Ott Releases this Week; 'ಇಂಡಿಯನ್-2' ಜೊತೆಗೆ ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಪಟ್ಟಿ

ನೋಡ ನೋಡುತ್ತಾ ಮತ್ತೊಂದು ವಾರ ಕಳೆದು ವೀಕೆಂಡ್ ಹತ್ತಿರವಾಗುತ್ತಿದೆ. ಸಿನಿರಸಿಕರು ಚಿತ್ರಮಂದಿರಗಳಲ್ಲಿ ಯಾವ ಯಾವ ಸಿನಿಮಾಗಳು ಬಿಡುಗಡೆ ಆಗುತ್ತಿದೆ ಎಂದು ಎದುರು ನೋಡುತ್ತಿದ್ದಾರೆ. ಮತ್ತೊಂದು ಕಡೆ ಓಟಿಟಿ ಸ್ಟ್ರೀಮಿಂಗ್ ಸಿನಿಮಾ, ಸೀರಿಸ್ ಲಿಸ್ಟ್ ಹುಡುಕಾಡುತ್ತಿದ್ದಾರೆ.

ಈ ವಾರ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಓಟಿಟಿ ವೀಕ್ಷಕರನ್ನು ರಂಜಿಸಲು ಬರ್ತಿವೆ. ಅದರಲ್ಲಿ ಕಮಲ್ ಹಾಸನ್ ನಟನೆಯ 'ಇಂಡಿಯನ್-2' ಕೂಡ ಇದೆ. ಕೆಲ ಸಿನಿಮಾಗಳು ನೇರವಾಗಿ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿವೆ. ಇನ್ನು ಪಟ್ಟಿಯಲ್ಲಿ ರಾಜ್‌ ಬಿ. ಶೆಟ್ಟಿ ನಟನೆಯ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಸಹ ಇರೋದು ವಿಶೇಷ.

Indian-2 to Phir Aayi Hasseen Dillruba this week ott release films and series

ನೆಟ್‌ಫ್ಲಿಕ್ಸ್

1. ಇಂಡಿಯನ್-2

ಶಂಕರ್ ನಿರ್ದಶನದಲ್ಲಿ ಕಮಲ್ ಹಾಸನ್ ನಟಿಸಿದ 'ಇಂಡಿಯನ್-2' ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿದೆ. 28 ವರ್ಷಗಳ ಹಿಂದಿನ 'ಇಂಡಿಯನ್' ಸಿನಿಮಾ ಸೀಕ್ವೆಲ್ ಇದು. ಈ ಬಾರಿ ಕಮಲ್ ಜೊತೆ ಸಿದ್ದಾರ್ಥ್ ಹಾಗೂ ರಕುಲ್ ಪ್ರೀತ್ ಸಿಂಗ್ ಜೊತೆಯಾಗಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಜುಲೈ 12ಕ್ಕೆ ತೆರೆಗಪ್ಪಳಿಸಿದ ಸಿನಿಮಾ ಆಗಸ್ಟ್ 9ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದೆ.

2. ಫಿರ್ ಆಯಿ ಹಸೀನ್ ದಿಲ್‌ರುಬಾ

ಮೂರು ವರ್ಷಗಳ ಹಿಂದೆ ಬಂದಿದ್ದ ಹಸೀನ್ 'ದಿಲ್‌ರುಬಾ' ಸಿನಿಮಾ ತಕ್ಕಮಟ್ಟಿಗೆ ಗೆದ್ದಿತ್ತು. ಇದೀಗ ಚಿತ್ರದ ಸೀಕ್ವೆಲ್ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಜಯಪ್ರದ್ ದೇಸಾಯಿ ನಿರ್ದೇಶನದ ಚಿತ್ರದಲ್ಲಿ ತಾಪ್ಸಿ ಪನ್ನು, ವಿಕ್ರಾಂತ್ ಮೆಸ್ಸಿ ಹಾಗೂ ಸನ್ನಿ ಕೌಶಲ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಈ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಶುಕ್ರವಾರ ಸ್ಟ್ರೀಮಿಂಗ್ ಆಗಲಿದೆ.

