'ಸಿಂಹಾಸನ'ಕ್ಕಾಗಿ ಸಮರ ; ಮೂರನೇ ಬಾರಿ ಗುಡ್ಡು ಹಾಗೂ ಕಾಲೀನ್ ಭಯ್ಯಾ ಮುಖಾಮುಖಿ..!

ಅನೇಕರು ಮೆಚ್ಚಿಕೊಂಡ ವೆಬ್ ಸರಣಿಗಳಲ್ಲಿ ''ಮಿರ್ಜಾಪುರ್'' ಕೂಡ ಒಂದು. ಮೊದಲೆರಡು ಭಾಗಗಳನ್ನ ನೋಡಿದವರು ಮೂರನೇ ಭಾಗಕ್ಕೆ ಕಾತುರದಿಂದ ಕಾದು ಕುಳಿತುಕೊಂಡಿದ್ದಾರೆ.
ಆದರೆ ಆ ದಿನ.. ಆ ಕ್ಷಣ.. ಯಾವತ್ತು ಬರುತ್ತೆ ಅನ್ನುವುದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಹೀಗಿರುವಾಗ ಮೂರನೇ ಭಾಗದ ಬಿಡುಗಡೆಯ ಸುಳಿವನ್ನ ಗುಡ್ಡು ಭಯ್ಯಾ ಕೊಟ್ಟಿದ್ದಾರೆ.

ಒಂದೇ ಸೂರಿನಡಿ ಕಾಲೀನ್ ಭಯ್ಯಾ..ಗುಡ್ಡು..

ಹೌದು, ಅಮೆಜಾನ್ ಪ್ರೈಮ್ ಇವೆಂಟ್ ನಲ್ಲಿ, ಮಿರ್ಜಾಪುರ್ ನ ಮೂರನೇ ಭಾಗದ ಚಿಕ್ಕ ತುಣುಕು ಪ್ರಸಾರವಾಗಿದೆ. ಇಷ್ಟೇ ಅಲ್ಲ ಫಸ್ಟ್ ಲುಕ್ ನ್ನೂ ಕೂಡ ಬಿಡುಗಡೆ ಮಾಡಲಾಗಿದೆ. ಈ ಸಮಾರಂಭದಲ್ಲಿ ಶ್ವೇತಾ ತ್ರಿಪಾಠಿ, ಪಂಕಜ್ ತ್ರಿಪಾಠಿ, ಅಲಿ ಫಜಲ್, ರಸಿಕಾ ದುಗ್ಗಲ್ ಮತ್ತು ವಿಜಯ್ ವರ್ಮಾ ಸೇರಿದಂತೆ 'ಮಿರ್ಜಾಪುರ'ದ ಎಲ್ಲಾ ತಾರೆಯರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಇನ್ನೂ ಮೂರನೇ ಆವೃತ್ತಿಯ ಬಗ್ಗೆ ಮಾತನಾಡಿದ ಗುಡ್ಡು ಭಯ್ಯಾ ಅಲಿಯಾಸ್ ಅಲಿ ಫಜಲ್ ನಾವೆಲ್ಲ ಮತ್ತೆ ಮರಳಿ ಬಂದಿದ್ದೇವೆ ಅದು ಹೆಚ್ಚಿನ ಮನರಂಜನೆ ಹಾಗೂ ಮಸಾಲೆಯ ಜೊತೆ ಎಂದರು. ಹಿಂದಿನ ಎರಡು ಸರಣಿಗಳಿಗಿಂತ ಮೂರನೇ ಸರಣಿ ಇನ್ನೂ ರೋಚಕವಾಗಿರಲಿದೆ ಅದರಲ್ಲಿ ಯಾವ ಅನುಮಾನ ಬೇಡ ಎಂಬ ಭರವಸೆಯನ್ನೂ ನೀಡಿದರು

Kaalin Bhaiya And Guddu Pandit Are Back With Mirzapur 3

ಮುನ್ನಾ ಎಲ್ಲಿ ಎಂದ ಅಭಿಮಾನಿಗಳು

ಇನ್ನೂ ಮೂರನೇ ಸರಣಿ ಸದ್ಯದಲ್ಲಿಯೇ ಬರಲಿದೆ ಎಂಬ ಸುದ್ದಿ ಹೊರ ಬಂದ ಬೆನ್ನಲ್ಲಿಯೇ ಅಭಿಮಾನಿಗಳು, ಮೊದಲೆರಡು ಭಾಗದಲ್ಲಿ ಮುನ್ನಾ ಭಯ್ಯಾ ಪಾತ್ರ ಮಾಡಿದ್ದ ದಿವ್ಯೇಂದು ಶರ್ಮಾ ಎಲ್ಲಿ ಎನ್ನುವ ಪ್ರಶ್ನೆಯನ್ನ ಕೇಳುತ್ತಿದ್ದಾರೆ. ಎರಡನೇ ಭಾಗದಲ್ಲಿಯೇ ಮುನ್ನಾ ಪಾತ್ರ ಅಂತ್ಯವಾದರೂ ಮೂರನೇ ಭಾಗದಲ್ಲಿ ಮುನ್ನಾ ಅವರನ್ನ ನೋಡುವ ಆಸೆಯನ್ನ ಈ ವೆಬ್ ಸರಣಿಯ ಅಭಿಮಾನಿಗಳು ಸದ್ಯಕ್ಕೆ ವ್ಯಕ್ತಪಡಿಸುತ್ತಿದ್ದಾರೆ

