twitter
    For Quick Alerts
    ALLOW NOTIFICATIONS  
    For Daily Alerts

    'ಇಕ್ಕಟ್' ಚಿತ್ರದ ಬಗ್ಗೆ ನಿಮಗೆ ತಿಳಿಯದ 5 ಕುತೂಹಲಕಾರಿ ಸಂಗತಿಗಳು

    |

    ಲಾಕ್ ಡೌನ್‌ನಲ್ಲಿ ಚಿತ್ರೀಕರಣ, ಅನಗತ್ಯ ಓಡಾಟ, ಸುತ್ತಾಟ ಎಲ್ಲವೂ ಬಂದ್ ಆಗಿತ್ತು. ಇಲ್ಲೊಂದು ತಂಡ ಲಾಕ್ ಡೌನ್‌ನಲ್ಲೇ ಚಿತ್ರೀಕರಣ ಮಾಡಿ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಹೆಸರು ಇಕ್ಕಟ್. ಜುಲೈ 21 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಅಧಿಕೃತವಾಗಿ ಮೊದಲ ಪ್ರದರ್ಶನ ಕಾಣ್ತಿದೆ.

    'ಬಿಗ್ ಬಾಸ್' ಖ್ಯಾತಿಯ ಭೂಮಿ ಶೆಟ್ಟಿ ಮತ್ತು ಪ್ರತಿಭಾನ್ವಿತ ಕಲಾವಿದ ನಾಗಭೂಷಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅದಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ಔಟ್ ಅಂಡ್ ಔಟ್ ಕಾಮಿಡಿಯಿಂದ ಕೂಡಿದೆ. ಪವನ್ ಕುಮಾರ್ ಫಿಲಂಸ್ ಮೂಲಕ ಸಿನಿಮಾ ಬಿಡುಗಡೆಯಾಗುತ್ತಿದ್ದು, ಚಿತ್ರದ ಬಗ್ಗೆ ಯಾರಿಗೂ ತಿಳಿಯದ ಐದು ಕುತೂಹಲಕಾರಿ ಸಂಗತಿಗಳನ್ನು ಪಟ್ಟಿ ಮಾಡಲಾಗಿದೆ.

    'ಇಕ್ಕಟ್'ನಲ್ಲಿ ಸಿಲುಕಿದವರ ಬೆಂಬಲಕ್ಕೆ ನಿಂತ ಲೂಸಿಯ ಪವನ್ ಕುಮಾರ್'ಇಕ್ಕಟ್'ನಲ್ಲಿ ಸಿಲುಕಿದವರ ಬೆಂಬಲಕ್ಕೆ ನಿಂತ ಲೂಸಿಯ ಪವನ್ ಕುಮಾರ್

    ಪ್ರಥಮ ಪ್ರದರ್ಶನಕ್ಕೆ ಮುಂಚಿತವಾಗಿ, ಅಭಿಮಾನಿಗಳು ತಿಳಿದುಕೊಳ್ಳಲು ಬಯಸುವ ಐದು ಗಮನಾರ್ಹ ಸಂಗತಿಗಳು ಇಲ್ಲಿವೆ. ಮುಂದೆ ಓದಿ...

    ಒಟಿಟಿಗೆ ಭೂಮಿ ಶೆಟ್ಟಿ ಎಂಟ್ರಿ

    ಒಟಿಟಿಗೆ ಭೂಮಿ ಶೆಟ್ಟಿ ಎಂಟ್ರಿ

    ಮಾಜಿ ಬಿಗ್ ಬಾಸ್ ಕನ್ನಡದ ಸ್ಪರ್ಧಿ ಭೂಮಿ ಶೆಟ್ಟಿ ಇಕ್ಕಟ್ ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಚೊಚ್ಚಲ ಸಿನಿಮಾ ಮೂಲಕ ಒಟಿಟಿ ಜಗತ್ತಿಗೂ ಪರಿಚಯ ಆಗ್ತಿರುವುದು ವಿಶೇಷ. ಭೂಮಿ ಶೆಟ್ಟಿ ಈ ಹಿಂದೆ ಕನ್ನಡ ಕಿರುತೆರೆಯಲ್ಲಿ ಖ್ಯಾತಿ ಗಳಿಸಿಕೊಂಡಿದ್ದರು. 'ಕಿನ್ನರಿ' ಧಾರಾವಾಹಿ ಭೂಮಿ ಶೆಟ್ಟಿಗೆ ಒಳ್ಳೆಯ ಯಶಸ್ಸು ತಂದು ಕೊಟ್ಟಿತ್ತು. ತದನಂತರ ಬಿಗ್ ಬಾಸ್ ಕನ್ನಡ 7ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು. ಈಗ ಇಕ್ಕಟ್ ಚಿತ್ರದೊಂದಿಗೆ ತನ್ನ ಚಮತ್ಕಾರ ಮತ್ತು ಮೋಡಿ ಮಾಡಲು ಬರ್ತಿದ್ದಾರೆ.

