ಒಂದೇ ಓಟಿಟಿ ಫ್ಲಾಟ್‌ಪಾರ್ಮ್‌ನಲ್ಲಿ 'ಜವಾನ್' ಹಾಗೂ 'ಮಿಸ್‌ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ': ರಿಲೀಸ್ ಯಾವಾಗ?

ಈ ವಾರ ಬಾಲಿವುಡ್‌ನಿಂದ 'ಜವಾನ್' ತೆಲುಗಿನಿಂದ 'ಮಿಸ್‌ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾಗಳು ರಿಲೀಸ್ ಆಗಿದೆ. ಸಿನಿಮಾ ರಿಲೀಸ್‌ಗೂ ಮೊದ್ಲೆ ಈಗ ಓಟಿಟಿ, ಸ್ಯಾಟಲೈಟ್ ರೈಟ್ಸ್ ಕೇಳ್ತಾರೆ. ಜನ ಬರೀ ಶುಕ್ರವಾರ ಥಿಯೇಟರ್‌ನಲ್ಲಿ ರಿಲೀಸ್ ಆಗುವ ಸಿನಿಮಾ ಮಾತ್ರವಲ್ಲ, ಓಟಿಟಿಯಲ್ಲಿ ಪ್ರತಿ ವೀಕೆಂಡ್‌ನಲ್ಲಿ ಸ್ಟ್ರೀಮಿಂಗ್ ಆಗುವ ಚಿತ್ರಗಳ ಮೇಲೆ ಕಣ್ಣಿಟ್ಟುತ್ತಾರೆ.

ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುತ್ತಿದೆ. ಅಟ್ಲಿ ಟೇಕಿಂಗ್, ಕಿಂಗ್ ಪರ್ಫಾರ್ಮೆನ್ಸ್, ಅನಿರುದ್ಧ್ ಮ್ಯೂಸಿಕ್ ಎಲ್ಲಾ ಸಿನಿಮಾ ಬ್ಲಾಕ್‌ಬಸ್ಟರ್ ಟಾಕ್ ಗಿಟ್ಟಿಸಿಕೊಂಡಿದೆ. ರೆಡ್ ಚಿಲ್ಲಿಸ್ ಸಂಸ್ಥೆಯಲ್ಲಿ ಸ್ವತಃ ಶಾರುಖ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. 2 ದಿನಕ್ಕೆ ಸಿನಿಮಾ 200 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

Jawan and Miss shetty mr polishetty Movies will streaming in same ott platform

ಬೆಂಗಳೂರಿನಲ್ಲಿ ಮುಂಜಾನೆ 6 ಗಂಟೆಗೆ 'ಜವಾನ್' ದರ್ಶನವಾಗಿತ್ತು. ಮೂರ್ನಾಲ್ಕು ತಮಿಳು, ತೆಲುಗು ಸಿನಿಮಾಗಳನ್ನು ಸೇರಿಸಿ ಅಟ್ಲಿ 'ಜವಾನ್' ಕಥೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಚಿತ್ರದಲ್ಲಿ ಶಾರುಖ್ ತಂದೆ, ಮಗನಾಗಿ ಡಬಲ್ ರೋಲ್‌ನಲ್ಲಿ ಮಿಂಚಿದ್ರೆ ಪೊಲೀಸ್ ಅಧಿಕಾರಿಯಾಗಿ ನಯನತಾರಾ ದರ್ಬಾರ್ ನಡೆಸಿದ್ದಾರೆ. ವಿಲನ್ ಆಗಿ ವಿಜಯ್ ಸೇತುಪತಿ ಮಿಂಚಿದ್ದಾರೆ.

'ಜವಾನ್' ಜೊತೆಗೆ ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೊಲಿಶೆಟ್ಟಿ ನಟನೆಯ ರೊಮ್‌-ಕಾಮ್ 'ಮಿಸ್‌ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ಇದೇ ವಾರ ತೆರೆಗಪ್ಪಳಿಸಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಬೋಲ್ಡ್‌ ಕಾನ್ಸೆಪ್ಟ್‌ನ ನಿರ್ದೇಶಕ ಮಹೇಶ್ ಬಾಬು ಬಹಳ ಸೊಗಸಾಗಿ ತೆರೆಗೆ ತಂದು ಸಕ್ಸಸ್ ಕಂಡಿದ್ದಾರೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಒಳ್ಳೆ ಕಂಟೆಂಟ್ ಇದ್ದರೂ ಸಿನಿಮಾ ಬಹಳ ಸ್ಲೋ ಎನ್ನುತ್ತಿದ್ದಾರೆ. ಇನ್ನು ಸ್ವೀಟಿ, ನವೀನ್ ಪೈಪೋಟಿಗೆ ಬಿದ್ದು ನಟಿಸಿದ್ದಾರೆ.

