twitter
    For Quick Alerts
    ALLOW NOTIFICATIONS  
    For Daily Alerts

    ಅಮಿತಾಬ್ ಬಚ್ಚನ್ ಸಿನಿಮಾ ಒಟಿಟಿಗೆ: ಗರಂ ಆದ ಐನಾಕ್ಸ್

    |

    ಅಮಿತಾಬ್ ಬಚ್ಚನ್ ಹಾಗೂ ಆಯುಷ್ಮಾನ್ ಖುರಾನಾ ನಟಿಸಿರುವ ಗುಲಾಬೊ ಸಿತಾಬೊ ಸಿನಿಮಾವನ್ನು ನೇರವಾಗಿ ಒಟಿಟಿಗೆ ಬಿಡುಗಡೆ ಮಾಡುವುದಾಗಿ ಇಂದು ಚಿತ್ರತಂಡ ಘೋಷಣೆ ಮಾಡಿದೆ.

    Recommended Video

    ಇಹ ಲೋಕ ತ್ಯಜಿಸಿದ ಕನ್ನಡದ ಹಾಸ್ಯನಟ ಮೈಕೆಲ್ ಮಧು ! | Micheal Madhu No more!

    ಇದರ ವಿರುದ್ಧ ಚಿತ್ರಮಂದಿರಗಳ ಸಂಘ, ವಿತರಕರು, ಪ್ರದರ್ಶಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಖ್ಯಾತ ಮಲ್ಟಿಫ್ಲೆಕ್ಸ್ ಸಂಸ್ಥೆ ಐನಾಕ್ಸ್ ಸಹ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.

    ಒಟಿಟಿಯಲ್ಲಿ ಸಿನಿಮಾಗಳ ಬಿಡುಗಡೆ ವಿರೋಧಿಸಿ ಪ್ರಧಾನಿ ಮೋದಿಗೆ ಪ್ರದರ್ಶಕರ ಪತ್ರಒಟಿಟಿಯಲ್ಲಿ ಸಿನಿಮಾಗಳ ಬಿಡುಗಡೆ ವಿರೋಧಿಸಿ ಪ್ರಧಾನಿ ಮೋದಿಗೆ ಪ್ರದರ್ಶಕರ ಪತ್ರ

    ಗುಲಾಬೊ ಸಿತಾಬೊ ಸಿನಿಮಾವನ್ನು ಚಿತ್ರಮಂದಿರಕ್ಕೆ ತರದೆ ನೇರವಾಗಿ ಒಟಿಟಿ ಗೆ ಬಿಡುಗಡೆ ಮಾಡಿದ ವಿಚಾರಕ್ಕೆ ಅಧಿಕೃತ ಹೇಳಿಕೆಯನ್ನು ಐನಾಕ್ಸ್ ಇಂದು ಬಿಡುಗಡೆ ಮಾಡಿದೆ.

    ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಚಿತ್ರಮಂದಿರಕ್ಕೆ ಸಿನಿಮಾ ಬಿಡುಗಡೆ ಮಾಡದೆ ನೇರವಾಗಿ ಒಟಿಟಿಗೆ ಬಿಡುಗಡೆ ಮಾಡಿರುವುದು ಅತ್ಯಂತ ಬೇಸರದ ಸಂಗತಿ ಎಂದು ತನ್ನ ಹೇಳಿಕೆಯಲ್ಲಿ ಐನಾಕ್ಸ್ ಹೇಳಿದೆ.

    ನೋಡುಗರನ್ನು ಒದಗಿಸುವ ಕಾರ್ಯ ಮಾಡುತ್ತಿದ್ದೇವೆ: ಐನಾಕ್ಸ್

    ನೋಡುಗರನ್ನು ಒದಗಿಸುವ ಕಾರ್ಯ ಮಾಡುತ್ತಿದ್ದೇವೆ: ಐನಾಕ್ಸ್

    ಚಿತ್ರಮಂದಿರಗಳು ಮತ್ತು ಸಿನಿಮಾ ನಿರ್ಮಾಣ ಸಂಸ್ಥೆಗಳು ಪರಸ್ಪರ ಅನ್ಯೋನ್ಯವಾದ ಒಳ ಒಪ್ಪಂದದಲ್ಲಿದ್ದರು. ಉತ್ತಮ ಕಂಟೆಂಟ್ ಗೆ ನೋಡುಗರನ್ನು ಒದಗಿಸುವ ಕಾರ್ಯವನ್ನು ಚಿತ್ರಮಂದಿರಗಳು ಅಥವಾ ಮಲ್ಟಿಫ್ಲೆಕ್ಸ್‌ಗಳು ಮಾಡುತ್ತಿದ್ದವು. ಆದರೆ ಒಟಿಟಿಗಳಿಂದ ಇದು ತಪ್ಪಿದಂತಾಗಿದೆ ಎಂದು ಅವರು ಹೇಳಿದ್ದಾರೆ.

