ಸದ್ದಿಲ್ಲದೇ ಮೂರು ಕನ್ನಡ ಚಿತ್ರಗಳು ಓಟಿಟಿಗೆ ಎಂಟ್ರಿ; 'ರಂಗನಾಯಕ' ಕೂಡ ಸ್ಟ್ರೀಮಿಂಗ್

ಓಟಿಟಿಯಲ್ಲಿ ಕನ್ನಡ ಕಂಟೆಂಟ್ ಬಹಳ ಕಮ್ಮಿ. ಆಗೊಂದು ಈಗೊಂದು ಸಿನಿಮಾ ಸ್ಟ್ರೀಮಿಂಗ್ ಆದರೂ ವೆಬ್‌ ಸೀರಿಸ್ ಸಂಖ್ಯೆ ಬಹಳ ವಿರಳ. ಕನ್ನಡ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳಲು ಮೀನಾಮೇಷ ಎಣಿಸುತ್ತವೆ. ಸಣ್ಣ ಸಿನಿಮಾಗಳನ್ನು ಕೊಳ್ಳುವ ಧೈರ್ಯ ಮಾಡುವುದೇ ಇಲ್ಲ.

ದೊಡ್ಡ ಸಿನಿಮಾಗಳನ್ನು ಮಾತ್ರ ಓಟಿಟಿ ಸಂಸ್ಥೆಗಳು ಕೇಳುತ್ತವೆ. ಅದರಲ್ಲೂ ಚೌಕಾಸಿ. ಇನ್ನು ಕೆಲ ಸಿನಿಮಾಗಳು ಥಿಯೇಟರ್‌ನಲ್ಲಿ ರಿಲೀಸ್ ಆಗಲಿ ನೋಡೋಣ ಎನ್ನುತ್ತಾರೆ. ಇತ್ತೀಚೆಗೆ ದುನಿಯಾ ವಿಜಯ್ ಸೇರಿ ಹಲವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಡುವೆ ಈ ವಾರ ಒಂದಲ್ಲ ಎರಡಲ್ಲ ಮೂರು ಕನ್ನಡ ಸಿನಿಮಾಗಳು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ.

Including Ranganayaka three kannada movie had started streaming in ott this week

ಅಚ್ಚ ಕನ್ನಡ ಸಿನಿಮಾಗಳ ಜೊತೆ ಪರಭಾಷೆಯ ಇನ್ನು ನಾಲ್ಕು ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಓಟಿಟಿಗೆ ಬಂದಿವೆ. ಬಹಳ ದಿನಗಳಿಂದ ಕಾಯುತ್ತಿದ್ದ 'ರಂಗನಾಯಕ' ಸಿನಿಮಾ ಕೂಡ ಈ ವಾರ ಜೀ-5ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ನೀವು ಕೂಡ ವೀಕೆಂಡ್‌ನಲ್ಲಿ ಮನೆಯಲ್ಲೇ ಕೂತು ಈ ಸಿನಿಮಾಗಳನ್ನು ವೀಕ್ಷಿಸಬಹುದು.

ರಂಗನಾಯಕ

ಗುರುಪ್ರಸಾದ್ ನಿರ್ದೇಶನದಲ್ಲಿ ಜಗ್ಗೇಶ್ ನಟನೆಯ 'ರಂಗನಾಯಕ' ಸಿನಿಮಾ ಬಹಳ ನಿರೀಕ್ಷೆ ಮೂಡಿಸಿತ್ತು. 'ಮಠ', 'ಎದ್ದೇಳು ಮಂಜುನಾಥ' ಚಿತ್ರಗಳ ಈ ಜೋಡಿ ಒಂದಾಗಿದ್ದು ನೋಡಿ ಒಂದೊಳ್ಳೆ ಕಾಮಿಡಿ ಸಿನಿಮಾ ಬರುತ್ತದೆ ಎಂದು ಕಾದಿದ್ದರು. ಆದರೆ ಬರೀ ದ್ವಂದ್ವಾರ್ಥದ ಡೈಲಾಗ್‌ಗಳಿಂದ ಸಿನಿಮಾ ಫ್ಲಾಪ್ ಆಗಿತ್ತು. ಸಿನಿಮಾ ನೋಡಿದವರು ಬಹಳ ಟೀಕಿಸಿದ್ದರು. ಅದ್ಯಾವ ಮಟ್ಟಿಗೆ ಅಂದರೆ ಕೊನೆಗೆ ನಟ ಜಗ್ಗೇಶ್ ಕ್ಷಮೆ ಕೇಳಿದ್ದರು. ಆದರೂ ಕೆಲವರು ಸಿನಿಮಾ ನೋಡಲು ಕಾದಿದ್ದರು. ಈ ಓಟಿಟಿಯಲ್ಲಿ ನೋಡುವ ಅವಕಾಶ ಸಿಕ್ಕಿದೆ.

