OTT Releases this week; ಈ ವಾರ ಓಟಿಟಿಗೆ ಬರ್ತಿರೋ ಸಿನಿಮಾ, ಸೀರಿಸ್ ಲಿಸ್ಟ್
ಎರಡು ವಾರಗಳ ಹಿಂದೆ ಬಿಡುಗಡೆಯಾದ 'ಕೋಟಿ' ಹಾಗೂ 'ಲವ್‌ಲೀ' ಸಿನಿಮಾಗಳು ಚಿತ್ರಮಂದಿರಗಳಲ್ಲಿ ಸದ್ದು ಮಾಡ್ತಿದೆ. ತೆಲುಗಿನ 'ಕಲ್ಕಿ 2898 AD' ಸಿನಿಮಾ ಕನ್ನಡಕ್ಕೂ ಡಬ್ ಆಗಿ ವೀಕ್ಷಕರನ್ನು ಸೆಳೆಯುತ್ತಿದೆ. ಇದೆಲ್ಲದರ ನಡುವೆ ಓಟಿಟಿ ಸೈಲೆಂಟ್ ಆಗಿಬಿಟ್ಟಿದೆ. ದೊಡ್ಡ ಸಿನಿಮಾಗಳಿಲ್ಲದೇ ಡಿಜಿಟಲ್ ಪ್ಲಾಟ್‌ಫಾರ್ಮ್ ಮಂಕಾಗಿದೆ.
ಮತ್ತೊಂದು ವಾರ ಕಳೆದು ಮತ್ತೆ ವೀಕೆಂಡ್ ಹತ್ತಿರ ಬಂದಿದೆ. ಓಟಿಟಿಯಲ್ಲಿ ಒಂದಷ್ಟು ಸಿನಿಮಾಗಳು, ವೆಬ್ ಸೀರಿಸ್ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾಗಳ ಬರ್ತಿಲ್ಲ. ಸಣ್ಣ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೊಂಡುಕೊಳ್ತಿಲ್ಲ. ಹಾಗಾಗಿ ಓಟಿಟಿಯಲ್ಲೂ ಪರಭಾಷಾ ಸಿನಿಮಾಗಳ ಆರ್ಭಟವೇ ಜೋರಾಗಿದೆ.

