ಜ್ಯೂ. ಎನ್‌ಟಿಆರ್- ಪ್ರಶಾಂತ್ ನೀಲ್ 'ಡ್ರ್ಯಾಗನ್' ಚಿತ್ರದ ಓಟಿಟಿ ರೈಟ್ಸ್ ದಾಖಲೆ ಬೆಲೆಗೆ ಸೇಲ್

ಚಿತ್ರರಂಗದಲ್ಲಿ ಸಿನಿಮಾ ಬ್ಯುಸಿನೆಸ್ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬರ್ತಿದೆ. ಒಂದ್ಕಾಲದಲ್ಲಿ ಜನ ಚಿತ್ರಮಂದಿರಗಳಲ್ಲೇ ಸಿನಿಮಾ ನೋಡಬೇಕಿತ್ತು. ವರ್ಷಗಳ ಕಾಲ ಸಿನಿಮಾ ಪ್ರದರ್ಶನವಾಗುತ್ತಿದ್ದವು. ಟಿವಿ ಬಂದ ಬಳಿಕ ಕೊಂಚ ಬದಲಾಯಿತು. ಟಿವಿ ರೈಟ್ಸ್ ಎನ್ನುವುದು ಒಳ್ಳೆ ಬ್ಯುಸಿನೆಸ್ ಆಯಿತು. ಈಗ ಅದನ್ನು ಮೀರಿ ಓಟಿಟಿ ದರ್ಬಾರ್ ನಡೀತಿದೆ.

ದಿನದಿಂದ ದಿನಕ್ಕೆ ಓಟಿಟಿ ಟ್ರೆಂಡ್ ಹೆಚ್ಚಾಗ್ತಿದೆ. ದೊಡ್ಡ ದೊಡ್ಡ ಸಿನಿಮಾಗಳೇ ತಿಂಗಳಿಗೂ ಮುನ್ನ ನಿಮ್ಮ ಫೋನ್‌ಗೆ ಬರುವಂತಾಗಿದೆ. ಅದಕ್ಕಾಗಿ ದೊಡ್ಡಮಟ್ಟದಲ್ಲಿ ಡೀಲ್ ನಡೀತಿದೆ. ಓಟಿಟಿ ರೈಟ್ಸ್‌ನಿಂದಲೇ ಚಿತ್ರದ ಬಂಡವಾಳ ವಾಪಸ್ ಪಡೆದಿರುವ ಉದಾಹರಣೆಗಳಿವೆ. ಅದೇ ಕಾರಣಕ್ಕೆ ಓಟಿಟಿ ಸಂಸ್ಥೆಗಳು ಸಿನಿಮಾಗಳ ಮೇಲೆ ಹಿಡಿತ ಸಾಧಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್' ಸಿನಿಮಾ ಓಟಿಟಿ ರೈಟ್ಸ್ ಬಗ್ಗೆ ಭಾರೀ ಚರ್ಚೆ ನಡೀತಿದೆ.

Jr NTR Prashanth Neel s Dragon Creates Buzz With Reports of Whopping OTT Rights Deal

ಜ್ಯೂ. ಎನ್‌ಟಿಆರ್ ನಟನೆಯ ಆಕ್ಷನ್ 'ಡ್ರ್ಯಾಗನ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಸದ್ದಿಲ್ಲದೇ ನಡೀತಿದೆ. ದಾಖಲೆ ಮೊತ್ತಕ್ಕೆ ಡಿಜಿಟಲ್ ಸ್ಟ್ರೀಮಿಂಗ್ ರೈಟ್ಸ್ ಮಾರಾಟವಾಗಿದೆ ಎನ್ನಲಾಗ್ತಿದೆ. ಸದ್ಯ ಜೊರ್ಡನ್ ದೇಶದಲ್ಲಿ ಚಿತ್ರದ ಚಿತ್ರೀಕರಣ ನಡೀತಿದೆ ಎನ್ನಲಾಗ್ತಿದೆ.

