Kaatera OTT: ಒಟಿಟಿಗೆ ಬರಲಿದೆ ಕಾಟೇರ; ಎಲ್ಲಿ, ಯಾವಾಗ ವೀಕ್ಷಿಸಬಹುದು ಮಾಹಿತಿ ಇಲ್ಲಿದೆ

ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಮತ್ತು ದರ್ಶನ್ ತೂಗುದೀಪ ನಟನೆಯ 'ಕಾಟೇರ' ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಹಳ್ಳಿಗಾಡಿನ ಗೇಣಿದಾರ ರೈತರ ಕಥೆಯನ್ನು ಅಚ್ಚುಕಟ್ಟಾಗಿ ಜನರ ಮುಂದಿಟ್ಟಿರುವ 'ಕಾಟೇರ' ತಂಡದ ಪ್ರಯತ್ನಕ್ಕೆ ಜನ ಉಘೇ ಎಂದಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿಯೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ.

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ "ಕಾಟೇರ" ಸಿನಿಮಾದಲ್ಲಿ ದರ್ಶನ್‌ಗೆ ನಾಯಕಿಯಾಗಿ ಮೊದಲ ಬಾರಿಗೆ ನಟಿ ಆರಾಧನಾ ರಾಮ್ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಖಳನಟರಾಗಿ ಜಗಪತಿ ಬಾಬು ಮತ್ತು ವಿನೋದ್ ಆಳ್ವಾ ಅಬ್ಬರಿಸಿದ್ದಾರೆ. ಡಿಸೆಂಬರ್ 29, 2023 ರಂದು ಬಿಡುಗಡೆಯಾದ ಈ ಸಿನಿಮಾ ಚಿತ್ರಮಂದಿರಗಳಲ್ಲಿಯೂ ಅಬ್ಬರಿಸುತ್ತಿದೆ.

Kaatera OTT Release: When And Where To Watch Darshans Kaatera Movie

ಕಾಟೇರಾ ಒಟಿಟಿ ಬಿಡುಗಡೆ ವಿವರಗಳು

ಸಿನಿಮಾ ಮಂದಿರಗಳಲ್ಲಿ ಸಕತ್ ಕಮಾಲ್ ಮಾಡುತ್ತಿರುವ 'ಕಾಟೇರ' ಒಟಿಟಿ ಬಿಡುಗಡೆ ಬಗ್ಗೆ ಮಾಹಿತಿ ಸಿಕ್ಕಿದೆ. ಈಗಾಗಲೇ ಸಿನಿಮಾ ನಿರ್ಮಾಪಕರು ಯಾವ ಒಟಿಟಿ ಪ್ಲಾಟ್‌ಫಾರಂಗೆ 'ಕಾಟೇರ' ಹಕ್ಕುಗಳನ್ನು ನೀಡಬೇಕು ಎಂಬುದನ್ನು ಅಂತಿಮಗೊಳಿಸಿದ್ದಾರೆ ಎಂದು ಮೂಲಗಳು ಸೂಚಿಸುತ್ತವೆ. ವರದಿಯ ಪ್ರಕಾರ, 'ಕಾಟೇರಾ' ತನ್ನ ಥಿಯೇಟ್ರಿಕಲ್ ಪ್ರದರ್ಶನದ ನಂತರ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಈ ಬಗ್ಗೆ ಅಧಿಕೃತ ಒಟಿಟಿ ಬಿಡುಗಡೆ ದಿನಾಂಕ ಮತ್ತು ಡಿಜಿಟಲ್ ಪಾಲುದಾರರಿಗೆ ಸಂಬಂಧಿಸಿದ ನಿರ್ದಿಷ್ಟ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ, ಸಿನಿಮಾ ಜೀ5 ಪ್ಲಾಟ್‌ಫಾರಂನಲ್ಲಿ ಬಿಡುಗಡೆಯಾಗುವುದು ಪಕ್ಕಾ ಎಂದು ಮೂಲಗಳು ತಿಳಿಸುತ್ತಿವೆ. ಇತ್ತೀಚೆಗೆ ನಟ ಶಿವರಾಜ್‌ಕುಮಾರ್ ಅಭಿನಯದ 'ಘೋಸ್ಟ್' ಇದೇ ವೇದಿಕೆಯಲ್ಲಿ ಬಿಡುಗಡೆಯಾಗಿ ದಾಖಲೆ ಬರೆದಿದೆ.

