twitter
    For Quick Alerts
    ALLOW NOTIFICATIONS  
    For Daily Alerts

    2021ರ ಟಾಪ್ 10 ವೆಬ್ ಸಿರೀಸ್ ಪಟ್ಟಿ ರಿಲೀಸ್: ಸಮಂತಾ 'ಫ್ಯಾಮಿಲಿ ಮ್ಯಾನ್' ಕತೆಯೇನು?

    |

    ಸಿನಿಮಾ, ಟಿವಿ ಹಾಗೂ ಸೆಲೆಬ್ರೆಟಿಗಳ ಬಗ್ಗೆ ಮಾಹಿತಿ ನೀಡುವ IMDb 2021ರಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ವೆಬ್ ಸಿರೀಸ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಿನಿಮಾ, ಟಿವಿ ಶೋಗಳು ಹಾಗೂ ವೆಬ್ ಸಿರೀಸ್‌ನ ಟಾಪ್ 10 ಪಟ್ಟಿಯನ್ನು ರಿಲೀಸ್ ಮಾಡಿದೆ. ಗುರುವಾರ(ಡಿಸೆಂಬರ್ 09ರಂದು) ಬಿಡುಗಡೆ ಮಾಡಿದ ಈ ಪಟ್ಟಿಯಲ್ಲಿ ಸಮಂತಾ ನಟಿಸಿದ ಬಾಲಿವುಡ್‌ನ ಮೊದಲ ವೆಬ್ ಸಿರೀಸ್ ಕೂಡ ಇದೆ.

    2021ರ ಜನವರಿ 1 ರಿಂದ ನವೆಂಬರ್ 29ರವರೆಗೆ ಬಿಡುಗಡೆಯಾದ ವೆಬ್ ಸಿರೀಸ್‌ಗಳನ್ನು IMDb ಗಣನೆಗೆ ತೆಗೆದುಕೊಂಡಿದೆ. IMDb ಬಳಕೆದಾರರ ಕೊಟ್ಟ ಪೇಜ್ ವೀವ್ಸ್ ಅನ್ನು ಆಧರಿಸಿ ಈ ಟಾಪ್ 10 ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. 6.5 ರಿಂದ 9.7ರ ವರೆಗೆ ಭಾರತದ ವೆಬ್ ಸಿರೀಸ್‌ಗಳಿಗೆ IMDb ರೇಟಿಂಗ್ ಕೊಟ್ಟಿದೆ. ಹಾಗಿದ್ದರೆ ಯಾವ್ಯಾವ ವೆಬ್ ಸಿರೀಸ್‌ ಯಾವ್ಯಾವ ಸ್ಥಾನದಲ್ಲಿದೆ. ಎಷ್ಟು ರೇಟಿಂಗ್ ಸಿಕ್ಕಿದೆ ಅನ್ನುವ ಪಟ್ಟಿ ಇಲ್ಲಿದೆ.

    No 10 'ಮುಂಬೈ ಡೈರೀಸ್ 26/11'

    No 10 'ಮುಂಬೈ ಡೈರೀಸ್ 26/11'

    2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿದ್ದ ವೆಬ್ ಸಿರೀಸ್ 'ಮುಂಬೈ ಡೈರೀಸ್ 26/11'. ಈ ದಾಳಿಯಲ್ಲಿ ನಡೆದ ಘಟನೆಗಳನ್ನು ಇಟ್ಟುಕೊಂಡು ಕಾಲ್ಪನಿಕವಾಗಿ ಚಿತ್ರೀಕರಿಸಿದ ವೆಬ್ ಸಿರೀಸ್ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಿತ್ತು. ಇದು IMDb ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

    'ನವೆಂಬರ್ ಸ್ಟೋರಿ'

    'ನವೆಂಬರ್ ಸ್ಟೋರಿ'

