮನರಂಜನಾ ಕ್ಷೇತ್ರದ ಅರ್ಧ ಹಣ ದೇಶದಿಂದಾಚೆಗೆ ಹೋಗುತ್ತದೆ. ಸ್ವಂತಂತ್ರ ಮತ್ತು ಸಂಗ್ರಹ ಕಲೆಯಾದ ಸಿನಿಮಾ ಹಾಗೂ ದೃಶ್ಯಮಾಧ್ಯಮದ ಮೇಲೆ ವಿದೇಶಿ ಕಾರ್ಪೋರೇಟ್ ಸಂಪೂರ್ಣ ಹಿಡಿತ ಸಾಧಿಸುತ್ತದೆ. ಅವರಿಗೊಪ್ಪುವ ಕಥಾವಸ್ತುಗಳೇ ಸಿನಿಮಾ ಮತ್ತು ವೆಬ್-ಸೀರೀಸ್ ಆಗುತ್ತವೆ. ಅದು ಪ್ರಾದೇಶಿಕತೆ ಮತ್ತು ಸೃಷ್ಟಿಶೀಲತೆಗೆ ಉರುಳಾಗುತ್ತದೆ. ಸೃಷ್ಟಿಶೀಲತೆಗೆ ಓಟಿಟಿ ಅವಕಾಶಗಳ ಬಾಗಿಲನ್ನು ತೆರೆಯುತ್ತದೆ ಎಂಬುದು ಮೂಢನಂಬಿಕೆ, ನಿಜವಾಗಿ ಅದು ಸೃಷ್ಟಿಶೀಲತೆಗೆ ಮತ್ತು ಸ್ವಾತಂತ್ರಕ್ಕೆ ಬಾಗಿಲು ಮುಚ್ಚುತ್ತದೆ. ಬಾಗಿಲು ಮುಚ್ಚಿ, ಸ್ವೇಚ್ಛೆಗೆ ವೇದಿಕೆಯಾಗಿ ವಿದೇಶಿ ಕಾರ್ಪೋರೇಟ್ ಏಕಸ್ವಾಮ್ಯತೆಯಲ್ಲಿ ಆಳುತ್ತದೆ. ಮತ್ತೊಂದು ಪರ್ಯಾಯ ಶಕ್ತಿ ಬರುವತನಕ.

    Recommended Video

    ಪ್ಯಾನ್ ಇಂಡಿಯಾ ಸಿನಿಮಾ.. ಕಲೆಗೆ ಗಡಿ ಇಲ್ಲ ಎಂದು ಜಗ್ಗೇಶ್ ಗೆ ಟಾಂಗ್ ಕೊಟ್ರ ಉಪೇಂದ್ರ..? | Filmibeat Kannada

    (ಇದು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಯುವ ತಂತ್ರಜ್ಞರೊಬ್ಬರ ವೈಯಕ್ತಿಕ ಅಭಿಪ್ರಾಯಗಳು. ಇಲ್ಲಿ ಮಂಡಿಸಿರುವ ವಿಚಾರ- ವಾದಗಳಿಗೂ ಫಿಲ್ಮಿಬೀಟ್‌ ಕನ್ನಡದ ಸಂಪಾದಕೀಯ ನಿಲುವುಗಳಿಗೂ ಸಂಬಂಧ ಇಲ್ಲ)

    English summary
    Here is a analysis about how OTT platforms affecting regional movie industries. Part 03.
    Friday, December 4, 2020, 19:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X