For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಪವನ್ ಗೆ ಗೆಳೆಯರಾಗಿ, ಚಿತ್ರರಂಗ ಬದಲಾವಣೆಗೆ ಕಾರಣರಾಗಿ

  |

  ಲೂಸಿಯಾ, ಯೂ ಟರ್ನ್ ಸಿನಿಮಾ ಮೂಲಕ ತಾವೊಬ್ಬ ಭಿನ್ನ ಬಗೆಯ ನಿರ್ದೇಶಕ ಎಂದು ಸಾಬೀತು ಮಾಡಿರುವ ನಿರ್ದೇಶಕ ಪವನ್. ಮೊದಲಿನಿಂದಲೂ ಸಿನಿಮಾ ರಂಗದ ಸಿದ್ಧ ಸೂತ್ರಗಳನ್ನು ಒಡೆಯುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ.

  ಡಿ ಬಾಸ್ ದಾಸೋಹದ 41 ನೇ ದಿನ ನಿರಾಶ್ರಿತರಿಗೆ ಉಪಹಾರದ ಜೊತೆ ಮೊಟ್ಟೆ ವಿತರಣೆ | Darshan | Filmibeat Kannada

  ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣ, ವಿತರಣೆ, ಲಾಭಗಳಿಕೆ ಬಹಳ ಪ್ರಯಾಸದ್ದು. ನಿರ್ಮಾಣ ಮಾಡುವ ನಿರ್ಮಾಪಕನೂ ಸಹ ಸಿದ್ಧ ಸೂತ್ರಗಳಿಗೆ ಮೊರೆ ಹೋಗಿ ಹಾಕಿದ ಬಂಡವಾಳ ವಾಪಸ್ ಬರಲೆಂದು ನಿರೀಕ್ಷೆ ಪಡುವ ಕಾರಣ ಒಂದೇ ಮಾದರಿಯ ಮಸಾಲೆ ಚಿತ್ರಗಳು ಬರುತ್ತಿವೆ.

  ಆದರೆ ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ನಿರ್ದೇಶಕ ಪವನ್ ಕುಮಾರ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರ ಐಡಿಯಾ ಸರಳವಾಗಿಯೂ, ಪರಿಣಾಮಕಾರಿಯಾದದ್ದಾಗಿಯೂ ಇದೆ. ಆದರೆ ಅದಕ್ಕೆ ಬೇಕಿರುವುದು ಜನರ ತೊಡಗುವಿಕೆಯಷ್ಟೆ.

  ಟೆಲಿಗ್ರಾಂನಲ್ಲಿದೆ 'ಫ್ರೆಂಡ್ಸ್ ಆಫ್ ಪವನ್' ಗ್ರೂಪ್

  ಟೆಲಿಗ್ರಾಂನಲ್ಲಿದೆ 'ಫ್ರೆಂಡ್ಸ್ ಆಫ್ ಪವನ್' ಗ್ರೂಪ್

  ನಿರ್ದೇಶಕ ಪವನ್ ಕುಮಾರ್ ಟೆಲಿಗ್ರಾಂ ನಲ್ಲಿ 'ಫ್ರೆಂಡ್ಸ್ ಆಫ್ ಪವನ್' ಎಂಬ ಗ್ರೂಪ್ ಕ್ರಿಯೇಟ್ ಮಾಡಿದ್ದು, ಯಾರು ಬೇಕಾದರೂ ಗುಂಪಿಗೆ ಸೇರಬಹುದು. ಸಿನಿಮಾ ಕುರಿತು ಚರ್ಚಿಸಬಹುದು. ಪವನ್ ಮಾಡಿರುವ ಹೊಸ ಐಡಿಯಾ ಬಗ್ಗೆ ಮಾತನಾಡಬಹುದು. ಸಿನಿಮಾಕ್ಕೆ ಸಂಬಂಧಿಸಿದವರೂ ಹಲವರು ಈಗಾಗಲೇ ಆ ಗ್ರೂಪ್‌ನಲ್ಲಿದ್ದಾರೆ.

  ಪವನ್ ಕುಮಾರ್ ಐಡಿಯಾ ಏನು?

  ಪವನ್ ಕುಮಾರ್ ಐಡಿಯಾ ಏನು?

