JioStar ; ಮುಂಬರುವ 3 ವರ್ಷಗಳಲ್ಲಿ 10 ಬಿಲಿಯನ್ ಹೂಡಿಕೆ ಮಾಡಲಿರುವ ಜಿಯೋ ಸ್ಟಾರ್..!

ಭಾರತದಲ್ಲಿ ಡಿಜಿಟಲ್ ವೇದಿಕೆ ಜನ್ಮವೆತ್ತಿ ಹದಿನೈದು-ಹದಿನಾರು ವರ್ಷಗಳಾಗಿವೆ. 2008ರಲ್ಲಿ ಮೊದಲ ಬಾರಿ ರಿಲಯನ್ಸ್ ಬಿಗ್‌ಫ್ಲಿಕ್ಸ್ ಎಂಬ ಹೆಸರಿನಲ್ಲಿ ಓಟಿಟಿ ಲೋಕಕ್ಕೆ ಮುನ್ನುಡಿ ಬರೆಯಿತು. ಆ ನಂತರ ನೆಕ್ಸ್‌ ಜಿಟಿವಿ , 2013ರಲ್ಲಿ ಡಿಟ್ಟೋ, 2015ರಲ್ಲಿ ಹಾಟ್ ಸ್ಟಾರ್ ಆ ನಂತರ ಅಮೆಜಾನ್ ಹೀಗೆ ಕೆಲವೇ ವರ್ಷಗಳ ಅಂತರದಲ್ಲಿ ಎಣಿಕೆಗೆ ನಿಲುಕದ ಸಂಖ್ಯೆಯಲ್ಲಿ ಓಟಿಟಿ ವೇದಿಕೆಗಳು ಹುಟ್ಟಿಕೊಂಡವು.

ಕೊರೊನಾ ಕಾಲಘಟ್ಟ ಡಿಜಿಟಲ್ ಲೋಕಕ್ಕೆ ಅವಕಾಶದ ದಿಡ್ಡಿ ಬಾಗಿಲಾಯಿತು. ಮಿಲೇನಿಯಲ್ಸ್ ಅಂದರೆ 18 ರಿಂದ 35ರ ವಯೋಮಾನದವರನ್ನೇ ಗುರಿಯಾನ್ನಾಗಿಸಿಕೊಂಡು ದಿನಗಳೆದಂತೆ ವೇಗವಾಗಿ ಬೆಳೆಯುತ್ತಿರುವ ಈ ಓಟಿಟಿ ವೇದಿಕೆಯಲ್ಲಿ ಜಿಯೋ ಸ್ಟಾರ್ ಬಹುದೊಡ್ಡ ಕ್ರಾಂತಿಯನ್ನೇ ಮಾಡುತ್ತಿದೆ. ಒಂದಲ್ಲ, ಎರಡಲ್ಲ ಬದಲಿಗೆ ಹತ್ತು ಬಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡಲು ಮುಂದಾಗಿದೆ.

JioStar to Pour 10 Billion Into Content Over 3 Years Vice Chairman Uday Shankar

ಹೌದು, ಕಳೆದ ಕೆಲ ದಿನಗಳಿಂದ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮೊದಲ ವಿಶ್ವ ಶ್ರವಣ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ನಡೆಯುತ್ತಿದೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಚಾಲನೆಗೊಂಡ ದೇಶದ ಅತೀ ದೊಡ್ಡ ಈ ಮನರಂಜನಾ ಕಾರ್ಯಕ್ರಮದಲ್ಲಿ ಜಿಯೋ ಸ್ಟಾರ್ ಉಪಾಧ್ಯಕ್ಷ ಉದಯ್ ಶಂಕರ್ ಮತ್ತು ಮೀಡಿಯಾ ಪಾರ್ಟನರ್ಸ್‌ ಏಷ್ಯಾದ ವ್ಯವಸ್ಥಾಪಕ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ವಿವೇಕ್ ಕೌಟೊ ನಡುವೆ ನಡೆದ ಸಂವಾದ ನಡೆಯಿತು. ಈ ಸಮಯದಲ್ಲಿ ಹಲವು ವಿಚಾರಗಳನ್ನು ಉದಯ್ ಶಂಕರ್ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಉದಯ್ ಶಂಕರ್ ಕಳೆದ 25-30 ವರ್ಷಗಳಲ್ಲಿ ಭಾರತೀಯ ಮಾಧ್ಯಮದಲ್ಲಿ ಭಾರೀ ಬದಲಾವಣೆಗಳಾಗಿವೆ, ಅದರಲ್ಲಿಯೂ ಜಿಯೋ ಬಂದ ನಂತರ ಕಳೆದ ದಶಕದಲ್ಲಿ ವಿಡಿಯೋ ಬಳಕೆ ದ್ವಿಗುಣಗೊಂಡಿದೆ ಎಂದು ಹೇಳಿದ್ದಾರೆ.

