ಮತ್ತೆ ಬಂತು 'ಜಮ್ತಾರಾ': ನಿಮ್ಮ ಮೊಬೈಲ್ ಜಾಗೃತೆ!

ಮೊಬೈಲ್ ಹೊಂದಿರುವ ಬಹುತೇಕರಿಗೆ ಒಂದಲ್ಲ ಒಮ್ಮೆ ಕರೆಯೊಂದು ಬಂದಿರುತ್ತದೆ, 'ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಅದನ್ನು ಪುನಃ ನವೀಕರಿಸಲು ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿ ಪಿನ್ ಹೇಳಿ' ಎಂದು. ಒಟಿಪಿ ಪಿನ್ ಸಂಖ್ಯೆ ಹೇಳಿದವರು ತಮ್ಮ ಖಾತೆಯಲ್ಲಿರುವ ಹಣವನ್ನೆಲ್ಲ ಕಳೆದುಕೊಂಡಿರುತ್ತಾರೆ. ಒಟಿಪಿ ಹೇಳದವರು ಬಚಾವ್.

ಹೀಗೆ ನಕಲಿ ಬ್ಯಾಂಕರ್‌ಗಳಾಗಿ ಕರೆ ಮಾಡಿ ಕೋಟ್ಯಂತರ ರುಪಾಯಿ ಹಣ ಗಳಿಸುವ ತಂಡವೇ ಇದೆ. ಅಸಲಿಗೆ ಇದೊಂದು ಬಹುದೊಡ್ಡ ಹಗರಣ, ಈ ಹಗರಣದ ಮೂಲ, ಬಹುತೇಕ ಅನಕ್ಷರಸ್ಥರೇ ತುಂಬಿರುವ 'ಜಮ್ತಾರಾ' ಹೆಸರಿನ ಊರು!

ವಿಶ್ವವೇ ತಿರುಗಿ ನೋಡುವಂತೆ ದೊಡ್ಡ ಹಗರಣವೊಂದನ್ನು ಜಮ್ತಾರಾ ಹೆಸರಿನ ಊರಿನ ಕೆಲ ಯುವಕರು ಮಾಡಿದ್ದರು. ಈ ಜಮ್ತಾರಾ ಯುವಕರ ಈ ಫೋನ್ ಕಾಲ್ ಸ್ಕ್ಯಾಮ್, ಸರ್ಕಾರ, ಬ್ಯಾಂಕು ಹಾಗೂ ಆರ್‌ಬಿಐ ಗಳನ್ನೆ ಪೇಚಿಗೆ ಸಿಲುಕಿಸಿತ್ತು. ಸಾವಿರಾರು ಕೋಟಿ ರುಪಾಯಿ ಹಣ ಖರ್ಚು ಮಾಡಿ 'ಒಟಿಪಿ ನೀಡಬೇಡಿ' ಎಂದು ಬ್ಯಾಂಕ್ ಗ್ರಾಹಕರನ್ನು ಜಾಗೃತಗೊಳಿಸುವ ಜಾಹೀರಾತುಗಳನ್ನು ಪ್ರಕಟಿಸಬೇಕಾಗಿ ಬಂತು. ಈಗಲೂ ಜಾಹೀರಾತು ಪ್ರಕಟಿಸಲಾಗುತ್ತಿದೆ.

'ಜಮ್ತಾರಾ'ದ ಈ ನಕಲಿ ಬ್ಯಾಂಕರ್‌ಗಳ ಬಗ್ಗೆ ಅದೇ ಹೆಸರಿನಲ್ಲಿ ವೆಬ್ ಸರಣಿಯೊಂದು ಈ ಹಿಂದೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಿ ಭಾರಿ ಹಿಟ್ ಆಗಿತ್ತು. ಇದೀಗ ಅದೇ ವೆಬ್ ಸರಣಿಯ ಎರಡನೇ ಸೀಸನ್ ಬಿಡುಗಡೆ ಆಗಿದೆ.

Jamtara Season 02 Web Series Released On Netflix

ಜಮ್ತಾರಾದ ಯುವಕರ ಫೋನ್ ಸ್ಕ್ಯಾಮ್‌ನ ಬಗ್ಗೆ ಹಲವು ವಿವರಗಳನ್ನು ಬಿಟ್ಟುಕೊಟ್ಟಿದ್ದ ಜಮ್ತಾರಾ ವೆಬ್ ಸರಣಿ ಸೆಪ್ಟೆಂಬರ್ 23ರಂದು ಎರಡನೇ ಸೀಸನ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದ್ದು, ಟ್ವಿಟ್ಟರ್‌ನಲ್ಲಿ ಈಗಾಗಲೇ ವೆಬ್ ಸರಣಿ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.

ಫೋನ್‌ ಸ್ಕ್ಯಾಮ್‌ ಅನ್ನು ಕಾಲಕಾಲಕ್ಕೆ ಹೇಗೆ ತಿದ್ದಿ ಬದಲಾಯಿಸುತ್ತಿದ್ದರು, ತಮ್ಮನ್ನು ತಾವು ಹೇಗೆ ಅಪ್‌ಡೇಟ್ ಮಾಡಿಕೊಳ್ಳುತ್ತಿದ್ದರು. ಜಾಮ್ತಾರಾದ ಯುವಕರ ಸ್ಕ್ಯಾಮ್‌ನ ಸುತ್ತ ಸುತ್ತವರೆದ ರಾಜಕೀಯ ಇನ್ನಿತರೆ ವಿಷಯಗಳ ಬಗ್ಗೆ ಎರಡನೇ ಸೀಸನ್ ಹೆಚ್ಚು ಗಮನ ಹರಿಸಿದೆ ಎಂದು ವಿಮರ್ಶಿಸಿದ್ದಾರೆ ನೆಟ್ಟಿಗರು.

ಮೊದಲ ಸೀಸನ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಬಹುತೇಕ ಪಾತ್ರಗಳು ಎರಡನೇ ಸೀಸನ್‌ನಲ್ಲಿಯೂ ಮುಂದುವರೆದಿವೆ. ಮೊದಲ ಸೀಸನ್‌ನಲ್ಲಿ ಪ್ರಮುಖ ಸ್ಕ್ಯಾಮರ್ ಆಗಿದ್ದ ಸನ್ನಿ ಎರಡನೇ ಸೀಸನ್‌ನಲ್ಲಿಯೂ ಸ್ಕ್ಯಾಮ್ ಮುಂದುವರೆಸಿದ್ದಾನೆ ಆದರೆ ಆತನ ಪಾರ್ಟನರ್ ಗುಡಿಯಾ ರಾಜಕಾರಣಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾಳೆ. ಈ ಬಾರಿ ಸನ್ನಿ ಯಾವ ರೀತಿಯ ಸ್ಕ್ಯಾಮ್ ಮಾಡುತ್ತಾನೆ, ಅವನಿಗೆ ಯಾವ ಯಾವ ಸಮಸ್ಯೆಗಳು ಎದುರಾಗುತ್ತವೆ ಎಂಬುದು ಕುತೂಹಲ ಕೆರಳಿಸಿದೆ.

More from Filmibeat

English summary
Jamtara season 02 web series released on Netflix on September 23. Netizen hailed web series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X