twitter
    For Quick Alerts
    ALLOW NOTIFICATIONS  
    For Daily Alerts

    ಓ.ಟಿ.ಟಿ. ಎಂಬ ಕಾರ್ಪೋರೇಟ್ ದೈತ್ಯರ ಷಡ್ಯಂತ್ರ!

    By ಅನಾಮಿಕ
    |

    ನಿಮಗೆ ನೆನಪಿರಬಹುದು, ಕನ್ನಡ ಕಿರುತೆರೆ ಲೋಕದಲ್ಲಿ ಮೂಡಿಬರುತ್ತಿದ್ದ ಧಾರಾವಾಹಿಗಳು ಬೇರೆ ಭಾಷೆಯ ಧಾರಾವಾಹಿಗಳಿಗಿಂತ ಬಿನ್ನವಾಗಿರುತ್ತಿದ್ದವು. ಸಾಧನೆ, ಮಾಯಾಮೃಗ, ಗೃಹಭಂಗ, ಮುಕ್ತ, ಮನ್ವಂತರ, ಮನೆತನ, ದಂಡಪಿಂಡಗಳು, ಇತ್ಯಾದಿ. ಇಂದಿನ ಧಾರಾವಾಹಿಗಳೇಕೆ ಬಹುತೇಕ ಎಲ್ಲಾ ಒಂದೇ ರೀತಿಯಲ್ಲಿವೆ ಮತ್ತು ಏಕೆ ಉತ್ತರಭಾರತದ ಕಿರುತೆರೆ ಮಾಧ್ಯಮಗಳಲ್ಲಿ ಮೂಡಿಬರುವ ಧಾರವಾಹಿಗಳ ನಕಲಾಗಿವೆ? ನಮ್ಮ ಮಣ್ಣಿನ ಗಂಧ ಇರುವ ಧಾರವಾಹಿಗಳು ಏಕೆ ಮರೆಯಾದವು? ಇದು ಏಕಾಏಕಿ ಆಗಿದ್ದಲ್ಲ.

    ಕಿರುತೆರೆ ಮಾಧ್ಯಮದಲ್ಲಿ ನಮ್ಮತನವಿದ್ದ ಮಾಧ್ಯಮ ಮುಖ್ಯಸ್ಥರನ್ನು ತೆಗೆದುಹಾಕಿ, ಅಲ್ಲಿನ ಸಂಸ್ಕೃತಿ ಮತ್ತು ಕಥೆಗಳನ್ನು ಇಲ್ಲಿಗೆ ತರುವುದಕ್ಕೆ ಒಪ್ಪುವಂತಹವರನ್ನು ಮಾಧ್ಯಮಗಳ ಮುಖ್ಯಸ್ಥರನ್ನಾಗಿ ಮಾಡಿ, ನಿಧಾನಕ್ಕೆ ಕನ್ನಡತನ ಮತ್ತು ಪ್ರಾದೇಶಿಕತೆಯನ್ನು ಅಳಿಸುತ್ತಾ ಬಂದರು. ಇಂದು ಕನ್ನಡತನ ಮತ್ತು ಪ್ರಾದೇಶಿಕತೆ ಕಿರುತೆರೆ ಮಾಧ್ಯಮದಲ್ಲಿ ಬಹುತೇಕ ಕಾಣೆಯಾಗಿದೆ. ಇದು ಒಳಗಿನ ನುಂಗುವಿಕೆ. ಹೊರಗಿನ ನುಂಗುವಿಕೆ ಇನ್ನೂ ಘೋರ.

    ಎಲ್ಲಾ ಕ್ಷೇತ್ರಗಳಲ್ಲಿ ಹೇಗೆ ಇಂತಹದೊಂದು ಸ್ವಂತಿಕೆ ಕಳೆದು ಏಕಸ್ವಾಮ್ಯ ಸ್ಥಾಪನೆಯಾಗುತ್ತ ಬರುತ್ತಿದೆಯೋ, ಆ ಪಟ್ಟಿಗೆ ಹೊಸ ಸೇರ್ಪಡೆ ಮನರಂಜನಾ ಕ್ಷೇತ್ರ.

