ಈ ವಾರ ಒಟಿಟಿ ವೀಕ್ಷಕರಿಗೆ ಹಬ್ಬ, ಕಾದಿವೆ ಹಿಟ್ ಸಿನಿಮಾಗಳು

ಕೋವಿಡ್‌ನಿಂದಾಗಿ ಎರಡು ವರ್ಷ ಮಂಕಾಗಿದ್ದ ಚಿತ್ರಮಂದಿರಗಳು ಮತ್ತೆ ಕಳೆಗಟ್ಟಿವೆ. ಒಂದರ ಹಿಂದೊಂದರಂತೆ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಹಿಟ್ ಸಹ ಆಗುತ್ತಿವೆ.

ಆದರೆ ಕೋವಿಡ್‌ನಿಂದ ತಡವಾಗಿದ್ದ ಸಿನಿಮಾಗಳು ನಾ ಮುಂದು ತಾ ಮುಂದು ಎಂದು ಒಂದರ ಹಿಂದೊಂದರಂತೆ ಬಿಡುಗಡೆ ಆಗುತ್ತಿರುವ ಕಾರಣ ಹಲವು ಸಣ್ಣ ಸಿನಿಮಾಗಳು, ಕೆಲವು ದೊಡ್ಡ ಸಿನಿಮಾಗಳು ಸಹ ಒಂದೇ ವಾರಕ್ಕೆ ಚಿತ್ರಮಂದಿರಗಳಿಂದ ಎತ್ತಂಗಡಿ ಸಹ ಆಗುತ್ತಿವೆ.

ನೋಡಲಿಚ್ಛಿಸಿದ್ದ ಸಿನಿಮಾಗಳು ಚಿತ್ರಮಂದಿರಗಳಿಂದ ಹೀಗೆ ಕೆಲವೇ ದಿನಕ್ಕೆ ಎತ್ತಂಗಡಿ ಆದರೆ ಚಿಂತೆ ಪಡುವ ಅಗತ್ಯವೇನೂ ಈಗಿಲ್ಲ. ಏಕೆಂದರೆ ಇದು ಒಟಿಟಿ ಜಮಾನ. ಚಿತ್ರಮಂದಿರದಲ್ಲಿ ತಪ್ಪಿದ ಸಿನಿಮಾ ಒಟಿಟಿಗೆ ಬರಲೇ ಬೇಕು. ಅಂತೆಯೇ ಈ ವಾರವೂ ಒಟಿಟಿಗೆ ಹಲವು ಸೂಪರ್ ಹಿಟ್ ಸಿನಿಮಾಗಳು ಅಡಿಯಿಟ್ಟಿವೆ. ಈ ವಾರಾಂತ್ಯದಲ್ಲಿ ಯಾವ ಸಿನಿಮಾಗಳನ್ನು ನೋಡಬಹುದು? ಇಲ್ಲಿದೆ ಪಟ್ಟಿ.

'ಸರ್ಕಾರು ವಾರಿ ಪಾಟ' ಬಿಡುಗಡೆ

'ಸರ್ಕಾರು ವಾರಿ ಪಾಟ' ಬಿಡುಗಡೆ

ತೆಲುಗಿನಲ್ಲಿ ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್ ಹಿಟ್ ಆದ ಸಿನಿಮಾ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಈ ಸಿನಿಮಾ ಜೂನ್ 23 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಮಹೇಶ್ ಬಾಬು ಜೊತೆಗೆ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ಸಮುದ್ರಕಿಣಿ, ವೆನ್ನೆಲ ಕಿಶೋರ್ ಸೇರಿದಂತೆ ಇನ್ನೂ ಹಲವರು ಸಿನಿಮಾದಲ್ಲಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಪರಶುರಾಮ್.

