OTT News: ಓಟಿಟಿಯಲ್ಲಿ 2023ರ ಟಾಪ್ 5 ಬ್ಲಾಕ್ ಬಸ್ಟರ್ ಸಿನಿಮಾಗಳ ಹಬ್ಬ

By ಫಿಲ್ಮಿಬೀಟ್ ಡೆಸ್ಕ್

2023 ಕನ್ನಡ ಚಿತ್ರರಂಗಕ್ಕೆ ಅಲ್ಲದೇ ಹೋದರೂ, ಬೇರೆ ಸಿನಿಮಾ ಇಂಡಸ್ಟ್ರಿಗೆ ಆಶಾದಾಯಕವಾಗಿತ್ತು. ಬಾಲಿವುಡ್, ಕಾಲಿವುಡ್, ಟಾಲಿವುಡ್ ಸೇರಿದಂತೆ ಹಾಲಿವುಡ್‌ ಸಿನಿಮಾಗಳು ಕೂಡ ಮೆಚ್ಚುಗೆ ಗಳಿಸಿದ್ದವು. ಅಷ್ಟೇ ಅಲ್ಲದೆ ಬಾಕ್ಸಾಫೀಸ್‌ನಲ್ಲೂ ಬ್ಲಾಕ್ ಬಸ್ಟರ್ ಸಿನಿಮಾಗಳು ಎನಿಸಿಕೊಂಡಿದ್ದವು. ಬಹುತೇಕ ಬಿಗ್ ಬಜೆಟ್ ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದಿದ್ದವು.

ಓಟಿಟಿಯಲ್ಲಿ 2023ರಲ್ಲಿ ಸೂಪರ್‌ ಸಕ್ಸಸ್ ಕಂಡ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡುತ್ತಿವೆ. 2024ರಲ್ಲಿ ಈ ಉತ್ಸಾಹವನ್ನು ಮರುಕಳಿಸಲು ಮತ್ತೆ ವೀಕ್ಷಿಸಬಹುದಾಗಿದೆ. ಆಕ್ಷನ್, ರೊಮ್ಯಾನ್ಸ್, ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟ ಪಡುವವರಿಗಾಗಿ 2023 ಟಾಪ್ 5 ಬಿಗ್ ಬಜೆಟ್ ಸೂಪರ್ ಹಿಟ್ ಸಿನಿಮಾಗಳು ಇಲ್ಲಿವೆ.

Jio Cinema streaming 2023 released top 5 movies

ಅಕ್ವಮ್ಯಾನ್ ಮತ್ತು ಲಾಸ್ಟ್ ಕಿಂಗ್ಡಂ:

2018ರ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ಅಕ್ವಾಮ್ಯಾನ್ ಸೀರಿಸ್‌ನ 'ಅಕ್ವಾಮ್ಯಾನ್ ಮತ್ತು ಲಾಸ್ಟ್ ಕಿಂಗ್ಡಂ' 2023ರ ಅಮೆರಿಕನ್ ಸೂಪರ್ ಹೀರೋ ಎನಿಸಿಕೊಂಡಿತ್ತು. ಜೇಮ್ಸ್ ವ್ಯಾನ್ ನಿರ್ದೇಶಿಸಿರುವ ಈ ಸಿನಿಮಾವನ್ನು ಡಿಸಿ ಸ್ಟುಡಿಯೋಸ್ ನಿರ್ಮಾಣ ಮಾಡಿತ್ತು. ಈ ಸಿನಿಮಾ 205 ಮಿಲಿಯನ್ ಡಾಲರ್ ಬಜೆಟ್‌ನಲ್ಲಿ ನಿರ್ಮಾಣ ಆಗಿದೆ. ಅಕ್ವಾಮ್ಯಾನ್ ಪಾತ್ರದಲ್ಲಿ ಜೇಸನ್ ಮೊಮೋ ಆರ್ಥರ್ ಕರಿ ನಟಿಸಿದ್ದಾರೆ. ಅಕ್ವಾಮ್ಯಾನ್ ಸೋದರ ಆರ್ಮ್ ಪಾತ್ರದಲ್ಲಿ ಪ್ಯಾಟ್ರಿಕ್ ವಿಲ್ಸನ್ ನಟಿಸಿದ್ದಾರೆ. ಈ ಸೀರಿಸ್‌ಗೆ ವಿಶೇಷ ಅಭಿಮಾನಿಗಳಿದ್ದು, ಜಿಯೋ ಸಿನಿಮಾದಲ್ಲಿ ಲಭ್ಯವಿದೆ.