ಅಧಿಕೃತವಾಗಿ ಚಿತ್ರದ ಟೈಟಲ್ ಕೂಡ ಘೋಷಣೆ ಆಗಿದೆ. ಎನ್‌ಟಿಆರ್ ಆರ್ಟ್ಸ್ ಹಾಗೂ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಗಳು ಚಿತ್ರ ನಿರ್ಮಾಣ ಮಾಡ್ತಿವೆ. 'ದೇವರ' ಸೋಲಿನ ಬಳಿಕ ಒಂದೊಳ್ಳೆ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ತಾರಕ್ ಸಜ್ಜಾಗಿದ್ದಾರೆ. 'ಸಲಾರ್' ಬಳಿಕ ಮತ್ತೊಂದು ಹಿಟ್ ಮೇಲೆ ಪ್ರಶಾಂತ್ ನೀಲ್ ಕಣ್ಣಿಟ್ಟಿದ್ದಾರೆ. 145 ಕೋಟಿ ರೂ.ಗೂ ಚಿತ್ರದ ಓಟಿಟಿ ರೈಟ್ಸ್ ಡೀಲ್ ಕುದುರಿಸಲಾಗಿದೆ ಎನ್ನುವ ಚರ್ಚೆ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

Jr NTR Prashanth Neel s Dragon Creates Buzz With Reports of Whopping OTT Rights Deal

ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಡ್ರ್ಯಾಗನ್' ಸಿನಿಮಾ ತೆರೆಗೆ ಬರಲಿದೆ. ಎಲ್ಲಾ ಭಾಷೆಗಳ ರೈಟ್ಸ್ ಸೇರಿ ನೆಟ್‌ಫ್ಲಿಕ್ಸ್ ರೈಟ್ಸ್ ಕೊಂಡುಕೊಂಡಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಪ್ರಶಾಂತ್ ನೀಲ್ ರೀತಿಯ ಡ್ಯಾಷಿಂಗ್ ಡೈರೆಕ್ಟರ್‌ ನಿರ್ದೇಶನದಲ್ಲಿ ತಾರಕ್‌ನಂತಹ ಮಾಸ್ ಹೀರೊ ಅಬ್ಬರಿಸಿದರೆ ಹೇಗಿರುತ್ತದೆ ಎಂದು ನೋಡಲು ಪ್ರೇಕ್ಷಕರ ಕಾಯುತ್ತಿದ್ದಾರೆ.

ನನ್ನ ನೆಚ್ಚಿನ ನಟ ಜ್ಯೂ. ಎನ್‌ಟಿಆರ್ ಎಂದು ನೀಲ್ ಹೇಳುತ್ತಿರುತ್ತಾರೆ. ಹಾಗಾಗಿ ತಮ್ಮ ನೆಚ್ಚಿನ ನಟನನ್ನು ಯಾವ ರೀತಿ ತೆರೆಮೇಲೆ ತೋರಿಸ್ತಾರೆ ಎನ್ನುವ ಕೂತುಹಲ ಕೆಲವರದ್ದು. ಬಂಗಾಳದ ಹಿನ್ನೆಲೆಯಲ್ಲಿ 70ರ ದಶಕದಲ್ಲಿ ನಡೆಯುವ ಗ್ಯಾಂಗ್‌ಸ್ಟರ್ ಸಿನಿಮಾ ಇದು ಎನ್ನಲಾಗ್ತಿದೆ. ಪಾತ್ರಕ್ಕಾಗಿ ತೂಕ ಇಳಿಸಿ ಬಾಡಿ ಬಿಲ್ಡ್ ಮಾಡಿ ಖಡಕ್ ಅವತಾರದಲ್ಲಿ ತಾರಕ್ ನಟಿಸುತ್ತಿದ್ದಾರೆ.

ಈಗಾಗಲೇ ಎರಡ್ಮೂರು ಬಾರಿ 'ಡ್ರ್ಯಾಗನ್' ಸಿನಿಮಾ ರಿಲೀಸ್ ಡೇಟ್ ಬದಲಿಸಲಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಬೇಕಿತ್ತು. ಜೂನ್ 25ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅಭಿಮಾನಿಗಳು ಈ ಡೆಡ್ಲಿ ಕಾಂಬಿನೇಷನ್ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಟೊವಿನೊ ಥಾಮಸ್, ಅನಿಲ್ ಕಪೂರ್, ಬಿಜು ಮೆನನ್ ಕೂಡ 'ಡ್ರ್ಯಾಗನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ರವಿಬಸ್ರೂರು ಸಂಗೀತ, ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ಕನ್ನಡದ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

More from Filmibeat

Read more about: ntr prashanth neel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X