3. ದಿ ಅಂಬ್ರೆಲ್ಲಾ ಅಕಾಡೆಮಿ ಸೀಸನ್-4 (ವೆಬ್ ಸೀರಿಸ್) ಆಗಸ್ಟ್ 8

4. ಕಿಂಗ್ಸ್‌ಮನ್ ಗೋಲ್ಡನ್ ಸರ್ಕಿಲ್(ಇಂಗ್ಲೀಷ್ ಸಿನಿಮಾ) ಆಗಸ್ಟ್ 9

5. ಇನ್‌ಸೈಡ್ ದಿ ಮೈಂಡ್ ಆಫ್ ಎ ಡಾಗ್(ಡಾಕ್ಯುಮೆಂಟರಿ) ಆಗಸ್ಟ್ 9

6. ಮಿಷನ್ ಕ್ರಾಸ್ (ಕೊರಿಯನ್ ಸಿನಿಮಾ) ಆಗಸ್ಟ್ 9

ಅಮೇಜಾನ್ ಪ್ರೈಂ

1. ಲವ್‌ಲೀ

ಚೇತನ್ ಕೇಶವ್ ನಿರ್ದೇಶನದ 'ಲವ್‌ಲೀ' ಸಿನಿಮಾ ಸದ್ದಿಲ್ಲದೇ ಓಟಿಟಿಗೆ ಬಂದಿದೆ. ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಚೇತನ್ ಕೇಶವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಸಿಷ್ಠ ಸಿಂಹ ಹಾಗೂ ಸ್ಟೆಫಿ ಪಟೇಲ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜೂನ್ 14ಕ್ಕೆ ಸಿನಿಮಾ ತೆರೆ ಕಂಡಿತ್ತು. ಪ್ರೇಕ್ಷಕರಿಂಗ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿನಿಮಾ ಸಿನಿಮಾ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.

ಜೀ-5

1. ಭೀಮಾ - ಅಂದ್‌ಕಾರ್ ಸೆ ಅಧಿಕಾರ ತಕ್(ಹಿಂದಿ ಸೀರಿಸ್) ಆಗಸ್ಟ್ 6

2. ಗ್ಯಾರಾ ಗ್ಯಾರಾ(ವೆಬ್ ಸೀರಿಸ್) ಆಗಸ್ಟ್ 9

3. ಅಮರ್ ಸಂಗಿ(ಸೀರಿಯಲ್) ಆಗಸ್ಟ್ 5

Indian-2 to Phir Aayi Hasseen Dillruba this week ott release films and series list

ಹಾಟ್‌ಸ್ಟರ್

1. ಲೈಫ್ ಹಿಲ್ ಗಯೀ(ಹಿಂದಿ ವೆಬ್ ಸೀರಿಸ್) ಆಗಸ್ಟ್ 9

2. ಆರ್‌ ಯು ಶೋರ್(ಸೀರಿಸ್) ಆಗಸ್ಟ್ 8

3. ಖಾಟಿಲ್ ಕೌನ್(ವೆಬ್ ಸೀರಿಸ್) ಆಗಸ್ಟ್ 9

4. ದಿ ಜೋನ್; ಸರ್ವೈವಲ್ ಮಿಷನ್, ಸೀಸರ್-3(ಶೋ) ಆಗಸ್ಟ್ 7

ಅಹಾ

1. 7G (ತಮಿಳು ಸಿನಿಮಾ) ಆಗಸ್ಟ್ 9

ಸೋನಿ ಲಿವ್

1. ಟರ್ಬೊ

ಮಮ್ಮುಟ್ಟಿ ಹಾಗೂ ಕನ್ನಡ ನಟ ರಾಜ್‌. ಬಿ ಶೆಟ್ಟಿ ನಟನೆಯ ಆಕ್ಷನ್ ಸಿನಿಮಾ 'ಟರ್ಬೊ' ಈ ವಾರವೇ ಓಟಿಟಿಗೆ ಬರ್ತಿದೆ. ಮೇ 23ಕ್ಕೆ ಸಿನಿಮಾ ತೆರೆಗಪ್ಪಳಿಸಿತ್ತು. ಇದೀಗ ಸೋನಿ ಲಿವ್ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ವೈಸಾಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಾಜ್‌. ಬಿ ಶೆಟ್ಟಿ ಖಡಕ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಕನ್ನಡಕ್ಕೂ ಸಿನಿಮಾ ಡಬ್‌ ಆಗಿ ಓಟಿಟಿ ವೀಕ್ಷಕರಿಗೆ ಸಿಗಲಿದೆ.

ಜಿಯೋ ಸಿನಿಮಾ

1. ಗುಡ್‌ಚಡಿ (ಸಿನಿಮಾ) ಆಗಸ್ಟ್ 9

2. ಮೇಘಾ ಬರ್ಸೆಂಗೆ (ಶೋ) ಆಗಸ್ಟ್ 6

More from Filmibeat

English summary
OTT Movies and Series Releases of This Week 9th August
Read more about: ott filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X