For Quick Alerts
  ALLOW NOTIFICATIONS  
  For Daily Alerts

  'ಯಶೋದ' ಓಟಿಟಿ ರಿಲೀಸ್‌ಗೆ ತಡೆ: ಸಿಟಿ ಸಿವಿಲ್ ಕೋರ್ಟ್ ಆದೇಶ

  |

  ಸಮಂತಾ ನಟನೆಯ ಆಕ್ಷನ್ ಥ್ರಿಲ್ಲರ್ 'ಯಶೋದ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಮುಂದಿನ ತಿಂಗಳು ಓಟಿಟಿಗೆ ಸಿನಿಮಾ ಎಂಟ್ರಿ ಕೊಡುತ್ತಿದೆ. ಆದರೆ ಸಿನಿಮಾ ಓಟಿಟಿ ರಿಲೀಸ್‌ಗೆ ತಡೆ ಒಡ್ಡಿ ಹೈದರಾಬಾದ್ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.

  ನವೆಂಬರ್ 11ಕ್ಕೆ ರಿಲೀಸ್ ಆಗಿದ್ದ 'ಯಶೋದ' ಸಿನಿಮಾ ಸದ್ಯ 30 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿತ್ರ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿದೆ. ಚಿತ್ರದಲ್ಲಿ ಸ್ಯಾಮ್ ಬಾಡಿಗೆ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ನೋವಿನ ನಡುವೆಯೂ ಡಬ್ಬಿಂಗ್ ಮಾಡಿದ್ದರು. ಸಿನಿಮಾ ಪ್ರಮೋಷನ್‌ನಲ್ಲಿ ಭಾಗಿ ಆಗಿದ್ದರು. ಈ ಮಹಿಳಾ ಪ್ರಧಾನ ಚಿತ್ರದಲ್ಲಿ ಆಕೆಯ ಪರ್ಫಾರ್ಮೆನ್ಸ್‌ಗೆ ಮೆಚ್ಚುಗೆ ವ್ಯಕ್ತವಾಗಿತ್ತು.

  ಸಮಂತಾ ಅಭಿನಯದ 'ಯಶೋದಾ' ಮೊದಲ ವಾರದ ಕಲೆಕ್ಷನ್ ಎಷ್ಟು? ಲಾಭ ಪಡೆಯಲು ಇನ್ನೆಷ್ಟು ಗಳಿಸಬೇಕು?ಸಮಂತಾ ಅಭಿನಯದ 'ಯಶೋದಾ' ಮೊದಲ ವಾರದ ಕಲೆಕ್ಷನ್ ಎಷ್ಟು? ಲಾಭ ಪಡೆಯಲು ಇನ್ನೆಷ್ಟು ಗಳಿಸಬೇಕು?

  ಹರಿ- ಹರೀಶ್ ಜೋಡಿ ನಿರ್ದೇಶನದ 'ಯಶೋದ' ಚಿತ್ರದಲ್ಲಿ ಉನ್ನಿ ಮುಕುಂದನ್, ವರಲಕ್ಷ್ಮಿ ಶರತ್‌ಕುಮಾರ್, ರಾವು ರಮೇಶ್, ಮುರಳಿ ಶರ್ಮಾ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಸುಕುಮಾರ್ ಸಿನಿಮಾಟೋಗ್ರಫಿ, ಮಣಿಶರ್ಮ ಸಂಗೀತ ಚಿತ್ರಕ್ಕಿದೆ. ಸದ್ಯ ಥಿಯೇಟರ್‌ನಲ್ಲಿ ಸಿನಿಮಾ ನೋಡಿದವರು ಓಟಿಟಿಯಲ್ಲಿ ಮತ್ತೆ ನೋಡಲು ಕಾಯುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಸಿನಿಮಾ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಬೇಕಿದೆ.

  ಇತ್ತೀಚೆಗೆ ಯಾವುದೇ ಸಿನಿಮಾ ರಿಲೀಸ್ ಆದರೂ 48 ದಿನಗಳ ನಂತರ ಓಟಿಟಿಗೆ ಬರುತ್ತದೆ. ಆ ರೀತಿ ಮೊದಲೇ ಒಪ್ಪಂದ ಆಗಿರುತ್ತದೆ. ನಿಧಾನವಾಗಿ ಥಿಯೇಟರ್‌ಗಳಲ್ಲಿ 'ಯಶೋದ' ಹವಾ ಕಮ್ಮಿ ಆಗ್ತಿದೆ. ಹಾಗಾಗಿ ಬಹಳ ಬೇಗ ಸಿನಿಮಾ ಸ್ಮಾಲ್‌ಸ್ಕ್ರೀನ್‌ಗೆ ಬರಲಿದೆ. ಸದ್ಯ ಸಿನಿಮಾ ಓಟಿಟಿ ರಿಲೀಸ್‌ಗೆ ಕಾನೂನು ಸಮಸ್ಯೆ ಎದುರಾಗಿದೆ. ಚಿತ್ರದಲ್ಲಿ ಇವಾ ಆಸ್ಪತ್ರೆ ಹೆಸರಿಗೆ ಕಳಂಕ ಬರುವಂತೆ ತೋರಿಸಲಾಗಿದೆ. ತಮ್ಮ ಆಸ್ಪತ್ರೆ ಹೆಸರು ತೋರಿಸಿರುವುದರಿಂದ ನಮ್ಮ ಆಸ್ಪತ್ರೆಗೆ ಪ್ರತಿಷ್ಠೆಗೆ ಧಕ್ಕೆ ಬಂದಿದೆ ಎಂದು ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದಾರೆ.

  Hyderabad city civil court gave Big Shock to samantha Starrer Yashoda Movie Team

  ಡಿಸೆಂಬರ್ 19ರವರೆಗೆ 'ಯಶೋದ' ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಸಿಟಿ ಕೋರ್ಟ್ ಇದಕ್ಕೆ ಈ ವಾದವನ್ನು ಪುರಸ್ಕರಿಸಿದ್ದು, ಡಿಸೆಂಬರ್ 19ರವರೆಗೆ ಚಿತ್ರವನ್ನು ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡಬಾರದು ಎಂದು ಆದೇಶ ನೀಡಿದೆ. ಇನ್ನು ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗ್ತಿದೆ.

  English summary
  Hyderabad city civil court gave Big Shock to samantha Starrer Yashoda Movie Team. Eva Hospital has filed a court complaint against Yashoda, saying the film projects EVA Hospital in bad light and this affects their public image. Know more.
  Thursday, November 24, 2022, 6:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X