'ಆ ದೃಶ್ಯಗಳಲ್ಲಿ' ನಟಿಸುವುದು ಕಷ್ಟಕರವಾಗಿತ್ತು: ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಬಾಲಿವುಡ್‌ನ ಪ್ರತಿಭಾವಂತ ನಟಿ ಮಾತ್ರವಲ್ಲ, ಹಾಟ್ ನಟಿಯೂ ಹೌದು. ಪ್ರತಿಭೆ, ಲುಕ್ಸ್, ಸೌಂದರ್ಯ ಎಲ್ಲದರ ಮಿಳಿತ ದೀಪಿಕಾ. ಅದಕ್ಕೆ ಅವರು ಬಾಲಿವುಡ್‌ನ ನಂಬರ್ 1 ನಟಿ.
ದೀಪಿಕಾ ಪಡುಕೋಣೆ ನಟನೆಯ 'ಗೆಹ್ರಾಹಿಯಾ' ಸಿನಿಮಾದ ಟ್ರೇಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ದೀಪಿಕಾರ ಹಾಟ್ ಅವತಾರಕ್ಕೆ ವಿಶೇಷವಾಗಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ದೀಪಿಕಾ ನಟಿಸಿರುವ ಪರಿ ಹಲವರ ಹುಬ್ಬೇರಿಸಿದೆ.
Recommended Video
'ಗೆಹ್ರಾಹಿಯಾ' ಟ್ರೇಲರ್‌ನಲ್ಲಿ ಹಲವು ರೊಮ್ಯಾಂಟಿಕ್ ದೃಶ್ಯಗಳಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ತಮಗಿಂತ ಕಿರಿಯ ನಟ ಸಿದ್ಧಾಂತ್ ಚತುರ್ವೇದಿಗೆ ಹಲವು ಬಾರಿ ತುಟಿಯೊತ್ತಿದ್ದಾರೆ. ಜೊತೆಗೆ ಬೆಡ್‌ರೂಂ ದೃಶ್ಯಗಳಲ್ಲಿಯೂ ಸಿದ್ಧಾರ್ಥ್ ಜೊತೆ ನಟಿಸಿದ್ದಾರೆ ದೀಪಿಕಾ. ಈ ದೃಶ್ಯಗಳಲ್ಲಿ ನಟಿಸಿದ ಅನುಭವ ಹೇಗಿತ್ತು ಎಂಬುದನ್ನು ಸಂದರ್ಶನವೊಂದರಲ್ಲಿ ದೀಪಿಕಾ ಮಾತನಾಡಿದ್ದಾರೆ.

''ಇಂಟಿಮೇಟ್ ದೃಶ್ಯಗಳಲ್ಲಿ ನಟಿಸುವುದು ಸುಲಭವಾಗಿರಲಿಲ್ಲ. ಸಿನಿಮಾದ ನಿರ್ದೇಶಕ ಶಕುನ್ ಭಾಟ್ರಾಗೆ ಅಲ್ಲದೇ ಇನ್ನಾವುದೇ ನಿರ್ದೇಶಕರಿಗಾದರೂ ನಾನು ಇಂಥಹಾ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿಬಿಟ್ಟಿರುತ್ತಿದ್ದೆ. ಆದರೆ ಶಕುನ್ ಭಾಟ್ರಾ ಎಲ್ಲ ನಟರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಂಥಹಾ ದೃಶ್ಯಗಳಲ್ಲಿ ನಟಿಸುವುದು ಕಷ್ಟವಾಗದೆ ನೋಡಿಕೊಂಡರು'' ಎಂದಿದ್ದಾರೆ ದೀಪಿಕಾ ಪಡುಕೋಣೆ.
''ಇಂಥಹಾ ಸಮಯದಲ್ಲಿ ತೀರಾ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವುದು ಎಲ್ಲ ನಟರಿಗೂ ಕಷ್ಟವಾಗಿತ್ತು. ನನಗಂತೂ ಬಹಳ ಕಷ್ಟವಾಗಿತ್ತು. ಆದರೆ ನಿರ್ದೇಶಕ ಶಕುನ್ ಭಾಟ್ರಾ ನಮಗೆಲ್ಲ ಸುರಕ್ಷಿತವಾದ, ಆಹ್ಲಾದಕರವಾದ ವಾತಾವರಣ ಸೃಷ್ಟಿಸಿಕೊಟ್ಟರು. ಹಾಗಾಗಿ ನಮಗೆ ಅಂಥಹಾ ದೃಶ್ಯಗಳಲ್ಲಿ ನಟಿಸುವುದು ಸುಲಭವಾಯಿತು'' ಎಂದಿದ್ದಾರೆ ದೀಪಿಕಾ.