ತೆಲುಗಿನ 'ಪೆಳ್ಳಿ ಸಂದಡಿ', 'ಮನ್ಮತಲೀಲಾ'

ತೆಲುಗಿನ 'ಪೆಳ್ಳಿ ಸಂದಡಿ', 'ಮನ್ಮತಲೀಲಾ'

ತೆಲುಗಿನಲ್ಲಿ ಇತ್ತೀಚೆಗೆ ಗಮನ ಸೆಳೆದ ಎರಡು ಸಿನಿಮಾಗಳಾದ 'ಪೆಳ್ಳಿ ಸಂದಡಿ' ಹಾಗೂ 'ಮನ್ಮತ ಲೀಲಾ' ಸಿನಿಮಾಗಳು ಇದೇ ಜೂನ್ 24 ಕ್ಕೆ ಬಿಡುಗಡೆ ಒಟಿಟಿಗೆ ಬರುತ್ತಿವೆ. ಈ ಎರಡೂ ಸಿನಿಮಾಗಳಲ್ಲಿ 'ಪೆಳ್ಳಿ ಸಂದಡಿ' ಸಿನಿಮಾ ಜೀ 5 ನಲ್ಲಿ ಸ್ಟ್ರೀಮ್ ಆದರೆ ತೆಲುಗಿನ ಒಟಿಟಿಯಾದ ಆಹಾನಲ್ಲಿ 'ಮನ್ಮತಲೀಲಾ' ಸ್ಟ್ರೀಮ್ ಆಗಲಿದೆ.

'ಫೊರೆನ್ಸಿಕ್' ಹಿಂದಿ ಸಿನಿಮಾ

'ಫೊರೆನ್ಸಿಕ್' ಹಿಂದಿ ಸಿನಿಮಾ

ಹಿಂದಿಯ ಬಹುನಿರೀಕ್ಷಿತ ಸಿನಿಮಾ 'ಫೊರೆನ್ಸಿಕ್' ಜೂನ್ 24 ರ ಮಧ್ಯರಾತ್ರಿಯಿಂದ ಜೀ 5 ನಲ್ಲಿ ಸ್ಟ್ರೀಮ್ ಆಗಲಿದೆ. ಸಿನಿಮಾದಲ್ಲಿ ರಾಧಿಕಾ ಆಪ್ಟೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಪ್ರಾಚಿ ದೇಸಾಯಿ, ವಿಶಾಲ್ ಕಪೂರ್ ಸಹ ಇದ್ದಾರೆ. 'ಫೊರೆನ್ಸಿಕ್' ಸಿನಿಮಾ ಮಲಯಾಳಂನ 'ಫೊರೆನ್ಸಿಕ್' ಸಿನಿಮಾದ ರೀಮೇಕ್ ಆಗಿದೆ. ಹಿಂದಿಯ ಫೊರೆನ್ಸಿಕ್ ಸಿನಿಮಾವನ್ನು ವಿಶಾಲ್ ಫುರಿಯಾ ನಿರ್ದೇಶನ ಮಾಡಿದ್ದಾರೆ.

ತಮಿಳಿನ 'ನೆಂಜುಕು ನೀದಿ', 'ಕಾತಿರ್'

ತಮಿಳಿನ 'ನೆಂಜುಕು ನೀದಿ', 'ಕಾತಿರ್'

ಹಿಂದಿಯ 'ಆರ್ಟಿಕಲ್ 15' ಸಿನಿಮಾದ ತಮಿಳು ರೀಮೇಕ್ 'ನೆಂಜುಕು ನೀದಿ' ಜೂನ್ 23 ರಂದು ಸೋನಿ ಲಿವ್‌ನಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ತಮಿಳುನಾಡಿನ ಸಿಎಂ ಸ್ಟಾಲಿನ್ ಪುತ್ರ ಉದಯ್‌ನಿಧಿ ಸ್ಟಾಲಿನ್ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್. ಜೊತೆಗೆ ಹೊಸಬರ ಮತ್ತೊಂದು ತಮಿಳು ಸಿನಿಮಾ 'ಕಾತಿರ್' ತೆಲುಗಿನ ಆಹಾ ಒಟಿಟಿಯಲ್ಲಿ ಅದೇ ದಿನ ಬಿಡುಗಡೆ ಆಗಲಿದೆ. ಈ ಸಿನಿಮಾದ ಟ್ರೈಲರ್ ಗಮನ ಸೆಳೆದಿದೆ.