    ಅಲ್ಜೈಮರ್ಸ್ ನಿಂದ ಬಳಲುತ್ತಿರುವ ಕಾದಂಬರಿಗಾರನೊಬ್ಬ ಕೊಲೆ ನಡೆದ ಸ್ಥಳದಲ್ಲಿ ಸಿಕ್ಕಿಬೀಳುತ್ತಾನೆ. ಆತನಿಗೆ ನೆನಪಿನ ಶಕ್ತಿ ಇಲ್ಲದೆ ಇರುವುದರಿಂದ ಅಂದು ನಡೆದ ಘಟನೆ ನೆನಪಿನಲ್ಲಿರುವುದಿಲ್ಲ. ಈ ಕೇಸ್‌ನಿಂದ ತಂದೆಯನ್ನು ಮಗಳೇ ಕಾಪಾಡಬೇಕಾಗಿ ಅನಿವಾರ್ಯತೆ. ಇದೇ 'ನವೆಂಬರ್ ಸ್ಟೋರಿ'. ತಮನ್ನಾ ಭಾಟಿಯಾ ಈ ವೆಬ್ ಸಿರೀಸ್‌ನಲ್ಲಿ ನಟಿಸಿದ್ದಾರೆ. ಇದು ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಪ್ರಸಾರವಾಗಿತ್ತು. ಇದು 9ನೇ ಸ್ಥಾನದಲ್ಲಿದೆ.

    No 8 'ಗ್ರಹಣ್'

    No 8 'ಗ್ರಹಣ್'

    ಯಂಗ್ ಐಪಿಎಸ್ ಆಫೀಸರ್ ರಾಜಕೀಯ ಒತ್ತಡಗಳಿಂದ ತನ್ನ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗುತ್ತಾಳೆ. ಈ ವೇಳೆ 1984ರ Anti ಸಿಖ್ ದಂಗೆಯಲ್ಲಿ ತನ್ನದೇ ಆರೋಪಿ ಎಂದು ತಿಳಿದಾಗ, ಆ ಕೇಸ್ ಭೇದಿಸುವ ಕಥೆಯೇ ಗ್ರಹಣ್. ಇದು ಹಾಟ್‌ ಸ್ಟಾರ್‌ನಲ್ಲಿ ಪ್ರಸಾರವಾಗಿತ್ತು.

    No 7 'ರೇ'

    No 7 'ರೇ'

    ಸಣ್ಣ ಕಥೆಗಳನ್ನೆಲ್ಲಾ ಸೇರಿಸಿ 'ರೇ' ಅನ್ನುವ ವೆಬ್ ಸಿರೀಸ್ ಅನ್ನು ನಿರ್ಮಾಣ ಮಾಡಲಾಗಿತ್ತು. ಇದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರಗೊಂಡಿತ್ತು. ಮನೋಜ್ ಬಾಜಪೇಯಿ, ಹರ್ಷವರ್ಧನ್ ಕಪೂರ್, ಕೆ ಕೆ ಮೆನನ್ ಸೇರಿದಂತೆ ದೊಡ್ಡ ತಾರಬಳಗವೇ ಈ ಸಿರೀಸ್‌ನಲ್ಲಿ ಕಾಣಿಸಿಕೊಂಡಿತ್ತು. ಇದು 7ನೇ ಸ್ಥಾನದಲ್ಲಿದೆ.

    6 'ಕ್ಯಾಂಡಿ'

    6 'ಕ್ಯಾಂಡಿ'

    ಶಾಲಾ ವಿದ್ಯಾರ್ಥಿಯೊಬ್ಬನ ಕೊಲೆ ಕೇಸ್‌ನಲ್ಲಿ ಶಾಲೆಯ ಶಿಕ್ಷಕ ಜಯಂತ್ ಪಾರೇಖ್ ತೊಂದರೆ ಸಿಕ್ಕಿಕೊಳ್ಳುವ ಕಥೆಯೇ' ಕ್ಯಾಂಡಿ'. ವೂಟ್ ಸೆಲೆಕ್ಟ್‌ನಲ್ಲಿ ಈ ಸಿರೀಸ್ ಪ್ರಸಾರ ಆಗಿ ಸಾಕಷ್ಟು ಜನ ಮನ್ನಣೆ ಗಳಿಸಿತ್ತು. ಇದು IMDb ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

    No 5 'ಸನ್ ಫ್ಲವರ್'

    No 5 'ಸನ್ ಫ್ಲವರ್'