    How OTT Negetivley Affecting Regional Movie Industries

    ಕಳೆದ ಎಂಟು ತಿಂಗಳುಗಳಲ್ಲಿ ಅಮೇಜಾನ್ ಪ್ರೈಮ್, ನೆಟ್-ಫ್ಲಿಕ್ಸ್, ಹಾಟ್ ಸ್ಟಾರ್ ಥರದ ಅತಿದೊಡ್ಡ ವಿದೇಶಿ ಓ.ಟಿ.ಟಿ ಮಾಧ್ಯಮಗಳಲ್ಲಿ ನೇರವಾಗಿ ಬಂದಿರುವ ಭಾರತೀಯ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸುವುದು ದೊಡ್ಡ ಸ್ಟಾರ್ ನಟರ ಅಥವ ದೊಡ್ಡ ಪ್ರೊಡಕ್ಷನ್ ಹೌಸ್ ಸಿನಿಮಗಳು ಮಾತ್ರ. ಅವೆರಡೂ ಅಲ್ಲದಿದ್ದು ಓ.ಟಿ.ಟಿ.ಯಲ್ಲಿ ಸಿನಿಮಾ ಬಂದಿದ್ದರೆ ಅದು ಥಿಯೇಟರುಗಳಲ್ಲಿ ಬಿಡುಗಡೆಯಾಗಿ ದೊಡ್ಡ ಹೆಸರು ಮಾಡಿದ್ದು ಮಾತ್ರ.

    ಎಂಟು ತಿಂಗಳಲ್ಲಿ ಡೈರೆಕ್ಟ್ ಓಟಿಟಿ ಬಿಡುಗಡೆ ಕಂಡ ಬಹುತೇಕ ಭಾರತೀಯ ಸಿನಿಮಾಗಳು ಪೇಕ್ಷಕರಿಗೆ ಸಮಾಧಾನ ನೀಡಿಲ್ಲ. ನೆಟ್-ಫ್ಲಿಕ್ಸ್ ನಂತಹ ದೈತ್ಯ ಕಂಪನಿ ನಿರ್ಮಿಸಿದ ಬಹುತೇಕ ಒರಿಜಿನಲ್ ಸಿನಿಮಾಗಳೂ ಸಹ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ವಿಫಲವಾಗಿವೆ. ಅದಕ್ಕೆ ಕಾರಣ ಓಟಿಟಿಯವರ? ಮುಖ ನೋಡಿ ಮಣೆ ಹಾಕುವ ಸಂಪ್ರದಾಯನಾ? ಅವರು ಸಿನಿಮಾಗಳನ್ನು ಕೊಂಡುಕೊಳ್ಳುವುದು ಫೇಸ್-ವ್ಯಾಲ್ಯೂ ನೋಡಿ, ಸಿನಿಮಾದ ಕ್ವಾಲಿಟಿ ನೋಡಿ ಅಲ್ಲ..!

    Recommended Video

    French Biriyani Movie Review | Danish Sait | PuneethRajkumar | Filmibeat Kannada

    ಓಟಿಟಿ ಸಿನಿಮಾ ವ್ಯವಹಾರಕ್ಕೆಂದೇ ನೇಮಿಸಲ್ಪಟ್ಟ ಸ್ಥಳೀಯ ಸಂಸ್ಥೆಗಳು ಅಥವ ಮಾರ್ಕೆಟಿಂಗ್ ಹೆಡ್ ಗಳು ಬ್ರಾಂಡ್ ನೋಡಿ ಸಿನೆಮಾಗಳನ್ನು ಕೊಂಡುಕೊಳ್ಳುತ್ತಾರೆ. ಸಿನೆಮಾ ಗುಣಮಟ್ಟ ನೋಡಿ ಕೊಂಡುಕೊಳ್ಳುವುದಿಲ್ಲ. ಉಳಿದಂತೆ ಹೊರಗುತ್ತಿಗೆ ಪಡೆದ ಏಜೆನ್ಸಿಗಳು ಅಥವ ಮಧ್ಯವರ್ತಿಗಳು ತಮಗೆ ಸಿಗುವ ಕಮಿಷನ್ ಮೊತ್ತದ ಆಧಾರದ ಮೇಲೆ ಸಿನಿಮಾಗಳನ್ನು ಕೊಂಡುಕೊಳ್ಳುತ್ತಾರೆ. (ಮುಂದುವರೆಯುವುದು...)

    (ಇದು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಯುವ ತಂತ್ರಜ್ಞರೊಬ್ಬರ ವೈಯಕ್ತಿಕ ಅಭಿಪ್ರಾಯಗಳು. ಇಲ್ಲಿ ಮಂಡಿಸಿರುವ ವಿಚಾರ- ವಾದಗಳಿಗೂ ಫಿಲ್ಮಿಬೀಟ್‌ ಕನ್ನಡದ ಸಂಪಾದಕೀಯ ನಿಲುವುಗಳಿಗೂ ಸಂಬಂಧ ಇಲ್ಲ)

    English summary
    Here is a analysis about how OTT platforms affecting regional movie industries.
    Thursday, December 3, 2020, 9:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X