ಮಲಯಾಳಂ ಸಿನಿಮಾ 'ಮೇರಿ ಆವಾಜ್ ಸುನೊ', 'ಕುಟ್ಟವುಂ ಶಿಕ್ಷೆಯುಂ'

ಮಲಯಾಳಂ ಸಿನಿಮಾ 'ಮೇರಿ ಆವಾಜ್ ಸುನೊ', 'ಕುಟ್ಟವುಂ ಶಿಕ್ಷೆಯುಂ'

ಮೇ 23 ರಂದು ಬಿಡುಗಡೆ ಆಗಿದ್ದ ಮಲಯಾಳಂ ಸಿನಿಮಾ 'ಮೇರಿ ಆವಾಜ್ ಸುನೋ' ಸಿನಿಮಾ ಜೂನ್ 24 ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಲಿದೆ. ಮಂಜು ವಾರಿಯರ್, ಜಯಸೂರ್ಯ, ಜಾನಿ ಅಂಟೋನಿ ನಟಿಸಿರುವ ಈ ಸಿನಿಮಾವನ್ನು ಪ್ರಜೇಶ್ ಸೇನ್ ನಿರ್ದೇಶನ ಮಾಡಿದ್ದಾರೆ. ಇನ್ನು ಮೇ 27 ರಂದು ಬಿಡುಗಡೆ ಆಗಿದ್ದ 'ಕುಟ್ಟವುಂ ಶಿಕ್ಷೆಯುಂ' ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಜೂನ್ 24 ರಂದು ಸ್ಟ್ರೀಮ್ ಆಗಲಿದೆ. 2015 ರಲ್ಲಿ ಕೇರಳದಲ್ಲಿ ನಡೆದ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಚಿನ್ನ ದರೋಡೆಕೋರರ ಜಾಡು ಹಿಡಿದು ಕೇರಳ ಪೊಲೀಸರು ಉತ್ತರ ಪ್ರದೇಶಕ್ಕೆ ಹೋಗಿ ಅಲ್ಲಿ ಸಮಸ್ಯೆಗೆ ಸಿಲುಕುವ ಕತೆಯನ್ನು ಈ ಸಿನಿಮಾ ಹೊಂದಿದೆ.

'ಡಾಕ್ಟರ್ ಸ್ಟ್ರೇಂಜ್' ಇನ್‌ ದಿ ಮಲ್ಟಿವರ್ಸ್ ಆಫ್ ಮ್ಯಾಡ್‌ನೆಸ್

'ಡಾಕ್ಟರ್ ಸ್ಟ್ರೇಂಜ್' ಇನ್‌ ದಿ ಮಲ್ಟಿವರ್ಸ್ ಆಫ್ ಮ್ಯಾಡ್‌ನೆಸ್

ಮಾರ್ವೆಲ್‌ ಸಿನಿಮ್ಯಾಟಿಕ್ ಯೂನಿವರ್ಸ್‌ನ ಡಾಕ್ಟರ್ ಸ್ಟ್ರೇಂಜ್ ಪಾತ್ರವನ್ನು ಮುಖ್ಯವಾಗಿಟ್ಟುಕೊಂಡು ನಿರ್ಮಿಸಲಾಗಿರುವ 'ಡಾಕ್ಟರ್ ಸ್ಟ್ರೇಂಜ್: ಇನ್‌ ದಿ ಮಲ್ಟಿವರ್ಸ್‌ ಆಫ್ ಮ್ಯಾಡ್‌ನೆಸ್' ಸಿನಿಮಾವು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಜೂನ್ 22 ರಂದು ಬಿಡುಗಡೆ ಆಗಿದೆ. ಚಿತ್ರಮಂದಿರಗಳಲ್ಲಿ ಮೇ 02 ರಂದು ಬಿಡುಗಡೆ ಆಗಿದ್ದ ಈ ಸಿನಿಮಾ ವಿಶ್ವದಾದ್ಯಂತ ಸುಮಾರು 7400 ಕೋಟಿ ರುಪಾಯಿಗಳನ್ನು ದೋಚಿತು.

More from Filmibeat

English summary
Here is the movie list of Indian languages which are streaming on OTT on this week. Some very good movies streaming on OTT this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X