ಸ್ಟಾರ್ ನಟರ ಸಿನಿಮಾಗಳು ಅಥವಾ ಚಿತ್ರಮಂದಿರಗಳಲ್ಲಿ ತಕ್ಕ ಮಟ್ಟಿಗೆ ಸದ್ದು ಮಾಡಿದ ಸಿನಿಮಾಗಳನ್ನು ಓಟಿಟಿಯವರು ಕೊಂಡುಕೊಳ್ಳುತ್ತಿದ್ದಾರೆ. ಹೊಸಬರ ಸಿನಿಮಾಗಳನ್ನು ಪೇ ಫಾರ್ ವೀವ್ ಲೆಕ್ಕಾಚಾರದಲ್ಲೇ ಖರೀದಿಸುತ್ತಿದ್ದಾರೆ. ಸದ್ಯ ಈ ವಾರ ಒಂದೇ ಒಂದು ಕನ್ನಡ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.
ಅಮೇಜಾನ್ ಪ್ರೈಂ
1. ಜಸ್ಟ್ ಪಾಸ್
ಶ್ರೀ ಮಹಾದೇವ್, ರಂಗಾಯಣ ರಘು, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ಪ್ರಣತಿ, ಯಶಿಕಾ ಗೌಡ ನಟನೆಯ 'ಜಸ್ಟ್ ಪಾಸ್' ಸಿನಿಮಾ ಓಟಿಟಿಗೆ ಬಂದಿದೆ. 5 ತಿಂಗಳ ಹಿಂದೆ ಈ ಸಿನಿಮಾ ತೆರೆಕಂಡಿತ್ತು. ಕೆ. ಎಂ ರಘು ನಿರ್ದೇಶನದ ಕೆ. ವಿ ಶಶಿಧರ್ ಬಂಡವಾಳ ಹೂಡಿದ್ದರು. ಶಿಕ್ಷಣ ವ್ಯವಸ್ಥೆ ಹಾಗೂ 'ಜಸ್ಟ್ ಪಾಸ್' ಹುಡುಗರ ನೋವು ನಲಿವಿನ ಕಥೆ ಈ ಚಿತ್ರದಲ್ಲಿದೆ. ಸದ್ಯಕ್ಕೆ 99 ರೂ. ಪಾವತಿಸಿ ಸಿನಿಮಾ ವೀಕ್ಷಿಸಬಹುದು. ಇನ್ನೆರಡು ದಿನಗಳಲ್ಲಿ ಉಚಿತವಾಗಿ ಸಿಗುವ ಸಾಧ್ಯತೆಯಿದೆ.
2. ಸ್ಪೇಸ್ ಕೆಡೆಟ್ (ಇಂಗ್ಲಿಷ್ ಸಿನಿಮಾ) - ಜುಲೈ 4
3. ಬಾಬ್ ಮಾರ್ಲಿ: ಒನ್ ಲವ್ (ಇಂಗ್ಲಿಷ್ ಸಿನಿಮಾ) - ಜುಲೈ 3
4. ಗರುಡನ್ (ತಮಿಳು ಸಿನಿಮಾ) - ಜುಲೈ 3
5. ಮಿರ್ಜಾಪುರ್ ಸೀಸನ್- 3 (ಹಿಂದಿ ಸೀರಿಸ್) - ಜುಲೈ 5
ನೆಟ್‌ಫ್ಲಿಕ್ಸ್
1. ಆಲ್ವಿನ್ ಸೀಸನ್ -5 (ಇಂಗ್ಲಿಷ್ ಸೀರಿಸ್) - ಜುಲೈ 1
2. ಸ್ಪ್ರಿಂಟ್ (ಇಂಗ್ಲಿಷ್ ಸೀರಿಸ್) - ಜುಲೈ 2
3. ಸ್ಟಾರ್ ಟ್ರೆಕ್ ಪ್ರಾಡಿಜಿ ಸೀಸನ್ 2 (ಇಂಗ್ಲಿಷ್ ಸೀರಿಸ್) - ಜುಲೈ 1
4. ಬಾರ್ಬೆಕ್ಯೂ ಶೋ ಡೌನ್ ಸೀಸನ್ 3 (ಇಂಗ್ಲಿಷ್ ಸೀರಿಸ್) - ಜುಲೈ 4
5. ರೈಮ್ ಪ್ಲಸ್ ಫ್ಲೋ ಫ್ರಾನ್ಸ್ ಸೀಸನ್ 3 (ಫ್ರೆಂಚ್ ಸೀರಿಸ್) - ಜುಲೈ 4
6. ಗೊಯೊ (ಸ್ಪ್ಯಾನಿಷ್ ಸಿನಿಮಾ) - ಜುಲೈ 5

ಬುಕ್‌ಮೈ ಶೋ
1. ದಿ ಸೀಡಿಂಗ್ (ಇಂಗ್ಲಿಷ್ ಸಿನಿಮಾ) - ಜುಲೈ 5
2. ವಿಷನ್ಸ್ (ಫ್ರೆಂಚ್ ಸಿನಿಮಾ) - ಜುಲೈ 5
3. ಇಫ್ (ಇಂಗ್ಲೀಷ್ ಸಿನಿಮಾ) ಜುಲೈ 3
4. ಫ್ಯೂರೋಸಿಯಾ ಎ ಮ್ಯಾಡ್ ಮ್ಯಾಕ್ಸ್ ಸಾಗಾ (ಇಂಗ್ಲಿಷ್ ಸಿನಿಮಾ) - ಜುಲೈ 4
ಜಿಯೋ ಸಿನಿಮಾ
1. ಹೀ ವೆಂಟ್ ದಟ್ ವೇ(ಇಂಗ್ಲೀಷ್ ಸಿನಿಮಾ) ಜುಲೈ 5
2. ಪ್ರೈಂ ಟೈಮ್ ವಿತ್ ಮೂರ್ತೀಸ್(ಹಿಂದಿ ಸೀರಿಸ್) ಜುಲೈ 3


Click it and Unblock the Notifications











