ನಟಿ ಟಬು ಜೊತೆ ರೊಮ್ಯಾನ್ಸ್: ಅನುಭವ ಹಂಚಿಕೊಂಡ ಯುವ ನಟ

ಹಿರಿಯ ನಟಿ ಟಬು ಜೊತೆ ರೊಮಾನ್ಸ್‌ ಮಾಡಿದ್ದಾರೆ ಕುಡಿಮೀಸೆ ಯುವಕ. ಹೌದು, 'ದಡಕ್' ಖ್ಯಾತಿಯ ನಟ ಇಶಾನ್ ಕಟ್ಟರ್ ಈ ಅವಕಾಶ ಪಡೆದ ಪುಣ್ಯವಂತ.

Recommended Video

ಅಂದು ವೇಶ್ಯೆ ಯಾಗಿದ್ದವಳು ಇಂದು ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್..? | Shagufta Rafique

'ಎ ಸುಟೇಬಲ್ ಬಾಯ್' ಎಂಬ ವೆಬ್ ಸೀರೀಸ್‌ನಲ್ಲಿ ಈ ಇಬ್ಬರೂ ನಟಿಸುತ್ತಿದ್ದು, ಹಿರಿಯ ಮಹಿಳೆ ಹಾಗೂ ನವ ಯುವಕನ ನಡುವೆ ನಡೆವ ಪ್ರೇಮ ಕತೆ ಇದಾಗಿದೆ.

ವಿಕ್ರಂ ಸೇಠ್ ಅವರ 'ಎ ಸುಟೇಬಲ್ ಬಾಯ್' ಹೆಸರಿನ ಕಾದಂಬರಿ ಆಧರಿಸಿ ಅದೇ ಹೆಸರಿನಲ್ಲಿಯೇ ವೆಬ್ ಸೀರೀಸ್ ನಿರ್ಮಿಸಲಾಗುತ್ತಿದ್ದು, ಈಗಾಗಲೇ ಮೊದಲ ಸೀರೀಸ್ ನ ಚಿತ್ರೀಕರಣ ಮುಗಿದು ಪೋಸ್ಟರ್ ಸಹ ಬಿಡುಗಡೆ ಆಗಿದೆ.

ಹಸಿ-ಬಿಸಿ ದೃಶ್ಯಗಳುಳ್ಳ ಕತೆ

ಹಸಿ-ಬಿಸಿ ದೃಶ್ಯಗಳುಳ್ಳ ಕತೆ

ವಿಕ್ರಂ ಸೇಠ್ ಅವರ ಕಾದಂಬರಿ 'ಎ ಸುಟೇಬಲ್ ಬಾಯ್' ನಲ್ಲಿ ಬಹಳ ಹಸಿ-ಬಿಸಿ ದೃಶ್ಯಗಳಿದ್ದವು. ಹರೆಯದ ಹುಡುಗ ನಡುವಯಸ್ಸಿನ ವೇಶ್ಯೆಯ ಪ್ರೇಮದಲ್ಲಿ ಬೀಳುವುದೇ 'ಎ ಸುಟೇಬಲ್ ಬಾಯ್' ನ ಕತೆ.

ಟಬು ಜೊತೆ ರೊಮ್ಯಾಂಟಿಕ್ ದೃಶ್ಯ

ಟಬು ಜೊತೆ ರೊಮ್ಯಾಂಟಿಕ್ ದೃಶ್ಯ

ಟಬು ಜೊತೆ ರೊಮಾಂಟಿಕ್ ದೃಶ್ಯಗಳಲ್ಲಿ ನಟಿಸಿರುವ ಇಶಾನ್ ಕಟ್ಟರ್ ಟಬು ಜೊತೆ ನಟನೆಯ ಅನುಭವವನ್ನು ಹಂಚಿಕೊಂಡಿದ್ದು, ಟಬು ಜೊತೆಗೆ ಒನ್‌-ಟು-ಒನ್‌ ದೃಶ್ಯಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಪುಣ್ಯ ಎಂದು ಹೇಳಿಕೊಂಡಿದ್ದಾರೆ.

ಸಲುಗೆಯಿಂದಿದ್ದು ಸಹಾಯ ಮಾಡಿದರು

ಸಲುಗೆಯಿಂದಿದ್ದು ಸಹಾಯ ಮಾಡಿದರು

ಟಬು ಒಬ್ಬ ಅದ್ಭುತ ಹಿರಿಯ ನಟಿ, ಕಿರಿಯ ನಟನಾದ ನನ್ನೊಂದಿಗೆ ಸಲುಗೆಯಿಂದಿದ್ದು ನಾನು ಎಂಥಹಾ ದೃಶ್ಯಗಳಲ್ಲಿ ಚೆನ್ನಾಗಿ, ಅಳುಕಿಲ್ಲದೆ ನಟಿಸಲು ಅನುವು ಮಾಡಿಕೊಟ್ಟರು. ಅವರ ಸಮಕ್ಕೆ ನಟಿಸುವುದು ನಿಜಕ್ಕೂ ಸವಾಲಿನ ಕೆಲಸ ಎಂದು ಕಟ್ಟರ್ ಹೇಳಿದ್ದಾರೆ.

ಮೀರಾ ನಾಯರ್ ನಿರ್ದೇಶನ

ಮೀರಾ ನಾಯರ್ ನಿರ್ದೇಶನ

ಸಲಾಂ ಬಾಂಬೆ, ದಿ ನೇಮ್ ಸೇಕ್, ಮಾನ್ಸೂನ್ ವೆಡ್ಡಿಂಗ್, ಕಾಮಸೂತ್ರಾ ಇನ್ನೂ ಹಲವು ಸಿನಿಮಾಗಳು, ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿರುವ ಮೀರಾ ನಾಯರ್ ಈ ವೆಬ್ ಸೀರೀಸ್ ಅನ್ನೂ ನಿರ್ದೇಶಿಸುತ್ತಿದ್ದಾರೆ. ವೆಬ್ ಸೀರೀಸ್ ಬಿಬಿಸಿ ಯಲ್ಲಿ ಪ್ರಸಾರವಾಗಲಿದೆ. ನೆಟ್‌ಫ್ಲಿಕ್ಸ್‌ನಲ್ಲೂ ಪ್ರಸಾರ ಆಗುವ ಸಾಧ್ಯತೆ ಇದೆ.

More from Filmibeat

English summary
Young actor Ishaan Khattar romance with actress Tabu in a web series called 'a suitable boy'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X