ಮಾಸ್ಟರ್ ಶೆಫ್ ರವಳಿ ಅನ್ವಿತಾ ಶೆಟ್ಟಿ. ಸ್ಯಾಂಡಪ್ ಕಾಮೆಡಿಯನ್ ಸಿದ್ದು ಪೊಲಿಶೆಟ್ಟಿ. ಅನ್ವಿತಾಗೆ ಮದುವೆ ಬೇಡ ಮಗು ಮಾತ್ರ ಬೇಕು. ಅದಕ್ಕಾಗಿ ವೀರ್ಯದಾನಿಯಿಂದ ತಾಯಿಯಾಗಲೂ ಬಯಸುತ್ತಾಳೆ. ಅದಕ್ಕಾಗಿ ಸಿದ್ದುನ ಆಯ್ಕೆ ಮಾಡಿಕೊಳ್ಳುತ್ತಾರೆ. ಮುಂದೆ ಈ ಕತೆ ಆ ದಿಕ್ಕಿಗೆ ಸಾಗುತ್ತದೆ. ಕೊನೆಗೂ ಇಬ್ಬರು ಒಂದಾಗ್ತಾರಾ ಅನ್ನೋದನ್ನ ತೆರೆಮೇಲೆ ನೋಡಬೇಕು.

'ನಿಶಬ್ದಂ' ಬಳಿಕ ಅನುಷ್ಕಾ ಶೆಟ್ಟಿ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಅಭಿಮಾನಿಗಳು ನೆಚ್ಚಿನ ನಟಿಯನ್ನು ತೆರೆಮೇಲೆ ನೋಡಲು ಕಾಯತ್ತಿದ್ದರು. ಕತೆ ಕೇಳಿ ಬಹಳ ಇಷ್ಟಪಟ್ಟು ಸ್ವೀಟಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಯುವಿ ಕ್ರಿಯೇಷನ್ಸ್ ಸಂಸ್ಥೆ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದೆ. ಈ ಮೆಚೂರ್ಡ್ ಲವ್‌ಸ್ಟೋರಿ ಸಿನಿಮಾ ಒಂದು ವರ್ಗದ ಪ್ರೇಕ್ಷಕರಿಗೆ ಮಾತ್ರ ಇಷ್ಟವಾಗುತ್ತದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲೋದಿ ಕಷ್ಟವಿದೆ. ಕರ್ನಾಟಕದಲ್ಲಿ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 'ಜವಾನ್' ಎದುರು ಈ ಸಿನಿಮಾ ಮಂಕಾಗಿದೆ.

ಅಂದಹಾಗೆ 'ಜವಾನ್' ಹಾಗೂ 'ಮಿಸ್‌ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಎರಡೂ ಸಿನಿಮಾಗಳ ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್ ಪಾಲಾಗಿದೆ. ಒಂದು ಮಾಸ್ ಆಕ್ಷನ್ ಸಿನಿಮಾ ಮತ್ತೊಂದು ರೊಮ್ಯಾಂಟಿಕ್ ಸಿನಿಮಾ. ಮುಂದಿನ ತಿಂಗಳೇ ಸಿನಿಮಾಗಳು ಓಟಿಟಿಗೆ ಬಂದರೂ ಅಚ್ಚರಿಪಡಬೇಕಿಲ್ಲ. ಹಿಂದೆ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾದ 7 ವಾರಗಳ ಬಳಿಕ ಓಟಿಟಿಗೆ ಬಿಡಬೇಕಿತ್ತು. ಈಗ ದೊಡ್ಡ ದೊಡ್ಡ ಸಿನಿಮಾಗಳೇ 25 ದಿನಕ್ಕೆ ಸ್ಮಾಲ್‌ ಸ್ಕ್ರೀನ್‌ಗೆ ಬರ್ತಿದೆ. 'ಜವಾನ್' ಅಕ್ಟೋಬರ್ ಮೊದಲ ವಾರದಲ್ಲೇ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ.

More from Filmibeat

English summary
Jawan and Miss shetty mr polishetty in netflix
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X