ಮೊದಲ ಎರಡು ಸೀಸನ್‌ಗಳ ಕಥೆ

'ಮಿರ್ಜಾಪುರ' ಮೊದಲ ಸೀಸನ್‌ನಲ್ಲಿ ಗುಡ್ಡು ಪಂಡಿತ್ ಹಾಗೂ ಕುಟುಂಬವನ್ನು ಬೇರು ಸಮೇತ ಕಿತ್ತು ಹಾಕುವ ಕಥೆ ಅನಾವರಣವಾಗಿತ್ತು. ಎರಡನೇ ಭಾಗದಲ್ಲಿ ಸೇಡಿನ ಕಥೆ ಇತ್ತು. ಮಿರ್ಜಾಪುರ್ ಖುರ್ಚಿಗೆ ನಡೆಯುವ ಕದನ ಇತ್ತು. ಇದರ ನಡುವೆ ರಕ್ತಪಾತ, ರಾಜಕೀಯ, ಜೌನ್‌ಪುರ-ಬಿಹಾರದ ಗ್ಯಾಂಗ್ ಕೂಡ ಕಥೆ ಕೂಡ ಚಿತ್ರದಲ್ಲಿತ್ತು.

Kaalin Bhaiya And Guddu Pandit Are Back With Mirzapur 3

ಕ್ರೈಮ್ ಥ್ರಿಲ್ಲರ್ ಸರಣಿಯಾಗಿರುವ ಮಿರ್ಜಾಪುರ್ ಮೊದಲ ಭಾಗ 16 ನವೆಂಬರ್ 2018 ರಂದು ಅಮೆಜಾನ್ ನಲ್ಲಿ ಪ್ರಸಾರವಾಗಿತ್ತು. ಪುನಿತ್ ಕೃಷ್ಣ ಮತ್ತು ವಿನೀತ್ ಕೃಷ್ಣ ಅವರೊಂದಿಗೆ ಕರಣ್ ಅಂಶುಮಾನ್ ಚಿತ್ರಕಥೆಯನ್ನು ಬರೆದಿದ್ದರು. ಮೊದಲ ಸೀಸನ್ ನ ಗುರ್ಮೀತ್ ಸಿಂಗ್ ಮತ್ತು ಮಿಹಿತ್ ದೇಸಾಯಿ ಅವರೊಂದಿಗೆ ಅನ್ಶುಮಾನ್ ನಿರ್ದೇಶಿಸಿದ್ದರು. ಎರಡನೇ ಸೀಸನ್ ಗೂ ಕೂಡ ಇವರೇ ಆಕ್ಷನ್ ಕಟ್ ಹೇಳಿದ್ದರು. ಇನ್ನೂ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ 'ಎಕ್ಸೆಲ್ ಎಂಟರ್‌ಟೈನ್‌ಮೆಂಟ್' ಬ್ಯಾನರ್ ಅಡಿಯಲ್ಲಿ ಈ ವೆಬ್ ಸರಣಿಯನ್ನ ನಿರ್ಮಿಸಲಾಗಿದೆ.

ಒಟ್ಟಿನಲ್ಲಿ ಸದ್ಯಕ್ಕೆ ಮಿರ್ಜಾಪುರ್ ಚಿತ್ರದ ಮೂರನೇ ಭಾಗದ ಮಾಹಿತಿಯನ್ನ ಚಿತ್ರತಂಡ ನೀಡಿದೆ. ಫಸ್ಟ್ ಲುಕ್ ನ್ನ ಬಿಡುಗಡೆ ಮಾಡಿದೆ. ವೆಬ್ ಸರಣಿ ಯಾವತ್ತು ಪ್ರಸಾರವಾಗಲಿದೆ ಅನ್ನುವ ಪ್ರಶ್ನೆಗೆ ಉತ್ತರ ಸದ್ಯದಲ್ಲಿ ಸಿಗಲಿದೆ.

More from Filmibeat

English summary
Pankaj Tripathi And Ali Fazal Starrer Mirazapur Season 3 To Stream Soon On Amazon Prime Video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X