''ಪ್ರೇಕ್ಷಕರಿಗೆ ಚೆನ್ನಾಗಿ ಕಾಣಿಸುತ್ತದೆಂದು, ಉದ್ರೇಕತೆಯ ಭಾವ ಮೂಡಿಸಲೆಂದು ರೊಮ್ಯಾಂಟಿಕ್ ದೃಶ್ಯಗಳನ್ನು, ಮುತ್ತಿನ ದೃಶ್ಯಗಳನ್ನು ಶಕುನ್ ಭಾಟ್ರಾ ತುರುಕಿಲ್ಲ. ಬದಲಿಗೆ ಆ ದೃಶ್ಯಗಳು ಆಯಾ ಸನ್ನಿವೇಶಕ್ಕೆ ಪೂರಕವಾಗಿಯೇ ಕತೆಯಲ್ಲಿ ಹೊಮ್ಮಿ ಬರುತ್ತವೆ ಹಾಗಾಗಿ ನನಗೂ ಸಹ ಅಂಥಹಾ ದೃಶ್ಯಗಳಲ್ಲಿ ನಟಿಸುವುದು ತಪ್ಪು ಎನಿಸಲಿಲ್ಲ'' ಎಂದಿದ್ದಾರೆ ದೀಪಿಕಾ ಪಡುಕೋಣೆ.

''ಭಾರತೀಯ ಸಿನಿಮಾ ರಂಗದಲ್ಲಿ ಈವರೆಗೆ ಮುಟ್ಟದೇ ಇದ್ದ ವಿಷಯವನ್ನು 'ಗೆಹರಾಹಿಯಾ' ಸಿನಿಮಾದಲ್ಲಿ ಮುಟ್ಟಿದ್ದಾರೆ ಶಕುನ್ ಭಾಟ್ರಾ. ಸಿನಿಮಾದಲ್ಲಿ ನಾನು ನಟಿಸಿರುವ ಪಾತ್ರಕ್ಕೂ ನನ್ನ ಈ ಹಿಂದಿನ ಜೀವನಕ್ಕೂ ಸಣ್ಣ ಸಂಬಂಧವೂ ಇದೆ ಎನಿಸಿತು. ನಾನೂ ಸಹ ನಾನೇ ನಟಿಸಿದ ಆಲಿಶಾ ಖನ್ನಾ ಪಾತ್ರದೊಟ್ಟಿಗೆ ರಿಲೇಟ್ ಮಾಡಿಕೊಂಡೆ'' ಎಂದು ಧೈರ್ಯವಾಗಿ ಹೇಳಿದ್ದಾರೆ ದೀಪಿಕಾ ಪಡುಕೋಣೆ.
'ಗೆಹ್ರಾಹಿಯಾ' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಆಲಿಶಾ ಖನ್ನಾ ಪಾತ್ರದಲ್ಲಿ ನಟಿಸಿದ್ದಾರೆ. ಮದುವೆಯಾಗಿ ಪತಿ ಇದ್ದರೂ ತನ್ನ ಸಂಬಂಧಿಯ ಪ್ರಿಯತಮನೊಡನೆ ಅಕ್ರಮ ಸಂಬಂಧ ಹೊಂದುವ ಪಾತ್ರ ಅವರದ್ದು. ದೀಪಿಕಾರ ಪತಿಯಾಗಿ ಧೈರ್ಯ ಕೌರವ್ ನಟಿಸಿದ್ದರೆ, ದೀಪಿಕಾರ ಪ್ರಿಯಕರನ ಪಾತ್ರದಲ್ಲಿ ಸಿದ್ಧಾಂತ್ ಚತುರ್ವೇಧಿ ನಟಿಸಿದ್ದಾರೆ. ಸಿನಿಮಾದಲ್ಲಿ ನಟಿ ಅನನ್ಯಾ ಪಾಂಡೆ ಸಹ ಇದ್ದು, ಸಿದ್ಧಾಂತ್‌ನ ಪ್ರೇಯಸಿಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಸಿನಿಮಾವನ್ನು ಶಕುನ್ ಭಾಟ್ರಾ ನಿರ್ದೇಶನ ಮಾಡಿದ್ದು, ಧರ್ಮಾ ಪ್ರೊಡಕ್ಷನ್ ಹಾಗೂ ವೈಯಕ್ಕಾಮ್ 18 ನಿರ್ಮಾಣ ಮಾಡಿದೆ. ಸಿನಿಮಾವು ಫೆಬ್ರವರಿ 11 ಕ್ಕೆ ನೇರವಾಗಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