    ಮುಂಬೈನಲ್ಲಿ ನಡೆಯುವ ಒಂದು ಮರ್ಡರ್ ಮಿಸ್ಟರಿಯ ಮೇಲೆ 'ಸನ್ ಫ್ಲವರ್' ಕಥೆ ಸಾಗುತ್ತದೆ. ವಿಕಾಸ್ ಬೆಹಲ್ ನಿರ್ದೇಶಿಸಿದ್ದ ಈ ವೆಬ್ ಸಿರೀಸ್ ಅನ್ನು ರಿಲಯನ್ಸ್ ಎಂಟರ್‌ಟೈನ್ಮೆಂಟ್ ನಿರ್ಮಿಸಿತ್ತು. 11 ಜೂನ್ 2021ರಲ್ಲಿ 'ಸನ್ ಫ್ಲವರ್' ಜೀ 5ನಲ್ಲಿ ಬಿಡುಗಡೆಯಾಗಿತ್ತು. ಈ ಸಿರೀಸ್‌ಗೆ IMDb ಪಟ್ಟಿಯಲ್ಲಿ 5ನೇ ಸ್ಥಾನ ಸಿಕ್ಕಿದೆ.

    No 4 'ದಿ ಲಾಸ್ಟ್ ಅವರ್'

    No 4 'ದಿ ಲಾಸ್ಟ್ ಅವರ್'

    ಶಮನ್ ಅನ್ನುವ ಯುವಕ ತನ್ನ ಬಳಿ ಇರುವ ವಿಶೇಷ ಶಕ್ತಿಯನ್ನು ಕಾಪಾಡಿಕೊಳ್ಳಲು ಪರದಾಡುವ ಕಥೆಯಲ್ಲಿ ಟ್ವಿಸ್ಟ್ ಅಂಡ್ ಟರ್ನ್ ಸೇರಿಸಿ ವೆಬ್ ಸಿರೀಸ್ ಅನ್ನು ನಿರ್ಮಿಸಲಾಗಿತ್ತು. ಅಮೆಜಾನ್ ಪ್ರೈಂನಲ್ಲಿ ಈ ಸಿರೀಸ್ ರಿಲೀಸ್ ಆಗಿತ್ತು. ಇದು IMDb ಪಟ್ಟಿಯಲ್ಲಿ 4ನೇ ಸ್ಥಾನ ಸಿಕ್ಕಿದೆ.

    No 3 ದಿ ಫ್ಯಾಮಿಲಿ ಮ್ಯಾನ್

    No 3 ದಿ ಫ್ಯಾಮಿಲಿ ಮ್ಯಾನ್

    'ದಿ ಫ್ಯಾಮಿಲಿ ಮ್ಯಾನ್' ವೆಬ್ ಸಿರೀಸ್ ಭಾರತದ ಅತೀ ಹೆಚ್ಚು ಜನ ಮೆಚ್ಚಿದ ಸಿರೀಸ್. ವೆಬ್ ಸಿರೀಸ್‌ನ ಬಾದ್‌ಷಾ ಶಾರುಖ್ ಖಾನ್ ಅಂತಲೇ ಕರೆಸಿಕೊಳ್ಳುವ ಮನೋಜ್ ಬಾಜಪೇಯಿ ನಟಿಸಿದ ಸಿರೀಸ್ ಇದು. ವಿಶೇಷ ಅಂದರೆ ಈ ವೆಬ್ ಸಿರೀಸ್‌ನಲ್ಲಿ ಟಾಲಿವುಡ್ ನಟಿ ಸಮಂತಾ ಕೂಡ ಇದೇ ಮೊದಲ ಬಾರಿಗೆ ಬಾಲಿವುಡ್ ವೆಬ್ ಸಿರೀಸ್‌ನಲ್ಲಿ ನಟಿಸಿದ್ದರು. ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಿದ್ದ ಈ ಸಿರೀಸ್ ಹಿಟ್ ಆಗಿತ್ತು. ಇದು IMDb ಪಟ್ಟಿಯಲ್ಲಿ 3ನೇ ಸ್ಥಾನ ಸಿಕ್ಕಿದೆ. IMDb ನೀಡಿದ ರೇಟಿಂಗ್‌ನಲ್ಲಿ 10 ರಿಂದ 3ನೇ ಸ್ಥಾನದಲ್ಲಿರುವ ವೆಬ್‌ ಸಿರೀಸ್‌ಗಳು ಹಣ ಕೊಟ್ಟು ವೀಕ್ಷಿಸುವ ಸಿರೀಸ್ ಆಗಿತ್ತು. ಆದರೆ, 2 ಮತ್ತು 1ನೇ ಸ್ಥಾನದಲ್ಲಿರುವ ವೆಬ್ ಸಿರೀಸ್‌ ಯೂಟ್ಯೂನ್‌ನಲ್ಲಿ ಉಚಿತವಾಗಿ ನೋಡಬಹುದಾಗಿದೆ.