    ಅತ್ಯುತ್ತಮ ಗುಣಮಟ್ಟದ ಸಿನಿಮಾ ವೀಕ್ಷಣೆ ಅನುಭವ

    ಅತ್ಯುತ್ತಮ ಗುಣಮಟ್ಟದ ಸಿನಿಮಾ ವೀಕ್ಷಣೆ ಅನುಭವ

    ಅತ್ಯುತ್ತಮ ಗುಣಮಟ್ಟದ ಸಿನಿಮಾ ವೀಕ್ಷಣೆಯ ಅನುಭವವನ್ನು ನೋಡುಗರಿಗೆ ನೀಡುವ ಸಲುವಾಗಿ ಐನಾಕ್ಸ್ ಕೋಟ್ಯಂತರ ಬಂಡವಾಳ ಹೂಡಿ ದೇಶದಾದ್ಯಂತ ಗುಣಮಟ್ಟದ ಸ್ಕ್ರೀನ್‌ಗಳನ್ನು ನಿರ್ಮಿಸುತ್ತಿದೆ ಎಂದು ಐನಾಕ್ಸ್ ಹೇಳಿದೆ.

    ಆನ್ ಲೈನ್ ನಲ್ಲಿ ನೇರವಾಗಿ ಬಿಡುಗೆಯಾಗುತ್ತಿದೆ ಅಮಿತಾಬ್ ಬಹು ನಿರೀಕ್ಷೆಯ ಸಿನಿಮಾಆನ್ ಲೈನ್ ನಲ್ಲಿ ನೇರವಾಗಿ ಬಿಡುಗೆಯಾಗುತ್ತಿದೆ ಅಮಿತಾಬ್ ಬಹು ನಿರೀಕ್ಷೆಯ ಸಿನಿಮಾ

    ಚಿತ್ರೋದ್ಯಮವು ಒಂದಕ್ಕೊಂದು ಪೂರಕವಾಗಿದೆ

    ಚಿತ್ರೋದ್ಯಮವು ಒಂದಕ್ಕೊಂದು ಪೂರಕವಾಗಿದೆ

    ಚಿತ್ರೋದ್ಯಮವು ಸರಪಳಿಯ ರೀತಿಯಲ್ಲಿ ಒಂದಕ್ಕೊಂದು ಸಂಬಂಧ ಹೊಂದಿದ್ದು, ಈ ವ್ಯವಹಾರವು ಕೋಟ್ಯಾಂತರ ಮಂದಿಗೆ ಉದ್ಯೋಗ ಒದಗಿಸಿದೆ. ಸಿನಿಮಾ ನಿರ್ಮಾತೃಗಳಿಗೆ ಕೋಟ್ಯಂತರ ಲಾಭವನ್ನು ಮಾಡಿಕೊಡುವ ಕಾರ್ಯವನ್ನು ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್‌ಗಳು ಮಾಡುತ್ತಾ ಬಂದಿವೆ ಎಂದು ಐನಾಕ್ಸ್ ಹೇಳಿದೆ.

    ನೇರವಾಗಿ ಒಟಿಟಿಗೆ ಬಿಡುಗಡೆ ಬೇಡ: ಐನಾಕ್ಸ್

    ನೇರವಾಗಿ ಒಟಿಟಿಗೆ ಬಿಡುಗಡೆ ಬೇಡ: ಐನಾಕ್ಸ್

    ಸಿನಿಮಾ ನಿರ್ಮಾಣ ಸಂಸ್ಥೆಗಳು ಚಿತ್ರಮಂದಿರಗಳನ್ನು ಪಕ್ಕಕ್ಕೆ ಸರಿಸಿ ನೇರವಾಗಿ ಒಟಿಟಿ ಗಳಿಗೆ ಬಿಡುಗಡೆ ಮಾಡಬಾರದೆಂದು ಐನಾಕ್ಸ್ ಮನವಿ ಮಾಡಿದೆ. ಈ ರೀತಿ ಮಾಡುವುದು ಸಿನಿಮಾದ ಅನುಭವವನ್ನು ಕುಂಠಿತಗೊಳಿಸಿ ಕೊನೆಗೆ ಸಿನಿಮಾ ಉದ್ಯಮಕ್ಕೆ ದೊಡ್ಡ ಧಕ್ಕೆ ತರುತ್ತದೆ ಎಂದಿದ್ದಾರೆ.

    ಬಿಬಿಸಿಯಲ್ಲಿ ಪ್ರಸಾರವಾದ ವೆಬ್‌ ಸೀರೀಸ್‌ನಲ್ಲಿ 41 ನಿಮಿಷದ ಸೆಕ್ಸ್ ದೃಶ್ಯ!ಬಿಬಿಸಿಯಲ್ಲಿ ಪ್ರಸಾರವಾದ ವೆಬ್‌ ಸೀರೀಸ್‌ನಲ್ಲಿ 41 ನಿಮಿಷದ ಸೆಕ್ಸ್ ದೃಶ್ಯ!

    English summary
    Multiplex giant INOX today released a statement about production houses releasing their movies directly to OTTs.
    Tuesday, May 26, 2020, 22:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X