ಸ್ಕ್ಯಾಮ್ 1770

ವಿಕಾಸ್ ಪುಷ್ಪಗಿರಿ ನಿರ್ದೇಶನದ 'ಸ್ಕ್ಯಾಮ್ 1770' ಸಿನಿಮಾ ಕೂಡ ಸದ್ದಿಲ್ಲದೇ ಓಟಿಟಿಗೆ ಬಂದಿದೆ. ಮೆಡಿಕಲ್ ಸೀಟ್ ಹಗರಣದ ಸುತ್ತಾ ಈ ಸಿನಿಮಾ ಕತೆ ಸಾಗುತ್ತದೆ. ರಂಜನ್, ಬಿ. ಸುರೇಶ, ಶ್ರೀನಿವಾಸ್​ ಪ್ರಭು, ನಿಶ್ಚಿತಾ, ರಾಘು ಶಿವಮೊಗ್ಗ, ಹರಿಣಿ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು ಭರ್ಜರಿ ಮನರಂಜನೆ ನೀಡುತ್ತದೆ. ಏಪ್ರಿಲ್ 12ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಕೆಲವರು ಮೆಚ್ಚಿಕೊಂಡರೂ ಸಿನಿಮಾ ಗೆಲ್ಲಲಿಲ್ಲ. ಪ್ರೈಂ ವೀಡಿಯೋದಲ್ಲಿ ಸಿನಿಮಾ ನೋಡಿ.

Including Ranganayaka three kannada movie had started streaming in ott this week

ಚಿಲ್ಲಿ ಚಿಕನ್

ವಾರದ ಹಿಂದೆಯೇ 'ಚಿಲ್ಲಿ ಚಿಕನ್' ಸಿನಿಮಾ ಅಮೇಜಾನ್ ಪ್ರೈಂಗೆ ಅಪ್‌ಲೋಡ್ ಆಗಿತ್ತು. ಆದರೆ ಭಾರತದಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿರಲಿಲ್ಲ. ಇದೀಗ ಎಲ್ಲರೂ 'ಚಿಲ್ಲಿ ಚಿಕನ್' ಟೇಸ್ಟ್ ಮಾಡಬಹುದು. ಪ್ರತೀಕ್ ಪ್ರಜೋಷ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಶೃಂಗಾ, ವಿಕ್ಟರ್‌ ಥೊಡಮ್‌, ತೊಮತಿನ್‌ ತಾಖೊಮ್‌ ಚಿತ್ರ ತಾರಾಗಣದಲ್ಲಿದ್ದಾರೆ. ನಗರದಲ್ಲಿ ನಡೆದ ನೈಜ ಘಟನೆ ಈ ಚಿತ್ರಕ್ಕೆ ಸ್ಫೂರ್ತಿ. ಉತ್ತರ ಭಾರತದಿಂದ ಬೆಂಗಳೂರಿಗೆ ಬಂದ ಐವರು ಹುಡುಗ ಕತೆ ಚಿತ್ರದಲ್ಲಿದೆ. ಅನಿರೀಕ್ಷಿತ ಘಟನೆಯೊಂದು ಹೇಗೆ ಇವರ ಜೀವನ ಬದಲಿಸುತ್ತದೆ ಎನ್ನುವುದು ಇನ್ನುಳಿದ ಕಥೆ.

ಈ ಮೂರು ಕನ್ನಡ ಚಿತ್ರಗಳ ಜೊತೆಗೆ ತೆಲುಗಿನ 'ಮ್ಯೂಸಿಕ್ ಶಾಪ್ ಮೂರ್ತಿ' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಪ್ರೈಂ ವೀಡಿಯೋಗೆ ಬಂದಿದೆ. 'ಕೆಡೆಟ್ಸ್' ಹಾಗೂ 'ಗಾಡ್ಜಿಲ್ಲಾ ‍X ಕಾಂಗ್: ದಿ ನ್ಯೂ ಎಂಪೈರ್' ಚಿತ್ರಗಳು ಡಬ್ ಆಗಿ ಜಿಯೋ ಸಿನಿಮಾದಲ್ಲಿ ರಿಲೀಸ್ ಆಗಿವೆ. 'ಬಡ್ಡಿ' ಎನ್ನುವ ತೆಲುಗು ಸಿನಿಮಾ ಕನ್ನಡಕ್ಕೆ ಡಬ್ ಆಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

More from Filmibeat

English summary
Here is the list of kannada movies ott release this week
Read more about: filmibeat original jaggesh ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X