  ಪವನ್ ಐಡಿಯಾ ಹೀಗಿದೆ. ಕರ್ನಾಟಕದ 6 ಕೋಟಿಗೂ ಹೆಚ್ಚು ಜನಸಂಖ್ಯೆಯಲ್ಲಿ ಕೇವಲ ಒಂದು ಲಕ್ಷ ಇಪ್ಪತ್ತು ಸಾವಿರ ಜನರು ವರ್ಷಕ್ಕೆ 1000 ನೀಡಿ ಸಬ್‌ಸ್ಕ್ರೈಬ್ ಆದರೆ ಸಾಕು, ವರ್ಷಕ್ಕೆ ಅತ್ಯುತ್ತಮ ಗುಣಮಟ್ಟದ, ಉತ್ತಮ ಕತೆಯುಳ್ಳ, ಸದಭಿರುಚಿಯ 12 ಸಿನಿಮಾಗಳನ್ನು ನಿರ್ಮಾಣ ಮಾಡಬಹುದು.

  1.20 ಲಕ್ಷ ಮಂದಿ ವರ್ಷಕ್ಕೆ ಸಾವಿರ ರೂಪಾಯಿ

  1.20 ಲಕ್ಷ ಮಂದಿ ವರ್ಷಕ್ಕೆ ಸಾವಿರ ರೂಪಾಯಿ

  ಹೌದು, 1.20 ಲಕ್ಷ ಸಾವಿರ ಮಂದಿ ನೀಡುವ 1000 ಒಟ್ಟಾಗಿ 12 ಕೋಟಿ ಆಗುತ್ತದೆ. ಸಿನಿಮಾಕ್ಕೆ 1 ಕೋಟಿಯಂತೆ ಖರ್ಚು ಮಾಡಿ ವರ್ಷಕ್ಕೆ 12 ಸಿನಿಮಾ ತೆರೆಗೆ ತರಬಹುದು. 12 ಸಿನಿಮಾದಿಂದ ಸಾವಿರಾರು ಮಂದಿಗೆ ಉದ್ಯೋಗ ದೊರಕುತ್ತದೆ. ನೂರಾರು ಮಂದಿ ಸ್ಥಳೀಯ ಕಲಾವಿದರಿಗೆ ಅವಕಾಶ ದೊರೆಯುತ್ತದೆ. ಎಲ್ಲಕ್ಕಿಂತಲೂ ಮಿಗಿಲಾಗಿ ನಿರ್ಮಾಪಕರ ಒತ್ತಡ ಇರದ ಕಾರಣ ನಿರ್ದೇಶಕರು ಬಾಕ್ಸ್‌ ಆಫೀಸ್ ಕಲೆಕ್ಷನ್ ಒತ್ತಡ ಇಲ್ಲದೆ ಉತ್ತಮ ಚಿತ್ರ ಮಾಡಬಹುದು.

  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪವನ್

  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪವನ್

  ನಿರ್ದೇಶಕ ಪವನ್ ಕುಮಾರ್ ತಮ್ಮ ಈ ಐಡಿಯಾ ಬಗ್ಗೆ ತಮ್ಮ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಿನಿಮಾ ನಿರ್ಮಾಣ ತರಬೇತಿಯ ಏಳು ವಿಡಿಯೋಗಳನ್ನು ಸಹ ಅವರು ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋಗಳನ್ನು ನೋಡಿ ಪವನ್ ಸ್ಥಾಪಿಸಿರುವ ಗ್ರೂಪ್‌ಗೆ ಸೇರಿ ಸಿನಿಮಾ ಚರ್ಚೆಯಲ್ಲಿ ಭಾಗವಹಿಸಬಹುದು.

  ಸಿನಿ ರಂಗಕ್ಕೆ ಈ ಬದಲಾವಣೆ ಏಕೆ ಬೇಕು?

  ಸಿನಿ ರಂಗಕ್ಕೆ ಈ ಬದಲಾವಣೆ ಏಕೆ ಬೇಕು?

  ವರ್ಷಕ್ಕೆ ಒಂದು ಸಾವಿರ ನೀಡುವುದು ಹೇಗೆ, ಅವರಿಗೆ ಏನು ಲಾಭ? ಸಿದ್ಧಸೂತ್ರ ಸಿನಿಮಾ ನಿರ್ಮಾಣದಿಂದಾಗಿ ಕಳಪೆ ಸಿನಿಮಾಗಳು ಹೆಚ್ಚಾಗುತ್ತಿರುವುದು ಹೇಗೆ? ಓಟಿಟಿಗಳು ಕನ್ನಡಕ್ಕೆ ಹೇಗೆ ಮಾರಕ ಇನ್ನೂ ಹಲವು ವಿಷಯಗಳನ್ನು ಪವನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  English summary
  Join director Pawan Kumar's friends group in Telegram. Help him to bring change in Kannada movie making style.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X