    ಒಟಿಟಿ ಸ್ಟಾರ್ ನಾಗಭೂಷಣ್

    ಒಟಿಟಿ ಸ್ಟಾರ್ ನಾಗಭೂಷಣ್

    ಕನ್ನಡದ ಪ್ರತಿಭಾನ್ವಿತ ಕಲಾವಿದ ನಾಗಭೂಷಣ್ ಅಭಿನಯಿಸಿರುವ ನಾಲ್ಕನೇ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಹಿಂದೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಫ್ರೆಂಚ್ ಬಿರಿಯಾನಿ, ಯುವರತ್ನ ಸಿನಿಮಾಗಳು ತೆರೆಕಂಡು ಯಶಸ್ಸು ಕಂಡಿತ್ತು. ಆಹಾ ಒಟಿಟಿಯಲ್ಲಿ 'ಹನಿಮೂನ್' ಪ್ರದರ್ಶನಗೊಂಡಿತ್ತು. ಈ ಮೂರು ಚಿತ್ರದಲ್ಲೂ ನಾಗಭೂಷಣ್ ನಟಿಸಿದ್ದರು. ಈಗ ಇಕ್ಕಟ್ ನಾಲ್ಕನೇ ಚಿತ್ರ ಒಟಿಟಿಯಲ್ಲಿ ನೇರವಾಗಿ ತೆರೆಗೆ ಬರ್ತಿದೆ.

    ಪವನ್ ಕುಮಾರ್ ಸಹ ನಿರ್ಮಾಪಕ

    ಪವನ್ ಕುಮಾರ್ ಸಹ ನಿರ್ಮಾಪಕ

    ಇಕ್ಕಟ್ ಚಿತ್ರಕ್ಕೆ ಲೂಸಿಯಾ, ಲೈಫು ಇಷ್ಟೇನೆ ನಿರ್ದೇಶಕ ಪವನ್ ಕುಮಾರ್ ಸಾಥ್ ನೀಡಿದ್ದು, ಸಹ ನಿರ್ಮಾಪಕರಾಗಿದ್ದಾರೆ. ತಮ್ಮ ಪತ್ನಿ ಮತ್ತು ಮಗಳು ಸಿನಿಮಾವನ್ನು ವೀಕ್ಷಿಸಿದ ನಂತರ ತಮ್ಮ ಸ್ವಂತ ಬ್ಯಾನರ್‌ ಪವನ್ ಕುಮಾರ್ ಫಿಲ್ಮ್ಸ್ ಅಡಿಯಲ್ಲಿ ಪ್ರಸ್ತುತಪಡಿಸಲು ಪವನ್ ಕುಮಾರ್ ನಿರ್ಧರಿಸಿದರು.

    ಹಸೀನ್ ಮತ್ತು ಇಶಮ್ ಖಾನ್

    ಹಸೀನ್ ಮತ್ತು ಇಶಮ್ ಖಾನ್

    ಮೊದಲ ಲಾಕ್ ಡೌನ್‌ನಿಂದ ಮಂಕಾಗಿದ್ದ ಹಾಗೂ ಬಹಳ ದುಃಖಕರ ಮನಸ್ಥಿತಿ ಹೊಂದಿದ್ದ ಸಮಯದಲ್ಲಿ ಇಕ್ಕಟ್ ಮಾಡುವ ಕುರಿತು ನಿರ್ಮಾಪಕರು ಮನಸ್ಸು ಮಾಡಿದರು. ಈ ಸ್ಕ್ರಿಪ್ಟ್ ಏಳು ದಿನಗಳಲ್ಲಿ ಪೂರ್ಣಗೊಂಡಿದೆ ಮತ್ತು ಕೇವಲ ಹದಿನೈದು ದಿನಗಳಲ್ಲಿ ಚಿತ್ರೀಕರಣಗೊಂಡಿದೆ ಎಂದು ಹೇಳಲಾಗಿದೆ. ಹಸೀನ್ ಮತ್ತು ಇಶಮ್ ಖಾನ್ ಜೋಡಿ ಈ ಚಿತ್ರದ ಕಥೆ ಬರೆದು, ನಿರ್ದೇಶಿಸಿದ್ದಾರೆ.

    ಒಂದೇ ಮನೆಯಲ್ಲಿ ಶೂಟಿಂಗ್

    ಒಂದೇ ಮನೆಯಲ್ಲಿ ಶೂಟಿಂಗ್

    ಇಡೀ ಚಲನಚಿತ್ರವನ್ನು ಒಂದೇ ಮನೆಯಲ್ಲಿ ಚಿತ್ರೀಕರಿಸಲಾಗಿದೆ. ಕೇವಲ 15 ಸದಸ್ಯರ ತಂಡ ಮಾತ್ರ ಕೆಲಸ ಮಾಡಿದೆ. ಕೋವಿಡ್ ಕಾರಣದಿಂದ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿತ್ತು. ಎರಡು ಬೆಡ್ ರೂಮಿನ ಅಪಾರ್ಟ್ ಮೆಂಟ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಿಸಿದ ಮೊದಲ ಕನ್ನಡ ಚಿತ್ರ ಇಕ್ಕಟ್.

    English summary
    Interesting Things to Know About Ikkat Kannada Movie. the film has set to release on july 21st in amazon prime.
    Thursday, July 15, 2021, 15:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X