ಫಾಸ್ಟ್ ಎಕ್ಸ್

ಕಳೆದ ವರ್ಷ ಹಾಲಿವುಡ್‌ನ ಮತ್ತೊಂದು ಸಿನಿಮಾ ಕೂಡ ಜೋರಾಗಿ ಸದ್ದು ಮಾಡಿತ್ತು. ಅದುವೇ 'ಫಾಸ್ಟ್ ಎಕ್ಸ್'. ಇದು ಜನಪ್ರಿಯ 'ಫಾಸ್ಟ್ ಫ್ಯೂರಿಯಸ್'ನ 10ನೇ ಸರಣಿಯಾಗಿದ್ದು, 11ನೇ ಫ್ರಾಂಚೈಸಿಯಾಗಿದೆ. ಹಾಲಿವುಡ್‌ನ ಜನಪ್ರಿಯ ನಟ ವಿನ್ ಡೀಸೆಲ್ ಇಲ್ಲಿ ಡೊಮಿನಿಕ್ ಟೊರೆಟ್ಟೊ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫಾಸ್ಟ್ ಎಕ್ಸ್‌ನಲ್ಲಿ ಅದ್ಭುತ ಸ್ಟಂಟ್‌ಗಳನ್ನು ನೋಡಲು ಪ್ರೇಕ್ಷಕರಿಗೆ ಸಿಕ್ಕಿತ್ತು. ಈ ಸಿನಿಮಾ ಜಿಯೋ ಸಿನಿಮಾದಲ್ಲಿದೆ.

ಇಂಡಿಯಾನಾ ಜೋನ್ಸ್ & ಡಯಲ್ ಆಫ್ ಡೆಸ್ಟಿನಿ

ಜೇಮ್ಸ್ ಮಾರಿಗೋಲ್ಡ್ ನಿರ್ದೇಶಿಸಿದ ಸಿನಿಮಾ 'ಇಂಡಿಯಾನಾ ಜೋನ್ಸ್ & ಡಯಲ್ ಆಫ್ ಡೆಸ್ಟಿನಿ'. ಈ ಸಿನಿಮಾ ಕೂಡ ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಇದು ಇಂಡಿಯಾನಾ ಜೋನ್ಸ್ ಸೀರಿಸ್‌ನ ಐದನೆಯ ಹಾಗೂ ಕೊನೆಯ ಸರಣಿಯಾಗಿತ್ತು. ಈ ಸಿನಿಮಾ ಹ್ಯಾರಿಸನ್ ಫೋರ್ಡ್, ಜಾನ್ ರಿಸ್-ಡೇವಿಸ್ ಮತ್ತು ಕರೆನ್ ಅಲೆನ್ ಅಂತಹ ಪ್ರಮುಖ ಪಾತ್ರಗಳನ್ನು ಹೊಂದಿದೆ. ಇವರೊಂದಿಗೆ ಫೋಬಿ ವಾಲರ್-ಬ್ರಿಡ್ಜ್, ಅಂಟೋನಿಯೊ ಬಂದೆರಾಸ್, ಟೋಬಿ ಜೋನ್ಸ್, ಬಾಯ್ಸ್ ಹೋಲ್ಡ್ ಬ್ರೂಕ್, ಎಥನ್ನ್ ಇಸಿಡೋರ್ ಮತ್ತು ಮ್ಯಾಡ್ಸ್ ಮಿಕೆಲ್ಸೆನ್ ನಟಿಸಿದ್ದಾರೆ. ಈ ಸಿನಿಮಾ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿದೆ.

Jio Cinema streaming 2023 released top 5 movies

ಜವಾನ್

ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಗಡಿದಾಟಿದ ಸಿನಿಮಾ 'ಜವಾನ್'. ಶಾರುಖ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾವನ್ನು ಪತ್ನಿ ಗೌರಿ ಖಾನ್ ನಿರ್ಮಾಣ ಮಾಡಿದ್ದರು. 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಈ ಸಿನಿಮಾದಲ್ಲಿ ಶಾರುಖ್ ದ್ವಿಪಾತ್ರದಲ್ಲಿ ನಟಿಸಿದ್ದರು. ಈ ಆಕ್ಷನ್ ಸಿನಿಮಾದಲ್ಲಿ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ತಮಿಳಿನ ಯುವ ನಿರ್ದೇಶಕ ಅಟ್ಲಿ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ.

ಲಿಯೊ

ಲೋಕೇಶ್ ಕನಗರಾಜ್ ನಿರ್ದೇಶಿಸಿದ ಸಿನಿಮಾ 'ಲಿಯೋ' ರೂ.300 ಕೋಟಿ ಬಜೆಟ್ ನಿರ್ಮಾಣ ಆಗಿತ್ತು. ಆಕ್ಷನ್, ಥ್ರಿಲ್ಲರ್ ಜಾನರ್‌ನ ಈ ಸಿನಿಮಾದಲ್ಲಿ ದಳಪತಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ವಿಜಯ್ ಜೊತೆ ಪ್ರಮುಖ ಪಾತ್ರದಲ್ಲಿ ಸಂಜಯ್ ದತ್, ಅರ್ಜುನ್ ಸರ್ಜಾ, ತ್ರಿಶಾ ಸೇರಿದಂತೆ ಮತ್ತಿತರರು ನಟಿಸಿದ್ದಾರೆ. ಈ ಐದು ಸಿನಿಮಾಗಳು ಜಿಯೋ ಸಿನಿಮಾದಲ್ಲಿ ಲಭ್ಯವಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ.

More from Filmibeat

English summary
Jio Cinema streaming 2023 released top 5 movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X