    ಧಿಂಡೊರಾ'

    ಧಿಂಡೊರಾ'

    'ಧಿಂಡೋರ' ಭುವನ್ ಹಾಗೂ ಆತನ ಕುಟುಂಬ ಪ್ರತಿದಿನದ ಬದುಕಿನಲ್ಲಾಗುವ ಬವಣೆಗಳನ್ನು ಇಟ್ಟುಕೊಂಡು ವೆಬ್ ಸಿರೀಸ್ ಮಾಡಲಾಗಿದೆ. ಇದು ಬಿಬಿ ಕಿ ವೈನ್ಸ್ ಅನ್ನುವ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರವಾಗಿತ್ತು. ಈ ಸಿರೀಸ್‌ಗೆ IMDb ಪಟ್ಟಿಯಲ್ಲಿ 2ನೇ ಸ್ಥಾನ ಸಿಕ್ಕಿದೆ.

    No 1 'ಅಸ್ಪಿರಂಟ್ಸ್'

    No 1 'ಅಸ್ಪಿರಂಟ್ಸ್'

    'ಅಸ್ಪಿರಂಟ್ಸ್' ಮೂವರು UPSC ಆಕಾಂಕ್ಷಿಗಳ ಕಥೆ. ಅವರ ಜೀವನದಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳ ಹೊರತಾಗಿಯೂ ಸ್ನೇಹವನ್ನು ಕಟ್ಟಿಕೊಳ್ಳುವ ಕಥೆಯಾಗಿದೆ. ಯೂಟ್ಯೂನ್‌ನಲ್ಲಿಯೇ ರಿಲೀಸ್ ಆಗಿದ್ದ ಈ ವೆಬ್ ಸಿರೀಸ್ ಗೆ IMDb ಪಟ್ಟಿಯಲ್ಲಿ 9.7 ಸ್ಟಾರ್ ಸಿಕ್ಕು ಮೊದಲ ಸ್ಥಾನದಲ್ಲಿದೆ. ಕೆಳಗೆ ತೋರಿಸಲಾಗಿರುವ ಪಟ್ಟಿಯಲ್ಲಿ ಯಾವ ವೆಬ್ ಸಿರೀಸ್‌ಗೆ ಎಷ್ಟು ಸ್ಟಾರ್ ನೀಡಲಾಗಿದೆ ಎಂಬ ಪಟ್ಟಿ ಇದೆ.

    2021ರ IMDb ಯ ಟಾಪ್ 10 ಭಾರತದ ವೆಬ್ ಸಿರೀಸ್ ಪಟ್ಟಿ ಹೀಗಿದೆ.

    2021ರ IMDb ಯ ಟಾಪ್ 10 ಭಾರತದ ವೆಬ್ ಸಿರೀಸ್ ಪಟ್ಟಿ ಹೀಗಿದೆ.

    1 ಅಸ್ಪಿರಂಟ್ಸ್ 9.7 ಸ್ಟಾರ್
    2 ಧಿಂಡೊರಾ 9.7 ಸ್ಟಾರ್
    3 ದಿ ಫ್ಯಾಮಿಲಿ ಮ್ಯಾನ್ 8.8 ಸ್ಟಾರ್
    4 ದಿ ಲಾಸ್ಟ್ ಹವರ್ 7.5 ಸ್ಟಾರ್
    5 ಸನ್ ಫ್ಲವರ್ 7.5 ಸ್ಟಾರ್
    6 ಕ್ಯಾಂಡಿ 8.6 ಸ್ಟಾರ್
    7 ರೇ 7.2 ಸ್ಟಾರ್
    8 ಗ್ರಹಣ್ 8.5 ಸ್ಟಾರ್
    9 ನವೆಂಬರ್ ಸ್ಟೋರಿ 7.9 ಸ್ಟಾರ್
    10 ಮುಂಬೈ ಡೈರೀಸ್ 26/11 8.9 ಸ್ಟಾರ್

    English summary
    IMDBs Top 10 Most Popular Indian Web Series of 2021 here is the list. Aspirants no 1, Dhindora no 2 and The Family Man is in no 3 position.
    Friday, December 10, 2021, 9:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X