4G ಕ್ರಾಂತಿ ಮತ್ತು ಹಾಟ್‌ಸ್ಟಾರ್‌ನಂತಹ ಅನೇಕ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಂದ ಹಲವಾರು ವಿಷಯಗಳು ಜನಸಾಮಾನ್ಯರಿಗೆ ಹೆಚ್ಚೆಚ್ಚು ತಲುಪುತ್ತಿವೆ ಎಂದಿರುವ ಉದಯ್ ಶಂಕರ್ ಪ್ರಾದೇಶಿಕ ಭಾಷೆಗಳಲ್ಲಿ ಕೂಡ ಓಟಿಟಿ ಮಾರುಕಟ್ಟೆ ಗಮನಾರ್ಹವಾಗಿ ವಿಸ್ತಾರಗೊಂಡಿದೆ ಎಂದು ಹೇಳಿದ್ದಾರೆ.

ಇನ್ನು ಸಮೀಕ್ಷೆಗಳ ಪ್ರಕಾರ 700 ಮಿಲಿಯನ್‌ಗಿಂತ ಹೆಚ್ಚಿನ ಜನ ಈ ಓಟಿಟಿ ವೇದಿಕೆಗಳಿಗೆ ಶರಣಾಗಿದ್ದಾರೆ ಎಂದಿರುವ ಉದಯ್ ಶಂಕರ್ ಜಾಗತಿಕವಾಗಿ ಯಶಸ್ವಿಯಾದ ಉದ್ಯಮವನ್ನು ಭಾರತಕ್ಕೆ ತರುವುದು ಬೆಳೆಸುವುದು ಉತ್ತಮವಾದ ಬೆಳವಣಿಗೆ ಆದರೆ ನಾವು ಈಗ ವಿಶ್ವದಾದ್ಯಂತ ಗಮನ ಸೆಳೆಯುವಂತಹ ವಿಷಯಗಳ ಮೇಲೀಗ ಬೆಳಕು ಚೆಲ್ಲಬೇಕಿದೆ ಎಂದು ಹೇಳಿದ್ದಾರೆ.

ಮುಂದುವರೆದು ಅಮೆರಿಕಾ ಮತ್ತು ಚೀನಾಗೆ ಹೋಲಿಸಿದರೆ ಪ್ರಸ್ತುತ 30 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಈ ಮನರಂಜನಾ ಉದ್ಯಮ ಕಳೆದ 25-30 ವರ್ಷಗಳಲ್ಲಿ 500 ಮಿಲಿಯನ್ ಡಾಲರ್‌ಗೆ ಬೆಳೆದಿದೆ ಎಂದು ಹೇಳಿರುವ ಉದಯ್ ಶಂಕರ್ ಮುಂಬರುವ 15 ವರ್ಷಗಳಲ್ಲಿ ಈ ಮನರಂಜನಾ ಉದ್ಯಮ ಮತ್ತೊಂದು ಹಂತವನ್ನು ತಲುಪುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇನ್ನು ಮನರಂಜನಾ ಉದ್ಯಮದಲ್ಲಿ ಈಗಾಗಲೇ ಭಾರತದ ಹಲವು ಕಂಪನಿಗಳು ಹೂಡಿಕೆಗಳನ್ನು ಮಾಡಲು ಆಸಕ್ತಿಯನ್ನು ತೋರಿಸುತ್ತಿವೆ ಎಂದಿರುವ ಉದಯ್ ಶಂಕರ್ ಜಿಯೋ ಸ್ಟಾರ್ ಕೂಡ ಈ ವಿಚಾರದಲ್ಲಿ ದೊಡ್ಡ ಮೊತ್ತವನ್ನು ಖರ್ಚು ಮಾಡುತ್ತಿದೆ ಎಂದು ಹೇಳಿದ್ದಾರೆ. 25.000 ಕೋಟಿಯಿಂದ 30,000 ಕೋಟಿಯವರೆಗೆ ಖರ್ಚು ಮಾಡಲಾಗುವುದು ಎಂದು ಹೇಳಿದ್ದಾರೆ. 2026ರ ಸಮಯಕ್ಕೆ 32000-33000 ಕೋಟಿ ಖರ್ಚು ಆಗುವ ಸಾಧ್ಯತೆ ಇದ್ದು ನಾವು ಮುಂಬರುವ ಮೂರು ವರ್ಷಗಳಲ್ಲಿ 10 ಬಿಲಿಯನ್‌ಗೂ ಹೆಚ್ಚಿನ ಹಣವನ್ನು ಹೂಡಲಿದ್ದೇವೆ ಎಂದು ಕೂಡ ಉದಯ್ ಶಂಕರ್ ಹೇಳಿದ್ದಾರೆ.

More from Filmibeat

English summary
JioStar is setting the stage for a bold new chapter in Indian media. Announcing a $10 billion investment over three years at the Waves Summit, Vice Chairman Uday Shankar outlined a vision centered on content made for India, by India—alongside a powerful push to reach every corner of the market.
Read more about: bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X