Kaatera OTT Release: When And Where To Watch Darshans Kaatera Movie

ಕಾಟೇರ ಮತ್ತು ತರುಣ್ ಸುಧೀರ್

ನಿರ್ದೇಶಕ ತರುಣ್ ಸುಧೀರ್ ಮೊದಲ ಬಾರಿಗೆ ಫೆಬ್ರವರಿ 16, 2022 ರಂದು ದರ್ಶನ್ ಅವರ ಹುಟ್ಟುಹಬ್ಬದಂದು ಈ ಸಿನಿಮಾ ಬಗ್ಗೆ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಮೊದಲು ಉಮಾಪತಿ ಶ್ರೀನಿವಾಸ್ ಗೌಡ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ರಾಕ್‌ಲೈನ್ ವೆಂಕಟೇಶ್ ಅವರು ಅದೇ ದಿನಾಂಕದಂದು ಪೋಸ್ಟರ್‌ನೊಂದಿಗೆ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದರು.

ಕುರಿಗಳ ಹಿಂಡಿಗೆ ನಾಯಿ ಮಾರ್ಗದರ್ಶನ ನೀಡುತ್ತಿರುವ ಪೋಸ್ಟರ್ ಚಿತ್ರದ ಬಗ್ಗೆ ಸಾಕಷ್ಟು ಉತ್ಸಾಹವನ್ನು ಹುಟ್ಟುಹಾಕಿತ್ತು. ತರುವಾಯ, ನಿರ್ದೇಶಕ ತರುಣ್ ಸುಧೀರ್ ಅವರು ಹಿರಿಯ ನಟ ಜಗಪತಿ ಬಾಬು ಅವರನ್ನು ಖಳನಾಯಕ ಎಂದು ಹೇಳಿದ್ದರು. ಇದೆ ಜೊತೆಗೆ ನಟಿ 'ಕನಸಿನ ರಾಣಿ' ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡುವುದನ್ನು ಘೋಷಿಸಿದ್ದರು.

ಸಿನಿಮಾ ಘೋಷಣೆಯಾದ ಒಂದು ವರ್ಷದ ನಂತರ ಫೆಬ್ರವರಿ 26, 2023 ರಂದು ಚಿತ್ರದ ನಿರ್ಮಾಪಕರು ದರ್ಶನ್ ಅವರ ಹುಟ್ಟುಹಬ್ಬದಂದು ಶೀರ್ಷಿಕೆ ಮತ್ತು ಫಸ್ಟ್ ಲುಕ್ ಅನಾವರಣಗೊಳಿಸಿದರು. "ಕಾಟೇರ" ಎಂಬ ಶೀರ್ಷಿಕೆಯನ್ನು ಹೊರಡಿಸಿದ್ದರು. ಇದು ರಾಜ್ಯಾದ್ಯಂತ ಪೂಜಿಸಲ್ಪಡುವ 'ಕಾಟೇರಮ್ಮ' ದೇವಿಯಿಂದ ಸ್ಫೂರ್ತಿ ಪಡೆದಿದೆ.

ಕಾಟೇರಾ ಪಾತ್ರವರ್ಗ ಮತ್ತು ಸಿಬ್ಬಂದಿ

ಚಿತ್ರದಲ್ಲಿ ದರ್ಶನ್ 'ಕಾಟೇರ' ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆರಾಧನಾ ರಾಮ್ ಪ್ರಭಾವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು, ಕುಮಾರ್ ಗೋವಿಂದ್, ಶ್ರುತಿ, ವೈಜನಾಥ್ ಬಿರಾದಾರ್, ವಿನೋದ್ ಆಳ್ವಾ ಮತ್ತು ಪುಟ್ಟರಾಜು ಪಾತ್ರದಲ್ಲಿ ಮಾಸ್ಟರ್ ರೋಹಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿ.ಹರಿಕೃಷ್ಣ 'ಕಾಟೇರ'ನಿಗೆ ಸಂಗೀತ ಸಂಯೋಜಿಸಿದ್ದಾರೆ. ಗುರು ಶಿಷ್ಯರು (2022) ಸಿನಿಮಾದಿಂದ ಮೆಚ್ಚುಗೆ ಪಡೆದ ಜಡೇಶ್ ಕುಮಾರ್ ಹಂಪಿ ಕಥೆ ಬರೆದಿದ್ದು, ಹೆಸರಾಂತ ಸಂಭಾಷಣೆ ಬರಹಗಾರ ಮಾಸ್ತಿ ಖಡಕ್ ಸಂಭಾಷಣೆ ಬರೆದಿದ್ದಾರೆ.

More from Filmibeat

English summary
Kaatera OTT Release: When and where to watch Kaatera movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X